ನಾಪತ್ತೆಯಾಗಿದ್ದ ಸಬ್‌ಮೆರಿನಲ್ಲಿದ್ದ ಆಕ್ಸಿಜನ್‌ ಮುಕ್ತಾಯ: ಟೈಟಾನಿಕ್‌ ನೋಡಲು ಹೋದವರು ದುರಂತ ಸಾವೇ?

ಟೈಟಾನಿಕ್‌ ಅವಶೇಷಗಳನ್ನು ನೋಡಲು ಪ್ರವಾಸಿಗರನ್ನು ಹೊತ್ತೊಯ್ದಿದ್ದ ಜಲಾಂತರ್ಗಾಮಿ ನೌಕೆ (Titanic Submarine) ನಾಪತ್ತೆಯಾಗಿ ಇಂದಿಗೆ ಮೂರು ದಿನಗಳು ಕಳೆದಿವೆ. ನೌಕೆ ನಾಪತ್ತೆಯಾದ ಅಟ್ಲಾಂಟಿಕ್‌ ಸಾಗರದಲ್ಲಿ ಈ ಜಲಾಂತರ್ಗಾಮಿ ನೌಕೆಯನ್ನು ಹುಡುಕುವ ಕೆಲಸ ತೀವ್ರ ಗತಿಯಲ್ಲಿ ನಡೆಯುತ್ತಿದೆಯಾದರೂ ಜಲಾಂತರ್ಗಾಮಿ ನೌಕೆಯನ್ನು ಪತ್ತೆ ಹಚ್ಚಲು ಇನ್ನೂ ಸಾಧ್ಯವಾಗಿಲ್ಲ.

ಇನ್ನು ದೊರಕಿರುವ ಮಾಹಿತಿಗಳ ಪ್ರಕಾರ ಐದು ಮಂದಿ ಪ್ರವಾಸಿಗರನ್ನು ಹೊತ್ತೊಯ್ದಿದ್ದ ಈ ಜಲಾಂತರ್ಗಾಮಿ ನೌಕೆಯಲ್ಲಿ ನಿನ್ನೆ ಸಂಜೆ ೭.೧೫ ರವರೆಗೆ ಉಪಯೋಗಿಸಲು ಸಾಧ್ಯವಾಗಿದ್ದ ಆಮ್ಲಜನಕ ಇದ್ದು, ನಂತರದಲ್ಲಿ ಸಂಪೂರ್ಣವಾಗಿ ಖಾಲಿಯಾಗಿದೆ ಎಂದು ತಿಳಿದು ಬಂದಿದೆ. ನಂತರದಲ್ಲಿ ಪ್ರಯಾಣಿಕರಿಗೆ ಉಪಯೋಗಿಸಲು ಬೇಕಿದ್ದ ಆಮ್ಲಜನಕದ ವ್ಯವಸ್ಥೆ ನಾಪತ್ತೆಯಾದ ಜಲಾಂತರ್ಗಾಮಿ ನೌಕೆಯಲ್ಲಿಲ್ಲ.

Missing Titanic Tourist Submarine

ಇದರಿಂದ ನೌಕೆಯಲ್ಲಿರುವ ಪ್ರವಾಸಿಗರು ಆಮ್ಲಜನಕವಿಲ್ಲದೆ ಅಪಾಯದ ಸ್ಥಿತಿಗೆ ತಲುಪಿರುವುದಂತೂ ಖಂಡಿತ. ಇದೇ ಕಾರಣದಿಂದಾಗಿ ನಾಪತ್ತೆಯಾದ ಜಲಾಂತರ್ಗಾಮಿ ನೌಕೆಯನ್ನು ಕೆನಡಾ ಕರಾವಳಿ ವಲಯದಲ್ಲಿ ತೀವ್ರವಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಮಾಹಿತಿಗಳು ತಿಳಿಸಿವೆ. ಇನ್ನು ಸಬ್‌ ಮೆರಿನ್‌ ಪತ್ತೆಗಾಗಿ ನುರಿತ ತಂಡಗಳನ್ನು ಸಬ್‌ ಮೆರಿನ್ ನಾಪತ್ತೆಯಾದ ದಿನವೇ ನೇಮಿಸಲಾಗಿತ್ತು.

ನಾಪತ್ತೆಯಾದ ಸಬ್‌ ಮೆರಿನ್‌ ಪತ್ತೆಗಾಗಿ ಅಮೇರಿಕಾ, ಕೆನಡಾ ಮತ್ತು ಫ್ರಾನ್ಸ್‌ನ ನುರಿತ ತಜ್ಞರ ತಂಡ ನಿರಂತರ ನಾಲ್ಕು ದಿನವೂ ತಮ್ಮ ಹುಡುಕಾಟವನ್ನು ಮುಂದುವರೆಸಿದ್ದಾರೆ. ಈ ಕಾರ್ಯಾಚರಣೆ ವೇಳೆ ಅಟ್ಲಾಂಟಿಕ್‌ ಆಳ ಸಮುದ್ರದಲ್ಲಿ ಕೆಲವೊಂದು ಶಬ್ದಗಳೂ ಕೇಳುತ್ತಿತ್ತು ಎಂದು ನಿನ್ನೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಹೀಗಾಗಿ ಸಬ್‌ ಮೆರಿನ್‌ ನಲ್ಲಿರುವವರು ಬದುಕಿರಬಹುದು ಎಂಬ ಸಣ್ಣ ನಿರೀಕ್ಷೆಯೊಂದು ಹುಟ್ಟಿತ್ತು. ಆದರೆ ಅವರು ಎಲ್ಲಿದ್ದಾರೆ ಎಂಬ ಸಣ್ಣ ಸುಳಿವೂ ಸಹ ಪತ್ತೆಯಾಗದಿರುವುದು ಜನರಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ. ಸಬ್‌ ಮೆರಿನ್‌ ನಲ್ಲಿ ಗರಿಷ್ಟ ೯೬ ಗಂಟೆಗಳಿಗೆ ಸಾಕಾಗುವಷ್ಟು ತುರ್ತು ಆಮ್ಲಜನಕದ ಪೂರೈಕೆಯಿತ್ತು.

ಆದರೆ ಸತತ ನಾಲ್ಕನೇ ದಿನವೂ ನಾಪತ್ತೆಯಾಗಿದ್ದ ಸಬ್‌ ಮೆರಿನ್‌ ಪತ್ತೆಯಾಗದೇ ಇರುವ ಕಾರಣ, ನಿನ್ನೆ ಸಂಜೆ ೭.೧೫ ರ ಸುಮಾರಿಗೆ ನೌಕೆಯಲ್ಲಿದ್ದ ಆಮ್ಲಜನಕ ಸಂಪೂರ್ಣ ಖಾಲಿಯಾಗಿದೆ. ಇದರಿಂದ ತೀವ್ರವಾಗಿ ಶೋಧ ಕಾರ್ಯ ಮುಂದುವರೆದಿದ್ದು ಕೆಲವೇ ಘಂಟೆಗಳಲ್ಲಿ ಸಬ್ ಮೆರಿನ್ ಪತ್ತೆಯಾಗದೇ ಇದ್ದಲ್ಲಿ ಪ್ರವಾಸಿಗರು ಸಾವನ್ನಪ್ಪುವ ಸಾಧ್ಯತೆ ಇದೆ.

ವರದಿಗಳ ಪ್ರಕಾರ ಓಷಿಯನ್‌ ಗೇಟ್‌ ಸಿಇಒ ಸ್ಟಾಕ್ಟಾನ್‌ ರಷ್, ಬ್ರಿಟೀಷ್‌ ಆಡ್ವೆಂಚರರ್ ಹಾಮಿಷ್‌ ಹಾರ್ಡಿಂಗ್, ಪಾಕಿಸ್ತಾನದ ಇಬ್ಬರು ಮತ್ತು ನೌಕೆಯ ಸಿಬ್ಬಂದಿ ಸೇರಿ ಸುಮಾರು ಐದು ಪ್ರಯಾಣಿಕರು ಈ ಜಲಾಂತರ್ಗಾಮಿ ನೌಕೆಯಲ್ಲಿ ಇದ್ದು ಇದು ನಾಪತ್ತೆಯಾಗುವುದಕ್ಕೂ ಒಂದು ಮುಕ್ಕಾಲು ಗಂಟೆಗೂ ಮೊದಲೇ ತನ್ನ ಸಪೋರ್ಟ್‌ ಶಿಪ್‌ ನಿಂದ ಸಂಪರ್ಕವನ್ನು ಕಳೆದುಕೊಂಡಿತ್ತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, June 23, 2023, 11:06 [IST]
English summary
Missing titanic tourist submarine oxygen supply ends missing crew members are in danger
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+