ಈ ನಟನಿಗೆ ಲ್ಯಾಂಡ್‌ರೋವರ್ ಕಾರುಗಳು ಲೆಕ್ಕಕ್ಕೇ ಇಲ್ಲ: 72 ವರ್ಷದಲ್ಲೂ ಮಿಂಚುತ್ತಿರುವ ಸೂಪರ್‌ಸ್ಟಾರ್!
ಭಾರತದಲ್ಲಿ ಸೆಲೆಬ್ರಿಟಿಗಳು ಅಂದರೆ ಅವರ ಜೀವನ ಶೈಲಿಯೇ ವಿಶೇಷವಾಗಿರುತ್ತದೆ. ಹೌದು, ಸಾಧಾರಣವಾಗಿ ಬಹುತೇಕ ಭಾರತೀಯ ಸೆಲೆಬ್ರಿಟಿಗಳೆಲ್ಲರೂ ದುಬಾರಿ ಕಾರು ಮತ್ತು ಬೈಕ್‌ಗಳನ್ನು ಕೊಂಡು ತಮ್ಮ ಗ್ಯಾರೇಜ್‌ನಲ್ಲಿ ಇಟ್ಟುಕೊಳ್ಳುತ್ತಾರೆ. ಅವರ ಕಾರು ಕಲೆಕ್ಷನ್‌ನಲ್ಲಿ ಲಾಂಡ್‌ರೋವರ್ & ರೇಂಜ್‌ರೋವರ್ ಕಾರುಗಳಿಲ್ಲದಿದ್ದರೆ ಅದು ಅಪೂರ್ಣವೇ ಸರಿ.
ಭಾರತೀಯ ಸಿನಿಮಾ ರಂಗದ ಸೆಲೆಬ್ರಿಟಿಗಳ ವಿಚಾರಕ್ಕೆ ಬಂದರೆ ಕಾರು ಕಲೆಕ್ಷನ್‌ನಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವವರಲ್ಲಿ ಮಲಯಾಳಂ ಚಿತ್ರರಂಗದ ಮಮ್ಮುಟ್ಟಿ ಸಹ ಒಬ್ಬರು. ಸುಮಾರು 72 ವರ್ಷ ವಯಸ್ಸಿನಲ್ಲೂ ಚಿರ ಯುವಕನಂತೆ ಚಿತ್ರ ರಂಗದಲ್ಲಿ ಮಿಂಚುತ್ತಿರುವ ಮಮ್ಮುಟ್ಟಿ, ತಮ್ಮ ಕಾರು ಕಲೆಕ್ಷನ್‌ನಲ್ಲಿ ಕ್ಲಾಸಿಕ್ ಸೇರಿದಂತೆ ಹಲವಾರು ಕಾರುಗಳನ್ನು ಇಟ್ಟಕೊಂಡಿದ್ದಾರೆ.

ಇದೀಗ ಮಮ್ಮುಟ್ಟಿ ಹಳೆ ಮಾದರಿಯ ರೇಂಜ್ ರೋವರ್ ಡಿಫೆಂಡರ್ ಜೊತೆ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದು ಭಾರೀ ವೈರಲ್ ಆಗುತ್ತಿದೆ. ಸಮಾರಂಭವೊಂದಕ್ಕೆ ಆಗಮಿಸಿದ ಸೂಪರ್‌ಸ್ಟಾರ್ ಮಮ್ಮುಟ್ಟಿ, ಈ ಕಳೆದ ತಲೆಮಾರಿನ ಎಸ್‌ಯುವಿಯಲ್ಲಿ ಕಾಣಿಸಿಕೊಂಡಿದ್ದಾರೆ. ಬಿಳಿ ಬಣ್ಣದ ಈ ಕಾರಿನಲ್ಲಿ ಬಂದಿಳಿದ ಮಮ್ಮುಟ್ಟಿಯೂ ಸಹ ಬಿಳಿ ಬಣ್ಣದ ಬಟ್ಟೆಯನ್ನು ಧರಿಸಿದ್ದರು.
ಮಮ್ಮುಟ್ಟಿಯವರ ಯಾವ ಕಾರನ್ನು ಗಮನಿಸಿದರೂ ಅವರ ಕಾರಿನ ಸಂಖ್ಯೆ 369 ಆಗಿರುತ್ತದೆ. ಇವರು ಬಂದಿಳಿದ ಈ ಕಾರಿನ ಸಂಖ್ಯೆ ಇದಕ್ಕೆ ವಿರುದ್ದವಾಗಿದ್ದು, ಬಹುಷಃ ಇದು ಇವರು ಇತ್ತೀಚೆಗಷ್ಟೇ ತಮ್ಮ ಕಾರು ಕಲೆಕ್ಷನ್ನಲ್ಲಿ ಸೇರಿಸಿರುವ ಕಾರಾಗಿರಬಹುದು ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ಸ್ಟಾಗ್ರಾಂ ಪೇಜ್ ಒಂದು ಈ ವಿಡಿಯೋವನ್ನು ಅಪ್‌ಲೋಡ್ ಮಾಡಿತ್ತು.
ಮಮ್ಮುಟ್ಟಿಯವರು ಕಾಣಿಸಿಕೊಂಡಿರುವ ಲಾಂಡ್ ರೋವರ್ ಡಿಫೆಂಡರ್‌ನಲ್ಲಿ ತಮಿಳು ನಾಡಿನ ರಿಜಿಸ್ಟ್ರೇಷನ್ ಅನ್ನು ಹೊಂದಿದ್ದು, 2011 ರಲ್ಲಿ ಬಿಡುಗಡೆಯಾದ ಲಾಂಡ್ ರೋವರ್ ಡಿಫೆಂಡರ್ ಇದಾಗಿದೆ. ವಿಡಿಯೋದಲ್ಲಿ ಕಾರನ್ನು ಗಮನಿಸಿದಂತೆ ಈ ಕಾರು ಟಿಡಿ೫ ಎಂಜಿನ್ ಅನ್ನು ಹೊಂದಿದೆ. ಈ ಎಸ್‌ಯುವಿ ಮೊದಲ ಬಾರಿಗೆ ೧೯೯೨ ರಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿತ್ತು.
2.5 ಲೀಟರ್ ಎಂಜಿನ್ ಹೊಂದಿರುವ ಈ ಕಾರು ಐದು ಸಿಲಿಂಡರ್ ಉಳ್ಳ ಟರ್ಬೋ ಚಾರ್ಜ್ಡ್ ಡೀಸೆಲ್ ಎಂಜಿನ್ ಇದಾಗಿದೆ. ಈ ಎಂಜಿನ್ ಸಹಾಯದಿಂದ ಈ ಲಾಂಡ್ ರೋವರ್ ಡಿಫೆಂಡರ್ 122 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ವಿಡಿಯೋದಲ್ಲಿ ಕಾಣಿಸುತ್ತಿರುವ ಕಾರು 2012 ರ ಮಾಡೆಲ್ ಆಗಿದೆ.

ಇನ್ನು ಸದ್ಯ ಮಾರುಕಟ್ಟೆಯಲ್ಲಿರುವ ಡಿಫೆಂಡರ್ ಬಗ್ಗೆ ಮಾತನಾಡುವುದಾದರೆ, ಪ್ರಸ್ತುತ ಹೊಸ ಲ್ಯಾಂಡ್ ರೋವರ್ 90, 110, ಮತ್ತು 130 ಎಂಬ ಮೂರು ಪ್ರಮುಖ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಇವುಗಳಲ್ಲಿ 130 ವೇರಿಯೆಂಟ್ ಬ್ರ್ಯಾಂಡ್‌ನಿಂದ ಹೊರಬಂದ ಹೊಸ ಬಿಡುಗಡೆಯಾಗಿದ್ದು, ಇದು 110 ಮಾದರಿಯಂತೆಯೇ 5 ಡೋರ್ ಆವೃತ್ತಿಯಾಗಿದೆ. ಇದು ಏಳು ಜನರು ಪ್ರಯಾಣಿಸುವ ಆಸನ ವಿನ್ಯಾಸವನ್ನು ಒಳಗೊಂಡಿದೆ. ಇವುಗಳ ಬೆಲೆಯು 93 ಲಕ್ಷದಿಂದ ಆರಂಭವಾಗಿ 2.30 ಕೋಟಿ ರೂ.ವರೆಗೆ ಹೋಗುತ್ತದೆ.
ಮೂರರಲ್ಲಿ ಎರಡು ಪೆಟ್ರೋಲ್, ಒಂದು ಡೀಸೆಲ್ ಎಂಜಿನ್ ಆಯ್ಕೆಯಿದೆ. ಟರ್ಬೊ ಪೆಟ್ರೋಲ್ ಎಂಜಿನ್‌ಗಳು 2.0-ಲೀಟರ್ 4-ಸಿಲಿಂಡರ್ ಘಟಕವನ್ನು ಒಳಗೊಂಡಿದ್ದು, 300 bhp ಪವರ್ ಮತ್ತು 400 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. 3.0-ಲೀಟರ್ 6-ಸಿಲಿಂಡರ್ ಸಹ ಕೊಡುಗೆಯಲ್ಲಿದ್ದು, ಇದು ಗರಿಷ್ಠ 400 bhp ಮತ್ತು 550 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಅತ್ಯಂತ ಜನಪ್ರಿಯ ಆಯ್ಕೆಗಳಲ್ಲಿ ಒಂದಾಗಿರುವ ಟರ್ಬೊ ಡೀಸೆಲ್ ಎಂಜಿನ್ 3.0-ಲೀಟರ್ ಇನ್‌ಲೈನ್ 6-ಸಿಲಿಂಡರ್ ಯುನಿಟ್ ಆಗಿದ್ದು, ಇದು 300 bhp ಮತ್ತು 650 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇಂತಹ ಅದ್ಬುತ ಕಾರನ್ನು ತೀರಾ ಇತ್ತೀಚೆಗೆ, ಪ್ರಸಿದ್ಧ ಬಾಲಿವುಡ್ ನಟಿ ಖರೀದಿಸಿದ್ದಾರೆ. ಅವರ ಹೊಸ ಡಿಫೆಂಡರ್‌ನ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications