ಅಂಬಾನಿ, ಅದಾನಿಗೂ ಇಲ್ಲ... ದೇಶದ ಅತ್ಯಂತ ದುಬಾರಿ ಕಾರಿನ ಒಡೆಯ ಈ ಕರ್ನಾಟಕದ ಉದ್ಯಮಿ!

ಭಾರತದಲ್ಲಿ ನಮಗೆ ತಿಳಿದಿರುವ ಅತ್ಯಂತ ಶ್ರೀಮಂತರೆಂದರೆ ಮುಖೇಶ್ ಅಂಬಾನಿ, ಗೌತನ್ ಅದಾನಿ, ಶಿವ್ ನಾದರ್ ಹೀಗೆ ಹಲವರಿದ್ದಾರೆ. ಇವರಲ್ಲೂ ಅತ್ಯಂತ ದುಬಾರಿ ಕಾರುಗಳನ್ನು ಇಟ್ಟವರು ಮುಖೇಶ್ ಅಂಬಾನಿ, ಗೌತಮ್ ಸಿಂಘಾನಿಯಾ ಸೇರಿದಂತೆ ಹಲವರು ಸೆಲಬ್ರಿಟಿಗಳಿದ್ದಾರೆ. ಇವರೆಲ್ಲರನ್ನೂ ಮೀರಿಸುವ ದುಬಾರಿ ಕಾರನ್ನು ನಮ್ಮ ಕರ್ನಾಟಕದ ಉದ್ಯಮಿಯೊಬ್ಬರು ಹೊಂದಿದ್ದಾರೆ.

ಬರೋಬ್ಬರಿ 14 ಕೋಟಿಗೂ ಹೆಚ್ಚು ಬೆಲೆಯ ಬೆಂಟ್ಲಿ ಮುಲ್ಸಾನ್ನೆ EWB ಸೆಂಟಿನರಿ ಎಡಿಷನ್ ಸದ್ಯ ಭಾರತದ ಅತ್ಯಂತ ದುಬಾರಿ ಕಾರು. ಈ ವರ್ಷದ ಆರಂಭದಲ್ಲಿ ಬೆಂಗಳೂರಿನಲ್ಲಿ ಕಾಣಿಸಿಕೊಂಡ ಈ ಕಾರಿನ ಬೆಲೆಯು ರೂ. 14.5 ಕೋಟಿ, ಇಷ್ಟು ಬೆಲೆಯ ಕಾರು ದೇಶದ ಇನ್ಯಾರ ಬಳಿಯೂ ಇಲ್ಲ. ಈ ಸೂಪರ್ ದುಬಾರಿ ಸೀಮಿತ ಆವೃತ್ತಿಯ ಬೆಂಟ್ಲಿ ಮಾಲೀಕರು ಬ್ರಿಟಿಷ್ ಬಯೋಲಾಜಿಕಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್ ರೆಡ್ಡಿ.

most-expensive-car-ownes-karnataka-businessman-vs-reddy

ಬೆಂಟ್ಲಿ ಮುಲ್ಸಾನ್ನೆ EWB ಸೆಂಟಿನರಿ ಆವೃತ್ತಿಯು ಗೌತಮ್ ಸಿಂಘಾನಿಯಾ ಅವರ ಫೆರಾರಿ ಮತ್ತು ಮುಖೇಶ್ ಅಂಬಾನಿಯವರ ರೋಲ್ಸ್ ರಾಯ್ಸ್‌ಗಿಂತ ಹೆಚ್ಚು ದುಬಾರಿಯಾಗಿದೆ. ವಿ.ಎಸ್ ರೆಡ್ಡಿ ಒಡೆತನದ ಬೆಂಟ್ಲಿ ಮುಲ್ಸಾನ್ನೆ EWB ಸೆಂಟಿನರಿ ಆವೃತ್ತಿಯು ರೋಸ್ ಗೋಲ್ಡ್ ಬಣ್ಣದಲ್ಲಿದ್ದು, 21-ಇಂಚಿನ ಪಾಲಿಶ್ಡ್ ಅಲಾಯ್ ವೀಲ್‌ಗಳು, ಲೆದರ್ ಅಪ್ಹೋಲ್ಸ್ಟರಿ, ಕ್ವಾರ್ಟರ್ ವ್ಯಾನಿಟಿ ಮಿರರ್ ಮತ್ತು ಕುರಿಮರಿ ಉಣ್ಣೆ (Lamb's wool)ಯಿಂದ ಮಾಡಿದ ರಗ್‌ಗಳನ್ನು ಹೊಂದಿದೆ.

ವಿ.ಎಸ್ ರೆಡ್ಡಿ ಅವರು ಆಟೋಮೋಟಿವ್ ಉತ್ಸಾಹಿ ಮತ್ತು ಇವೊ ಇಂಡಿಯಾಗೆ ನೀಡಿದ ಸಂದರ್ಶನವೊಂದರಲ್ಲಿ ದೇಶದ ಎಲ್ಲಾ ಬ್ರಾಂಡ್‌ಗಳನ್ನು ಸಂಗ್ರಹಿಸುವುದು ಅವರ ಬಾಲ್ಯದ ಕನಸು ಎಂದು ಹೇಳಿದ್ದರು. ಇದೀಗ ದೇಶದ ಅತ್ಯಂತ ದುಬಾರಿ ಬೆಂಟ್ಲಿ ಮುಲ್ಸಾನ್ನೆ EWB ಸೆಂಟಿನರಿ ಅಪರೂಪದ ಬೆಂಟ್ಲಿಯನ್ನು ಕಾರುಗಳ ತಾಜ್ ಮಹಲ್ ಎಂದು ವಿಎಸ್ ರೆಡ್ಡಿ ಕರೆದಿದ್ದಾರೆ.

most-expensive-car-ownes-karnataka-businessman-vs-reddy

'ದಿ ಪ್ರೊಟೀನ್ ಮ್ಯಾನ್ ಆಫ್ ಇಂಡಿಯಾ': ಪ್ರೊಟೀನ್ ಮ್ಯಾನ್ ಆಫ್ ಇಂಡಿಯಾ ಎಂದು ಕರೆಯಲ್ಪಡುವ ವಿಎಸ್ ರೆಡ್ಡಿ ಅವರು ಪ್ರಮುಖ ನ್ಯೂಟ್ರಾಸ್ಯುಟಿಕಲ್ ಕಂಪನಿಗಳಲ್ಲಿ ಒಂದಾದ ಬ್ರಿಟಿಷ್ ಬಯೋಲಾಜಿಕಲ್ಸ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. 52 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿರುವ ವಿ.ಎಸ್ ರೆಡ್ಡಿ ಅವರು ಆಟೋಮೋಟಿವ್ ಉತ್ಸಾಹಿಯಾಗಿದ್ದಾರೆ.

ಕರ್ನಾಟಕ ಮೂಲದ ವಿ.ಎಸ್ ರೆಡ್ಡಿ ಅವರು ಬ್ರಿಟಿಷ್ ಬಯೋಲಾಜಿಕಲ್ಸ್ ಅನ್ನು ವಿವಿಧ ವಯೋಮಾನದ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಪೋಷಣೆಯನ್ನು ಒದಗಿಸುವ ಉತ್ಪನ್ನಗಳನ್ನು ನೀಡುವ ಉದ್ದೇಶದಿಂದ ಪ್ರಾರಂಭಿಸಿದರು. ಬ್ರಿಟಿಷ್ ಬಯೋಲಾಜಿಕಲ್ಸ್ ವೆಬ್‌ಸೈಟ್ ಪ್ರಕಾರ, ಇದು ಸಂಶೋಧನೆ-ಆಧಾರಿತ ಹೆಲ್ತ್‌ಕೇರ್ ನ್ಯೂಟ್ರಾಸ್ಯುಟಿಕಲ್ ಕಂಪನಿಯಾಗಿದ್ದು, ಇದನ್ನು 'ಪ್ರೋಟೀನ್ ಜನರು' (Protein people) ಎಂದು ಕರೆಯಲಾಗುತ್ತದೆ.

ಅಂಬಾನಿ ಕಾರುಗಳು: ಬೆಂಟ್ಲಿ ಬೆಂಟೈಗಾ ರೂ.4.10 ಕೋಟಿ, ರೇಂಜ್ ರೋವರ್ ಆಟೊಬಯೋಗ್ರಫಿ ರೂ.4.17 ಕೋಟಿ, ಲ್ಯಾಂಬೋರ್ಗಿನಿ ಉರುಸ್ ರೂ.4.22 ಕೋಟಿ, ಫೆರಾರಿ SF90 ರೂ.7.50 ಕೋಟಿ, ಮರ್ಸಿಡಿಸ್-ಬೆಂಜ್ S600 Guard ರೂ.10 ಕೋಟಿ, ರೋಲ್ಸ್ ರಾಯ್ಸ್ ಫ್ಯಾಂಟಮ್ EWB ರೂ.11.35 ಕೋಟಿ, ಮರ್ಸಿಡಿಸ್-ಮೇಬ್ಯಾಕ್ S680 Guard ರೂ.12 ಕೋಟಿ, ರೋಲ್ಸ್ ರಾಯ್ಸ್ ಕಲ್ಲಿನನ್ ಬ್ಲಾಕ್ ಬ್ಯಾಡ್ಜ್ ರೂ.13 ಕೋಟಿ ಬೆಲೆಯ ದುಬಾರಿ ಕಾರುಗಳಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, November 23, 2023, 13:16 [IST]
English summary
Most expensive car ownes karnataka businessman vs reddy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+