3.5 ಲಕ್ಷ ಮತ್ತು ಮಾರುತಿ ಇದ್ದರೆ ಸಾಕು, ನಿಮ್ಮದು ಆಗಲಿದೆ ಸೂಪರ್ ಕಾರ್..!

By Nagaraja

ನಿಮ್ಮ ಬಳಿ 3.5 ಲಕ್ಷ ರುಪಾಯಿ ಹಾಗೂ ಮಾರುತಿ 800 ಕಾರು ಇದೆಯೇ? ಅಷ್ಟಿದ್ದರೆ ಸಾಕು ಕೆಳಗಡೆ ತೋರಿಸಿರುವ ಚಿತ್ರದಲ್ಲಿರುವಂತೆಯೇ ನಿಮ್ಮ ಕಾರು ಸಹ ಸೂಪರ್ ಕಾರು ಆಗಿ ಪರಿವರ್ತನೆಗೊಳ್ಳಲಿದೆ. ಇದು ಬರಿ ಕಾರು ಪರಿಷ್ಕೃತಗೊಳಿಸುವ ತಂತ್ರವಲ್ಲ. ಬದಲಾಗಿ ಹೊಸ ಬಿಡಿಭಾಗ ಜೋಡಣೆ ಮಾಡುವುದರೊಂದಿಗೆ ಎಂಜಿನ್ ನಿರ್ವಹಣೆಯನ್ನು ಹೆಚ್ಚಿಸಲಾಗುತ್ತದೆ.

ಇಂತಹದೊಂದು ಕಾರು ಮೋಡಿಫಿಕೇಷನ್ ತಂತ್ರಜ್ಞಾನವನ್ನು ದೆಹಲಿಯ ಮೆಕ್ಯಾನಿಕ್ ಸಂಸ್ಥೆಯೊಂದು ಹೊರ ತಂದಿದೆ. ಇವೆಲ್ಲ ಹೇಗೆ ಸಾಧ್ಯ ಎಂಬುದರ ಕುರಿತಾಗಿನ ಸಮಗ್ರ ಮಾಹಿತಿಗಾಗಿ ಚಿತ್ರ ಪುಟದತ್ತ ಮುಂದುವರಿಯಿರಿ...

ಮಾರುತಿ ಸೂಪರ್ ಕಾರಾಗಿ ಪರಿವರ್ತನೆಯಾದಾಗ..!

ಇಲ್ಲಿ ದೇಹ ಸಂಪೂರ್ಣವಾಗಿಯೂ ಬದಲಾಗುವ ಬಾಡಿ ಕಿಟ್, ವೀಲ್ ಆರ್ಚ್, ಅಲಾಯ್ ವೀಲ್ ಹೀಗೆ ಒಂದು ಸಾಮಾನ್ಯ ಮಾರುತಿ 800 ಕಾರು ಸೂಪರ್ ಕಾರಾಗಿ ಪರಿವರ್ತನೆಯಾಗುತ್ತದೆ.

ಮಾರುತಿ ಸೂಪರ್ ಕಾರಾಗಿ ಪರಿವರ್ತನೆಯಾದಾಗ..!

ನೋಡುತ್ತಿರುವಂತೆಯೇ ನಾಲ್ಕು ಡೋರ್ ಗಳ ಮಾರುತಿ 800 ಎರಡು ಬಾಗಿಲುಗಳ ಸೂಪರ್ ಸ್ಪೋರ್ಟ್ಸ್ ಅಥವಾ ಕನ್ವರ್ಟಿಬಲ್ ಆಗಿ ಪರಿವರ್ತನೆಯಾಗುತ್ತದೆ.

ಮಾರುತಿ ಸೂಪರ್ ಕಾರಾಗಿ ಪರಿವರ್ತನೆಯಾದಾಗ..!

ನವದೆಹಲಿ ತಳಹದಿಯ ಜೆಸಿ ಡಿಸೈನ್‌ ಫೈನ್ ಆಟೋ ಎಲೆಕ್ಟ್ರಿಕ್ ವರ್ಕ್ಸ್ ಸಂಸ್ಥೆಯ ಜಗಜೀತ್ ಸಿಂಗ್ ಅವರು ಇಂತಹದೊಂದು ಪರಿಕಲ್ಪನೆಗೆ ಕೆತ್ತನೆ ಮಾಡಿದ್ದಾರೆ.

ಮಾರುತಿ ಸೂಪರ್ ಕಾರಾಗಿ ಪರಿವರ್ತನೆಯಾದಾಗ..!

ಪ್ರಮುಖವಾಗಿಯೂ 2006, 2007 ಹಾಗೂ 2008ರ ಮಾರುತಿ 800 ಮಾದರಿಗಳನ್ನು ಮಾರ್ಪಾಡುಗೊಳಿಸಲಾಗುತ್ತದೆ.

ಮಾರುತಿ ಸೂಪರ್ ಕಾರಾಗಿ ಪರಿವರ್ತನೆಯಾದಾಗ..!

ಇಷ್ಟೆಲ್ಲ ಕೆಲಸ ಪೂರ್ಣಗೊಳ್ಳಲು ಮೂರು ತಿಂಗಳ ಸಮಯ ಬೇಕಾಗುತ್ತದೆ. ಇನ್ನು ಫಿಟ್ ಆ್ಯಂಡ್ ಫಿನಿಶ್ ಕಡೆಯೂ ಹೆಚ್ಚಿನ ಮಹತ್ವ ಕೊಡಲಾಗುತ್ತದೆ.

ಮಾರುತಿ ಸೂಪರ್ ಕಾರಾಗಿ ಪರಿವರ್ತನೆಯಾದಾಗ..!

ಮುಂಭಾಗದಲ್ಲಿರುವ ಬಂಪರ್ ಸಂಪೂರ್ಣ ಹೊಸ ನೋಟವನ್ನು ಬೀರುತ್ತಿದ್ದು, ಫಿಯೆಟ್ ಪ್ಯಾಲಿಯೊ ಹೆಡ್ ಲ್ಯಾಂಪ್ ಜೊತೆ ಎಲ್ ಇಡಿ ಸ್ಟ್ರಿಪ್ ಬಳಕೆ ಮಾಡಲಾಗಿದೆ.

ಮಾರುತಿ ಸೂಪರ್ ಕಾರಾಗಿ ಪರಿವರ್ತನೆಯಾದಾಗ..!

ಅಂತೆಯೇ ಟೈಲ್ ಲ್ಯಾಂಪ್ ಗಳನ್ನು ಷೆವರ್ಲೆ ಸ್ಪಾರ್ಕ್ ಹಾಗೂ ಡ್ಯಾಶ್ ಬೋರ್ಡ್ ಎಸಿ ವೆಂಟ್ಸ್ ಗಳನ್ನು ನಿಸ್ಸಾನ್ ಟೆರನೊದಿಂದ ಆಮದು ಮಾಡಲಾಗಿದೆ.

ಮಾರುತಿ ಸೂಪರ್ ಕಾರಾಗಿ ಪರಿವರ್ತನೆಯಾದಾಗ..!

ಇನ್ನುಳಿದಂತೆ ಹೊಸ ಗೇರ್ ನಾಬ್, ಕ್ರೀಡಾತ್ಮಕ ಸೀಟು, ಕ್ರೀಡಾತ್ಮಕ ಸ್ಟೀರಿಂಗ್ ವೀಲ್ ಮತ್ತು ಎಲ್ ಸಿಡಿ ಜೊತೆಗೆ ಮಾಹಿತಿ ಮನರಂಜನಾ ವ್ಯವಸ್ಥೆಯ ಸೌಲಭ್ಯಗಳಿರಲಿದೆ.

ಮಾರುತಿ ಸೂಪರ್ ಕಾರಾಗಿ ಪರಿವರ್ತನೆಯಾದಾಗ..!

ಈಗ ಹೇಳಿ ನೋಡೋಣ, ಇದು ಮಾರುತಿ 800 ಹೌದೇ? ನಿಜಕ್ಕೂ ಹಳೆಯ ಕಾರಿನ ರೂಪವನ್ನು ಸಂಪೂರ್ಣವಾಗಿ ಬದಲಾಯಿಸಲಾಗುತ್ತದೆ.

ಮಾರುತಿ ಸೂಪರ್ ಕಾರಾಗಿ ಪರಿವರ್ತನೆಯಾದಾಗ..!

ಇನ್ನು ಜೆಎಸ್ ಡಿಸೈನ್ಸ್ ಫೈನ್ ಆಟೋ ಎಲೆಕ್ಟ್ರಿಕ್ ವರ್ಕ್ಸ್ ಸಂಸ್ಥೆಯ ಬಗ್ಗೆ ಮಾತನಾಡುವುದಾದ್ದಲ್ಲಿ ಬ್ರಿಟನ್‌ನ ಅತ್ಯುತ್ತಮ ಕಾರು ಎಂಜಿನ್ ಟ್ಯೂನಿಂಗ್ ಸಂಸ್ಥೆಯಾಗಿರುವ ವಿಝು (viezu) ಅಧಿಕೃತ ಸರ್ವೀಸ್ ಸೆಂಟರ್ ಇದಾಗಿದೆ.

ಮಾರುತಿ ಸೂಪರ್ ಕಾರಾಗಿ ಪರಿವರ್ತನೆಯಾದಾಗ..!

ಕಳೆದ 35 ವರ್ಷಗಳಿಂದಲೂ ತನ್ನ ಸೇವೆ ಸಲ್ಲಿಕೊಂಡು ಬರುತ್ತಿರುವ ಪ್ರಸ್ತುತ ಸಂಸ್ಥೆಯ ಮಾಲಿಕ ಸಂಗತ್ ಸಿಂಗ್ ಅವರಾಗಿದ್ದಾರೆ. ಅಲ್ಲದೆ ಕಾರುಗಳ ರಿಪೇರಿ ಕೆಲಸದಲ್ಲಿ ನಿಸ್ಸೀಮವೆನಿಸಿದೆ.

ಮಾರುತಿ ಸೂಪರ್ ಕಾರಾಗಿ ಪರಿವರ್ತನೆಯಾದಾಗ..!

ಕೇವಲ ಕಾರು ಮಾರ್ಪಾಡುಗೊಳಿಸುವುದಕ್ಕಷ್ಟೇ ಅಲ್ಲದೆ ಎಂಜಿನ್ ನಿರ್ವಹಣೆ ಹೆಚ್ಚಿಸಲು ಇಲ್ಲಿ ಸಾಧ್ಯವಾಗುತ್ತದೆ. ಇದಕ್ಕಾಗಿ ಆಲ್ ಡಾಟಾ ಮಾಹಿತಿ ವ್ಯವಸ್ಥೆಯ ಸೇವೆಯು ಲಭ್ಯವಿರುತ್ತದೆ.

ಮಾರುತಿ ಸೂಪರ್ ಕಾರಾಗಿ ಪರಿವರ್ತನೆಯಾದಾಗ..!

ಈ ಎಲ್ಲದರ ಮೂಲಕ ನಿಮ್ಮ ಸಾಮಾನ್ಯ ಕಾರಿಗೂ ನೈಜ ಅರ್ಥ ಕಲ್ಪಿಸುವ ಪ್ರಯತ್ನ ಮಾಡಲಾಗುತ್ತದೆ. ಅಲ್ಲದೆ ಹೈ ಎಂಡ್ ರಿಪೇರಿ ಕೆಲಸಗಳಲ್ಲೂ ತನ್ನ ಜನಪ್ರಿಯತೆಯನ್ನು ಕಾಪಾಡಿಕೊಂಡಿದೆ.

ಮಾರುತಿ ಸೂಪರ್ ಕಾರಾಗಿ ಪರಿವರ್ತನೆಯಾದಾಗ..!

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ +919811220071

ವೆಬ್ ಸೈಟ್ ಲಿಂಕ್ ಗಾಗಿ ಇಲ್ಲಿ ಕ್ಕಿಕ್ಕಿಸಿ


More from DriveSpark

Article Published On: Monday, August 3, 2015, 14:37 [IST]
English summary
‪‎Modified Maruti800‬ from ‎FineAuto‬ ‪‎JsDesign‬
Read more on ಮಾರುತಿ 800
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+