ನೂರಾರು ಕೋಟಿ ಇದ್ದರೂ ಸಣ್ಣ ಟಾಟಾ ಕಾರುಗಳು ಅಂದ್ರೆ ಪಂಚಪ್ರಾಣ ಈ ಶ್ರೀಮಂತರಿಗೆ!

ಭಾರತದ ಜನಪ್ರಿಯ ಕಾರು ತಯಾರಕರಾದ ಟಾಟಾ ಮೋಟಾರ್ಸ್ ಎಂದರೆ ಸಾರ್ವಜನಿಕರಿಲ್ಲಿ ವಿಶೇಷ ಪ್ರಾಮುಖ್ಯತೆ ಇದೆ. ಕಂಪನಿಯು ವಿವಿಧ ಸೆಡಾನ್, ಎಸ್‌ಯುವಿಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ. ಎಲ್ಲಾ ಕಾರುಗಳು ಉತ್ತಮ ಗುಣಮಟ್ಟ, ಆಧುನಿಕ ಫೀಚರ್‌ಗಳನ್ನು ಒಳಗೊಂಡು ಬರುತ್ತವೆ. ಆದ್ರೆ ದುಬಾರಿ ಕಾರುಗಳಲ್ಲಿ ನೀಡುವ ಫೀಚರ್‌ಗಳನ್ನು ನಾವು ಸಣ್ಣ ಟಾಟಾ ಕಾರುಗಳಲ್ಲಿ ನೋಡಲು ಸಾಧ್ಯವಿಲ್ಲ. ಆದ್ರೂ ಸಹ ಕೆಲ ಶ್ರೀಮಂತರು ಸಣ್ಣ ಟಾಟಾ ವಾಹನಗಳನ್ನು ಖರೀದಿಸುತ್ತಾರೆ. ಇಲ್ಲಿ, ಟಾಟಾ ಕಾರುಗಳನ್ನು ಹೊಂದಿರುವ ಶ್ರೀಮಂತ ಮತ್ತು ಜನಪ್ರಿಯ ಭಾರತೀಯರ ಬಗ್ಗೆ ತಿಳಿಯೋಣ.

ರಾಜೇಶ್ ಹಿರಾನಂದಾನಿ: ಭಾರತದ ಬಿಲಿಯನೇರ್ ಉದ್ಯಮಿ ರಾಜೇಶ್ ಹಿರಾನಂದಾನಿ ತಮ್ಮ ಐಷಾರಾಮಿ ವಾಹನಗಳ ಸಂಗ್ರಹದ ಜೊತೆಗೆ ಟಾಟಾ ನ್ಯಾನೋವನ್ನು ಹೊಂದಿದ್ದಾರೆ.ಅವರು ಒಮ್ಮೆ ಟಾಟಾ ನ್ಯಾನೋದಿಂದ ಇಳಿದು ಕೀಗಳನ್ನು ಮುಂಬೈನ ವ್ಯಾಲೆಟ್ ಪಾರ್ಕಿಂಗ್‌ಗೆ ಹಸ್ತಾಂತರಿಸುತ್ತಿರುವುದು ಕಂಡುಬಂದಿತ್ತು. ಇವರು ಈ ಸಣ್ಣ ಹ್ಯಾಚ್‌ಬ್ಯಾಕ್‌ನೊಂದಿಗೆ ಒಂದೆರಡು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ವಿಡಿಯೋಗಳು ವೈರಲ್ ಆಗಿವೆ.

millionaires-who-have-tata-cars-motilal-oswal-rajesh-hiranandani

ಮೋತಿಲಾಲ್ ಓಸ್ವಾಲ್: ಬಿಲಿಯನೇರ್ ಸ್ಟಾಕ್ ಬ್ರೋಕರ್ ಮತ್ತು ಭಾರತೀಯ ಉದ್ಯಮಿ ಮೋತಿಲಾಲ್ ಓಸ್ವಾಲ್, ವಿದೇಶಿ ಕಾರುಗಳನ್ನು ಖರೀದಿಸುವುದನ್ನು ನಿಲ್ಲಿಸಿ ನಿಧಾನವಾಗಿ ಭಾರತೀಯ ಬ್ರಾಂಡ್‌ಗಳತ್ತ ಮರಳುತ್ತಿರುವುದಾಗಿ ಹೇಳಿದ್ದಾರೆ. ಈ ವರ್ಷ ಹೊಚ್ಚ ಹೊಸ ಟಾಟಾ ಸಫಾರಿ ಎಸ್‌ಯುವಿ ಡಾರ್ಕ್ ಎಡಿಷನ್ ಅನ್ನು ಖರೀದಿಸಿದ್ದಾರೆ. ಓಸ್ವಾಲ್ ಅವರು, ಮುಂದೆ ತಮ್ಮ ಗ್ಯಾರೇಜ್‌ಗೆ ಮಹೀಂದ್ರಾ ವಾಹನವನ್ನು ಸೇರಿಸುವುದಾಗಿ ಹೇಳಿದ್ದಾರೆ.

ಎನ್.ಚಂದ್ರಶೇಖರನ್: ಟಾಟಾ ಸನ್ಸ್ ಮತ್ತು ಟಾಟಾ ಮೋಟಾರ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ಅವರು ಟಾಟಾ ನೆಕ್ಸಾನ್ ಇವಿಯನ್ನು ಖರೀದಿಸುವ ಮೂಲಕ ಟಾಟಾಗೆ ತಮ್ಮ ನಿಷ್ಠೆಯನ್ನು ಪ್ರದರ್ಶಿಸಿದ್ದಾರೆ. ಅವರು ಒಂದಲ್ಲ, ಎರಡು ನೆಕ್ಸಾನ್ ಇವಿಗಳನ್ನು ಖರೀದಿಸಿದ್ದಾರೆ. ಮೊದಲನೆಯದು 2020 ರಲ್ಲಿ, ಮತ್ತು ಎರಡನೆಯದು ಟಾಟಾ ಕಾರ್ಖಾನೆಯಿಂದ ಹೊರಬಂದ 50,000ನೇ ಕಾರಾಗಿದೆ.

millionaires-who-have-tata-cars-motilal-oswal-rajesh-hiranandani

ರತನ್ ಟಾಟಾ: ನಾವು ಟಾಟಾ ಕಾರುಗಳನ್ನು ಹೊಂದಿರುವ ಜನಪ್ರಿಯ ಜನರ ಪಟ್ಟಿಯನ್ನು ಮಾಡುತ್ತಿರುವುದರಿಂದ, ರತನ್ ಟಾಟಾ ಅವರನ್ನು ಬಿಡಲು ಸಾಧ್ಯವಿಲ್ಲ. ಅವರಿಗೆ ಕನ್ವರ್ಟಿಬಲ್ ಕಾರುಗಳಂದರೆ ಬಲು ಇಷ್ಟ, ಅವರ ಗ್ಯಾರೇಜ್‌ನಲ್ಲಿ ಹಲವಾರು ದುಬಾರಿ ಕಾರುಗಳನ್ನು ಹೊಂದಿದ್ದಾರೆ ಎಂದು ನಮಗೆಲ್ಲರಿಗೂ ತಿಳಿದಿದೆ. ಅವರು ವಿಶೇಷ ಸಂದರ್ಭಗಳಲ್ಲಿ ಮಾತ್ರ ಅವುಗಳನ್ನು ಬಳಸುತ್ತಾರೆ.

ಅವರು ಸಾಮಾನ್ಯವಾಗಿ ಎಲ್ಲಾ ಸಮಯದಲ್ಲೂ ಕಸ್ಟಮ್-ನಿರ್ಮಿತ ಟಾಟಾ ನ್ಯಾನೋ ಇವಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಅವರು ತಮ್ಮ ಸಂಗ್ರಹದಲ್ಲಿ ಟೈಪ್ 1 ಟಾಟಾ ನೆಕ್ಸಾನ್ ಅನ್ನು ಸಹ ಹೊಂದಿದ್ದಾರೆ. ಇಷ್ಟು ದೊಡ್ಡ ಟಾಟಾ ಸಾಮ್ರಾಜ್ಯವನ್ನು ಕಟ್ಟಿಕೊಂಡಿರುವ ರತನ್ ಟಾಟಾ ಅವರು ತೀರಾ ಸಣ್ಣ ಕಾರಿನಲ್ಲಿ ಓಡಾಡುವುದು ಹಲವರಿಗೆ ಮಾದರಿಯಾಗಿದೆ.

millionaires-who-have-tata-cars-motilal-oswal-rajesh-hiranandani

ಮಂದಿರಾ ಬೇಡಿ: ಎಲೆಕ್ಟ್ರಿಕ್ ಕಾರು ಖರೀದಿಸಿದ ಬಾಲಿವುಡ್‌ನ ಮೊದಲ ಶ್ರೀಮಂತ ನಟಿಯರಲ್ಲಿ ಮಂದಿರಾ ಬೇಡಿ ಕೂಡ ಒಬ್ಬರು. ಇವರು ತಮ್ಮ ಟಾಟಾ ನೆಕ್ಸಾನ್ ಇವಿಯನ್ನು 2020 ರಲ್ಲಿ ಖರೀದಿಸಿದರು. ಅವರ ಬಳಿ ದುಬಾರಿ ವೋಲ್ವೋ ಎಕ್ಸ್‌ಸಿ 40 ರೀಚಾರ್ಜ್ ಇದ್ದರೂ ಹೆಚ್ಚು ಇಷ್ಟದಿಂದ ಓಡಾಡುವುದು ಟಾಟಾ ನೆಕ್ಸಾನ್ ಇವಿಯಲ್ಲಿ ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, September 26, 2024, 17:11 [IST]
English summary
Millionaires who have tata cars motilal oswal rajesh hiranandani
Read more on india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+