Most Expensive Number Plate: ವಿಶ್ವದ ಅತ್ಯಂತ ದುಬಾರಿ ನಂಬರ್ ಪ್ಲೇಟ್ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ
ಪ್ರತಿಯೊಬ್ಬರಿಗೂ ಸ್ವಂತ ಒಂದು ಕಾರು ಖರೀದಿಸಬೇಕೆಂಬ ಕನಸು ಹೊಂದಿರುತ್ತಾರೆ. ಹೊಸ ಕಾರು ಖರೀದಿ ಮಾಡಲು ಹಣವನ್ನು ಕೂಡಿ ಇಡುತ್ತಾರೆ. ಕೆಲವರು ಕಾರ್ ಲೋನ್ ಮಾಡಿ ಹೊಸ ಕಾರನ್ನು ಖರೀದಿಸುತ್ತಾರೆ. ಜನರು ಕಾರಿನ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ. ಹೆಚ್ಚಿನ ಜನರು ಕಾರಿನ ನಂಬರ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ.
ಕೆಲವು ಶೀಮಂತ ಉದ್ಯಮಿಗಳು ಮತ್ತು ಸೆಲಬ್ರಿಟಿಗಳು ಕಾರಿನ ಫ್ಯಾನ್ಸಿ ನಂಬರ್ ಬಗ್ಗೆ ಹೆಚ್ಚಿನ ಕ್ರೇಜ್ ಹೊಂದಿರುತ್ತಾರೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಕೋಟಿಗಟ್ಟಲೆ ಹಣ ಖರ್ಚು ಮಾಡುವರು ಕೂಡ ಇದ್ದಾರೆ. ಇತ್ತೀಚೆಗೆ 'ಮೋಸ್ಟ್ ನೋಬಲ್ ನಂಬರ್ಸ್' ಚಾರಿಟಿ ಹರಾಜಿನಲ್ಲಿ ವಿಐಪಿ ಕಾರ್ ನಂಬರ್ ಪ್ಲೇಟ್ 'P 7' ದಾಖಲೆಯ 55 ಮಿಲಿಯನ್ ದಿರ್ಹಮ್‌ಗಳಿಗೆ ಮಾರಾಟವಾಗಿದೆ.

ಭಾರತದ ಕರೆನ್ಸಿಯಲ್ಲಿ ಇದು ಅಂದಾಜು ರೂ.122.6 ಕೋಟಿಯಾಗಿದೆ, ನಂಬರ್ ಪ್ಲೇಟ್ 'P 7' ವಿಶ್ವದ ಅತ್ಯಂತ ದುಬಾರಿ ನಂಬರ್ ಪ್ಲೇಟ್ ಎಂಬ ಗಿನ್ನೆಸ್ ದಾಖಲೆ ನಿರ್ಮಿಸಿದೆ. ನಂಬರ್ ಪ್ಲೇಟ್ ಅನ್ನು ಖರೀದಿಸುವವರು ಅನಾಮಧೇಯರಾಗಿದ್ದಾರೆ ಆದರೆ ಹರಾಜಿನಿಂದ ಬರುವ ಆದಾಯವು ನೇರವಾಗಿ "1 ಬಿಲಿಯನ್ ಮೀಲ್ಸ್ ಎಂಡೋಮೆಂಟ್" ಅಭಿಯಾನಕ್ಕೆ ಹಣ ಹೋಗುತ್ತದೆ.
ಈ ಅಭಿಯಾನವು ಅತಿದೊಡ್ಡ ರಂಜಾನ್ಗೆ ಆಹಾರ ನೆರವು ದತ್ತಿ ನಿಧಿಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿದ್ದಾರೆ. ಯುಎಇ ಉಪಾಧ್ಯಕ್ಷ ಮತ್ತು ಪ್ರಧಾನ ಮಂತ್ರಿ ಮತ್ತು ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಜಾಗತಿಕ ಹಸಿವನ್ನು ನಿವಾರಿಸುವ ಪ್ರಯತ್ನದ ಭಾಗವಾಗಿ ಇದನ್ನು ಪ್ರಾರಂಭಿಸಿದ್ದಾರೆ. ನಂಬರ್ ಪ್ಲೇಟ್ ಗಾಗಿ ಅಷ್ಟು ದೊಡ್ಡ ಹಣ್ಣ ವ್ಯತ್ತ ಮಾಡುತ್ತಿದ್ದಾರೆ ಎಂದು ಟೇಕಿಸುವರು ಈ ಬಗ್ಗೆಯು ಗಮನದಲ್ಲಿಟ್ಟುಕೊಳ್ಳಬೇಕು.
ಅಷ್ಟು ದೊಡ್ಡ ಮೊತ್ತ ಹಣ ಉತ್ತಮ ಉದ್ದೇಶಗಾಗಿ ಬಳಕೆ ಮಾಡುತ್ತಿದ್ದಾರೆ. ಇನ್ನು ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಗ್ಲೋಬಲ್ ಇನಿಶಿಯೇಟಿವ್ಸ್ ಸಹಯೋಗದೊಂದಿಗೆ ಈ ಹರಾಜನ್ನು ಆಯೋಜಿಸಿದೆ. AA19, AA22, AA80, O71, X36, W78, H31, Z37, J57 ಮತ್ತು N41 ನಂತಹ 10 ಎರಡು-ಅಂಕಿಯ ಸಂಖ್ಯೆಗಳನ್ನು ಒಳಗೊಂಡಂತೆ ವಿವಿಧ ಇತರ ನಂಬರ್ ಪ್ಲೇಟ್‌ಗಳು ಹರಾಜಿನ ಭಾಗವಾಗಿತ್ತು.
ಇತರೆ ವಿಶೇಷ ಸಂಖ್ಯೆಗಳ ನಂಬರ್ ಪ್ಲೇಟ್ ಗಳು Y900, Q22222 ಮತ್ತು Y6666 ಒಳಗೊಂಡಿತ್ತು. AA19 ಸಂಖ್ಯೆಯು 4.9 ಮಿಲಿಯನ್ ದಿರ್ಹಮ್‌ಗಳಿಗೆ ಮಾರಾಟವಾಯಿತು ಆದರೆ O 71 150 ಮಿಲಿಯನ್ ದಿರ್ಹಮ್‌ಗಳಿಗೆ ಮತ್ತು Q22222 975,000 ದಿರ್ಹಮ್‌ಗಳಿಗೆ ಮಾರಾಟವಾಯಿತು. 2008 ರಲ್ಲಿ ಅಬುಧಾಬಿಯ ಕಾರ್ ನಂಬರ್ 1 ಪ್ಲೇಟ್ 52.2 ಮಿಲಿಯನ್ ದಿರ್ಹಮ್‌ಗಳಿಗೆ (ಅಂದಾಜು ₹ 116.3 ಕೋಟಿ) ಮಾರಾಟವಾದಾಗ ನಿರ್ಮಿಸಿದ ದಾಖಲೆಯನ್ನು ಬ್ರೇಕ್ ಮಾಡಿದೆ.
'P 7' ಬಿಡ್ಡಿಂಗ್ ಈಗ ವಿಶ್ವದ ಅತ್ಯಂತ ದುಬಾರಿ ನಂಬರ್ ಪ್ಲೇಟ್ ಆಗಿದೆ. ಟೆಲಿಗ್ರಾಮ್ ಸಂಸ್ಥಾಪಕ ಪಾವೆಲ್ ಡುರೊವ್ ಸಹ ಬಿಡ್ಡಿಂಗ್‌ನಲ್ಲಿ ಭಾಗವಹಿಸುವುದರೊಂದಿಗೆ ನಂಬರ್ ಪ್ಲೇಟ್‌ಗಾಗಿ ಬಿಡ್‌ಗಳು 15 ಮಿಲಿಯನ್ ದಿರ್ಹಮ್‌ಗಳಲ್ಲಿ ಪ್ರಾರಂಭವಾಯಿತು.ದುಬೈನಲ್ಲಿ ವಿಶೇಷ ಮೊಬೈಲ್ ಸಂಖ್ಯೆಗಳಿಗಾಗಿ ಮೋಸ್ಟ್ ನೋಬಲ್ ಸಂಖ್ಯೆಗಳ ಚಾರಿಟಿ ಹರಾಜು ಕೂಡ ನಡೆಯಿತು ಮತ್ತು ಒಟ್ಟು 53 ಮಿಲಿಯನ್ ದಿರ್ಹಮ್‌ಗಳನ್ನು ಗಳಿಸಿತು. ಪ್ಲಾಟಿನಂ ಮೊಬೈಲ್ ಸಂಖ್ಯೆ (971583333333) AED 2 ಮಿಲಿಯನ್‌ಗೆ ಮಾರಾಟವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್ ಮತ್ತು ಶೇರ್ ಮಾಡುವುದನ್ನು ಮರೆಯದಿರಿ.


Click it and Unblock the Notifications