ವಾಹನಗಳಿಗೆ ಇಂಧನವಾಗಿ ಹಾಲು? ಹೈನುಗಾರಿಕೆ ಹೊಸ ಕ್ರಾಂತಿ ಮಾಡಲು ಸಜ್ಜಾದ ಡೈರಿ ರೈತರು!
ಜನರು ಉತ್ತಮ ಆರೋಗ್ಯಕ್ಕಾಗಿ ಹಾಲು ಕುಡಿಯುತ್ತಾರೆ. ಹಾಲಿನ ಹಲವು ಪದಾರ್ಥ ಸೇವನೆ ಮಾಡಬಹುದು. ನೀವು ಕುಡಿಯುವ ಹಾಲು ಹಲವಾರು ಆರೋಗ್ಯ ಪ್ರಯೋಜನ ತಂದು ಕೊಡುತ್ತದೆ. ಆದರೆ ಈ ಹಾಲನ್ನು ನಿಮ್ಮ ಕಾರಿಗೆ ಶಕ್ತಿ ತುಂಬಲು ವಾಹನ ಇಂಧನವಾಗಿಯೂ ಬಳಸಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ?
ಮಿಚಿಗನ್‌ನ ಡೈರಿ ರೈತರು ಹಾಲಿನಿಂದ ಕಾರು ಓಡಿಸಲು ತಯಾರಗುತ್ತಿದೆ. ಮಿಚಿಗನ್ ಹಾಲು ಉತ್ಪಾದಕರ ಸಂಘ (MMPA) ಒಂಟಾರಿಯೊ ಮೂಲದ ಡೈರಿ ಡಿಸ್ಟಿಲ್ಲರ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಇದು ಹಾಲು ಆಧಾರಿತ ವೋಡ್ಕಾವನ್ನು ಉತ್ಪಾದಿಸಲು ಹೆಸರುವಾಸಿಯಾಗಿದೆ. ಈ ಕಂಪನಿಯು ಹಾಲಿನ ಪರ್ಮಿಯೇಟ್ ಎಂಬ ಅಲ್ಟ್ರಾಫಿಲ್ಟರಿಂಗ್ ಪ್ರಕ್ರಿಯೆಯ ಉಪಉತ್ಪನ್ನವನ್ನು ಬಳಸುತ್ತದೆ. ಇದು ಲ್ಯಾಕ್ಟೋಸ್ ಅನ್ನು ಹೊಂದಿದೆ, ಇದು ಎಥೆನಾಲ್ ಮಾಡಲು ಯೀಸ್ಟ್‌ಗೆ ಸೇರಿಸಬಹುದು ಎಂದು ಹೇಳಲಾಗುತ್ತಿದೆ.

ಈ ವರದಿಯ ಪ್ರಕಾರ, ಫ್ಲೆಕ್ಸ್-ಇಂಧನ-ಎಂಜಿನ್-ಚಾಲಿತ ವಾಹನಗಳಲ್ಲಿ ಮಿಶ್ರಿತ ಇಂಧನದ ಭಾಗವಾಗಿ ಬಳಸಲಾಗುವ ಎಥೆನಾಲ್‌ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು $41 ಮಿಲಿಯನ್ ಸ್ಥಾವರವನ್ನು ತೆರೆಯುವ ಯೋಜನೆ ಇದೆ. ಈ ಪ್ರಕ್ರಿಯೆಯು ಇಂಧನ ಬೆಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದರೆ ಡೈರಿ ಕೃಷಿ ಉದ್ಯಮವು ಇಂಗಾಲದ ತೀವ್ರತೆಯನ್ನು ಹೊಂದಿರುವ ಕಾರಣ ಇದು ಹಸಿರು ಪರ್ಯಾಯವಲ್ಲ ಎಂದು ಹಲವರು ಹೇಳುತ್ತಾರೆ.
ಎಥೆನಾಲ್ ಮಿಶ್ರಿತ ಇಂಧನವು ಕಡಿಮೆ-ಹೊರಸೂಸುವ ಪೆಟ್ರೋಲ್‌ಗೆ ಸುಮಾರು 10 ಪ್ರತಿಶತ ಎಥೆನಾಲ್‌ನ ಮಿಶ್ರಣವನ್ನು ಸೂಚಿಸುತ್ತದೆ. ಜೋಳ, ಬೇಳೆ, ಕಬ್ಬು ಮತ್ತು ಬಾರ್ಲಿಯಂತಹ ವಿವಿಧ ಮೂಲಗಳಿಂದ ಎಥೆನಾಲ್ ಅನ್ನು ತಯಾರಿಸಬಹುದು. ಇನ್ನು ಭಾರತದಲ್ಲಿ ಏರುತ್ತಲೇ ಇರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಂಡು ಗ್ರಾಹಕರು ಅಸಹಾಯಕರಾಗಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ. ಈ ಪರಿಸ್ಥಿತಿಯಲ್ಲಿ ಸರಕಾರ ಕೂಡ ಇಂಧನ ದರ ನಿಯಂತ್ರಣ ಕಷ್ಟ ಎಂದು ಕೈಚೆಲ್ಲಿ ಕುಳಿತಿದೆ. ಇದಕ್ಕೊಂದು ಪರ್ಯಾಯ ಪರಿಹಾರ ಕಂಡುಕೊಳ್ಳಬೇಕಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್‌ಗೆ ಪರ್ಯಾಯ ಇಂಧನ ಕಂಡು ಹಿಡಿಯುವ ಕೆಲಸ ಹೀಗಾಗಲೇ ನಡೆಯುತ್ತಿದೆ. ಪೆಟ್ರೋಲ್ ಜಾಗಕ್ಕೆ ಇಥೆನಾಲ್ ಬರಬಹುದು. ಮುಂದಿನ ಕೆಲವು ದಿನಗಳಲ್ಲಿ ಸರ್ಕಾರ ಫ್ಲೆಕ್ಸ್ ಫ್ಯೂಯೆಲ್ ಇಂಜಿನ್ (flex-fuel engines) ಅನ್ನು ಮಾರುಕಟ್ಟೆಗೆ ತರಲಿದೆ. ಇಂಥ ಪರ್ಯಾಯ ಇಂಧನ ಅಟೋಮೊಬೈಲ್ ಉದ್ಯಮಕ್ಕೆ ಅನಿವಾರ್ಯ ಎನ್ನಲಾಗಿದೆ. ಫ್ಲೆಕ್ಸ್ ಫ್ಯೂಯೆಲ್ ಅಂದರೆ, ಫ್ಲೆಕ್ಸಿಬಲ್ ಇಂಧನ (Flexible Fuel) ಎಂದರ್ಥವಾಗಿದೆ.
ಟೊಯೊಟಾ ಇತ್ತೀಚೆಗೆ ಬ್ರೆಜಿಲ್‌ನಿಂದ ಆಮದು ಮಾಡಿಕೊಳ್ಳಲಾದ ಫ್ಲೆಕ್ಸ್ ಇಂಧನ ಸಾಮರ್ಥ್ಯದ 11ನೇ ಜನರೇಷನ್ ಕೊರೊಲ್ಲಾವನ್ನು ಪ್ರದರ್ಶಿಸಿತು. ಇದೀಗ ಮಾರುತಿ ಸುಜುಕಿ ದೆಹಲಿಯಲ್ಲಿ ಮಾರುತಿ ವ್ಯಾಗನ್ಆರ್ ಫ್ಲೆಕ್ಸ್ ಇಂಧನ (Maruti WagonR flex-fuel) ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜ್ಜಾಗುತ್ತಿದೆ. ಮಾರುತಿ ಸುಜುಕಿಯ ಡಿಕಾರ್ಬೊನೈಸೇಶನ್ ಪ್ರಯಾಣದ ಒಂದು ಭಾಗವಾಗಿದೆ ಮತ್ತು ಈ ವ್ಯಾಗನ್ಆರ್ ಮೂಲಮಾದರಿಯು ಮೊದಲ ಸಮೂಹ-ವಿಭಾಗದ ಫ್ಲೆಕ್ಸ್ ಇಂಧನ ಕಾರ್ ಆಗಿರುತ್ತದೆ.
ಎಥೆನಾಲ್ ಮಿಶ್ರಿತ ಪೆಟ್ರೋಲ್ ಅನ್ನು 20% (E20) ನಿಂದ 85% (E85) ವರೆಗೆ ಚಲಾಯಿಸುವ ಸಾಮರ್ಥ್ಯವನ್ನು ಹೊಂದಿರುವ ರೀತಿಯಲ್ಲಿ ಮಾರುತಿ ಈ ಮೂಲಮಾದರಿಯ ಪವರ್‌ಟ್ರೇನ್ ಅನ್ನು ವಿನ್ಯಾಸಗೊಳಿಸಿದೆ. ಮಾರುತಿ ವ್ಯಾಗನ್ಆರ್ ಫ್ಲೆಕ್ಸ್-ಫ್ಯುಯಲ್ ಹ್ಯಾಚ್‌ಬ್ಯಾಕ್ ಈ ವರ್ಷದ ಆರಂಭದಲ್ಲಿ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿತು. ಕಂಪನಿಯು ಫ್ಲೆಕ್ಸ್-ಇಂಧನ ವಾಹನಗಳನ್ನು ಹೊರತರಲು ಸಿದ್ಧವಾಗಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದೆ.
2025ರ ವೇಳೆಗೆ ಹೊಸ ಫ್ಲೆಕ್ಸ್-ಫ್ಯುಯಲ್ ಕಾರನ್ನು ಬಿಡುಗಡೆಗೊಳಿಸುವ ಗುರಿಯನ್ನು ಹೊಂದಿದೆ. ಜಪಾನ್‌ನ ಸುಜುಕಿ ಮೋಟಾರ್ ಕಾರ್ಪೊರೇಷನ್‌ನ ಬೆಂಬಲದೊಂದಿಗೆ ಮಾರುತಿ ಸುಜುಕಿ ಎಂಜಿನಿಯರ್‌ಗಳು ಈ ಮೂಲಮಾದರಿಯನ್ನು ಸಂಪೂರ್ಣವಾಗಿ ಭಾರತದಲ್ಲಿ ವಿನ್ಯಾಸಗೊಳಿಸಿದ್ದಾರೆ. ಈ ಎಂಜಿನ್ ಅನ್ನು ಎಥೆನಾಲ್ ಮಿಶ್ರಿತ ಇಂಧನಗಳಲ್ಲಿ ಶೇ.85 ವರೆಗೆ ಚಾಲನೆ ಮಾಡಲು ಕಾರಿನ ಬಾನೆಟ್ ಅಡಿಯಲ್ಲಿ ವ್ಯಾಪಕವಾದ ಬದಲಾವಣೆಗಳನ್ನು ಮಾಡಲಾಗಿದೆ.


Click it and Unblock the Notifications