ವೃದ್ದರಿಗೂ ಫುಲ್ ಕ್ರೇಜ್: ಒಂದೇ ಬಣ್ಣದ ಮಾರುತಿ ಜಿಮ್ನಿ ಖರೀದಿಸಿದ 82 ವರ್ಷದ ತಾಯಿ, ಮಗ
ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜಿಮ್ನಿ ಎಸ್‍ಯುವಿಯು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿ ಹೊಸ ಕ್ರಾಂತಿಯನ್ನು ಸೃಷ್ಟಿಸಿತು. ಇದೀಗ ಜನಪ್ರಿಯ ಜಿಮ್ನಿ ಎಸ್‍ಯುವಿಗೆ ಭಾರತೀಯ ಮಾರುಕಟ್ಟೆಯಲ್ಲೂ ಕೂಡ ಬಾರೀ ಬೇಡಿಕೆಯೊಂದಿಗೆ ಹೊಸ ಕ್ರಾಂತಿ ಮಾಡುತ್ತಿದೆ. ಒಂದು ಕಾಲದ ಆಫ್-ರೋಡ್ ಕಿಂಗ್ ಆಗಿದ್ದ ಜಿಪ್ಸಿಯ ಉತ್ತರಾಧಿಕಾರಿಯಾಗಿ ಬಂದ ಜಿಮ್ನಿ ಮೇಲೂ ಅಷ್ಟೇ ಪ್ರೀತಿ ತೋರಿಸುತ್ತಿದೆ.
ಹರ್ಮಿತ್ ಅಹುಜಾ ಎಂಬ ವ್ಯಕ್ತಿಯೊಬ್ಬರು ತಮ್ಮ 83 ವರ್ಷದ ತಾಯಿ ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ಆಟೋಮ್ಯಾಟಿಕ್ ಎಸ್‍ಯುವಿಯನ್ನು ಖರೀದಿಸಿದ್ದಾರೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸಖತ್ ವೈರಲ್ ಆಗಿದೆ. ತಮ್ಮ ತಾಯಿ ಈ ಜಿಮ್ನಿ ಎಸ್‍ಯುವಿಯನ್ನು ಡೆಲಿವರಿ ತೆಗೆದುಕೊಳ್ಳುತ್ತಿರುವ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.

ವೀಡೀಯೊದಲ್ಲಿ ತಮ್ಮ ತಾಯಿಗೆ 83 ವರ್ಷ ವಯಸ್ಸಾಗುತ್ತಿದೆ ಎಂದು ಹರ್ಮಿತ್ ಹೇಳುತ್ತಾರೆ. ತನ್ನ ತಾಯಿ ಐದು-ಡೋರಿನ ಜಿಮ್ನಿಯನ್ನು ಹೊಂದುವ ಅತ್ಯಂತ ಹಿರಿಯ ಗ್ರಾಹಕರಾಗಿರಬೇಕು ಎಂದು ನಾವು ಅಂದುಕೊಳ್ಳುತ್ತದೆ ಎಂದು ಹೇಳಿದರು. ಹರ್ಮಿತ್ ಅವರು ಸ್ವಂತ ಜಿಮ್ನಿಯನ್ನು ಹೊಂದಿದ್ದಾರೆ. ಅವರು ಮಾರುತಿ ಸುಜುಕಿ ಜಿಮ್ನಿಯ ಮ್ಯಾನುವಲ್ ರೂಪಾಂತರವನ್ನು ಹೊಂದಿದ್ದಾರೆ.
ಎರಡೂ ಮಾದರಿಗಳು ಒಂದೇ ಬಣ್ಣವನ್ನು ಹೊಂದಿದ್ದಾರೆ. ಜಿಮ್ನಿಯ ಎಸ್‍ಯುವಿಯನ್ನು ಅವರ ತಾಯಿ ಡ್ರೈವ್ ಮಾಡುವುದನ್ನು ತೋರಿಸಿದ್ದಾರೆ. ಮಾರುತಿ ಸುಜುಕಿ ಜಿಮ್ನಿಯನ್ನು ಪ್ರತಿಸ್ಪರ್ಧಿಗಳಾದ ಥಾರ್ ಮತ್ತು ಗೂರ್ಖಾಗೆ ಹೋಲಿಸಿದರೆ ಡ್ರೈವ್ ಮಾಡಲು ಹೆಚ್ಚು ಸುಲಭವಾಗಿದೆ. ಜಿಮ್ನಿ ಕಾಂಪ್ಯಾಕ್ಟ್ ಆಯಾಮಗಳನ್ನು ಹೊಂದಿದೆ, ಇದು ಗರಿಷ್ಠ ಟ್ರಾಫಿಕ್ ಸಮಯದಲ್ಲಿ ಚಾಲನೆ ಮಾಡಲು ಸುಲಭ. ರಸ್ತೆಯಲ್ಲಿ ಕಡಿಮೆ ಜಾಗ ಸಾಕಾಗುತ್ತದೆ.

ಅದರ ಹೊರತಾಗಿ, ಜಿಮ್ನಿಯು ಕುಶಲತೆಯಿಂದ ಕಂಟ್ರೋಲ್ ಮಾಡಲು ತುಂಬಾ ಸುಲಭವಾಗಿದೆ. ಏಕೆಂದರೆ ಇದು ತೂಕದಲ್ಲಿ ಹೆಚ್ಚು ಹಗುರವಾಗಿರುತ್ತದೆ. ಅದಕ್ಕಾಗಿಯೇ ಥಾರ್‌ಗೆ ಹೋಲಿಸಿದರೆ ಜಿಮ್ನಿ ದೈನಂದಿನ ಬಳಕೆ ಮತ್ತು ಪ್ರಯಾಣಕ್ಕೆ ಹೆಚ್ಚು ಪ್ರಾಯೋಗಿಕವಾಗಿದೆ. ಮಾರುತಿ ಸುಜುಕಿ ಜಿಮ್ನಿ 5 ಡೋರ್ ಆಫ್-ರೋಡ್ ಎಸ್‌ಯುವಿಯಾಗಿರುವುದರಿಂದ ಅದಕ್ಕೆ ತಕ್ಕಂತೆಯೇ ವಿನ್ಯಾಸವನ್ನು ಹೊಂದಿದೆ .
ಈ ಎಸ್‍ಯುವಿಯಲ್ಲಿ ಫ್ಲಾಟ್ ಕ್ಲಾಮ್‌ಶೆಲ್ ಬಾನೆಟ್, ವಾಷರ್‌ಗಳೊಂದಿಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಅಲಾಯ್ ವೀಲ್ಸ್, 195/80 ಅಳತೆಯ ಟೈಯರ್ಸ್ ಪಡೆದಿದೆ. ಜೊತೆಗೆ ಇದರ ಫ್ರಂಟ್ ಲುಕ್ ನೋಡುಗರನ್ನು ಸೆಳೆಯುತ್ತದೆ. ರೇರ್ ಆಕರ್ಷವಾಗಿದ್ದು, ಕ್ಯಾಬಿನ್ ಒಳಭಾಗವು ಅತ್ಯುತ್ತಮವಾಗಿದೆ. 4WD (ಫೋರ್ ವೀಲ್ಸ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ.
ಜಿಮ್ನಿ 5 ಡೋರ್ ಎಸ್‍ಯುವಿಯ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು ಐಡಲ್ ಸ್ಟಾರ್ಟ್/ಸ್ಟಾಪ್ ಬಟನ್ ವೈಶಿಷ್ಟ್ಯದೊಂದಿಗೆ 1.5 ಲೀಟರ್ ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 6000 rpmನಲ್ಲಿ 104.8 ಪಿಎಸ್ ಗರಿಷ್ಠ ಪವರ್ ಹಾಗೂ 4000 rpmನಲ್ಲಿ 134.2 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಮಾರುತಿ ಸುಜುಕಿ ಜಿಮ್ನಿ 5 ಡೋರ್ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ 9 ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ+ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರಿ ಹಾಗೂ ಕಿವಿಗೆ ಕೇಳಲು ಹಿತವಾಗಿರುವ ಸೌಂಡ್ ಸಿಸ್ಟಮ್ ಅನ್ನು ಹೊಂದಿದೆ. ಇದು ಆಫ್-ರೋಡ್ ಪ್ರಿಯರಿಗೆ ಖಂಡಿತ ಸೆಳೆಯುತ್ತದೆ.


Click it and Unblock the Notifications