Maruti Jimny vs Mahindra Thar: ರಣರೋಚಕ ಡ್ರ್ಯಾಗ್ ರೇಸ್‌ನಲ್ಲಿ ಗೆದಿದ್ದು ಯಾವುದು?
ಮಹೀಂದ್ರಾ ಥಾರ್ (Mahindra Thar) ಮತ್ತು ಮಾರುತಿ ಜಿಮ್ನಿ (Maruti Jimny) ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಖರೀದಿಸಬಹುದಾದ ಅತ್ಯಂತ ಕೈಗೆಟುಕುವ 4×4 ಆಫ್-ರೋಡ್ ಎಸ್‍ಯುವಿಯಾಗಿದೆ. ಫೋರ್ಸ್ ಗೂರ್ಖಾದಂತಹ ಇತರ ಆಫ್-ರೋಡ್ ಎಸ್‍ಯುವಿಗಳಿದ್ದರೂ, ಥಾರ್ ಮತ್ತು ಜಿಮ್ನಿ ಎಸ್‍ಯುವಿಗಳು ಜನಪ್ರಿಯವಾಗಿವೆ. ಜಿಮ್ನಿ ಎಸ್‍ಯುವಿಯು ಈಗಾಗಲೇ ರಸ್ತೆಗಳಲ್ಲಿ ಕಾಣಸಿಗಲು ಪ್ರಾರಂಭವಾಗಿದೆ.
ಭಾರತದಲ್ಲಿ ಈ ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ಎಸ್‍ಯುವಿಯ ವಿತರಣೆಯನ್ನು ಈಗಾಗಲೇ ಪ್ರಾರಂಭಿಸಿದೆ. ಈ ಎಸ್‍ಯುವಿಯನ್ನು ಮಾಡಿಫೈಗೊಳಿಸಿ ಆಫ್-ರೋಡಿಂಗ್ ಹೋಗಲು ಈಗಾಗಲೇ ಪ್ರಾರಂಭಿಸಿದ್ದಾರೆ. ಜಿಮ್ನಿ ಮಾಲೀಕರು ಕಠಿಣವಾದ ರಸ್ತೆಗಳ ಮೂಲಕ ತನ್ನ ಎಸ್‍ಯುವಿಯನ್ನು ತೆಗೆದುಕೊಂಡೂ ಹೋಗಲು ಪ್ರಾರಂಭಿಸಿದ್ದಾರೆ. ಮಾರುತಿ ಸುಜುಕಿ ಜಿಮ್ನಿ ಮತ್ತು ಮಹೀಂದ್ರಾ ಥಾರ್ ಎಸ್‍ಯುವಿಗಳು ನೇರವಾಗಿ ಪರಸ್ಪರ ಸ್ಪರ್ಧಿಸುವ ವೀಡಿಯೊಮ್ದು ವೈರಲ್ ಆಗಿದೆ.

ಇತ್ತೀಚೆಗೆ, ಈ ಎರಡು ಎಸ್‍ಯುವಿಗಳನ್ನು ಡ್ರ್ಯಾಗ್ ರೇಸ್‌ನಲ್ಲಿ ಪರಸ್ಪರ ಸ್ಪರ್ಧಿಸಿದೆ. ಮಾಡಿಫೈ ಮಾರುತಿ ಸುಜುಕಿ ಜಿಮ್ನಿ ವರ್ಸಸ್ ಮಾಡಿಫೈ ಮಹೀಂದ್ರಾ ಥಾರ್ ವೀಡಿಯೊವನ್ನು ತುಷಾರ್ ಶರ್ಮಾ ಅವರು ತಮ್ಮ ಚಾನಲ್‌ನಲ್ಲಿ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ . ನಿರೂಪಕನು ತನ್ನದೇ ಆದ ಮಾಡಿಫೈ ಮಹೀಂದ್ರಾ ಥಾರ್ ಮತ್ತು ಅವನ ಸ್ನೇಹಿತನ ಮಾಡಿಫೈ ಮಾರುತಿ ಸುಜುಕಿ ಜಿಮ್ನಿಯನ್ನು ತೋರಿಸುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ.
ಮಹೀಂದ್ರಾ ಥಾರ್ ಮತ್ತು ಮಾರುತಿ ಜಿಮ್ನಿ ಎರಡೂ ಎಸ್‍ಯುವಿಗಳು ಹೊರಭಾಗದಲ್ಲಿ ಮಾರ್ಪಡಿಸಿದ್ದರೂ, ಎಂಜಿನ್ ಮತ್ತು ಕಾರ್ಯಕ್ಷಮತೆಯ ಬದಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಪರಿಚಯದ ನಂತರ, ಅವರು ಡ್ರ್ಯಾಗ್ ರೇಸ್‌ಗಳೊಂದಿಗೆ ಪ್ರಾರಂಭಿಸುತ್ತಾರೆ. ಪರಿಚಯದ ನಂತರ, ವ್ಲಾಗರ್ ಮತ್ತು ಅವನ ಸ್ನೇಹಿತ ಇಬ್ಬರೂ ತಮ್ಮ ಎಸ್‍ಯುವಿಗಳನ್ನು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಸಾಲಾಗಿ ನಿಲ್ಲಿಸುತ್ತಾರೆ.

ಪ್ರೆಸೆಂಟರ್ ಮೊದಲ ರೇಸ್‌ಗಾಗಿ, ಅವರು ತಮ್ಮ ಎಸ್‍ಯುವಿಯ ಕ್ಲೈಮೆಂಟ್ ಕಂಟ್ರೋಲ್ ಸಿಸ್ಟಂ ಅನ್ನು ಆಪ್ ಮಾಡುತ್ತಾರೆ. ನಂತರ ಮಹೀಂದ್ರಾ ಥಾರ್ ಮಾಲೀಕರು ಮೂರು ಬಾರಿ ಹಾರ್ನ್ ಮಾಡುತ್ತಾರೆ ಮತ್ತು ಅವರು ಮೊದಲ ಡ್ರ್ಯಾಗ್ ರೇಸ್ ಅನ್ನು ಪ್ರಾರಂಭಿಸುತ್ತಾರೆ. ಆರಂಭದಿಂದಲೂ, ಮಹೀಂದ್ರಾ ಥಾರ್ ಓಟದಲ್ಲಿ ಮುಂಚೂಣಿಯಲ್ಲಿದೆ ಮತ್ತು ತನ್ನ ಅತ್ಯುತ್ತಮ ಪ್ರಯತ್ನ ಮಾಡಿದರೂ ಜಿಮ್ನಿಗೆ ಥಾರ್ ಹತ್ತಿರ ಬರಲು ಸಾಧ್ಯವಾಗಲಿಲ್ಲ.
ಮತ್ತೊಮ್ಮೆ ಎರಡನೇ ಡ್ರ್ಯಾಗ್ ರೇಸ್‌ಗೆ ಸಜ್ಜಾಗುತ್ತಾರೆ. ಈ ಬಾರಿ, ಮಹೀಂದ್ರಾ ಥಾರ್ ಕ್ಲೈಮೆಂಟ್ ಕಂಟ್ರೋಲ್ ಮತ್ತು ಟ್ರ್ಯಾಕ್ಶನ್ ಕಂಟ್ರೋಲ್ ಅನ್ನು ಆನ್ ಮಾಡಲು ಸೂಚಿಸುತ್ತಾರೆ. ಈ ಸಮಯದಲ್ಲಿ, ಚಾಲಕನ ದೋಷದಿಂದಾಗಿ ಥಾರ್ ನಿಧಾನವಾಗಿ ಲೈನ್‌ನಿಂದ ಹೊರಬರುತ್ತದೆ. ವಿಳಂಬದ ಹೊರತಾಗಿಯೂ, ಮಹೀಂದ್ರಾ ಥಾರ್ ಡ್ರ್ಯಾಗ್ ರೇಸ್‌ನಲ್ಲಿ ಮಾರುತಿ ಸುಜುಕಿ ಜಿಮ್ನಿಯನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ.

ಮಹೀಂದ್ರಾ ಥಾರ್ ಎಸ್‍ಯುವಿಯಲ್ಲಿ 3 ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಮೊದಲಿಗೆ 2.0 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಗಿದೆ. ಈ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 2.2 ಲೀಟರ್ ಟರ್ಬೊ-ಡೀಸೆಲ್ ಎಂಜಿನ್ 130 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಎರಡು ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಈ ಎಸ್‍ಯುವಿಯ 1.5 ಲೀಟರ್ ಡೀಸೆಲ್ ಎಂಜಿನ್ 118 ಬಿಹೆಚ್‍ಪಿ ಪವರ್ ಮತ್ತು 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಮಾರುತಿ ಸುಜುಕಿ ಜಿಮ್ನಿ ಎಸ್‍ಯುವಿಯಲ್ಲಿ ಐಡಲ್ ಸ್ಟಾರ್ಟ್/ಸ್ಟಾಪ್ ಬಟನ್ ವೈಶಿಷ್ಟ್ಯದೊಂದಿಗೆ 1.5 ಲೀಟರ್ ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 6000 rpm ನಲ್ಲಿ 104.8 ಪಿಎಸ್ ಗರಿಷ್ಠ ಪವರ್ ಹಾಗೂ 4000 rpm ನಲ್ಲಿ 134.2 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.


Click it and Unblock the Notifications