Tax Hike: ಒಂದೆಡೆ ಉಚಿತ ಬಾಗ್ಯ.. ಮತ್ತೊಂದೆಡೆ ವಾಹನ ಮಾಲೀಕರಿಗೆ ಶಾಕ್ ಕೊಟ್ಟ ರಾಜ್ಯ ಸರ್ಕಾರ

ವಾಣಿಜ್ಯ ವಾಹನ (Commercial vehicle)ಗಳ ಪೂರ್ಣಾವಧಿ ತೆರಿಗೆ (Fulltime tax)ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಏರಿಕೆ ಮಾಡಿದೆ. ಇಂದಿನಿಂದ ರಾಜ್ಯಾದ್ಯಂತ ಜಾರಿಯಾಗಿದೆ. ಅದರಲ್ಲಿ ಸಂಚಾರಿ ಕ್ಲಿನಿಕ್‍, ಸಂಚಾರಿ ಗ್ರಂಥಾಲಯ ಸೇರಿದಂತೆ ಕೆಲವೊಂದು ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ.

ಇತ್ತೀಚೆಗೆ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಸಾರಿಗೆ ಸಚಿವ (Transport Minister) ರಾಮಲಿಂಗಾರೆಡ್ಡಿ (Ramalinga Reddy), ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕ ಮಂಡಿಸಿ, ಸದನದ ಒಪ್ಪಿಗೆಯನ್ನು ಪಡೆದಿದ್ದರು. ವಿದೇಯಕದಲ್ಲಿರುವ ಪಟ್ಟಿಯ ಅನ್ವಯ, ಹೊಸ ವಾಹನ ನೋಂದಣಿ (New vehicle registration) ಹಾಗೂ ಹಳೆ ವಾಹನಗಳ ವರ್ಗಾವಣೆ (ಪರಭಾರೆ)ಗೆ ತೆರಿಗೆ ಹೆಚ್ಚಾಗಿದೆ.

Tax Hike: ಒಂದೆಡೆ ಉಚಿತ ಬಾಗ್ಯ.. ಮತ್ತೊಂದೆಡೆ ವಾಹನ ಮಾಲೀಕರಿಗೆ ಶಾಕ್ ಕೊಟ್ಟ ರಾಜ್ಯ ಸರ್ಕಾರ

ಹೊಸ ವಾಹನಗಳ ನೋಂದಣಿಯ ತೆರಿಗೆ ವಿವರಗಳನ್ನು ನೋಡುವುದಾದರೆ, 1.5 ರಿಂದ 2 ಟನ್ ತೂಕದ ವಾಹನಗಳು ಇನ್ಮುಂದೆ ರೂ.20,000 ಟ್ಯಾಕ್ಸ್ ಕಟ್ಟಬೇಕು. ಅದೇ ರೀತಿಯಲ್ಲಿ, 2 ರಿಂದ 3 ಟನ್ ವಾಹನಗಳಿಗೆ ರೂ.30,000, 7.5 ರಿಂದ 9.5 ಟನ್‍ ವೆಹಿಕಲ್ ಗೆ ರೂ.80,000 ಪಾವತಿಸಬೇಕಾಗಿದ್ದು, ವಾಹನದ ತೂಕ ಆಧರಿಸಿ, ತೆರಿಗೆ ಮೊತ್ತವು ಬೇರೆಯಾಗಿರುತ್ತದೆ.

ಹಳೆಯ 15 ವರ್ಷ ಮೀರಿದ ವಾಹನ ಮಾಲೀಕರು, ಹೆಚ್ಚಿನ ಟ್ಯಾಕ್ಸ್ ಕಟ್ಟಬೇಕಾಗಿದ್ದು, ವೆಹಿಕಲ್ ತೂಕಕ್ಕೆ ಅನುಗುಣವಾಗಿ ರೂ.46,000 ವರೆಗೆ ತೆರಿಗೆ ಪಾವತಿಸಬೇಕಾಗಿದೆ. ರಾಜ್ಯ ಸರ್ಕಾರ ಹೆಚ್ಚಿಸುವ ಟ್ಯಾಕ್ಸ್ ಶಾಲಾ-ಕಾಲೇಜು ವಾಹನಗಳಿಗೆ ಭಾರೀ ಹೊರೆಯಾಗಿದ್ದು, ದುಪ್ಪಟ್ಟು ಕಟ್ಟಬೇಕಾಗಿದೆ. ಉದಾಹರಣೆಗೆ ಎಸ್‌ಎಸ್‌ಎಲ್‌ಸಿ ಕೆಳಗಿನ ಶಾಲಾ ವಾಹನಗಳು ಈ ಹಿಂದೆ, ವಾರ್ಷಿಕ ರೂ.2,000 ತೆರಿಗೆ ಪಾವತಿಸುತ್ತಿದ್ದರೆ, ಇನ್ಮುಂದೆ ರೂ.10,000 ಟ್ಯಾಕ್ಸ್ ಇರುತ್ತದೆ.

ಆ ತರಹವೇ ಕಾಲೇಜು ವಾಹನಗಳು, ಈ ಮೊದಲು ರೂ.8,000 ತೆರಿಗೆ ಕಟ್ಟುತ್ತಿದ್ದರೆ, ಇಂದಿನಿಂದ ರೂ.20,000 ಟ್ಯಾಕ್ಸ್ ಪಾವತಿಸಬೇಕಾಗಿದೆ. ಸಂಚಾರಿ ಕ್ಯಾಂಟೀನ್, ಗ್ರಂಥಾಲಯ ಹಾಗೂ ಕ್ಲಿನಿಕ್‍ಗಳು ಜೊತೆಗೆ ಎಟಿಎಂ ಸೆಂಟರ್ ಗಳಿಗೆ ಹಣ ತುಂಬುವ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಿರುವುದು ಖುಷಿಯ ವಿಚಾರವಾಗಿದೆ. ಅಲ್ಲದೆ, ಜೂನ್ ನಲ್ಲಿ ಕರ್ನಾಟಕದಲ್ಲಿ ವಾಹನ ಮಾರಾಟವು ಭಾರೀ ಪ್ರಮಾಣದಲ್ಲಿ ಪ್ರಗತಿ ಕಂಡಿದೆ.

ರಾಜ್ಯದಲ್ಲಿ ವೆಹಿಕಲ್ ಸೇಲ್ಸ್ ಶೇಕಡ 13.06% ಹೆಚ್ಚಳವಾಗಿದೆ. 2022ರ ಜೂನ್‌ ತಿಂಗಳಲ್ಲಿ ಮಾರಾಟವಾಗಿದ್ದ 91,708 ಯುನಿಟ್ ದ್ವಿಚಕ್ರ ವಾಹನಗಳಿಗೆ ಹೋಲಿಸಿದರೆ, ಕಳೆದ ತಿಂಗಳು (2023) 1,01,726 ಯುನಿಟ್ ಸೇಲ್ ಆಗಿ, ಶೇಕಡ 10.92% ಬೆಳವಣಿಗೆ ಕಂಡಿದೆ. ಪ್ರಯಾಣಿಕ ವಾಹನ ಸೇಲ್ಸ್ ಕಳೆದ ವರ್ಷದ ಜೂನ್ ತಿಂಗಳಿಗೆ (23,446 ಯುನಿಟ್) ಹೋಲಿಸಿದರೆ, ಈ ಬಾರಿಯ ಅದೇ ಅವಧಿಯಲ್ಲಿ 25,063 ಯುನಿಟ್ ಮಾರಾಟವಾಗಿ 6.90% ಪ್ರಗತಿಯಾಗಿದೆ.

ತ್ರಿಚಕ್ರ ಹಾಗೂ ವಾಣಿಜ್ಯ ವಾಹನಗಳ ಮಾರಾಟವು ರಾಜ್ಯದಲ್ಲಿ ಉತ್ತಮವಾಗಿವಾಗಿದೆ. ಇನ್ನು, ರಾಜ್ಯ ಸರ್ಕಾರ ವಾಣಿಜ್ಯ ವಾಹನಗಳ ಪೂರ್ಣಾವಧಿ ತೆರಿಗೆ ಹೆಚ್ಚಿಸುರುವುದರಿಂದ ಅದರ ಪರೋಕ್ಷ ಪರಿಣಾಮ ಸಾಮಾನ್ಯ ಜನರ ಮೇಲೆಯೇ ಬೀಳಲಿದೆ. ಒಂದು ಕಡೆ ಉಚಿತ ಭಾಗ್ಯಗಳನ್ನು ನೀಡುವ ಸರ್ಕಾರ, ಮತ್ತೊಂದು ಕಡೆ ತೆರಿಗೆ ಹೆಚ್ಚಿಸುವ ಮೂಲಕ ಆಘಾತ ನೀಡಿರುವುದು ಜನಸಾಮಾನ್ಯರಿಗೆ ಬೇಸರ ತರಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, July 24, 2023, 15:30 [IST]
English summary
Motor tax hike commercial vehicles karnataka details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+