ಗೋವಾ-ಕರ್ನಾಟಕ NH17 ಹೆದ್ದಾರಿಯ ಅದ್ಭುತ ಚಿತ್ರಗಳನ್ನು ಹಂಚಿಕೊಂಡ ಸಚಿವ ನಿತಿನ್ ಗಡ್ಕರಿ

ಗೋವಾ-ಕರ್ನಾಟಕ ರಾಷ್ಟ್ರೀಯ ಹೆದ್ದಾರಿಯ NH17 ವಿಭಾಗದ ಅದ್ಭುತ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಗೋವಾ/ಕರ್ನಾಟಕ ಗಡಿಯಿಂದ ಕುಂದಾಪುರ ಭಾಗದ 4-ಲೇನಿಂಗ್ ಯೋಜನೆಯು ಪೂರ್ಣಗೊಳ್ಳುವ ಹಂತ ತಲುಪಿದೆ ಎಂದು ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ತಿಳಿಸಿದ್ದಾರೆ.

ಗೋವಾ-ಕರ್ನಾಟಕ NH17 ಹೆದ್ದಾರಿಯ ಅದ್ಭುತ ಚಿತ್ರಗಳನ್ನು ಹಂಚಿಕೊಂಡ ಸಚಿವ ನಿತಿನ್ ಗಡ್ಕರಿ

ಟ್ವಿಟರ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಅವರು, ಪ್ರಸ್ತುತ 173 ಕಿ.ಮೀ (ಶೇ 92.42 ರಷ್ಟು ಪೂರ್ಣಗೊಂಡಿದೆ) ಮತ್ತು ಯೋಜನೆಯಲ್ಲಿ ಸಂಚಾರ ತೆರೆದಿರುವಾಗ ಉಳಿದ ಯೋಜನೆಯು ಡಿಸೆಂಬರ್ 2022 ರೊಳಗೆ ಪೂರ್ಣಗೊಳ್ಳುತ್ತದೆ. ಆಯಕಟ್ಟಿನ ಹೆದ್ದಾರಿಯು ವಿವಿಧ ಭೂಪ್ರದೇಶಗಳ ಮೂಲಕ ಹಾದುಹೋಗುತ್ತದೆ ಎಂದು ತಿಳಿಸಿದ್ದಾರೆ.

ಗೋವಾ-ಕರ್ನಾಟಕ NH17 ಹೆದ್ದಾರಿಯ ಅದ್ಭುತ ಚಿತ್ರಗಳನ್ನು ಹಂಚಿಕೊಂಡ ಸಚಿವ ನಿತಿನ್ ಗಡ್ಕರಿ

ಶೇ 50ರಷ್ಟು ಉದ್ದವು ರೋಲಿಂಗ್ ಭೂಪ್ರದೇಶ (45 ಕಿಮೀ) ಮತ್ತು ಪರ್ವತ ಭೂಪ್ರದೇಶ (24 ಕಿಮೀ) ಮೂಲಕ ಹಾದುಹೋಗುತ್ತದೆ. ಈ ಹೆದ್ದಾರಿಯ 187 ಕಿ.ಮೀ ವಿಸ್ತಾರವು ಒಂದು ಬದಿಯಲ್ಲಿ ಅರೇಬಿಯನ್ ಸಮುದ್ರ ಮತ್ತು ಇನ್ನೊಂದು ಬದಿಯಲ್ಲಿ ಪಶ್ಚಿಮ ಘಟ್ಟಗಳನ್ನು ಹೊಂದಿದೆ, ಇದು ಭವ್ಯವಾದ ದೃಶ್ಯಾವಳಿಯೊಂದಿಗೆ ಭಾರತದ ಅತ್ಯಂತ ಸುಂದರವಾದ ಹೆದ್ದಾರಿಗಳಲ್ಲಿ ಒಂದಾಗಿದೆ.

ಗೋವಾ-ಕರ್ನಾಟಕ NH17 ಹೆದ್ದಾರಿಯ ಅದ್ಭುತ ಚಿತ್ರಗಳನ್ನು ಹಂಚಿಕೊಂಡ ಸಚಿವ ನಿತಿನ್ ಗಡ್ಕರಿ

ಈ ಯೋಜನೆಯು ಪಶ್ಚಿಮ ಮತ್ತು ದಕ್ಷಿಣ ಭಾರತದ ನಡುವಿನ ಪ್ರಮುಖ ಕರಾವಳಿ ಹೆದ್ದಾರಿ ಸಂಪರ್ಕವಾಗಿದೆ. ಹೆದ್ದಾರಿಯು ಪನ್ವೇಲ್, ಚಿಪ್ಲುನ್, ರತ್ನಗಿರಿ, ಪಣಜಿ, ಮಾರ್ಗೋವ್, ಕಾರವಾರ, ಉಡುಪಿ, ಸುರತ್ಕಲ್, ಮಂಗಳೂರು, ಕೋಝಿಕ್ಕೋಡ್, ಕೊಚ್ಚಿ, ತಿರುವನಂತಪುರಂ ಮತ್ತು ಕನ್ಯಾಕುಮಾರಿ ಸೇರಿದಂತೆ ಪ್ರಮುಖ ನಗರಗಳು ಮತ್ತು ಪಟ್ಟಣಗಳನ್ನು ಸಂಪರ್ಕಿಸುತ್ತದೆ.

ಗೋವಾ-ಕರ್ನಾಟಕ NH17 ಹೆದ್ದಾರಿಯ ಅದ್ಭುತ ಚಿತ್ರಗಳನ್ನು ಹಂಚಿಕೊಂಡ ಸಚಿವ ನಿತಿನ್ ಗಡ್ಕರಿ

"ಈ ಯೋಜನೆಯು ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ, ಅಪಘಾತಗಳನ್ನು ತಡೆಗಟ್ಟುತ್ತದೆ, ವಾಹನ ನಿರ್ವಹಣಾ ವೆಚ್ಚವನ್ನು ಉತ್ತಮಗೊಳಿಸುತ್ತದೆ ಮತ್ತು ಸುಗಮ ರಸ್ತೆಯಿಂದಾಗಿ ಇಂಧನ ಉಳಿತಾಯಕ್ಕೆ ಸಹಾಯ ಮಾಡುತ್ತದೆ. ಮುಖ್ಯವಾಗಿ ಅಂತರ ಮತ್ತು ಆಂತರಿಕ ಪ್ರಯಾಣಿಕರಿಗೆ ವಾಹನ ದಟ್ಟಣೆಯನ್ನು ಕಡಿಮೆ ಮಾಡುತ್ತದೆ" ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಗೋವಾ-ಕರ್ನಾಟಕ NH17 ಹೆದ್ದಾರಿಯ ಅದ್ಭುತ ಚಿತ್ರಗಳನ್ನು ಹಂಚಿಕೊಂಡ ಸಚಿವ ನಿತಿನ್ ಗಡ್ಕರಿ

ಕಾರು ಭದ್ರತಾ ವಿಷಯದಲ್ಲಿ ಗಡ್ಕರಿ ಅಸಮಾಧಾನ

ಕೇಂದ್ರ ಸಾರಿಗೆ ಸಚಿವಾಲಯದ ವರದಿಯ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ ಸುಮಾರು 4.50 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಇದರಲ್ಲಿ 1.50 ಲಕ್ಷ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇತರ ಯಾವುದೇ ದೇಶಕ್ಕೆ ಹೋಲಿಸಿದರೆ ಈ ಸಂಖ್ಯೆ ವಿಶ್ವದಲ್ಲೇ ಅತ್ಯಧಿಕವಾಗಿದೆ. ಭಾರತದಲ್ಲಿ ಅಂಗವೈಕಲ್ಯಕ್ಕೆ ರಸ್ತೆ ಅಪಘಾತಗಳು ಮುಖ್ಯ ಕಾರಣ ಎಂದು ಉಲ್ಲೇಖಿಸಲಾಗಿದೆ.

ಗೋವಾ-ಕರ್ನಾಟಕ NH17 ಹೆದ್ದಾರಿಯ ಅದ್ಭುತ ಚಿತ್ರಗಳನ್ನು ಹಂಚಿಕೊಂಡ ಸಚಿವ ನಿತಿನ್ ಗಡ್ಕರಿ

ಈ ನಿಟ್ಟಿನಲ್ಲಿ ಅಪಘಾತಗಳಾದರೂ ಜೀವ ಉಳಿಸುವ ಕಠಿಣ ಕ್ರಮಗಳನ್ನು ಜಾರಿಗೆ ತರುವ ಹಿನ್ನೆಲೆಯಲ್ಲಿ ಈ ವರ್ಷದ ಆರಂಭದಲ್ಲಿ ಎಂಟು ಜನರ ಆಸನ ಸಾಮರ್ಥ್ಯದ ಕಾರುಗಳಿಗೆ ಅಕ್ಟೋಬರ್ 2022 ರಿಂದ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಲು ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಇಲಾಖೆ (MoRTH) ಕರಡು ಅಧಿಸೂಚನೆಯನ್ನು ಹೊರಡಿಸಿತ್ತು.

ಗೋವಾ-ಕರ್ನಾಟಕ NH17 ಹೆದ್ದಾರಿಯ ಅದ್ಭುತ ಚಿತ್ರಗಳನ್ನು ಹಂಚಿಕೊಂಡ ಸಚಿವ ನಿತಿನ್ ಗಡ್ಕರಿ

ಆದರೆ ಇದರಿಂದ ಕಾರುಕಂಪನಿಗಳಿಗೆ ನಷ್ಟವಾಗಲಿದ್ದು, ಕೆಲವು ಕಾರು ತಯಾರಕರು ಈ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಏರ್‌ಬ್ಯಾಗ್‌ಗಳ ಹೆಚ್ಚುವರಿ ಅಳವಡಿಕೆಗೆ ಹೆಚ್ಚುವರಿ ಖರ್ಚಾಗಲಿದ್ದು, ಬೆಲೆ ಕೂಡ ಏರಿಕೆಯಾಗಲಿದೆ. ಇದರಿಂದ ಗ್ರಾಹಕರು ವಾಹನಗಳನ್ನು ಕೊಳ್ಳಲು ಹಿಂಜರಿಯುತ್ತಾರೆ. ಹೀಗೆ ಮುಂದಿವರಿದರೆ ವಾಹನ ತಹಯಾರಿ ಸ್ಥಗಿತಗೊಳ್ಳುವುದಾಗಿ ಕಾರು ಕಂಪನಿಗಳು ಸರ್ಕಾರಕ್ಕೆ ವಿವರಿಸಿದ್ದವು.

ಗೋವಾ-ಕರ್ನಾಟಕ NH17 ಹೆದ್ದಾರಿಯ ಅದ್ಭುತ ಚಿತ್ರಗಳನ್ನು ಹಂಚಿಕೊಂಡ ಸಚಿವ ನಿತಿನ್ ಗಡ್ಕರಿ

ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ಅಸಮಾಧಾನ ವ್ಯಕ್ತಪಡಿಸಿ ಭಾರತವು ಜಗತ್ತಿನಾದ್ಯಂತ ಅತಿದೊಡ್ಡ ಕಾರು ಮಾರುಕಟ್ಟೆಗಳಲ್ಲಿ ಒಂದಾಗಿರುವುದರಿಂದ, ಸುರಕ್ಷತೆಯು ಬಹಳಷ್ಟು ಮುಖ್ಯವಾಗಿದೆ. ಇನದನ್ನು ಕಾರು ತಯಾರಕರು ಗಂಭೀರವಾಗಿ ಪರಿಗಣಿಸಬೇಕು, ದೇಶದ ಜನರ ರಕ್ಷಣೆ ನಿಮ್ಮ್ ಕರ್ತವ್ಯವಾಗಿದೆ. ಕಾರು ಭದ್ರತಾ ವಿಷಯದಲ್ಲಿ ಗುಣಮಟ್ಟದ ರಕ್ಷಣೆಗೆ ರಾಜಿ ಇಲ್ಲ ಎಂದಿದ್ದಾರೆ.

ಗೋವಾ-ಕರ್ನಾಟಕ NH17 ಹೆದ್ದಾರಿಯ ಅದ್ಭುತ ಚಿತ್ರಗಳನ್ನು ಹಂಚಿಕೊಂಡ ಸಚಿವ ನಿತಿನ್ ಗಡ್ಕರಿ

ಕಾರುಗಳನ್ನು ಸ್ಥಗಿತಗೊಳಿಸಲು ಮಾರುತಿ ಸುಜುಕಿ ಚಿಂತನೆ

ಕಳೆದ ಎರಡು ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ BS6 ಹೊರಸೂಸುವಿಕೆ ಮಾನದಂಡವನ್ನು ಅಳವಡಿಸಲಾಗಿದೆ, ಇದು ಸಾಲದೆಂಬಂತೆ ಕರೋನಾದಿಂದಾಗಿ ಕಚ್ಛಾ ವಸ್ತುಗಳು ದುಬಾರಿಯಾಗಿವೆ. ಇದರಿಂದಾಗಿ ಮಾರುತಿ ಸುಜುಕಿ ಈಗಾಗಲೇ 2021 ರಲ್ಲಿ 4 ಬಾರಿ ಮತ್ತು 2022 ರಲ್ಲಿ 3 ಬಾರಿ ಕಾರಿನ ಬೆಲೆಯನ್ನು ಹೆಚ್ಚಿಸಿದೆ.

ಗೋವಾ-ಕರ್ನಾಟಕ NH17 ಹೆದ್ದಾರಿಯ ಅದ್ಭುತ ಚಿತ್ರಗಳನ್ನು ಹಂಚಿಕೊಂಡ ಸಚಿವ ನಿತಿನ್ ಗಡ್ಕರಿ

ಕಾಂಪ್ಯಾಕ್ಟ್ ವಾಹನಗಳನ್ನು ಮಾರಾಟ ಮಾಡುವುದರಿಂದ ಕಂಪನಿಯು ಹೆಚ್ಚು ಲಾಭ ಗಳಿಸುವುದಿಲ್ಲ. ಕಂಪನಿಯು ಪ್ರಸ್ತುತ ಏಕಪಕ್ಷೀಯವಾಗಿ ಸಣ್ಣ ಕಾರುಗಳನ್ನು ನಿಯಂತ್ರಿಸುತ್ತದೆ. ಆಲ್ಟೊ ಮತ್ತು ಎಸ್-ಪ್ರೆಸ್ಸೊದಂತಹ ಮಾದರಿಗಳೊಂದಿಗೆ ಸ್ಪರ್ಧಿಸಲು ಇತರ ಯಾವುದೇ ಮಾದರಿ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಹಾಗಾಗಿ ಕಂಪನಿಯು ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸರ್ಕಾರಕ್ಕೆ ಮನವಿ ಮಾಡಿತ್ತು.

ಗೋವಾ-ಕರ್ನಾಟಕ NH17 ಹೆದ್ದಾರಿಯ ಅದ್ಭುತ ಚಿತ್ರಗಳನ್ನು ಹಂಚಿಕೊಂಡ ಸಚಿವ ನಿತಿನ್ ಗಡ್ಕರಿ

ಈ ನಿಯಮದಿಂದಾಗಿ ಕೈಗೆಟಕುವ ದರದ ಕಾರುಗಳ ಬೆಲೆ ಗಣನೀಯವಾಗಿ ಏರಿಕೆಯಾಗಲಿದ್ದು, ಇದು ಕಾರುಗಳ ಮಾರಾಟದ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಕಾರು ಕಂಪನಿಗಳು ಆತಂಕ ವ್ಯಕ್ತಪಡಿಸಿದ್ದವು. ಈಗಾಗಲೇ ಭಾರತದಲ್ಲಿ ಆಟೋಮೊಬೈಲ್ ಉದ್ಯಮವು ಕಳೆದ ಮೂರು ವರ್ಷಗಳಿಂದ ನಷ್ಟವನ್ನು ಎದುರಿಸಿವೆ ಎಂದು ಹೇಳಿಕೊಂಡಿವೆ.

ಗೋವಾ-ಕರ್ನಾಟಕ NH17 ಹೆದ್ದಾರಿಯ ಅದ್ಭುತ ಚಿತ್ರಗಳನ್ನು ಹಂಚಿಕೊಂಡ ಸಚಿವ ನಿತಿನ್ ಗಡ್ಕರಿ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಗೋವಾ-ಕರ್ನಾಟಕ ರಾಷ್ಟ್ರೀಯ ಹೆದ್ದಾರಿಯ NH17 ರಸ್ತೆ ಕಾಮಗಾರಿಯಿಂದ ಪನ್ವೇಲ್, ಚಿಪ್ಲುನ್, ರತ್ನಗಿರಿ, ಪಣಜಿ, ಮಾರ್ಗೋವ್, ಕಾರವಾರ, ಉಡುಪಿ, ಸುರತ್ಕಲ್, ಮಂಗಳೂರು, ಕೋಝಿಕ್ಕೋಡ್, ಕೊಚ್ಚಿ, ತಿರುವನಂತಪುರಂ ಮತ್ತು ಕನ್ಯಾಕುಮಾರಿ ಸೇರಿದಂತೆ ಹಲವು ನಗರಗಳಿಗೆ ಸಂಪರ್ಕ ದೊರೆಯಲಿದೆ. ಈ ಹಿಂದೆ ಸುತ್ತಿಬಳಸಿ ಬರುತ್ತಿದ್ದವರು ಯಾವುದೇ ಪ್ರಯಾಸವಿಲ್ಲದೇ ತಮ್ಮ ನಗರಗಳಿಂದ ಕಡಿಮೆ ಸಮಯದಲ್ಲಿ ಗೋವಾ ತಲುಪಬಹುದಾಗಿದೆ.

Most Read Articles

Kannada
English summary
Minister Nitin Gadkari shared amazing pictures of Goa Karnataka NH17 highway
Story first published: Monday, July 4, 2022, 10:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X