ಯಮಹಾ ಆರ್‌ಡಿ ಯಿಂದ ಡುಕಾಟಿ ಪಾನಿಗಲೆ ವರೆಗೂ : ಜಾನ್‌ ಅಬ್ರಹಾಂ ಬಳಿಯಿರುವ ಸೂಪರ್‌ ಬೈಕ್‌ಗಳಿವು

ವಾಹನಗಳ ಬಗ್ಗೆ ಯೋಚನೆ ಮಾಡಿದಾಗ, ಅದರಲ್ಲೂ ಬೈಕ್‌ಗಳ ಬಗ್ಗೆ ನೊಡಿದಾಗ ನಮ್ಮ ಮನಸ್ಸಿಗೆ ಬರುವಂತಹ ಎರಡು ಭಾರತೀಯ ಹೆಸರುಗಳೆಂದರೆ ಒಂದು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರಸಿಂಗ್‌ ಧೋನಿ ಹಾಗು ಇನ್ನೊಂದು ಬಾಲಿವುಡ್‌ ಸೂಪರ್‌ ಸ್ಟಾರ್‌ ಆಗಿರುವಂತಹ ಜಾನ್‌ ಅಬ್ರಹಾಂ.

ಇವರಿಬ್ಬರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದರ ಜೊತೆಗೆ ಇವರಿಬ್ಬರಿಗೂ ಇರುವ ಇನ್ನೊಂದು ಸ್ವಾಮ್ಯತೆ ಏನೆಂದರೆ ಅದು ಮೋಟಾರ್‌ ಸೈಕಲ್‌ಗಳ ಮೇಲೆ ಇರುವ ಪ್ರೀತಿ. ಜಾನ್‌ ಅಬ್ರಹಾಂ ಧೂಮ್‌ ಚಿತ್ರದಲ್ಲಿನ ವಿಲನ್‌ ರೋಲ್‌ಗೆ ತುಂಬಾ ಹೆಸರುವಾಸಿ. ಆ ಚಿತ್ರದಲ್ಲಿರುವ ಹಾಗೆ ನಿಜ ಜೀವನದಲ್ಲೂ ಸಹ ಜಾನ್‌ ಅಬ್ರಹಾಂ ಬಳಿ ಹಲವಾರು ಸ್ಪೋರ್ಟ್ಸ್‌ ಬೈಕ್‌ ಮತ್ತು ಸೂಪರ್‌ ಬೈಕ್‌ಗಳ ಕಲೆಕ್ಷನ್‌ ಇದೆ. ಇಂದು ನಾವು ಅವರ ಬಳಿ ಪ್ರಮುಖವಾಗಿ ಇರುವಂತಹ ಬೈಕ್‌ಗಳ ಕಲೆಕ್ಷನ್‌ ಯಾವುದೆಂದು ನೋಡೋಣ.

ಜಾನ್‌ ಅಬ್ರಹಾಂ ಬಳಿಯಿರುವ ಸೂಪರ್‌ ಬೈಕ್‌ಗಳಿವು

ಯಮಹಾ ಆರ್‌ಡಿ 350
ಜಾನ್‌ ಅಬ್ರಹಾಂ ಬಳಿ ಕೆಟಿಎಂ, ರಾಯಲ್‌ ಎನ್‌ಫೀಲ್ಡ್ನಂತಹ ಬೈಕ್‌ ಮಾತ್ರವಲ್ಲದೇ ಹಯಾಬುಸಾ, ಡುಕಾಟಿ ಸೇರಿದಂತೆ ಹಲವಾರು ಸೂಪರ್‌ ಬೈಕ್‌ಗಳೂ ಸಹ ಇದೆ. ಯಮಹಾ ಬೈಕ್‌ಗಳು ಇಲ್ಲದೇ ಇರುವ ಮೋಟಾರ್‌ ಸೈಕಲ್‌ ಕಲೆಕ್ಷನ್‌ಗಳು ತೀರಾ ವಿರಳವೆಂದೇ ಹೇಳಬಹುದು. ಇನ್ನು ಜಾನ್‌ ಅಬ್ರಹಾಂ ಬಳಿಯಿರುವ ಈ ಯಮಹಾ ಆರ್‌ಡಿ 350 ಯ ವಿಶೇಷತೆಯೇನೆಂದರೆ ೧೯೮೦ರ ದಶಕದಲ್ಲೇ ಇದರ ಉತ್ಪಾದನೆಯನ್ನು ನಿಲ್ಲಿಸಲಾಗಿದೆ. ಹಾಗಾಗಿ ತೀರಾ ವಿರಳವಾಗಿರುವ ಈ ಮೊಟಾರ್‌ ಸೈಕಲ್‌ ಜಾನ್‌ ಅಬ್ರಹಾಂ ಬಳಿಯಿರುವುದು ವಿಶೇಷವೇ ಸರಿ.

ಯಮಹಾ ವಿ-ಮ್ಯಾಕ್ಸ್‌
ಡುಕಾಟಿಯ ವೈಲ್ಡ್‌ ಡೇವಿಯಲ್‌ ಪವರ್‌ ಕ್ರೂಸರ್‌ ಮತ್ತು ಟ್ರೈಂಫ್‌ನ ಬೋಂಕೆರ್ಸ್‌ ರಾಕೆಟ್‌ ೩ ಬರುವ ಮೊದಲೇ ಯಮಹಾ ಈ ದೈತ್ಯ ಬೈಕನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಅದೇ ಈ ಯಮಹಾ ವಿ-ಮ್ಯಾಕ್ಸ್‌ . 1985ರಲ್ಲಿ ಬಿಡುಗಡೆಯಾದ ಈ ಬೈಕ್‌ ೧.೨ ಲೀಟರ್‌ ವಿ4 ಇಂಜಿನ್‌ನೊಂದಿಗೆ ಬಂದಿತ್ತು. ನಂತರದಲ್ಲಿ ಇದನ್ನು 1679 ಸಿಸಿ ಗೆ ಮೇಲ್ದರ್ಜೆಗೊಳಿಸಲಾಗಿತ್ತು. ಮುಖ್ಯವಾಗಿ ಇದು ಇದರ ಪವರ್‌ ಹಾಗೂ ತೂಕಕ್ಕೆ ಹೆಸರಾಗಿತ್ತು. 194 ಬಿಹೆಚ್‌ಪಿ ಮತ್ತು 167 ನ್ಯೂಟನ್‌ ಮೀಟರ್‌ ಟಾರ್ಕನ್ನು ಉತ್ಪಾದಿಸುತ್ತಿದ್ದ ಈ ಬೈಕ್‌ 315 ಕಿಲೋಗ್ರಾಂ ತೂಗುತ್ತಿತ್ತು.

ಎಂಬಿ ಅಗುಸ್ಟಾ ಎಫ್‌3 800
ಜಾನ್‌ ಅಬ್ರಹಾಂ ಬೈಕ್‌ ಕಲೆಕ್ಷನ್‌ಗಳಲ್ಲಿ ಇರುವ ಆಕರ್ಷಕ ಬೈಕ್‌ ಎಂದರೆ ಅದು ಎಂಬಿ ಅಗುಸ್ಟಾ ಎಫ್‌3 800. 2013ರಲ್ಲಿ ಮಾರುಕಟ್ಟೆಗೆ ಧುಮುಕಿದ ಈ ಬೈಕ್‌ ಆ ಸಂಧರ್ಭದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಇನ್ನು ಈ ಬೈಕ್‌ನ ಪವರ್‌ ಬಗ್ಗೆ ಮಾತನಾಡುವುದಾದರೆ 800ಸಿಸಿ ಸಾಮರ್ಥ್ಯದ ಲಿಕ್ವಿಡ್‌ ಕೂಲ್ಡ್ ಇನ್‌ಲೈನ್‌ ತ್ರೀ ಎಂಜಿನ್ ಅನ್ನು‌ ಹೊಂದಿದೆ. ಈ ಶಕ್ತಿಶಾಲಿ ಇಂಜಿನ್‌ನ ಸಹಾಯದಿಂದ ಈ ಎಂಬಿ ಅಗುಸ್ಟಾ ಎಫ್‌3 800 ಬೈಕ್‌ 148 ಬಿಹೆಚ್‌ಪಿ 88 ನ್ಯೂಟನ್‌ಮೀಟರ್‌ ಟಾರ್ಕನ್ನು ಉತ್ಪಾದನೆ ಮಾಡುತ್ತದೆ.

ಎಪ್ರಿಲಿಯ ಆರ್‌ಎಸ್‌ವಿ4 ಆರ್‌ಎಫ್‌
ಎಪ್ರಿಲಿಯ ಆರ್‌ಎಸ್‌ವಿ4 ಆರ್‌ಎಫ್‌ ಬೈಕ್‌ ಜಾನ್‌ ಅಬ್ರಹಾಂ ಬಳಿ ಇರುವ ಇನ್ನೊಂದು ಇಟಾಲಿಯನ್‌ ನಿರ್ಮಿತ ಪವರ್‌ಫುಲ್‌ ಬೈಕ್‌. ಎಪ್ರಿಲಿಯ ಆರ್‌ಎಸ್‌ವಿ4 ಆರ್‌ಎಫ್‌ ಬೈಕ್‌ ಇದರ ಮೊದಲಿನ ಆವೃತ್ತಿಯಾದ ಎಪ್ರಿಲಿಯ ಆರ್‌ಎಸ್‌ವಿ4 ಆರ್‌ಆರ್ ಬೈಕ್‌ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. 999 ಸಿಸಿ ವಿ4 ಇಂಜಿನ್‌ ನೊಂದಿಗೆ ಬರುವ ಈ ಬೈಕ್‌ 198 ಬಿಹೆಚ್‌ಪಿ ಮತ್ತು 115 ಎನ್‌ಎಮ್‌ ಟಾರ್ಕ್‌ ಉತ್ಪಾದನೆ ಮಾಡುತ್ತದೆ. 0-100 ಕಿಮೀ ವೇಗವನ್ನು ತಲುಪಲು ಇದು ಕೇವಲ 3.5 ಸೆಕೆಂಡ್‌ಗಳಲ್ಲಿ ತಲುಪುವುದು ಇದರ ಇನ್ನೊಂದು ವಿಶೇಷ.

ಡುಕಾಟಿ ಪಾನಿಗಲೆ ವಿ4
ಡುಕಾಟಿಯು ತನ್ನ ಪಿನಾಗಲೆ ವಿ4 ಬೈಕನ್ನು ಲಾಂಚ್‌ ಮಾಡುತ್ತಿದೆ ಎಂದು ಘೋಷಿಸಿದಾಗಲೇ ಭಾರೀ ಚರ್ಚೆಗೆ ಗ್ರಾಸವಾಗಿತ್ತು ಮತ್ತು ಇದರ ಬಗ್ಗೆ ಭಾರೀ ಕುತೂಹಲ ಮೂಡಿತ್ತು. ಡುಕಾಟಿ ನಿರ್ಮಿಸಿದ ಬೈಕ್‌ಗಳಲ್ಲಿ ಈ ಬೈಕ್‌ ತುಂಬಾ ಜನಪ್ರಿಯವಾಗಿದೆ. ಜಾನ್‌ ಅಬ್ರಹಾಂ ಅವಿಗೆ ತಮ್ಮಲ್ಲಿರುವ ಬೈಕ್‌ ಕಲೆಕ್ಷನ್‌ಗಳಲ್ಲಿ ಡುಕಾಟಿ ಪಿನಗಾಲೆ ವಿ4 ಫೇವರೀಟ್‌ ಎಂದರೆ ತಪ್ಪಾಗಲಾರದು. 1103ಸಿಸಿ ಲಿಕ್ವಿಡ್‌ ಕೂಲ್ಡ್‌ ವಿ4 ಇಂಜಿನ್‌ ಹೊಂದಿರುವ ಈ ಬೈಕ್‌ 211 ಬಿಹೆಚ್‌ಪಿ ಮತ್ತು 123 ಎನ್‌ಎಮ್‌ ಟಾರ್ಕನ್ನು ಉತ್ಪಾದಿಸುತ್ತದೆ.

ಡ್ರೈವ್‌ಸ್ಪಾರ್ಕ್‌ ಅಭಿಪ್ರಾಯ:
ದುಬಾರಿ ಸ್ಪೋರ್ಟ್ಸ್ ಮತ್ತು ಸೂಪರ್‌ ಬೈಕ್‌ಗಳು ಪ್ರತಿಯೊಬ್ಬ ಸಾಮಾನ್ಯ ಯುವಕರ ಕನಸಾಗಿರುತ್ತದೆ. ಆದರೆ ಬಹುತೇಕ ಎಲ್ಲಾ ಸ್ಟಾರ್‌ಗಳ ಬಳಿಯೂ ದುಬಾರಿ ಬೈಕ್‌ಗಳ ಕಲೆಕ್ಷನ್‌ ಇರುತ್ತದೆ. ಆದರೆ ಇದರಲ್ಲಿ ಮೊದಲಿನಿಂದಲೂ ಹೆಚ್ಚು ಪ್ರಚಲಿತದಲ್ಲಿದ್ದದ್ದು ಜಾನ್‌ ಅಬ್ರಹಾಂ. ಇವರ ಧೂಮ್‌ ಚಿತ್ರ ಬಿಡುಗಡೆಯಾದಾಗ ಅದರಲ್ಲಿನ ಬೈಕ್‌ಗಳು ಭಾರತೀಯ ಚಿತ್ರ ಪ್ರೇಮಿಗಳಲ್ಲಿ ಬೈಕ್‌ ಬಗ್ಗೆ ಕ್ರೇಝ್‌ ಹುಟ್ಟು ಹಾಕಿತ್ತು. ಆ ಸಮಯದಿಂದಲೂ ನಿಜ ಜೀವನದಲ್ಲಿ ಜಾನ್‌ ಅಬ್ರಹಾಂ ಬಳಿಯಿದ್ದ ಬೈಕ್‌ಗಳು ಸದಾ ಸುದ್ದಿಯಲ್ಲಿರುತ್ತಿದ್ದುದಂತೂ ನಿಜ.

More from DriveSpark

Article Published On: Saturday, February 4, 2023, 17:28 [IST]
English summary
Motorcycle collections of bollywood star john abraham
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+