ಮಹೀಂದ್ರಾ XUV700 ಎಸ್‍ಯುವಿಯ ADAS ದುರ್ಬಳಕೆ: ಈ ತಂತ್ರಜ್ಞಾನ ಕೈಕೊಟ್ರೆ ಪಕ್ಕಾ ಪರಲೋಕ!
ವಿಶ್ವದಾದ್ಯಂತ ADAS (ಅಡ್ವಾನ್ಸ್ ಡ್ರೈವರ್ ಅಸಿಸ್ಟನ್ಸ್ ಸಿಸ್ಟಮ್) ತಂತ್ರಜ್ಞಾನ ಭಾರೀ ಜನಪ್ರಿಯತೆ ಪಡೆಯುತ್ತಿದೆ. ADAS ಆಟೋಮೋಟಿವ್ ಉದ್ಯಮದಲ್ಲಿನ ದೊಡ್ಡ ಪ್ರಗತಿಗಳಲ್ಲಿ ಒಂದಾಗಿದೆ. ಹಲವು ಜನಪ್ರಿಯ ಭಾರತೀಯ ಕಾರುಗಳಲ್ಲಿ ಹೊಂದಿರುವ ಈ ಸುರಕ್ಷತಾ ತಂತ್ರಜ್ಞಾನ ಅನುಕೂಲತೆಯ ಹಲವಾರು ದುರುಪಯೋಗಪಡಿಸಿಕೊಳ್ಳುವ ಹಲವಾರು ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ADAS ತಂತ್ರಜ್ಞಾನದ ಕಾರನ್ನು ಚಾಲನೆ ಮಾಡುವಾಗ ವ್ಯಕ್ತಿಯೊಬ್ಬರು ತನ್ನ ಕಾಲುಗಳನ್ನು ಚಾಚಿದ ಮತ್ತೊಂದು ವೀಡಿಯೊವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ADAS ತಂತ್ರಜ್ಞಾನದ ದುರುಪಯೋಗದ ವಿಡಿಯೋವನ್ನು ಸಾಹಿಲ್ ಖಾನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಆಟೋಮ್ಯಾಟಿಕ್ ಕಾರು ಎಂಬ ಶೀರ್ಷಿಕೆಯ ಈ ವೀಡಿಯೊದಲ್ಲಿ, ಚಾಲಕನು ತನ್ನ ಎಡಭಾಗದ ಪ್ರಯಾಣಿಕರ ಡ್ಯಾಶ್‌ಬೋರ್ಡ್‌ನಲ್ಲಿ ತನ್ನ ಕಾಲುಗಳನ್ನು ಸಂಪೂರ್ಣವಾಗಿ ಚಾಚಿರುವುದನ್ನು ನಾವು ನೋಡಬಹುದು.

ಮಹೀಂದ್ರಾ XUV700 (Mahindra XUV700) ಎಸ್‍ಯುವಿಯ ಆಟೋನೊಮಸ್ ADAS ನೊಂದಿಗೆ ಚಾಲನೆ ಮಾಡುವಾಗ ತಲೆಯ ಮೇಲೆ ತನ್ನ ಕೈಗಳನ್ನು ಇಟ್ಟುಕೊಂಡಿರುವುದನ್ನು ನಾವು ನೋಡಬಹುದು. ಪ್ರಯಾಣಿಕರ ಸೀಟಿನಲ್ಲಿದ್ದ ವ್ಯಕ್ತಿ ಇದನ್ನು ನೋಡಿ ಭಯಭೀತರಾಗಿರುವುದನ್ನು ಕಾಣಬಹುದು. ಈಗ ವೀಡಿಯೊದಲ್ಲಿಮ್ ಹೆದ್ದಾರಿಯು ಖಾಲಿಯಾಗಿದೆ ಎಂದು ನಾವು ನೋಡಬಹುದು, ಎಲ್ಲಿಂದಲಾದರೂ ಇತರ ವಸ್ತುಗಳು ಅಡ್ಡ ಬಂದಾಗ, ಅದರ ADAS ಹೊಂದಿರುವ ಕಾರು ಯಾವುದೇ ಸಮಯದಲ್ಲಿ ಎಮರ್ಜನ್ಸಿ ಬ್ರೇಕ್ ಹಾಕಬಹುದು.
ಆ ಸಂದರ್ಭದಲ್ಲಿ ಈ ರೀತಿ ಕಾಲು ಚಾಚಿದರೆ ಗಮನಾರ್ಹವಾದ ಗಾಯಗಳಗಬಹುದು. ಇದಲ್ಲದೆ, ವಾಹನವು ಏನಾದರೂ ಡಿಕ್ಕಿ ಹೊಡೆದರೆ, ಏರ್‌ಬ್ಯಾಗ್‌ಗಳು ನಿಯೋಜಿಸಲ್ಪಡುತ್ತವೆ ಮತ್ತು ಸರಿಯಾದ ಸೀಟಿನಲ್ಲಿದ್ದ ಕಾರಣ, ಚಾಲಕನ ಜೀವಕ್ಕೂ ಹಾನಿಯಾಗಬಹುದು.ಸಾರ್ವಜನಿಕ ರಸ್ತೆಗಳಲ್ಲಿ ಇಂತಹ ಸ್ಟಂಟ್‌ಗಳನ್ನು ಮಾಡುವುದರಿಂದ ಮೇಲಿನ ಎಲ್ಲಾ ಅಪಾಯಗಳ ಬಗ್ಗೆ ಚಾಲಕನಿಗೆ ತಿಳಿದಿರದಿಬಹುದು.

ಆದರೂ ಎಲ್ಲಾ ಸಂಭಾವ್ಯ ಅಪಾಯಗಳನ್ನು ತಿಳಿದಿದ್ದರೂ, ಈ ರೀತಿ ವೀಡಿಯೊ ಮಾಡಿ ವೈರಲ್ ಆಗುವ ಏಕೈಕ ಕಾರಣದಿಂದ ಹಲವು ಜನರು ADAS ತಂತ್ರಜ್ಞಾನವನ್ನು ದುರುಪಯೋಗಪಡಿಕೊಂಡು ಹಲವಾರು ವೀಡಿಯೋ ಮಾಡುತ್ತಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಒಂದು ವೀಡಿಯೊ ಟ್ರೆಂಡ್ ಆದರೆ ಇತರರು ಕೂಡ ಇದೇ ರೀತಿ ತಮ್ಮ ವೀಡಿಯೊ ವೈರಲ್ ಆಗಲು ಅದೇ ರೀತಿ ವೀಡಿಯೊ ಮಾಡುತ್ತಾರೆ. ಇದು ನಿಜಕ್ಕೂ ಅಪಾಯಕಾರಿಯಾಗಿದೆ.
ಇನ್ನು ADAS ತಂತ್ರಜ್ಞಾನ ದುರ್ಬಳಕೆ ಇದೇ ಮೊದಲಲ್ಲ, ಈ ಹಿಂದೆ ಇದಕ್ಕಿಂತ ಕೆಟ್ಟದಾಗಿ ಈ ತಂತ್ರಜ್ಞಾನವನ್ನು ದುರ್ಬಳಕೆ ಮಾಡಲಾಗಿದೆ. ಚಾಲಕ ಕಾರು ಚಾಲನೆಯಲ್ಲಿದ್ದಾಗ ಡ್ರೈವರ್ ಸೀಟನ್ನು ಬಿಟ್ಟು ಪ್ರಯಾಣಿಕ ಸೀಟಿನಲ್ಲಿ ಕುಳಿತು ಇಸ್ಪೀಟ್ ಆಡಿದ್ದ. ಈ ವೇಳೆ XUV700 ಏಕ-ಪಥದ ರಸ್ತೆಯಲ್ಲಿ ಸುಮಾರು 60 ಕಿ.ಮೀ ವೇಗದಲ್ಲಿ ಪ್ರಯಾಣಿಸುತ್ತಿತ್ತು.

ಅಡೆತಡೆಗಳನ್ನು ಗ್ರಹಿಸಿ ವಾಹನವು ತನ್ನನ್ನು ತಾನೇ ಸಂಪೂರ್ಣವಾಗಿ ನಿಲ್ಲಿಸುವ ಸಾಮರ್ಥ್ಯವನ್ನು ಹೊಂದಿದ್ದರೂ, ಡ್ರೈವರ್ ಸೀಟಿನಲ್ಲಿ ಚಾಲಕನಿಲ್ಲದೇ ಈ ವೈಶಿಷ್ಟ್ಯವನ್ನು ಬಳಸಬಹುದು ಎಂದು ಯಾವುದೇ ಕಂಪನಿ ಹೇಳಿಲ್ಲ. ಈ ಮಹೀಂದ್ರಾ XUV 700 ಎಸ್‍ಯುವಿ ಮಹೀಂದ್ರಾ ಮಾರಾಟ ಮಾಡುವ ಅತ್ಯಂತ ಐಷಾರಾಮಿ ಕಾರು ಮಾದರಿಗಳಲ್ಲಿ ಒಂದಾಗಿದೆ. ಈ ಕಾರು ಪ್ರಯಾಣಿಕರಿಗೆ ಸುರಕ್ಷತೆಯನ್ನು ಒದಗಿಸಲು ವ್ಯಾಪಕ ಶ್ರೇಣಿಯ ಸುರಕ್ಷತಾ ಸಾಧನಗಳು ಮತ್ತು ತಾಂತ್ರಿಕ ವೈಶಿಷ್ಟ್ಯಗಳನ್ನು ಹೊಂದಿದೆ.
ಹಾಗೆಯೇ ಕಂಪನಿ ಒದಗಿಸುವ ಪ್ರಮುಖ ವೈಶಿಷ್ಟ್ಯಗಳಲ್ಲಿ ಅಡ್ವಾನ್ಸ್ಡ್ ಲೆವೆಲ್-2 ADAS ಕೂಡ ಒಂದಾಗಿದೆ. ಮಹೀಂದ್ರಾ XUV 700 ಲೆವೆಲ್ 2 ಸ್ವಾಯತ್ತ ವೈಶಿಷ್ಟ್ಯದೊಂದಿಗೆ ಬರುತ್ತದೆ, ಇದು ಕಾರನ್ನು ಲೇನ್‌ನಲ್ಲಿ ಇರಿಸಲು ಸಹಾಯ ಮಾಡುತ್ತದೆ. ಜೊತೆಗೆ ಮುಂಭಾಗದಲ್ಲಿರುವ ವಾಹನವನ್ನು ಪತ್ತೆ ಮಾಡಿ ವೇಗವನ್ನು ಕಡಿಮೆ ಮಾಡಲು ಸ್ವಯಂಚಾಲಿತವಾಗಿ ಬ್ರೇಕ್ ಅನ್ನು ಅನ್ವಯಿಸುತ್ತದೆ. ಮಹೀಂದ್ರಾ XUV 700 ಇನ್ನೂ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ವಾಹನವು ಚಲಿಸುತ್ತಿರುವಾಗ ಚಾಲಕನು ಸ್ಟೀರಿಂಗ್ ಚಕ್ರದಿಂದ ಕೈಗಳನ್ನು ತೆಗೆದರೆ, ತಕ್ಷಣವೇ ಎಚ್ಚರಿಸುತ್ತದೆ. ಅಲ್ಲದೆ ಸ್ಟೀರಿಂಗ್ ವೀಲ್ ಕಂಪಿಸುವ ಮೂಲಕ ADAS ಸಿಸ್ಟಮ್ ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತದೆ. ಬಳಿಕ ಕಾರು ರಸ್ತೆಯ ಮೇಲಿನ ಬಿಳಿ ರೇಖೆಯನ್ನು (ಲೇನ್) ಅನುಸರಿಸುತ್ತದೆ. ಒಂದು ವೇಳೆ ರಸ್ತೆಯಲ್ಲಿ ಸರಿಯಾದ ಬಿಳಿ ಗೆರೆಗಳು ಇಲ್ಲದಿದ್ದರೇ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು. ಇದಕ್ಕಾಗಿಯೇ ಕಾರಿನ ಸ್ವಾಯತ್ತ ವೈಶಿಷ್ಟ್ಯವನ್ನು ಅನಗತ್ಯವಾಗಿ ಪರೀಕ್ಷಿಸಬೇಡಿ ಎಂದು ಕಂಪನಿಗಳು ಸಹ ಹೇಳುತ್ತವೆ.


Click it and Unblock the Notifications