ಯುಕೆ ವೆಲ್‌ಕಮ್ಸ್ ಇಂಡಿಯಾ; ಲಂಡನ್‌ನಲ್ಲಿ 'ಮೋದಿ ಎಕ್ಸ್‌ಪ್ರೆಸ್' ಬಸ್

Written By:

ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ತರ ಬ್ರಿಟನ್ ಪ್ರವಾಸಕ್ಕೂ ಮೊದಲೇ ಅಲ್ಲಿನ ಭಾರತೀಯ ಸಮುದಾಯದವರು ಮೋದಿ ಎಕ್ಸ್‌ಪ್ರೆಸ್ ಬಸ್ ಗೆ ಚಾಲನೆ ನೀಡಿರುವುದು ಗಮನಾರ್ಹವೆನಿಸಿದೆ.

Also Read: ಮೋದಿಗೆ ಹೈ ಸೆಕ್ಯೂರಿಟಿ ವಲಯ 'ದೇಸಿ ಏರ್ ಫೋರ್ಸ್ ಒನ್' ವಿಮಾನ ಮುಂದಕ್ಕೆ ಓದಿ

ಭಾರತ ಪ್ರಧಾನಿ ಮಂತ್ರಿ ಭೇಟಿಯನ್ನು ಸ್ಮರಣೀಯವಾಗಿಸಲು ಹೊರಟಿರುವ ಅಲ್ಲಿನ ಭಾರತೀಯ ಸಮುದಾಯವು ಮೋದಿ ಅವರ ಭೇಟಿಗಿಂತಲೂ ಒಂದು ತಿಂಗಳ ಮುಂಚಿತವಾಗಿಯೇ ಮೋದಿ ಎಕ್ಸ್‌ಪ್ರೆಸ್ ಬಸ್ ಗೆ ಚಾಲನೆ ನೀಡುವ ಮೂಲಕ ಗಮನ ಸೆಳೆದಿತ್ತು. ಇದು ಈಗಾಗಲೇ ನಗರದ ಪ್ರಮುಖ ಕೇಂದ್ರಗಳಿಗೆ ಭೇಟಿ ಕೊಟ್ಟಿದೆ.

To Follow DriveSpark On Facebook, Click The Like Button
ಯುಕೆ ವೆಲ್‌ಕಮ್ಸ್ ಇಂಡಿಯಾ; ಲಂಡನ್‌ನಲ್ಲಿ 'ಮೋದಿ ಎಕ್ಸ್‌ಪ್ರೆಸ್' ಬಸ್

ಭಾರತದಲ್ಲಿ 'ಚಾಯ್ ಪೇ ಚರ್ಚಾ' ಎಂಬ ರೀತಿಯಲ್ಲೇ ಯುಕೆ ಬಸ್ಸಿನಲ್ಲಿ ಮೋದಿ 'ಬಸ್ ಪೇ ಚರ್ಚಾ' ನಡೆದಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಯುಕೆ ವೆಲ್‌ಕಮ್ಸ್ ಇಂಡಿಯಾ; ಲಂಡನ್‌ನಲ್ಲಿ 'ಮೋದಿ ಎಕ್ಸ್‌ಪ್ರೆಸ್' ಬಸ್

400ಕ್ಕೂ ಹೆಚ್ಚು ಭಾರತೀಯ ಸಮುದಾಯವು ಮೋದಿ ಭೇಟಿಯನ್ನು ಅದ್ದೂರಿಯಾಗಿಸುವ ಯೋಜನೆಯಲ್ಲಿದ್ದು, ಒಲಿಂಪಿಕ್ಸ್ ಶೈಲಿಯ ಸ್ವಾಗತ ನೀಡಲಾಗುವುದು.

ಯುಕೆ ವೆಲ್‌ಕಮ್ಸ್ ಇಂಡಿಯಾ; ಲಂಡನ್‌ನಲ್ಲಿ 'ಮೋದಿ ಎಕ್ಸ್‌ಪ್ರೆಸ್' ಬಸ್

ಈ ನಿಟ್ಟಿನಲ್ಲಿ ಒಂದು ತಿಂಗಳುಗಳ ಕಾಲ ಮೋದಿ ಎಕ್ಸ್ ಪ್ರೆಸ್ ಬಸ್ ನಲ್ಲಿ ಪಯಣ ಹಮ್ಮಿಕೊಳ್ಳಲಾಗಿತ್ತು. ಇದು 'ಲಿಟ್ಲ್ ಇಂಡಿಯಾ' ಎಂದು ಕರೆಯಲ್ಪಡುವ ವೆಂಬ್ಲಿಯ ಈಲಿಂಗ್ ಸೇರಿದಂತೆ ಪ್ರಮುಖ ನಗರಗಳಿಗೆ ಭೇಟಿ ಕೊಟ್ಟಿದೆ.

ಯುಕೆ ವೆಲ್‌ಕಮ್ಸ್ ಇಂಡಿಯಾ; ಲಂಡನ್‌ನಲ್ಲಿ 'ಮೋದಿ ಎಕ್ಸ್‌ಪ್ರೆಸ್' ಬಸ್

ಯುಕೆ ವೆಲ್‌ಕಮ್ಸ್ ಮೋದಿ ಕಾರ್ಯಕ್ರಮದಲ್ಲಿ 60,000ಕ್ಕು ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಈ ಮೂಲಕ ಬ್ರಿಟನ್ ನಲ್ಲೂ ಮೋದಿ ಮೇನಿಯಾ ಕಂಡುಬರುವುದು ಗ್ಯಾರಂಟಿ.

ಯುಕೆ ವೆಲ್‌ಕಮ್ಸ್ ಇಂಡಿಯಾ; ಲಂಡನ್‌ನಲ್ಲಿ 'ಮೋದಿ ಎಕ್ಸ್‌ಪ್ರೆಸ್' ಬಸ್

ಪ್ರಸ್ತುತ ಮೋದಿ ಎಕ್ಸ್ ಪ್ರೆಸ್ ಬಸ್ ಮುಖಾಂತರ ಭಾರತ ಹಾಗೂ ಬ್ರಿಟನ್ ಸಮುದಾಯದವರು ಸದ್ದುದ್ದೇಶಕ್ಕಾಗಿ ಮತ್ತಷ್ಟು ಹತ್ತಿರವಾಗಲಿದ್ದಾರೆ ಎಂಬ ನಂಬಿಕೆಯನ್ನು ಸಂಘಟನೆ ವ್ಯಕ್ತಪಡಿಸಿದೆ.

ಇವನ್ನೂ ಓದಿ

01. ಟೆಸ್ಲಾ ವಿದ್ಯುತ್ ಕಾರು ಘಟಕಕ್ಕೆ ಮೋದಿ ಭೇಟಿ; ಅಜೆಂಡಾ ಏನು?

02. ಮಸ್ದಾರ್ ಪೇಟೆಯಲ್ಲಿ ಮೋದಿ ಗಿಮಿಕ್ ಚಮಕ್

English summary
'Modi Express' bus in UK
Story first published: Thursday, November 12, 2015, 11:31 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark