50 ಕಿ.ಮೀ ಮೈಲೇಜ್ ಕೊಡುವ ಮಾರುತಿ ವ್ಯಾಗನ್ಆರ್: ಯುವಕರ ಟ್ರಿಕ್ಸ್ ನೋಡಿ...

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಈ ಮಾರುತಿ ಸುಜುಕಿ ವ್ಯಾಗನ್‍ಆರ್ ಬರೊಬ್ಬರಿ ಎರಡು ದಶಕಗಳಿಂದ ಮಾರಾಟದಲ್ಲಿದೆ. ಈ ಮಾರುತಿ ವ್ಯಾಗನ್‍ಆರ್ ಹ್ಯಾಚ್‌ಬ್ಯಾಕ್ ಅನ್ನು ಮೊದಲ ಬಾರಿಗೆ ದೇಶದಲ್ಲಿ ಪ್ರಾರಂಭಿಸಿದಾಗಿನಿಂದಲೂ ಕೂಡ ಇದು ಉತ್ತಮ ಬೇಡಿಕೆಯಿಂದ ಮಾರಾಟ ಆಗುತ್ತಿದೆ. ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಇದರ ಮೈಲೇಜ್ ಆಗಿದೆ. ಮಾರುತಿ ಸುಜುಕಿಯ ಅಧಿಕೃತ ವೆಬ್ ಸೈಟ್ ಪ್ರಕಾರ ವ್ಯಾಗನ್‍ಆರ್ ಸಿಎನ್‌ಜಿ 33.47 ಕಿ.ಮೀ ಮೈಲೇಜ್ ನೀಡುತ್ತದೆ.

ಸಾಮಾನ್ಯ ಮಾರುತಿ ವ್ಯಾಗನ್ಆರ್ (Maruti WagonR) ಪೆಟ್ರೋಲ್ ಮಾದರಿಯು ಇದಕ್ಕಿಂತ ಕಡಿಮೆ ಮೈಲೇಜ್ ನೀಡುತ್ತದೆ. ಹೀಗಿರುವಾಗ, ವ್ಯಕ್ತಿಯೊಬ್ಬರು ತಮ್ಮ ಮಾರುತಿ ಸುಜುಕಿ ವ್ಯಾಗನ್ ಆರ್ ಅನ್ನು ಪ್ರತಿ ಲೀಟರ್‌ಗೆ 50 ಕಿಮೀ ಮೈಲೇಜ್ ನೀಡುವಂತೆ ಮಾರ್ಪಡಿಸಿದ್ದಾರೆ. ಈ ಕಾರಣದಿಂದಾಗಿ ಮಾಡಿಫೈಗೊಂಡ ಈ ಮಾರುತಿ ಸುಜುಕಿ ವ್ಯಾಗನ್ಆರ್ ಕಾರ್ ಹೆಚ್ಚು ಸುದ್ದಿಯಾಗಿದೆ. ಈ ಕಾರು ಹೇಗೆ ಇಷ್ಟು ಮೈಲೇಜ್ ನಿಡುತ್ತದೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Maruti WagonR

ನಾವು ಭಾರತೀಯರು ವಿನೂತನ ಆವಿಷ್ಕಾರಗಳಿಗೆ ಹೆಸರುವಾಸಿ. ನಮ್ಮಲ್ಲಿರುವ ವಸ್ತುಗಳನ್ನು ಮಾತ್ರ ಬಳಸಿಕೊಂಡು ವಿಶಿಷ್ಟ ಉತ್ಪನ್ನವನ್ನು ತಯಾರಿಸುತ್ತೇವೆ. ಇದೇ ರೀತಿ ಇಲ್ಲಿ ವ್ಯಾಗನ್ಆರ್ ಕಾರೊಂದು ಬೈಕ್‌ನಿಂದ ಚಾಲಿತವಾಗಿದೆ. ಮಾಲೀಕರು ಬೈಕ್ ಅನ್ನು ಮಾರುತಿ ಸುಜುಕಿ ವ್ಯಾಗನ್ಆರ್ ಕಾರಿನ ಹಿಂಭಾಗದಲ್ಲಿ ಇರಿಸಲಾಗಿದೆ.ಇದಕ್ಕಾಗಿ ಕಾರಿನ ಹಿಂದಿನ ಸೀಟುಗಳನ್ನು ತೆಗೆದು ಹಾಕಿದ್ದಾರೆ

ನಂತರ ಬೈಕ್‌ನ ಇಂಜಿನ್‌ ಹಾಗೂ ಕಾರಿನ ಟೈರ್‌ ಅನ್ನು ಬೆಲ್ಟ್‌ ಮೂಲಕ ಜೋಡಿಸಿದ್ದಾರೆ. ಈ ಮೂಲಕ, ಬೈಕಿನ ಎಂಜಿನ್ ಕಾರ್ಯನಿರ್ವಹಿಸುವಾಗ ಅದು ಬೆಲ್ಟ್ ಅನ್ನು ತಿರುಗಿಸುತ್ತದೆ. ಆ ಬೆಲ್ಟ್ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿನ ಟೈರ್‌ಗಳು ಚಲಿಸುವಂತೆ ಮಾಡುತ್ತದೆ. ಈ ಮಾರುತಿ ಸುಜುಕಿ ವ್ಯಾಗನ್ ಆರ್ ಈ ರೀತಿ ಕಾರ್ಯನಿರ್ವಹಿಸುತ್ತದೆ.

Maruti WagonR

ಈ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಪ್ರತಿ ಲೀಟರ್‌ಗೆ 50 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ವೈರಲ್ ವಿಡಿಯೋದಲ್ಲಿ ವರದಿಯಾಗಿದೆ. ಇದು ಎಷ್ಟು ಸತ್ಯ? ಇದು ತಿಳಿದಿಲ್ಲ. ಆದರೆ, ಇದು ಬೈಕ್‌ನ ಎಂಜಿನ್‌ನಿಂದ ಚಾಲಿತವಾಗಿರುವುದರಿಂದ, ಇದಕ್ಕೆ ಅವಕಾಶವಿದೆ ಎಂದು ಹೇಳಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ನೀವು ಯೂಟ್ಯೂಬ್ ವೀಡಿಯೋ ನೋಡಿದಾಗ ತಿಳಿಯುತ್ತದೆ.

ಇನ್ನು ಸಾಮನ್ಯ ಮಾರುತಿ ವ್ಯಾಗನ್ಆರ್ ಈ ಮಾರುತಿ ವ್ಯಾಗನ್ಆರ್ ಕಾರಿನಲ್ಲಿ 1.0 ಲೀಟರ್ ಮತ್ತು 1.2 ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.ಎರಡೂ ಮೋಟಾರ್‌ಗಳು ಡ್ಯುಯಲ್‌ಜೆಟ್, ಡ್ಯುಯಲ್ ವಿವಿಟಿ, ಐಎಸ್‌ಎಸ್ (ಐಡಲ್ ಸ್ಟಾರ್ಟ್ ಸ್ಟಾಪ್) ತಂತ್ರಜ್ಞಾನ ಮತ್ತು ಕೂಲ್ಡ್ ಇಜಿಆರ್ (ಎಕ್ಸಾಸ್ಟ್ ಗ್ಯಾಸ್ ರಿಸರ್ಕ್ಯುಲೇಷನ್) ಅನ್ನು ಹೊಂದಿವೆ. ಎಲ್ಲಾ ತಂತ್ರಜ್ಞಾನಗಳು ಅದರ ಮೈಲೇಜ್ ಅನ್ನು ಹೆಚ್ಚಿಸುತ್ತದೆ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ.

Video Code:

ಈ ಮಾರುತಿ ಸುಜುಕಿ ವ್ಯಾಗನ್‍ಆರ್ ಕಾರಿನಲ್ಲಿ 1.0 ಲೀಟರ್ ಲೀಟರ್, ಇನ್‌ಲೈನ್ ಮೂರು-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. 1.0 ಲೀಟರ್ ಲೀಟರ್ ಎಂಜಿನ್ 66bhp ಮತ್ತು 89Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.2ಲೀಟರ್ ಇನ್‌ಲೈನ್ ನಾಲ್ಕು-ಸಿಲಿಂಡರ್ ಎಂಜಿನ್ 88 bhp ಪವರ್ ಮತ್ತು 113Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಮಾರುತಿ ಸುಜುಕಿ ವ್ಯಾಗನ್ ಆರ್‌ನ ಪೆಟ್ರೋಲ್-ಮ್ಯಾನ್ಯುವಲ್ ರೂಪಾಂತರಗಳು 24.35 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ವರದಿಯಾಗಿದೆ. ಅದೇ ಸಮಯದಲ್ಲಿ, ಈ ಕಾರಿನ ಪೆಟ್ರೋಲ್-ಎಜಿಎಸ್ ರೂಪಾಂತರಗಳು ಪ್ರತಿ ಲೀಟರ್‌ಗೆ 25.19 ಕಿಮೀ ಮೈಲೇಜ್ ನೀಡಲಿದೆ ಎಂದು ಮಾರುತಿ ಸುಜುಕಿ ಹೇಳಿಕೊಂಡಿದೆ. ಇವೆಲ್ಲವುಗಳ ಮೇಲೆ, ಮಾರುತಿ ಸುಜುಕಿ ವ್ಯಾಗನ್ ಆರ್‌ನ ಸಿಎನ್‌ಜಿ ರೂಪಾಂತರಗಳು ಪ್ರತಿ ಕೆಜಿಗೆ 33.47 ಕಿಮೀ ಮೈಲೇಜ್ ನೀಡುತ್ತವೆ.

Source: mr.kasganjhacker8300/YouTube

Article Published On: Tuesday, November 26, 2024, 17:34 [IST]
English summary
Motorcycle engined maruti wagonr mileage viral video details
Read more on india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+