ಥೇಟ್ ಐಷಾರಾಮಿ ಡಿಫೆಂಡರ್‌ನಂತೆ ಮಾಡಿಫೈಗೊಂಡ ಮಹೀಂದ್ರಾ ಬೊಲೆರೊ: ಸಾರ್ವಜನಿಕ ರಸ್ತೆಗಳಿಗೆ ಎಂಟ್ರಿ ಇಲ್ಲ

ಸ್ವದೇಶಿ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ಯಾವಾಗಲೂ ಎಸ್‍ಯುವಿ ತಯಾರಕರಾಗಿ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿದೆ. ಮಹೀಂದ್ರಾ ಕಂಪನಿಯ ಸರಣಿಯಲ್ಲಿ ಹಲವಾರು ಜನಪ್ರಿಯ ಎಸ್‍ಯುವಿಗಳನ್ನು ಹೊಂದಿದ್ದಾರೆ. ಮಹೀಂದ್ರಾ ಕಂಪನಿಯ ಪೋರ್ಟ್‌ಫೋಲಿಯೊದಲ್ಲಿನ ಇತ್ತೀಚಿನ ಮಾದರಿಗಳಾದ ಮಹೀಂದ್ರಾ ಎಕ್ಸ್‌ಯುವಿ700, ಹೊಸ ಥಾರ್ ಮತ್ತು ನ್ಯೂ ಜನರೇಷನ್ ಸ್ಕಾರ್ಪಿಯೊ ಸೇರಿವೆ

ಇದೆಲ್ಲವೂ ಮಾರುಕಟ್ಟೆಗೆ ಬರುವ ಮುಂಚೆಯೇ, ಮಹೀಂದ್ರಾ ಕಮಾಂಡರ್, ಆರ್ಮಡಾ, ಲೆಜೆಂಡ್ ಹೀಗೆ ಹಲವಾರು ಎಸ್‌ಯುವಿಗಳನ್ನು ಹೊಂದಿತ್ತು. ಇನ್ನು ಮಹೀಂದ್ರಾ ಸರಣಿಯಲ್ಲಿರುವ ಮತ್ತೊಂದು ಜನಪ್ರಿಯ ಮಾದರಿಯ ಬೊಲೆರೊ ಆಗಿದೆ. ಈ ಮಹೀಂದ್ರಾ ಬೊಲೆರೊ ಎಸ್‍ಯುವಿಯನ್ನು ಹಲವಾರು ಜನರು ಮಾಡಿಫೈ ಮಾಡಲು ಆಯ್ಕೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಮತ್ತೊಂದು ಉದಾಹರಣೆಯಾಗಿ ಪಂಜಾಬ್ ನಲ್ಲಿ ಮಹೀಂದ್ರಾ ಬೊಲೆರೊ ಮಾದರಿಯನ್ನು ಥೇಟ್ ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಯಂತೆ ಮಾಡಿಫೈ ಮಾಡಿದ್ದಾರೆ.

ಥೇಟ್ ಐಷಾರಾಮಿ ಡಿಫೆಂಡರ್‌ನಂತೆ ಮಾಡಿಫೈಗೊಂಡ ಮಹೀಂದ್ರಾ ಬೊಲೆರೊ

ಲ್ಯಾಂಡ್ ರೋವರ್ ಡಿಫೆಂಡರ್ ವಿಶ್ವದ ಅತ್ಯಂತ ಜನಪ್ರಿಯ ಮತ್ತು ಬೇಡಿಕೆಯ ಪ್ರೀಮಿಯಂ ಲೈಫ್ ಸ್ಟೈಲ್ ಆಫ್-ರೋಡರ್‌ಗಳಲ್ಲಿ ಒಂದಾಗಿದೆ. ಲ್ಯಾಂಡ್ ರೋವರ್ ಡಿಫೆಂಡರ್ ಮಾರುಕಟ್ಟೆಯಲ್ಲಿ ಫೋರ್ಡ್ ಬ್ರಾಂಕೋ ಮತ್ತು ಜೀಪ್ ರಾಂಗ್ಲರ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಭಾರತದಲ್ಲಿ, ಲ್ಯಾಂಡ್ ರೋವರ್ ಡಿಫೆಂಡರ್ ಅನ್ನು 90 ಮತ್ತು 110 ಕಾನ್ಫಿಗರೇಶನ್‌ಗಳಲ್ಲಿ ಬಿಡುಗಡೆ ಮಾಡಿದೆ. ಆದರೆ ಈ ಜನಪ್ರಿಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಯು ದುಬಾರಿ ಬೆಲೆಯನ್ನು ಹೊಂದಿದೆ,

ಪಂಜಾಬ್ ಮೂಲದ ಬಿಗ್ ಡ್ಯಾಡಿ ಕಸ್ಟಮೈಸ್, ಮಹೀಂದ್ರ ಬೊಲೆರೊ ಎಸ್‍ಯುವಿಯನ್ನು ಲ್ಯಾಂಡ್ ರೋವರ್ ಡಿಫೆಂಡರ್ ರೀತಿಯಲ್ಲಿ ಮಾಡಿಫೈ ಮಾಡಿದ್ದಾರೆ. ಬಿಗ್ ಡ್ಯಾಡಿ ಕಸ್ಟಮೈಸ್ ಕ,ಸ್ಟಮ್ ಫ್ರಂಟ್ ಬುಲ್ ಬಾರ್, ರಾಕ್ ಸ್ಲೈಡರ್‌ಗಳು ಮತ್ತು ರೋಲ್ ಕೇಜ್ ಜೊತೆಗೆ ಅದರ ಬಾಡಿ ಶೆಲ್ ಅನ್ನು ಸಂಪೂರ್ಣವಾಗಿ ಮರುನಿರ್ಮಾಣ ಮಾಡಿದ್ದಾರೆ. ಈ ಲ್ಯಾಂಡ್ ರೋವರ್ ಡಿಫೆಂಡರ್ 110 ಎಸ್‍ಯುವಿಯ ರೀತಿ ಅನುಪಾತಗಳನ್ನು ಸಾಧಿಸಲು ಮಹೀಂದ್ರಾ ಬೊಲೆರೊ ಮಾದರಿಯ ಉದ್ದವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.

ಮಹೀಂದ್ರಾ ಬೊಲೆರೊ ಎಸ್‍ಯುವಿಯ ರೀತಿಯಲ್ಲಿ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಒಂದೇ ರೀತಿ ಇರಿಸಲಾಗುತ್ತದೆ ಮತ್ತು ಸಸ್ಪೆಕ್ಷನ್ ಸೆಟಪ್ ಗಾಗಿ 4 ಲಿಫ್ಟ್ ಕಿಟ್ ಅನ್ನು ಪಡೆಯುತ್ತವೆ. ಇವೆಲ್ಲವೂ ಸೇರಿ, ಇವೆಲ್ಲವೂ ಸೇರಿ, ಈ ಬೊಲೆರೊ ಲ್ಯಾಂಡ್ ರೋವರ್ ಡಿಫೆಂಡರ್ 110 ರೀತಿಯಲ್ಲಿದೆ. ಆದರೆ ಇದರ ವಿಂಡ್‌ಸ್ಕ್ರೀನ್ ಲ್ಯಾಂಡ್ ರೋವರ್ ಡಿಫೆಂಡರ್ 110 ಎಸ್‍ಯುವಿಗಿಂತ ವಿಭಿನ್ನವಾಗಿದೆ. ಇವುಗಳನ್ನು ತಯಾರಿಸುವುದು ತುಂಬಾ ಕಠಿಣವಾಗಿದೆ, ಡಿಫೆಂಡರ್‌ನ ಸಾಂಪ್ರದಾಯಿಕ ಲೈನ್ ಗಳನ್ನು ಉಳಿಸಿಕೊಳ್ಳಲು ಡೋರುಗಳನ್ನು ಮರುರೂಪಿಸಲಾಗಿದೆ.

ಮುಂಭಾಗ ಮತ್ತು ಹಿಂಭಾಗದ ಫೆಂಡರ್‌ಗಳು ಎಲ್ಲಾ ಕಸ್ಟಮ್ ಆಗಿದು, ಈ ಎಸ್‍ಯುವಿಯ ಬಾನೆಟ್ ಕೂಡ ಡಿಫೆಂಡರ್‌ಗೆ ತುಂಬಾ ಹತ್ತಿರದಲ್ಲಿದೆ. ಹಿಂಭಾಗದ ಟೈಲ್‌ಗೇಟ್ ಅನ್ನು ಸಹ ಸುಂದರವಾಗಿ ಕಾರ್ಯಗತಗೊಳಿಸಲಾಗಿದೆ. ಇನ್ನು ಈ ಮಾಡಿಫೈ ಎಸ್‍ಯುವಿ ಉದ್ದವಾದ ಬಾಡಿ ಶೆಲ್ ಅದೇ ಸಬ್-4 ಮೀಟರ್ ಚೌಕಟ್ಟಿನ ಮೇಲೆ ಇರುತ್ತದೆ. ಇನ್ನು ಈ ಎಸ್‍ಯುವಿಯ ಒಳಭಾಗವು ಟ್ಯಾನ್ ಲೆಥೆರೆಟ್‌ನಿಂದ ಮುಚ್ಚಲ್ಪಟ್ಟಿದೆ ಮತ್ತು ಎಂಜಿನ್ ಅನ್ನು ಸ್ಟಾಕ್ ಸ್ಥಿತಿಯಲ್ಲಿ ಇರಿಸಲಾಗುತ್ತದೆ.

ಇನ್ನು ಈ ಎಸ್‍ಯುವಿಯ ಈ ವಿಷಯವು ಖಂಡಿತವಾಗಿಯೂ ARAI ಪ್ರಮಾಣೀಕರಿಸಲ್ಪಟ್ಟಿಲ್ಲ. ಇದರಿಂದ ಸಾರ್ವಜನಿಕ ರಸ್ತೆಗಳಲ್ಲಿ ವಾಹನ ಚಲಾಯಿಸುವುದು ಕಾನೂನು ಬಾಹಿರವಾಗಿದೆ. ಭಾರತದಲ್ಲಿ, ಯಾವುದೇ ರೀತಿಯ ಮಾಡಿಫೈಗಳನ್ನು ತಾಂತ್ರಿಕವಾಗಿ ಕಾನೂನುಬಾಹಿರವಾಗಿದೆ. ಈ ಮಾಡಿಫೈ ಲ್ಯಾಂಡ್ ರೋವರ್ ಡಿಫೆಂಡರ್ 110 ಇದಕ್ಕೆ ಹೊರತಾಗಿಲ್ಲ. ಅದು ಎಷ್ಟೇ ಚೆನ್ನಾಗಿ ಕಾಣಿಸಿದರೂ ದಂಡ ವಿಧಿಸಲು ಅಥವಾ ವಶಪಡಿಸಿಕೊಳ್ಳಬಹುದು. ಇನ್ನು ಪಂಜಾಬ್‌ ರಾಜ್ಯದಲ್ಲಿ ಹೆಚ್ಚು ಮಾಡಿಫೈ ವಾಹನಗಳನ್ನು ಕಾಣಬಹುದು. ಅಲ್ಲಿ ಹೆಚ್ಚಾಗಿ ಎಸ್‍ಯುವಿಗಳನ್ನು ಮಾಡಿಫೈಗೊಳಿಸುತ್ತಾರೆ.

ಇನ್ನು ಕೇರಳದಲ್ಲಿ ಸುಂದರವಾಗಿ ಮಾಡಿಫೈಗೊಳಿಸಿದ ಬೊಲೆರೊ ಇನ್ವೇಡರ್ ಎಸ್‍ಯುವಿಯ ಚಿತ್ರಗಳು ವೈರಲ್ ಆಗಿದೆ. ಮಾಡಿಫೈಗೊಂಡ ಬೊಲೆರೊ ಇನ್‌ವೇಡರ್ ಅಗ್ರೇಸಿವ್ ಲುಕ್ ಸಂಪೂರ್ಣವಾಗಿ ಬದಲಾಯಿಸುವ ಯಾವುದೇ ಪ್ರಮುಖ ಮಾರ್ಪಾಡುಗಳನ್ನು ಕಾರು ಪಡೆಯುವುದಿಲ್ಲ. ಆದರೆ ಮೂಲ ಮಾದರಿಯನ್ನು ಉಳಿಸಿಕೊಂಡು ಕೆಲವು ಆಕರ್ಷಕ ಬದಲಾವಣೆಗಳನ್ನು ಮಾಡಲಾಗಿದೆ, ಇದು ಎಸ್‍ಯುವಿಗೆ ಅಗ್ರೇಸಿವ್ ಮತ್ತು ರಗಡ್ ಲುಕ್ ಅನ್ನು ನೀಡುತ್ತದೆ. ಇಡೀ ಎಸ್‍ಯುವಿಯನ್ನು ಕೆಂಪು ಬಣ್ಣದಲ್ಲಿ ಹೊಂದಿದ್ದು, ಇದು ವಿಭಿನ್ನ ಲುಕ್ ಅನ್ನು ನೀಡುತ್ತದೆ.

More from DriveSpark

Article Published On: Sunday, February 12, 2023, 17:00 [IST]
English summary
Modified mahindra bolero look like land rover defender details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+