ಬಹುಕೋಟಿ ಬೆಲೆಯ ಮತ್ತೊಂದು ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರು ಖರೀದಿಸಿದ ಜನಪ್ರಿಯ ನಟ

ವಾಹನಗಳ ಬಗ್ಗೆ ಕ್ರೇಜ್ ಅನ್ನೋದು ಯಾರಿಗೆ ಇರಲ್ಲ ಹೇಳಿ, ಅದರಲ್ಲಿಯು ಸಿನಿಮಾ ಸೆಲಬ್ರಿಟಿಗಳಿಗೆ ಈ ಕ್ರೇಜ್ ಸ್ವಲ್ಪ ಹೆಚ್ಚು ಇರುತ್ತೆ. ಮಲಯಾಳಂ ಚಲನಚಿತ್ರ ನಟ ಪೃಥ್ವಿರಾಜ್ ಸುಕುಮಾರನ್ ಐಷಾರಾಮಿ ಮತ್ತು ಸ್ಪೋರ್ಟ್ಸ್ ಕಾರುಗಳ ಮೇಲೆ ಹೆಚ್ಚು ಕ್ರೇಜ್ ಹೊಂದಿದ್ದಾರೆ.

ಬಹುಕೋಟಿ ಬೆಲೆಯ ಮತ್ತೊಂದು ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರು ಖರೀದಿಸಿ ಸುದ್ದಿಯಾದ ಜನಪ್ರಿಯ ನಟ

ಇದೀಗ ಪೃಥ್ವಿರಾಜ್ ಕಾರು ಕಲೆಕ್ಷನ್ಗೆ ಹೊಸ ಕಾರು ಸೇರ್ಪಡೆಯಾಗಿದೆ. ಇದು ಹೊಸ ಐಷಾರಾಮಿ ಮರ್ಸಿಡಿಸ್ ಎಎಂಜಿ 63 ಮಾದರಿಯಾಗಿದೆ. ಇದು ಭಾರತದಲ್ಲಿನ ಅತ್ಯಂತ ವಿಶೇಷವಾದ ಕಸ್ಟಮೈಸ್ ಮಾಡಿದ ಸ್ಪೋಟ್ಸ್ ಮಾದರಿಯಾಗಿದೆ. ವರದಿಗಳ ಪ್ರಕಾರ ಈ ಎಲ್ಲಾ ಕಸ್ಟಮೈಸ್ ಮಾಡಿದ ನಂತರ ವಾಹನದ ವೆಚ್ಚ ಸುಮಾರು 4.5 ಕೋಟಿ ರೂ. ಆಗಿದೆ. ಐಷಾರಾಮಿ ಕಾರುಗಳ ಸುಲ್ತಾನ್ ಪೃಥ್ವಿರಾಜ್ ಈಗ ಪವರ್ ಫುಲ್ ಎಸ್‌ಯುವಿಯನ್ನು ಹೊಂದಿದ್ದಾರೆ.

ಬಹುಕೋಟಿ ಬೆಲೆಯ ಮತ್ತೊಂದು ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರು ಖರೀದಿಸಿ ಸುದ್ದಿಯಾದ ಜನಪ್ರಿಯ ನಟ

ಪೃಥ್ವಿ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡುವ ರಾಯಲ್ ಡ್ರೈವ್‌ನಿಂದ ಬಳಸಿದ ವಾಹನವನ್ನು ಪಡೆದುಕೊಂಡಿದ್ದಾರೆ. ಅದೇ ಡೀಲರ್‌ನಿಂದ ನಟ ಖರೀದಿಸುತ್ತಿರುವ ಎರಡನೇ ಐಷಾರಾಮಿ ಮಾಡೆಲ್ ಎಂಬುದು ಗಮನಾರ್ಹ.

ಬಹುಕೋಟಿ ಬೆಲೆಯ ಮತ್ತೊಂದು ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರು ಖರೀದಿಸಿ ಸುದ್ದಿಯಾದ ಜನಪ್ರಿಯ ನಟ

ಈ ಹಿಂದೆ ಲಂಬೋರ್ಗಿನಿಯ ಐಷಾರಾಮಿ ಎಸ್‌ಯುವಿ ಉರುಸ್ ಅನ್ನು ರಾಯಲ್ ಡ್ರೈವ್‌ನಿಂದ ಖರೀದಿಸಲಾಗಿದೆ ಎಂಬುದು ದೊಡ್ಡ ಸುದ್ದಿಯಾಗಿತ್ತು. ಆಗ 2018 ರಲ್ಲಿ ಪೃಥ್ವಿರಾಜ್ ಖರೀದಿಸಿದ ಲ್ಯಾಂಬೊರ್ಗಿನಿ ಹುರಾಕಾನ್ ಕಾರನ್ನು ನೀಡಿ ಉರುಸ್ ಅನ್ನು ವಿನಿಮಯ ಮಾಡಿಕೊಳ್ಳಲಾಗಿದೆ.

ಬಹುಕೋಟಿ ಬೆಲೆಯ ಮತ್ತೊಂದು ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರು ಖರೀದಿಸಿ ಸುದ್ದಿಯಾದ ಜನಪ್ರಿಯ ನಟ

ಮಿನಿಮಯ ಮಾಡಿದ ಇವರ ಹುರಾಕಾನ್ ಕೇವಲ 2,000 ಕಿ.ಮೀ ಚಲಿಸಿದೆ. ಇವರು ಖರೀದಿಸಿದ ಉರುಸ್ 2,000 ಕಿ.ಮೀ ಚಲಿಸಿದೆ. ಉರುಸ್ 2019 ರಲ್ಲಿ ನೋಂದಣಿಯಾದ ವಾಹನವಾಗಿದೆ. ಕೇರಳ-ನೋಂದಾಯಿತ 2019 ಮಾಡೆಲ್ ಐಷಾರಾಮಿ ಎಸ್‍ಯುವಿಯ ಅಂದಿನ ಆನ್-ರೋಡ್ ಬೆಲೆಯು ಸುಮಾರು ರೂ.4.35 ಕೋಟಿಯಾಗಿದೆ.

ಬಹುಕೋಟಿ ಬೆಲೆಯ ಮತ್ತೊಂದು ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರು ಖರೀದಿಸಿ ಸುದ್ದಿಯಾದ ಜನಪ್ರಿಯ ನಟ

ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿರುವ ಮಲಯಾಳಂ ಚಿತ್ರರಂಗದ ಟ್ರೆಂಡ್ ಸೆಟ್ಟರ್ ಪೃಥ್ವಿ ಅವರು ಲ್ಯಾಂಬೋರ್ಗಿನಿ ಉರುಸ್, ರೇಂಜ್ ರೋವರ್, ಪೋರ್ಷೆ ಕಯೆನ್ನೆ, ಆಡಿ, ಬಿಎಂಡಬ್ಲ್ಯು ಮತ್ತು ಇನ್ನೂ ಅನೇಕ ಐಷಾರಾಮಿ ಕಾರುಗಳ ಸಂಗ್ರಹವಿದ. ಅವರು ಇತ್ತೀಚೆಗೆ ಖರೀದಿಸಿದ ಮರ್ಸಿಡಿಸ್ ಎಎಂಜಿ 63 ಎಸ್‍ಯುವಿ L 53 S 0001 ಎಂಬ ನಂಬರ್ ಪ್ಲೇಟ್ ಅನ್ನು ಹೊಂದಿದೆ.

ಬಹುಕೋಟಿ ಬೆಲೆಯ ಮತ್ತೊಂದು ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರು ಖರೀದಿಸಿ ಸುದ್ದಿಯಾದ ಜನಪ್ರಿಯ ನಟ

ಈ ಮರ್ಸಿಡಿಸ್ ಎಎಂಜಿ 63 ಐಷಾರಾಮಿ ಎಸ್‍ಯುವಿಯು ಅನೇಕ ಸೆಲಬ್ರಿಟಿಗಳ ಮೆಚ್ಚಿನ ಆಯ್ಕೆಯಾಗಿದೆ. ಮರ್ಸಿಡಿಸ್ ಬೆಂಝ್ ಭಾರತ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ಅತಿ ದೊಡ್ಡ ಐಷಾರಾಮಿ ಕಾರು ಬ್ರಾಂಡ್‌ಗಳಲ್ಲಿ ಒಂದಾಗಿದೆ. ಅವರು ಇದೀಗ ಅನೇಕ ವಾಹನಗಳನ್ನು ಮಾರಾಟ ಮಾಡುತ್ತಿದ್ದಾರೆ. ಮರ್ಸಿಡಿಸ್ ಬೆಂಝ್ ಕಂಪನಿಯ ಜನಪ್ರಿಯ ಎಸ್‍ಯುವಿಗಳಲ್ಲಿ ಜಿ-ವ್ಯಾಗನ್. ಕೂಡ ಒಂದಾಗಿದೆ.

ಬಹುಕೋಟಿ ಬೆಲೆಯ ಮತ್ತೊಂದು ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರು ಖರೀದಿಸಿ ಸುದ್ದಿಯಾದ ಜನಪ್ರಿಯ ನಟ

ಈ ಮರ್ಸಿಡಿಸ್ ಬೆಂಝ್ ಜಿ-ವ್ಯಾಗನ್ ಅನೇಕ ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಆದರೆ ಕಂಪನಿಯು ಈ ಎಸ್‍ಯುವಿಯ ವಿನ್ಯಾಸವನ್ನು ಹೆಚ್ಚು ಬದಲಾಯಿಸಲಿಲ್ಲ. ಇದು ರೆಟ್ರೋದಂತೆ ಕಾಣುತ್ತದೆ ಆದರೆ ಪ್ರೀಮಿಯಂ ಲುಕ್ ಅನ್ನು ಹೊಂದಿದೆ,

ಬಹುಕೋಟಿ ಬೆಲೆಯ ಮತ್ತೊಂದು ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರು ಖರೀದಿಸಿ ಸುದ್ದಿಯಾದ ಜನಪ್ರಿಯ ನಟ

ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿಯಲ್ಲಿ 4.0 ಲೀಟರ್ ವಿ8 ಬಿಟುರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 577 ಬಿಎಚ್‌ಪಿ ಪವರ್ ಮತ್ತು 850 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಬಹುಕೋಟಿ ಬೆಲೆಯ ಮತ್ತೊಂದು ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರು ಖರೀದಿಸಿ ಸುದ್ದಿಯಾದ ಜನಪ್ರಿಯ ನಟ

ಈ ಐಷಾರಾಮಿ ಎಸ್‍ಯುವಿಯು ವೃತ್ತಾಕಾರದ ಹೆಡ್‌ಲ್ಯಾಂಪ್‌ಗಳೊಂದಿಗೆ ಸಂಯೋಜಿತ ಎಲ್‌ಇಡಿ ಡಿಆರ್‌ಎಲ್‌ಗಳು, ಪನಾಮೆರಿಕಾನಾ ಗ್ರಿಲ್ ಮತ್ತು ನಾಲ್ಕು ದಶಕಗಳಿಂದ ಬದಲಾಯಿಸದ ಬಾಕ್ಸಿ ಸಿಲೂಯೆಟ್ ಅನ್ನು ಒಳಗೊಂಡಿದೆ,

ಬಹುಕೋಟಿ ಬೆಲೆಯ ಮತ್ತೊಂದು ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರು ಖರೀದಿಸಿ ಸುದ್ದಿಯಾದ ಜನಪ್ರಿಯ ನಟ

ಈ ಮರ್ಸಿಡಿಸ್-ಎಎಂಜಿ ಜಿ63 ಎಸ್‌ಯುವಿ ಹೊರತಾಗಿ, ಜಿ-ಕ್ಲಾಸ್ ಜಿ350ಡಿಯ ಎಂಬ ಎಸ್‍ಯುವಿಯು ಮಾರಾಟವಾಗುತ್ತಿದೆ. ಇದರಲ್ಲಿ ಲೀಟರ್ ವಿ6 ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 281 ಬಿಹೆಚ್‍ಪಿ ಪವರ್ ಮತ್ತು 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಬಹುಕೋಟಿ ಬೆಲೆಯ ಮತ್ತೊಂದು ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರು ಖರೀದಿಸಿ ಸುದ್ದಿಯಾದ ಜನಪ್ರಿಯ ನಟ

ಈ 350 ಡಿ ಎಸ್‍‍ಯು‍ವಿ 241 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 700 ಎಂಎಂ ವಾಟರ್ ವೇಡಿಂಗ್ ಸಾಮರ್ಥ್ಯವನ್ನು ಹೊಂದಿದೆ. ಮರ್ಸಿಡಿಸ್ ಬೆಂಝ್ ಜಿ350ಡಿ ಎಸ್‍‍ಯು‍ವಿಯು ಬಾಕ್ಸೀ ಮತ್ತು ಐಕಾನಿಕ್ ವಿನ್ಯಾಸವನ್ನು ಹೊಂದಿದೆ. ಈ ಐಕಾನಿಕ್ ಆಫ್-ರೋಡರ್ ನಲ್ಲಿ ಸುರಕ್ಷತೆಗಾಗಿ 8 ಏರ್‍‍ಬ್ಯಾಗ್‍‍ಗಳು, ಇಎಸ್‍ಸಿ, ಎ‍ಬಿಎಸ್ ಜೊತೆ ಇ‍ಬಿಡಿ,ಬ್ರೇಕ್ ಅಸಿಸ್ಟ್, ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ ಅನ್ನು ಹೊಂದಿದೆ.

ಬಹುಕೋಟಿ ಬೆಲೆಯ ಮತ್ತೊಂದು ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರು ಖರೀದಿಸಿ ಸುದ್ದಿಯಾದ ಜನಪ್ರಿಯ ನಟ

ಭಾರತದ ಕೆಲವು ಪ್ರಸಿದ್ದ ಸೆಲಬ್ರಿಟಿಗಳಾದ ಜಿಮ್ಮಿ ಶೆರ್ಗಿಲ್, ಸಾರಾ ಅಲಿ ಖಾನ್, ಹಾರ್ದಿಕ್ ಪಾಂಡೆ, ಅಖಿಲ್ ಅಕ್ಕಿನೇನಿ, ರಣಬೀರ್ ಕಪೂರ್, ಅನಂತ್ ಅಂಬಾನಿ, ಪವನ್ ಕಲ್ಯಾಣ್, ದುಲ್ಕರ್ ಸಲ್ಮಾನ್ ಮತ್ತು ಆಸಿಫ್ ಅಲಿ ಮರ್ಸಿಡಿಸ್ ಜಿ-ವ್ಯಾಗನ್ ಎಸ್‍ಯುವಿಯನ್ನು ಹೊಂದಿದ್ದಾರೆ.

More from DriveSpark

Article Published On: Tuesday, October 25, 2022, 20:31 [IST]
English summary
Mollywood actor prithviraj buys mercedes amg g63 suv details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+