ಸಂಚಾರಿ ಪೊಲೀಸರಿಗೆ ಎಲೆಕ್ಟ್ರಿಕ್ ವಾಹನ ಚಾಲನಾ ನಿಯಮಗಳ ಬಗ್ಗೆ ತಿಳಿಸಿದ ಬಾಲಕ

ಕೆಲವೊಮ್ಮೆ ವಾಹನ ಸವಾರರು ಹೆಲ್ಮೆಟ್ ಧರಿಸಿದ್ದರೂ, ನಿಗದಿತ ವೇಗದಲ್ಲಿ ಚಲಿಸುತ್ತಿದ್ದರೂ, ವಾಹನಕ್ಕೆ ಸಂಬಂಧ ಪಟ್ಟ ಎಲ್ಲಾ ದಾಖಲೆಗಳನ್ನು ಹೊಂದಿದ್ದರೂ ಕೆಲವು ಕಾರಣಗಳಿಂದಾಗಿ ಪೊಲೀಸರಿಗೆ ಸಿಕ್ಕಿಬೀಳುತ್ತಾರೆ.

ಸಂಚಾರಿ ಪೊಲೀಸರಿಗೆ ಎಲೆಕ್ಟ್ರಿಕ್ ವಾಹನ ಚಾಲನಾ ನಿಯಮಗಳ ಬಗ್ಗೆ ತಿಳಿಸಿದ ಬಾಲಕ

ಇನ್ನು ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದು ದೇಶಾದ್ಯಂತ ಅಪರಾಧವಾಗಿದೆ. ಸಮರ್ಪಕ ದಾಖಲೆಗಳಿಲ್ಲದೆ ಅಪ್ರಾಪ್ತ ವಯಸ್ಕರು ಸಾರ್ವಜನಿಕ ರಸ್ತೆಯಲ್ಲಿ ವಾಹನ ಚಾಲನೆ ಮಾಡುವುದು ಕಾನೂನು ಬಾಹಿರ.

ಸಂಚಾರಿ ಪೊಲೀಸರಿಗೆ ಎಲೆಕ್ಟ್ರಿಕ್ ವಾಹನ ಚಾಲನಾ ನಿಯಮಗಳ ಬಗ್ಗೆ ತಿಳಿಸಿದ ಬಾಲಕ

ಆಂಧ್ರಪ್ರದೇಶದ ಜನನಿಬಿಡ ರಸ್ತೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಚಾಲನೆ ಮಾಡುತ್ತಿದ್ದ ಬಾಲಕನೊಬ್ಬ ಸಂಚಾರಿ ಪೊಲೀಸರು ತಡೆದು ನಿಲ್ಲಿಸಿದಾಗ ಜಾಣ್ಮೆಯಿಂದ ಉತ್ತರಿಸಿದಂಡ ವಿಧಿಸುವುದರಿಂದ ತಪ್ಪಿಸಿಕೊಂಡಿದ್ದಾನೆ. ಬಾಲಕ ಸಂಚಾರಿ ಪೊಲೀಸರಿಗೆ ಏನು ಹೇಳಿ ತಪ್ಪಿಸಿ ಕೊಂಡ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಸಂಚಾರಿ ಪೊಲೀಸರಿಗೆ ಎಲೆಕ್ಟ್ರಿಕ್ ವಾಹನ ಚಾಲನಾ ನಿಯಮಗಳ ಬಗ್ಗೆ ತಿಳಿಸಿದ ಬಾಲಕ

ಇಬ್ಬರು ಅಪ್ರಾಪ್ತ ವಯಸ್ಕ ಬಾಲಕರು ಸ್ಕೂಟರ್ ನಲ್ಲಿ ಸಂಚರಿಸುತ್ತಿರುವುದನ್ನು ಕಂಡ ಸಂಚಾರಿ ಪೊಲೀಸರು ಅವರನ್ನು ತಡೆದು ವಿಚಾರಣೆ ನಡೆಸಿದ್ದಾರೆ. ಈ ಇಬ್ಬರೂ ಬಾಲಕರು ಹೆಲ್ಮೆಟ್ ಆಗಲಿ ಫೇಸ್ ಮಾಸ್ಕ್ ಆಗಲಿ ಧರಿಸಿರಲಿಲ್ಲ.

ಸಂಚಾರಿ ಪೊಲೀಸರಿಗೆ ಎಲೆಕ್ಟ್ರಿಕ್ ವಾಹನ ಚಾಲನಾ ನಿಯಮಗಳ ಬಗ್ಗೆ ತಿಳಿಸಿದ ಬಾಲಕ

ಅವರ ಬಳಿ ಚಾಲನಾ ಪರವಾನಗಿ ಸಹ ಇರಲಿಲ್ಲ. ವಾಹನ ನೋಂದಣಿ ಪ್ರಮಾಣ ಪತ್ರವೂ ಇರಲಿಲ್ಲ. ಪೊಲೀಸರ ಕೈಗೆ ಸಿಕ್ಕಿ ಬಿದ್ದ ಬಾಲಕರ ಮುಖದಲ್ಲಿ ಸ್ವಲ್ಪವೂ ಭಯ ಕಾಣಲಿಲ್ಲ. ಪೊಲೀಸರ ಪ್ರಶ್ನೆಗಳಿಗೆ ದಿಟ್ಟತನದಿಂದಲೇ ಉತ್ತರ ನೀಡಿದ್ದಾರೆ.

ಸಂಚಾರಿ ಪೊಲೀಸರಿಗೆ ಎಲೆಕ್ಟ್ರಿಕ್ ವಾಹನ ಚಾಲನಾ ನಿಯಮಗಳ ಬಗ್ಗೆ ತಿಳಿಸಿದ ಬಾಲಕ

ಎಬಿಎನ್ ತೆಲುಗು ಯೂಟ್ಯೂಬ್ ಚಾನೆಲ್ ನಲ್ಲಿ ಪೋಸ್ಟ್ ಮಾಡಿರುವ ವೀಡಿಯೋದಲ್ಲಿ ಸ್ಕೂಟರ್ ಚಾಲನೆ ಮಾಡುತ್ತಿರುವ ಬಾಲಕ ಬಾಯಿಯಲ್ಲಿ ಚೀವಿಂಗ್ ಗಮ್ ಅಗಿಯುತ್ತಾ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಕಾಣಬಹುದು. ಎಲೆಕ್ಟ್ರಿಕ್ ಸ್ಕೂಟರ್ ಚಾಲನೆ ಮಾಡುತ್ತಿದ್ದ ಕಾರಣಕ್ಕೆ ಬಾಲಕ ಬಂಡ ಧೈರ್ಯದಿಂದ ಮಾತನಾಡಿದ್ದಾನೆ.

ಸಂಚಾರಿ ಪೊಲೀಸರಿಗೆ ಎಲೆಕ್ಟ್ರಿಕ್ ವಾಹನ ಚಾಲನಾ ನಿಯಮಗಳ ಬಗ್ಗೆ ತಿಳಿಸಿದ ಬಾಲಕ

ಚಿತ್ರ ಕೃಪೆ: ಎಬಿಎನ್ ತೆಲುಗು

ಎಲೆಕ್ಟ್ರಿಕ್ ಸ್ಕೂಟರ್ ಚಾಲನೆ ಮಾಡಲು ಯಾವುದೇ ಚಾಲನಾ ಪರವಾನಗಿ ಅಥವಾ ವಾಹನ ನೋಂದಣಿ ಪ್ರಮಾಣ ಪತ್ರದ ಅಗತ್ಯವಿಲ್ಲ. ಇದೇ ಸಂಗತಿಯನ್ನು ಬಾಲಕ ಪೊಲೀಸರಿಗೆ ಹೇಳಿದ್ದಾನೆ. ಎಲೆಕ್ಟ್ರಿಕ್ ವಾಹನ ಚಾಲನೆ ಮಾಡಲು ಅಗತ್ಯವಿರುವ ಗ್ರೀನ್ ಕಾರ್ಡ್ ತನ್ನ ಬಳಿ ಇದೆ ಎಂದು ಬಾಲಕ ಅದನ್ನು ಪೊಲೀಸರಿಗೆ ತೋರಿಸಿದ್ದಾನೆ.

ಸಂಚಾರಿ ಪೊಲೀಸರಿಗೆ ಎಲೆಕ್ಟ್ರಿಕ್ ವಾಹನ ಚಾಲನಾ ನಿಯಮಗಳ ಬಗ್ಗೆ ತಿಳಿಸಿದ ಬಾಲಕ

ಈ ಕಾರಣಕ್ಕೆ ಪೊಲೀಸರು ಆತನ ವಿರುದ್ಧ ಪೊಲೀಸರು ಯಾವುದೇ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಗ್ರೀನ್ ಕಾರ್ಡ್ ಜೊತೆಯಲ್ಲಿ ಪೊಲೀಸರು ಎಲೆಕ್ಟ್ರಿಕ್ ಸ್ಕೂಟರಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ಕಳುಹಿಸಿದರು.

ಸಂಚಾರಿ ಪೊಲೀಸರಿಗೆ ಎಲೆಕ್ಟ್ರಿಕ್ ವಾಹನ ಚಾಲನಾ ನಿಯಮಗಳ ಬಗ್ಗೆ ತಿಳಿಸಿದ ಬಾಲಕ

ಬಾಲಕ ಹೈಲೈಟ್ ಧರಿಸದ ಕಾರಣಕ್ಕೆ ಆತ ಸಾಗಲು ಸಂಚಾರಿ ಪೊಲೀಸರು ಇತರ ವಾಹನಗಳನ್ನು ಬೇರೆಡೆಗೆ ತಿರುಗಿಸಿದರು. ಎಲೆಕ್ಟ್ರಿಕ್ ಸ್ಕೂಟರ್ ಚಾಲನೆ ಮಾಡುತ್ತಿದ್ದ ಕಾರಣಕ್ಕೆ ಬಾಲಕ ದಂಡ ವಿಧಿಸುವುದರಿಂದ ಪಾರಾಗಿದ್ದಾನೆ. ಒಂದು ವೇಳೆ ಪೆಟ್ರೋಲ್ ಸ್ಕೂಟರ್ ಆಗಿದ್ದರೆ ಕಥೆ ಬೇರೆಯಾಗಿರುತ್ತಿತ್ತು.

ಸಂಚಾರಿ ಪೊಲೀಸರಿಗೆ ಎಲೆಕ್ಟ್ರಿಕ್ ವಾಹನ ಚಾಲನಾ ನಿಯಮಗಳ ಬಗ್ಗೆ ತಿಳಿಸಿದ ಬಾಲಕ

ಕೇಂದ್ರ ಸರ್ಕಾರವು ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿದೆ. ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ಬಳಕೆದಾರರಿಗೆ ಕೆಲವು ಕೊಡುಗೆಗಳನ್ನು ಘೋಷಿಸಿದೆ. ಇದರನ್ವಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸವಾರರು ನೋಂದಣಿ ಪ್ರಮಾಣಪತ್ರ ಹೊಂದುವ ಹಾಗೂ ಹೆಲ್ಮೆಟ್ ಧರಿಸುವ ಅಗತ್ಯವಿಲ್ಲ.

ಸಂಚಾರಿ ಪೊಲೀಸರಿಗೆ ಎಲೆಕ್ಟ್ರಿಕ್ ವಾಹನ ಚಾಲನಾ ನಿಯಮಗಳ ಬಗ್ಗೆ ತಿಳಿಸಿದ ಬಾಲಕ

ಈ ನಿಯಮ ಅನ್ವಯವಾಗಲು ಎಲೆಕ್ಟ್ರಿಕ್ ದ್ವಿಚಕ್ರ ವಾಹನವು 250 ವ್ಯಾಟ್ ಅಥವಾ ಅದಕ್ಕಿಂತ ಕಡಿಮೆ ಪ್ರಮಾಣದ ಎಲೆಕ್ಟ್ರಿಕ್ ಮೋಟಾರ್ ನಲ್ಲಿ ಚಲಿಸುವಂತಿರಬೇಕು. ಇಂತಹ ಮೋಟಾರ್ ಹೊಂದಿರುವ ಎಲೆಕ್ಟ್ರಿಕ್ ದ್ವಿ ಚಕ್ರ ವಾಹನಗಳನ್ನು ಚಾಲನೆ ಮಾಡಲು ವಯಸ್ಸಿನ ಮಿತಿಯಿಲ್ಲ. ಈ ಕಾರಣದಿಂದ ಈ ಬಾಲಕನಿಗೆ ರಸ್ತೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಚಾಲನೆ ಮಾಡಲು ಅವಕಾಶ ನೀಡಲಾಗಿದೆ.

ಹೆಲ್ಮೆಟ್ ಧರಿಸದಿರಿ ಎಂದು ಸರ್ಕಾರ ಹೇಳುವುದಿಲ್ಲ. ಸುರಕ್ಷತೆಗಾಗಿ ಹೆಲ್ಮೆಟ್ ಧರಿಸುವುದು ಒಳ್ಳೆಯದು. ಸಾರ್ವಜನಿಕ ರಸ್ತೆಯಲ್ಲಿ ಅದರಲ್ಲೂ ಹೆಚ್ಚು ವಾಹನಗಳ ಓಡಾಟವಿರುವ ರಸ್ತೆಯಲ್ಲಿ ಚಲಿಸುತ್ತಿದ್ದರೆ ಹೆಲ್ಮೆಟ್ ಧರಿಸುವುದು ಸೂಕ್ತ.

ಸಂಚಾರಿ ಪೊಲೀಸರಿಗೆ ಎಲೆಕ್ಟ್ರಿಕ್ ವಾಹನ ಚಾಲನಾ ನಿಯಮಗಳ ಬಗ್ಗೆ ತಿಳಿಸಿದ ಬಾಲಕ

ದ್ವಿಚಕ್ರ ವಾಹನಗಳು ಎಷ್ಟೇ ಸುರಕ್ಷತಾ ಫೀಚರ್ ಗಳನ್ನು ಹೊಂದಿದ್ದರೂ, ಹೆಲ್ಮೆಟ್ ಧರಿಸುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದು. ಹೆಲ್ಮೆಟ್ ಗಳು ಹಲವು ಅಪಘಾತಗಳಲ್ಲಿ ದ್ವಿಚಕ್ರ ವಾಹನ ಸವಾರರ ಪ್ರಾಣ ಉಳಿಸಿವೆ. ಈ ಕಾರಣಕ್ಕೆ ದ್ವಿಚಕ್ರ ವಾಹನವು ಎಷ್ಟೇ ವೇಗದಲ್ಲಿ ಚಲಿಸುತ್ತಿರಲಿ ಹೆಲ್ಮೆಟ್ ಧರಿಸಿದರೆ ಒಳ್ಳೆಯದು.

Most Read Articles

Kannada
English summary
Minor boy explains about electric scooter riding rules to traffic cops video details
Story first published: Friday, August 6, 2021, 19:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X