MotoGP 2023: ಜಿಯೋಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಿ.. ವಿಶ್ವದ ಅತಿದೊಡ್ಡ ಮೋಟಾರ್‌ಸೈಕಲ್ ರೇಸ್‌

'MotoGP ವಿಶ್ವ ಚಾಂಪಿಯನ್‌ಶಿಪ್' ಪ್ರತಿಷ್ಠಿತ ಮೋಟಾರ್‌ಸೈಕಲ್ ರೇಸ್‌ಗಳಲ್ಲಿ ಒಂದಾಗಿದೆ. ಇದರ ಐತಿಹಾಸಿಕ ಕ್ಷಣಕ್ಕೆ ನಮ್ಮ ಭಾರತವು ಸಾಕ್ಷಿಯಾಗಲಿದ್ದು, ಸೆಪ್ಟೆಂಬರ್‌ನಲ್ಲಿ ರೇಸ್ ನಡೆಯಲಿದೆ. ಪ್ರಪಂಚದ ಫೇಮಸ್ ರೈಡರ್‌ಗಳು ಭಾಗವಹಿಸುವ ಈ ಸ್ಪರ್ಧೆಯು 18ಕ್ಕೂ ಹೆಚ್ಚು ದೇಶಗಳಲ್ಲಿ ನಡೆಯಲಿದೆ. ಆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ರೆಡಿ ಮಾಡಿರುವ ವಿಶ್ವದರ್ಜೆಯ ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ಭಾರೀ ವೇಗದ ಮೋಟಾರ್‌ಸೈಕಲ್‌ಗಳನ್ನು ನುರಿತ ರೈಡರ್‌ಗಳು ಈ ರೇಸ್‌ನಲ್ಲಿ
ಓಡಿಸಲಿದ್ದಾರೆ. ಇದೊಂದು ದೊಡ್ಡ ಮಟ್ಟದಲ್ಲಿ ನಡೆಯುವ ಚಾಂಪಿಯನ್‌ಶಿಪ್ ಆಗಿದ್ದು, 2023ರಲ್ಲಿಯೇ ಬರೋಬ್ಬರಿ 21 MotoGP ರೇಸ್‌ಗಳು ಜರುಗಲಿವೆ. ಭಾರತದಲ್ಲಿ 14ನೇ ಸುತ್ತಿನ ಸ್ಪರ್ಧೆ, ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್ ನಲ್ಲಿ ಅದ್ದೂರಿಯಾಗಿ ನಡೆಯಲಿದೆ.

MotoGP 2023: ಜಿಯೋಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಿ.. ವಿಶ್ವದ ಅತಿದೊಡ್ಡ ಮೋಟಾರ್‌ಸೈಕಲ್ ರೇಸ್‌

ದೇಶದಲ್ಲಿ ನಡೆಯುವ MotoGP ರೇಸ್‌ಗಳಲ್ಲಿ 11 ತಂಡಗಳ 22 ರೈಡರ್‌ಗಳು ಭಾಗವಹಿಸಲಿದ್ದು, ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಇದರೊಟ್ಟಿಗೆ Moto2 ಹಾಗೂ Moto3 ರೇಸ್ ಜರುಗಲಿದ್ದು, 40 ತಂಡಗಳ 80 ರೈಡರ್‌ಗಳು ಪಾಲ್ಗೊಳ್ಳಲಿದ್ದಾರೆ. ಇದನೆಲ್ಲ ಗಮನಿಸಿದಾಗ ಎರಡು ದಿನವಂತೂ (ಸೆಪ್ಟೆಂಬರ್‌ 22-24) ಮೋಟಾರ್‌ಸೈಕಲ್ ಆಸಕ್ತರಿಗೆ ಹಬ್ಬವೇ ಸರಿ ಎಂದು ಬಣ್ಣಿಸಲಾಗಿದ್ದು, ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ರೇಸ್ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.

ಭಾರತದಲ್ಲಿ ಈ ರೇಸ್ ಪಂದ್ಯಗಳು ಮಧ್ಯಾಹ್ನ 2.30 ರಿಂದ ರಾತ್ರಿ 8 ರವರೆಗೆ ನಡೆಯಲಿದೆ. 2023ರ ಈ MotoGPನಲ್ಲಿ ಭಾಗವಹಿಸಲು ಸಜ್ಜಾಗಿರುವ ತಂಡಗಳು ಯಾವುದೆಂದು ನೋಡುವುದಾದರೆ, ಡುಕಾಟಿ, ಕೆಟಿಎಂ, ಅಪ್ರಿಲಿಯಾ (Aprilia), ಪ್ರೈಮ ಪ್ರಮಾಕ್ ರೇಸಿಂಗ್ (Prima Pramac Racing), ಯಮಹಾ, Cressini Racing, Mooney VR46, LCR ಹೋಂಡಾ, RNF MotoGP ಮತ್ತು ಕ್ಯಾಸ್ಕೇಡ್ಸ್ ಟೆಕ್3 ಪ್ರಮುಖವಾಗಿವೆ.

MotoGP 2023: ಜಿಯೋಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಿ.. ವಿಶ್ವದ ಅತಿದೊಡ್ಡ ಮೋಟಾರ್‌ಸೈಕಲ್ ರೇಸ್‌

MotoGP 2023 ಇಂದಿನಿಂದ ಆದ್ದೂರಿಯಾಗಿ ಆರಂಭವಾಗುತ್ತಿದ್ದು, ಪೋರ್ಚುಗಲ್‌ನ ಅಲ್ಗಾರ್ವ್ ಇಂಟರ್ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ಆಯೋಜಿಸಲಾಗಿದೆ. ಇಂದು (ಮಾರ್ಚ್ 25) ಸಂಜೆ 4:20ಕ್ಕೆ ಕ್ವಾಲಿಪೈ ಮ್ಯಾಚ್, ರಾತ್ರಿ 8:30ಕ್ಕೆ ಸ್ಪ್ರಿಂಟ್ ರೇಸ್, ಭಾನುವಾರ (ಮಾರ್ಚ್ 26) ಸಂಜೆ 6:30ಕ್ಕೆ ಅಂತಿಮ ರೇಸ್ ನಡೆಯಲಿದೆ. ನೀವು ಸ್ಪರ್ಧೆಯನ್ನು ವೀಕ್ಷಿಸುವ ಸ್ಥಳಕ್ಕೆ ತೆರಳುವ ಅಗತ್ಯವಿಲ್ಲ ಅದನ್ನು ಮನೆಯಲ್ಲಿಯೇ ಕುಳಿತು ವೀಕ್ಷಿಸಬಹುದು.

ಭಾರತದ ವೀಕ್ಷಿಕರು, ಜಿಯೋಸಿನಿಮಾ (JioCinema), ಸ್ಪೋರ್ಟ್ಸ್18 (Sports18)ನಲ್ಲಿ MotoGP ರೇಸ್ ನ ನೇರ ಪ್ರಸಾರ ನೋಡಬಹುದು. ಶುಕ್ರವಾರ ಮತ್ತು ಶನಿವಾರದಂದು ನಡೆಯುವ ಪ್ರಾಕ್ಟಿಸ್ ಸೆಷನ್, ಕ್ವಾಲಿಪೈ ಮತ್ತು ಸ್ಪ್ರಿಂಟ್ ರೇಸ್, ಭಾನುವಾರದಂದು ನಡೆಯುವ ಅಂತಿಮ ರೇಸ್ ಅನ್ನು ಕಾಣ್ತುಂಬಿಕೊಳ್ಳಬಹುದು. ಫೇರ್‌ಸ್ಟ್ರೀಟ್ ಸ್ಪೋರ್ಟ್ಸ್‌ನ ಸಿಒಒ & ಪ್ರಸಾರದ ಹಕ್ಕು ಪಡೆದಿರುವ ಪುಷ್ಕರ್ ನಾಥ್ ಶ್ರೀವಾಸ್ತವ ಮಾತನಾಡಿ, 'ಭಾರತದಲ್ಲಿ ರೋಮಾಂಚನಕಾರಿಯಾಗಿರುವ MotoGP ರೇಸ್ ಪ್ರಸಾರ ಮಾಡಲು Viacom18 ಉತ್ತಮ ಸಂಸ್ಥೆಯಾಗಿದೆ' ಎಂದು ಹೇಳಿದ್ದಾರೆ.

MotoGP 2023: ಜಿಯೋಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಿ.. ವಿಶ್ವದ ಅತಿದೊಡ್ಡ ಮೋಟಾರ್‌ಸೈಕಲ್ ರೇಸ್‌

ಸದ್ಯಕ್ಕೆ, ಜಿಯೋಸಿನಿಮಾ (JioCinema) ಉಚಿತವಾಗಿದ್ದು, ಇದನ್ನು ಗೂಗಲ್ ಪ್ಲೇ ಸ್ಟೋರ್ (Google Play Store) ಅಥವಾ ಆಪಲ್ ಆಪ್ ಸ್ಟೋರ್ (Apple App Store)ನಿಂದ ಡೌನ್‌ಲೋಡ್ ಮಾಡಬಹುದು. ಅದಕ್ಕಾಗಿ ಪ್ರತೇಕ ಜಿಯೋ ಸಿಮ್ ಅಗತ್ಯವಿಲ್ಲ. OS ಆವೃತ್ತಿ 7.0 ಮೇಲ್ಪಟ್ಟ iOS ಸ್ಮಾರ್ಟ್ ಫೋನ್‌ಗಳು, OS ಆವೃತ್ತಿ 4.3 ಮೇಲ್ಪಟ್ಟ Android ಸ್ಮಾರ್ಟ್ ಫೋನ್‌ಗಳು ಹಾಗೂ OS ಆವೃತ್ತಿ 2.4 ಮೇಲ್ಪಟ್ಟ Samsung ಸ್ಮಾರ್ಟ್ ಫೋನ್‌ನಲ್ಲಿ ಈ ಅಪ್ಲಿಕೇಶನ್ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Saturday, March 25, 2023, 9:30 [IST]
English summary
Motogp 2023 world championship motorcycle race details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+