ಎಂಟಿಬಿ ಮನೆಯಲ್ಲಿ ಎಲ್ಲಾ ಬಹುಕೋಟಿ ಬೆಲೆಯ ಕಾರುಗಳಿಗೆ ಸಾಂಪ್ರದಾಯಿಕ ಆಯುಧ ಪೂಜೆ

ಭಾರತದ ಶ್ರೀಮಂತ ಶಾಸಕರಲ್ಲಿ ಒಬ್ಬರಾಗಿ ಗುರ್ತಿಸಿಕೊಂಡಿರುವ ಎಂಟಿಬಿ ನಾಗರಾಜ್ ಅವರು, ಆಯುಧ ಪೂಜೆಯನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಹಲವಾರು ಬಹುಕೋಟಿ ಐಷಾರಾಮಿ ಕಾರುಗಳು, ಎಸ್‌ಯುವಿಗಳು ಮತ್ತು ಸೂಪರ್ ಕಾರುಗಳಿಗೆ ಪೂಜೆ ನೆರವೇರಿಸಿದ್ದಾರೆ. ಈ ಕುರಿತ ವೀಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವೀಡಿಯೊದಲ್ಲಿ, ಎಂಟಿಬಿ ನಾಗರಾಜ್ ಅವರ ಅತ್ಯಂತ ದುಬಾರಿ ವಾಹನವಾದ ರೋಲ್ಸ್ ರಾಯ್ಸ್ ಫ್ಯಾಂಟಮ್ ಸಿರೀಸ್-8 ಕೂಡ ಇದ್ದು, ಇದರ ಬೆಲೆಯು 12 ಕೋಟಿ ರೂ.ಗಿಂತ ಹೆಚ್ಚು ಎಂದು ಹೇಳಲಾಗುತ್ತಿದೆ.

ಪೂಜೆಯಲ್ಲಿದ್ದ ಕಾರುಗಳ ವಿವರ: ರೋಲ್ಸ್ ರಾಯ್ಸ್ ಫ್ಯಾಂಟಮ್ ಸಿರೀಸ್-8, ಬ್ಲೂ ಫೆರಾರಿ ಎಫ್ 8 ಟ್ರಿಬ್ಯುಟೊ, ಲ್ಯಾಂಡ್ ರೋವರ್ ಡಿಫೆಂಡರ್ 110, ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೋಗ್ರಫಿ LWB, ಬಿಎಂಡಬ್ಲ್ಯು XM ನಂತಹ ಕಾರುಗಳನ್ನು ಸಾಲಾಗಿ ನಿಲ್ಲಿಸಿ ಪೂಜೆ ಮಾಡಿದ್ದಾರೆ.

mla-mtb-ngaraj-ayudha-pooja-with-his-cars-viral-video

ಬಿಎಂಡಬ್ಲ್ಯು XM: ಈ ವಿಶಿಷ್ಟ ಎಸ್‌ಯುವಿ ಬರೋಬ್ಬರಿ 62 ಕಿ.ಮೀ ಮೈಲೇಜ್ ನೀಡುತ್ತದೆ. ಹೌದು, ಇದು ಪ್ಲಗ್-ಇನ್ ಹೈಬ್ರಿಡ್ ಕಾರಾಗಿರುವುದರಿಂದ ಇವಿ ಮೋಡ್‌ನಲ್ಲಿಯೂ 88 ಕಿ.ಮೀ ರೇಂಜ್ ಹೊಂದಿದೆ. ಇದರ ಬೆಲೆಯು 2.6 ಕೋಟಿ ರೂ. ಇದೆ. ಕಾರಿನಲ್ಲಿ 4.4 ಲೀಟರ್ ಟ್ವಿನ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

ಲ್ಯಾಂಡ್ ರೋವರ್ ಡಿಫೆಂಡರ್ 110: ಎಂಟಿಬಿ ಅವರು ತಮ್ಮ ಲ್ಯಾಂಡ್ ರೋವರ್ ಡಿಫೆಂಡರ್ ಅನ್ನು ಯಾವ ಎಂಜಿನ್ ಆಯ್ಕೆಯಲ್ಲಿ ಖರೀದಿಸಿದ್ದಾರೆ ಎಂಬುದರ ಬಗ್ಗೆ ತಿಳಿದಿಲ್ಲ. ಆದರೆ ಇದು 2.0-ಲೀಟರ್ ಅಥವಾ 3.0-ಲೀಟರ್ ಪೆಟ್ರೋಲ್ ಎಂಜಿನ್ ನೊಂದಿಗೆ ಬರುತ್ತದೆ. ದೊಡ್ಡ 5.0-ಲೀಟರ್ ವಿ8 ಎಂಜಿನ್ ಆಯ್ಕೆಯಲ್ಲೂ ಲಭ್ಯವಿದೆ.

mla-mtb-ngaraj-ayudha-pooja-with-his-cars-viral-video

ಫೆರಾರಿ ಎಫ್ 8 ಟ್ರಿಬ್ಯುಟೊ: ಎಫ್8 ಟ್ರಿಬ್ಯುಟೊ ಫೆರಾರಿಯ ಮಧ್ಯಮ ಎಂಜಿನ್ ವಿ8 ಮಾದರಿಯಾಗಿದೆ. ಇದು 3.9-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ವಿ8 ಎಂಜಿನ್ ಹೊಂದಿದೆ. ಈ ಎಂಜಿನ್ 710 ಬಿಹೆಚ್ ಪವರ್ ಮತ್ತು 770 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರಿಗೆ ವಿಶ್ವಾದ್ಯಂತ ಭಾರೀ ಬೇಡಿಕೆ ಇದ್ದು, ಹಲವರು ಅಭಿಮಾನಿಗಳಿದ್ದಾರೆ.

ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೋಗ್ರಫಿ LWB: ಈ ಬ್ರಿಟಿಷ್ ಐಷಾರಾಮಿ ಎಸ್‌ಯುವಿಯನ್ನು ಹಲವಾರು ಪವರ್ ಟ್ರೇನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. 4.4-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 3.0-ಲೀಟರ್ ಡೀಸೆಲ್ ಟರ್ಬೋಚಾರ್ಜ್ಡ್ ಎಂಜಿನ್‌ನಲ್ಲೂ ನೀಡಲಾಗುತ್ತದೆ. ಇದು 346 ಬಿಹೆಚ್ ಪವರ್ ಮತ್ತು 700 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ರೋಲ್ಸ್ ರಾಯ್ಸ್ ಫ್ಯಾಂಟಮ್ ಸಿರೀಸ್-8: ಎಂಟಿಬಿ ನಾಗರಾಜ್ ಅವರ ಅತ್ಯಂತ ದುಬಾರಿ ವಾಹನವೆಂದರೆ ಅದು ಅವರ ರೋಲ್ಸ್ ರಾಯ್ಸ್ ಫ್ಯಾಂಟಮ್ ಸಿರೀಸ್-8 ಆಗಿದೆ. ಇದು 12 ಕೋಟಿ ರೂ.ಗಿಂತ ಹೆಚ್ಚು ಬೆಲೆಯನ್ನು ಹೊಂದಿದೆ. ಇದು 6.75-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ವಿ-12 ಎಂಜಿನ್ ಹೊಂದಿದೆ. ಇದು 563 ಬಿಹೆಚ್ ಪವರ್ ಮತ್ತು 900 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಎಂಟಿಬಿ ಅವರು ದುಬಾರಿ ಕಾರುಗಳು ಮಾತ್ರವಲ್ಲದೇ ಸಣ್ಣ ಕಾರುಗಳನ್ನು ಕೂಡ ಹೊಂದಿದ್ದಾರೆ. ಅವುಗಳೆಂದರೆ ಟೊಯೊಟಾ ಫಾರ್ಚೂನರ್, ಇನ್ನೋವಾ ಕ್ರಿಸ್ಟಾ, ಮಾರುತಿ ಓಮ್ನಿಯಂತಹ ಸಣ್ಣ ಕಾರುಗಳು ಇವೆ. ಇವಿಷ್ಟು ಎಂಬಿಟಿ ಮನೆಯಲ್ಲಿ ಆಯುಧ ಪೂಜೆ ಸಮಯದಲ್ಲಿ ಕಾಣಿಸಿಕೊಂಡ ಅವರ ಕಾರುಗಳಾಗಿವೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.

Article Published On: Monday, October 14, 2024, 13:56 [IST]
English summary
Mla mtb ngaraj ayudha pooja with his cars viral video
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+