Truck-Bus ನಡುವೆ ನಜ್ಜುಗುಜ್ಜಾಗುವ ಅಪಘಾತದಿಂದ ಅದ್ಭುತವಾಗಿ ಪಾರಾದ ಯುವತಿಯರು
ಭಾರತದಲ್ಲಿನ ಬಹುತೇಕ ಅಪಘಾತಗಳು ಕೆಟ್ಟ ರಸ್ತೆಗಳಿಂದಲೇ ಆಗುತ್ತಿವೆ ಎಂಬ ಆರೋಪವಿದೆ. ಇದು ಸತ್ಯಕ್ಕೆ ತುಂಬಾ ದೂರವಾದ ಮಾತು, ರಸ್ತೆ ಹೇಗೇ ಇದ್ದರೂ ಚಾಲಕನಿಗೆ ಚಾಲನಾ ಕೌಶಲ್ಯವಿದ್ರೆ ಅಪಘಾತದಿಂದ ಪಾರಾಗುತ್ತಾನೆ. ಸದ್ಯ ದೇಶದಲ್ಲಿ ರಸ್ತೆಗಳು ಈ ಹಿಂದಿದ್ದಕ್ಕೆ ಹೋಲಿಸಿದರೆ ಈಗ ಸುಧಾರಣೆ ಕಂಡಿವೆ. ಆದ್ರೂ ಅಪಘಾತಗಳು ನಡೆಯಲು ಕಾರಣವೇನು ಗೊತ್ತಾ?
ರಸ್ತೆಗಳು ಎಷ್ಟೇ ಸುಧಾರಿಸಿದರೂ ಜನರ ವಾಹನ ಚಾಲನಾ ವಿಧಾನವು ಬದಲಾಗಬೇಕಿದೆ. ಅಜಾಗರೂಕತೆಯ ಚಾಲನೆಯು ರಸ್ತೆಯಲ್ಲಿ ಅಪಘಾತಗಳಿಗೆ ಮುಖ್ಯ ಕಾರಣವಾಗಿದೆ ಎಂಬುದನ್ನು ಎಲ್ಲರೂ ಒಪ್ಪಲೇಬೆಕು. ಇದೀಗ ವೈರಲ್ ಆಗಿರುವ ವಿಡಿಯೋದಲ್ಲೂ ಯುವತಿಯರ ಅಜಾಗರೂಕ ಚಾಲನೆ ಅಪಘಾತಕ್ಕೆ ಹೇಗ ಕಾರಣವಾಗುತ್ತದೆ ಎಂಬುದನ್ನು ತೋರಿಸಿದೆ. ಪವಾಡ ರೀತಿಯಲ್ಲಿ ಇಬ್ಬರು ಪಾರಾಗಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.

ಸ್ಕೂಟರ್‌ನಲ್ಲಿ ಸವಾರಿ ಮಾಡುತ್ತಿದ್ದ ಇಬ್ಬರು ಕಾಲೇಜು ಯುವತಿಯರು Truck-Bus ನಡುವೆ ಸಿಲುಕಿ ನಜ್ಜುಗುಜ್ಜಾಗುವುದರಿಂದ ಪಾರಾಗಿದ್ದಾರೆ. ಈ ಸಂಪೂರ್ಣ ದೃಷ್ಯಾವಳಿಗಳು ಬಸ್ ಹೊರಗೆ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋವನ್ನು ಕೇರಳದ ಮನೋರಮಾ ನ್ಯೂಸ್ ತಮ್ಮ ಯೂಟ್ಯೂಬ್ ಚಾನೆಲ್ ಹಂಚಿಕೊಂಡಿದೆ. ಘಟನೆಯು ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ.
ಅಪಘಾತಕ್ಕೆ ಕಾರಣ: ಸ್ಕೂಟರ್ ಓಡಿಸುತ್ತಿದ್ದ ಯುವತಿ ವಾಹನ ಓಡಿಸುತ್ತಿದ್ದಾರಾದರೂ, ಆಕೆಗೆ ಓವರ್‌ಟೇಕ್ ಮಾಡುವುದೇಗೆ ಎಂಬುದರ ಅರಿವಿಲ್ಲದಂತಿದೆ. ಬಸ್ ಅನ್ನು ಓವರ್‌ಟೇಕ್ ಮಾಡಲು ಯತ್ನಿಸುತ್ತಾ ಬಸ್ ಹಿಂದೆಯೇ ಬರುತ್ತಿದ್ದ ಆಕೆ, ಎದುರು ಬರುವ ವಾಹನಗಳನ್ನು ಗಮನಿಸದೇ ಓಡಿಸುತ್ತಿರುವುದನ್ನು ನಾವು ವಿಡೊಯೋದಲ್ಲಿ ನೋಡಬಹುದು. ಅಲ್ಲದೇ ಅದು ತುಂಬಾ ಕಿರಿದಾದ ರಸ್ತೆ ಎಂಬುದು ಕೂಡ ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.

ಹೀಗೆ ಬಸ್ ಅನ್ನು ಹಿಂದಿಕ್ಕಲು ಪರದಾಡುತ್ತಾ ಎದುರು ಬರುವ ವಾಹನಗಳನ್ನು ಗಮನಿಸದ ಯುವತಿಗೆ ಏಕಾ-ಏಕಿ ಟ್ರಕ್ ಎದುರು ಬರುತ್ತಿದ್ದಂತೆ ಗಾಬರಿಯಾಗಿ ಒಂದೇ ಸಮನೆ ಸ್ಕೂಟರ್ ಬ್ರೇಕ್ ಹಾಕಿದ್ದಾರೆ. ಇದೇ ವೇಳೆ ಟ್ರಕ್ ಚಾಲಕ ಕೂಡ ಯುವತಿಯರು ಹೀಗೆ ಬಂದಿದ್ದು ನೋಡಿ ಆಘಾತಗೊಂಡಿದ್ದಾನೆ. ಇನ್ನು ಬಸ್ ಚಾಲಕನಿಗೆ ಮುಂದಕ್ಕೋಗುವುದು ಬಿಟ್ಟು ಬೇರೆ ದಾರಿಯಿರಲಿಲ್ಲ.
ಇದೇ ವೇಲೆ ಟ್ರಕ್ ಚಾಲಕನ ಸಮಯಪ್ರಜ್ಞೆ ಯುವತಿಯರನ್ನು ರಕ್ಷಿಸಿದೆ. ಬಸ್ ಮುಂದಕ್ಕೆ ಹೋಗಲೇ ಬೇಕು ಒಂದು ವೇಳೆ ಬಸ್ ಕೂಡ ನಿಲ್ಲಿಸಿದ್ದರೇ ಯುವತಿಯವರು ಎರಡೂ ವಾಹನಗಳ ನಡುವೆ ನಜ್ಜುಗುಜ್ಜಾಗುತ್ತಿದ್ದರು. ಬಸ್ ಪಾಸ್ ಆದ ಬಳಿಕ ಟ್ರಕ್ ಒಂದೇ ಸಮನೇ ಎಡಕ್ಕೆ ತಿರುಗಿ ಬ್ರೇಕ್ ಹಾಕಿದ್ದರಿಂದ ಯುವತಿಯರು ಕೆಳಗೆ ಬಿದ್ದು ಗಾಯಗಳಾದರೂ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಇಲ್ಲಿ ಇನ್ನೊಂದು ಆಶ್ಚರ್ಯದ ಸಂಗತಿಯೆಂದರೆ ಹಿಂದೆಯಿಂದ ಯಾವುದೇ ವಾಹನಗಳು ಬಂದಿಲ್ಲ. ಜೊತೆಗೆ ಸ್ಕೂಟರ್ ಓಡಿಸುತ್ತಿದ್ದ ಯುವತಿ ಕೂಡ ಹೆಲ್ಮೆಟ್ ಧರಿಸಿದ್ದು ಇಲ್ಲಿ ಆಕೆಯ ಜೀವ ಉಳಿಸಿದೆ. ಎಕೆಂದರೆ ಅಪಘಾತದಲ್ಲಿ ಆಕೆ ಕೆಳಗೆ ಬೀಳುತ್ತಿದ್ದಂತೆ ರಸ್ತೆಗೆ ತಲೆ ಅಪ್ಪಳಿಸಿದೆ. ಒಂದು ವೇಳೆ ಹೆಲ್ಮೆಟ್ ಇಲ್ಲಿದದ್ದರೇ ಪರಿಸ್ಥಿತಿ ಘೋರವಾಗಿರುತ್ತಿತ್ತು. ಆದರೂ ಆಕೆ ಹೆಲ್ಮೆಟ್ ಅನ್ನು ಕೂಡ ಸರಿಯಾಗಿ ಧರಿಸಿರಲಿಲ್ಲ.
ಹೆಲ್ಮೆಟ್ ಪಟ್ಟಿಯನ್ನು ಸರಿಯಾಗಿ ಹಾಕದಿದ್ದ ಕಾರಣ ಆಕೆ ಬಿದ್ದ ತಕ್ಷಣ ಹೆಲ್ಮೆಟ್ ಕಳಚಿಕೊಂಡಿದೆ. ಹಿಂದೆ ಕುಳಿತಿದ್ದ ಯುವತಿಗೆ ಹೆಲ್ಮೆಟ್ ಕೂಡ ಇಲ್ಲ, ಯುವತಿಯರ ಅಜಾಗರೂಕ ಚಾಲನೆಯು ಇಲ್ಲಿ ಸ್ಪಷ್ಟವಾಗಿದೆ. ಖಾಸಗಿ ಮತ್ತು ಸರ್ಕಾರಿ ಬಸ್ ಚಾಲಕರು ರಸ್ತೆಯಲ್ಲಿ ಅಜಾಗರೂಕತೆಯಿಂದ ವಾಹನ ಚಲಾಯಿಸುವುದನ್ನು ನಾವು ಆಗಾಗ್ಗೆ ನೋಡಿದ್ದೇವೆ. ಆದರೆ, ಈ ಪ್ರಕರಣದಲ್ಲಿ ಬಸ್ ಚಾಲಕನ ತಪ್ಪೇನಿಲ್ಲ. ಈ ಘಟನೆ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications