ಸಾಮಾಜಿಕ ಅಂತರ ಪಾಲಿಸಲು ವಿಭಿನ್ನ ಪ್ರಯತ್ನಕ್ಕೆ ಮುಂದಾದ ಹಾಲು ಮಾರುವವ..!

ಕರೋನಾ ವೈರಸ್ ಹರಡದಂತೆ ತಡೆಯಲು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರವು ನಿರ್ದೇಶನಗಳನ್ನು ನೀಡಿದೆ. ಸಾಮಾಜಿಕ ಅಂತರವನ್ನು ಪಾಲಿಸಲು ಭಾರತೀಯರು ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ.

ಸಾಮಾಜಿಕ ಅಂತರ ಪಾಲಿಸಲು ವಿಭಿನ್ನ ಪ್ರಯತ್ನಕ್ಕೆ ಮುಂದಾದ ಹಾಲು ಮಾರುವವ..!

ಹಾಲು ಸರಬರಾಜು ಮಾಡುವವರೊಬ್ಬರು ತಮ್ಮ ಬೈಕನ್ನು ಮಾಡಿಫೈ ಮಾಡಿದ್ದಾರೆ. ಈ ಬೈಕಿನ ಮೂಲಕ ಹಾಲು ಸರಬರಾಜು ಮಾಡುವಾಗ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುತ್ತದೆ. ಈ ವಿಭಿನ್ನ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಶಂಸೆಯನ್ನು ಪಡೆಯುತ್ತಿದ್ದಾರೆ.

ಸಾಮಾಜಿಕ ಅಂತರ ಪಾಲಿಸಲು ವಿಭಿನ್ನ ಪ್ರಯತ್ನಕ್ಕೆ ಮುಂದಾದ ಹಾಲು ಮಾರುವವ..!

ಐಎಎಸ್ ಅಧಿಕಾರಿ ನಿತಿನ್ ಸಂಗ್ವಾರವರು ಟ್ವಿಟ್ಟರ್‌ನಲ್ಲಿ ಇದರ ಫೋಟೋವನ್ನು ಶೇರ್ ಮಾಡಿದ್ದಾರೆ. ಜನರು ತಮ್ಮನ್ನು ಮತ್ತು ಇತರರನ್ನು ರಕ್ಷಿಸಿಕೊಳ್ಳಲು ಮುಂದಾಗಿರುವುದನ್ನು ನೋಡುವುದು ಒಳ್ಳೆಯದು ಎಂದು ಅವರು ಬರೆದಿದ್ದಾರೆ. ಇದರ ಜೊತೆಗೆ, ತಮ್ಮ ಟ್ವೀಟ್‌ನಲ್ಲಿ ಹಾಲು ಸರಬರಾಜು ಮಾಡುವವನ ಕಾರ್ಯವನ್ನು ಶ್ಲಾಘಿಸಿದ್ದಾರೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಸಾಮಾಜಿಕ ಅಂತರ ಪಾಲಿಸಲು ವಿಭಿನ್ನ ಪ್ರಯತ್ನಕ್ಕೆ ಮುಂದಾದ ಹಾಲು ಮಾರುವವ..!

ಬೈಕ್‌ನಲ್ಲಿರುವ ಪೈಪ್ ಮೂಲಕ ಹಾಲು ಸರಬರಾಜು ಮಾಡುವುದನ್ನು ಫೋಟೋಗಳಲ್ಲಿ ಕಾಣಬಹುದು. ಹಾಲು ಸರಬರಾಜು ಮಾಡುವುದಕ್ಕಾಗಿಯೇ ಅವರು ತಮ್ಮ ಬೈಕ್‌ನಲ್ಲಿ ಪೈಪ್ ಅಳವಡಿಸಿದ್ದಾರೆ. ಪೈಪ್‌ನ ಒಂದು ಬದಿಯಿಂದ ಹಾಲು ಸುರಿಯುವುದನ್ನು ಹಾಗೂ ಇನ್ನೊಂದು ಬದಿಯಲ್ಲಿ ಗ್ರಾಹಕರು ಹಾಲು ತೆಗೆದುಕೊಳ್ಳುವುದನ್ನು ಕಾಣಬಹುದು.

ಸಾಮಾಜಿಕ ಅಂತರ ಪಾಲಿಸಲು ವಿಭಿನ್ನ ಪ್ರಯತ್ನಕ್ಕೆ ಮುಂದಾದ ಹಾಲು ಮಾರುವವ..!

ಈ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಾಲು ಸರಬರಾಜು ಮಾಡುವವನ ಕಾರ್ಯವನ್ನು ಪ್ರಶಂಸಿಸಲಾಗುತ್ತಿದೆ. ಕರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಈ ಸಮಯದಲ್ಲಿ ಸಾಮಾಜಿಕ ಅಂತರವನ್ನು ಅನುಸರಿಸುವುದು ಮುಖ್ಯವಾಗಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಸಾಮಾಜಿಕ ಅಂತರ ಪಾಲಿಸಲು ವಿಭಿನ್ನ ಪ್ರಯತ್ನಕ್ಕೆ ಮುಂದಾದ ಹಾಲು ಮಾರುವವ..!

ಯಾವುದೇ ಕೆಲಸ ಮಾಡುವಾಗ ಸಾಮಾಜಿಕ ಅಂತರವನ್ನು ಅನುಸರಿಸುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಈ ಕಾರಣಕ್ಕೆ ಜನರು ಹೊಸ ಹೊಸ ಸಂಶೋಧನೆಗಳಿಗೆ ಮುಂದಾಗಿದ್ದಾರೆ.

ಸಾಮಾಜಿಕ ಅಂತರ ಪಾಲಿಸಲು ವಿಭಿನ್ನ ಪ್ರಯತ್ನಕ್ಕೆ ಮುಂದಾದ ಹಾಲು ಮಾರುವವ..!

ಇತ್ತೀಚೆಗೆ ಮೆಕ್ಯಾನಿಕ್ ಒಬ್ಬರು ತಮ್ಮ ಮಗಳಿಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಎಲೆಕ್ಟ್ರಿಕ್ ಬೈಕ್ ಅನ್ನು ತಯಾರಿಸಿದ್ದರು. ಈ ಬೈಕ್‌ನ ವಿಶೇಷತೆಯೆಂದರೆ ಇಬ್ಬರ ನಡುವೆ ಒಂದು ಮೀಟರ್ ಅಂತರವನ್ನು ಹೊಂದಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಸಾಮಾಜಿಕ ಅಂತರ ಪಾಲಿಸಲು ವಿಭಿನ್ನ ಪ್ರಯತ್ನಕ್ಕೆ ಮುಂದಾದ ಹಾಲು ಮಾರುವವ..!

ಕೇರಳದ ಟ್ಯಾಕ್ಸಿಗಳಲ್ಲಿ ಸಾಮಾಜಿಕ ಅಂತರವನ್ನು ಅನುಸರಿಸಲು ಫೈಬರ್ ಗ್ಲಾಸ್ ಅನ್ನು ಬಳಸಲಾಗುತ್ತಿದೆ. ಕರೋನಾ ವೈರಸ್ ಸೋಂಕು ಹರಡದಂತೆ ತಡೆಯಲು ಟ್ಯಾಕ್ಸಿಗಳಲ್ಲಿ ಚಾಲಕ ಹಾಗೂ ಪ್ರಯಾಣಿಕರ ನಡುವೆ ಈ ಫೈಬರ್ ಗ್ಲಾಸ್ ಅನ್ನು ಇರಿಸಲಾಗಿದೆ.

Most Read Articles

Kannada
English summary
Milkman bike modified maintaining social distance. Read in Kannada.
Story first published: Friday, May 8, 2020, 17:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X