ಡಕಾರ್ ರಾಲಿಗೆ ಮತ್ತೋರ್ವ ಬಲಿ; ಮಿಂಚಿದ ಸಂತೋಷ್

By Nagaraja

ಅರ್ಜೇಂಟೀನಾ, ಬೊಲಿವಿಯಾ ಹಾಗೂ ಚಿಲಿಯಲ್ಲಿ ಆಯೋಜನೆಯಾಗುತ್ತಿರುವ ವಿಶ್ವದ ಅತಿ ಅಪಾಯಕಾರಿ ರೇಸ್ 36ನೇ ಡಕಾರ್ ರಾಲಿಗೆ ಮಗದೊರ್ವ ರೇಸರ್ ಬಲಿಯಾಗಿರುವ ಘಟನೆ ವರದಿಯಾಗಿದೆ. ಈ ನಡುವೆ ಡಕಾರ್ ರಾಲಿಯಲ್ಲಿ ಭಾಗವಹಿಸುತ್ತಿರುವ ಮೊಟ್ಟ ಮೊದಲ ಭಾರತೀಯನೆಂಬ ಕೀರ್ತಿಗೆ ಪಾತ್ರವಾಗಿರುವ ಕನ್ನಡಗ ಸಿಎಸ್ ಸಂತೋಷ್ ಮೂರನೇ ಹಂತದ ರೇಸ್‌ನಲ್ಲೂ ಗಮನಾರ್ಹ ಪ್ರದರ್ಶನ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಇವನ್ನೂ ಓದಿ: ಡಕಾರ್‌ ರಾಲಿಗೆ ನಮ್ಮೂರ ಹುಡುಗ

ಬೇಸರದ ಸಂಗತಿಯಲ್ಲಿ ಡಕಾರ್ ರಾಲಿ ಅತ್ಯಂತ ಅಪಾಯಕಾರಿ ರೇಸ್ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಪ್ರತಿ ವರ್ಷವೂ ಇಲ್ಲಿ ಸಂಭವಿಸುತ್ತಿರುವ ಅವಘಡದಲ್ಲಿ ಕ್ರೀಡಾಪಟುಗಳು ತಮ್ಮ ಪ್ರಾಣವನ್ನೇ ತೆರಬೇಕಾಗಿದೆ. ಆದರೆ ವಿಶ್ವದ ಅಗ್ರ ರೇಸರ್ ಎಂದು ಗುರುತಿಸಿಕೊಳ್ಳಬೇಕೆಂಬ ಕನಸು ಪ್ರತಿಯೊಬ್ಬ ರೇಸರ್‌ಗೂ ಇದರಲ್ಲಿ ಭಾಗವಹಿಸಲು ಸ್ಫೂರ್ತಿದಾಯಕವಾಗುತ್ತದೆ.

ಡಕಾರ್ ರಾಲಿಗೆ ಮತ್ತೋರ್ವ ಬಲಿ; ಮಿಂಚಿದ ಸಂತೋಷ್

ಡಕಾರ್ ರಾಲಿಯಿಂದ ಬಂದ ಮಾಹಿತಿ ಪ್ರಕಾರ ಮೂರನೇ ಹಂತರ ರೇಸಿಂಗ್ ವೇಳೆ ಪೊಲೆಂಡ್‌ನ 39ರ ಹರೆಯದ ರೇಸರ್ ಮೈಕಲ್ ಹೆರ್ನಿಕ್ ತಮ್ಮ ಪ್ರಾಣವನ್ನೇ ತೆತ್ತಿದ್ದಾರೆ. ಹಾಗಿದ್ದರೂ ಹೆರ್ನಿಕ್ ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಇದೇ ಮೊದಲ ಬಾರಿಗೆ ಹೆರ್ನಿಕ್ ಡಕಾರ್ ರಾಲಿಯಲ್ಲಿ ಭಾಗವಹಿಸುತ್ತಿದ್ದಾರೆ.

ಡಕಾರ್ ರಾಲಿಗೆ ಮತ್ತೋರ್ವ ಬಲಿ; ಮಿಂಚಿದ ಸಂತೋಷ್

ಈ ನಡುವೆ ಭಾರತದ ಹೆಮ್ಮೆಯ ರೇಸರ್ ಸಂತೋಷ್ ಮೂರನೇ ಹಂತದಲ್ಲಿ 53ನೇ ಸ್ಥಾನಕ್ಕೆ ನೆಗೆತ ಕಾಣುವ ಮೂಲಕ ಅಚ್ಚರಿ ಫಲಿತಾಂಶಕ್ಕೆ ಕಾರಣವಾಗಿದ್ದಾರೆ.

ಡಕಾರ್ ರಾಲಿಗೆ ಮತ್ತೋರ್ವ ಬಲಿ; ಮಿಂಚಿದ ಸಂತೋಷ್

ಮೊದಲ ಸುತ್ತು ಅಥವಾ ಸ್ಟೇಜ್ ಒಂದರಲ್ಲಿ 85ನೇ ಸ್ಥಾನದಲ್ಲಿದ್ದ ಸಂತೋಷ್ ತಮ್ಮ ಚಾಣಕ್ಷತೆಯನ್ನು ಮುಂದುವರಿಸಿದ್ದಾರೆ. ಏಕೆಂದರೆ ಭಾರತೀಯ ರೇಸರ್ ಪಾಲಿಗಿದು ಡಕಾರ್ ರಾಲಿಯಲ್ಲೇ ಭಾಗವಹಿಸುವುದೇ ದೊಡ್ಡ ಗೌರವಾಗಿದೆ. ಹಾಗಿರುವಾಗ ಸಂತೋಷ್ ಗಮನಾರ್ಹ ಸಾಧನೆ ಹಲವು ಮೂಲಗಳಿಂದ ಭಾರಿ ಮೆಚ್ಚೆಗೆಗೆ ಗ್ರಾಸವಾಗುತ್ತಿದೆ.

ಡಕಾರ್ ರಾಲಿಗೆ ಮತ್ತೋರ್ವ ಬಲಿ; ಮಿಂಚಿದ ಸಂತೋಷ್

ಫ್ರಾನ್ಸ್‌ನ ಪ್ಯಾರಿಸ್‌ನಿಂದ ತೆರವುಗೊಳಿಸಿದ ಬಳಿಕ ಸತತವಾಗಿ ಏಳನೇ ಬಾರಿಗೆ ದಕ್ಷಿಣ ಅಮೆರಿಕಾದಲ್ಲಿ ಡಕಾರ್ ರಾಲಿ ಯಶಸ್ವಿಯಾಗಿ ಆಯೋಜನೆಯಾಗುತ್ತಿದೆ.

ಡಕಾರ್ ರಾಲಿಗೆ ಮತ್ತೋರ್ವ ಬಲಿ; ಮಿಂಚಿದ ಸಂತೋಷ್

ಜನವರಿ 4ರಂದು ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಿಂದ ಆರಂಭವಾಗಿರುವ ರೇಸ್ ಚೀಲಿ ಹಾಗೂ ಬೊಲಿವಿಯಾ ಕ್ರಮಿಸಿ ಮತ್ತೆ ಬ್ಯೂನಸ್ ಐರಿಸ್‌ನಲ್ಲಿ ಜನವರಿ 17ರಂದು ಕೊನೆಗೊಳ್ಳಲಿದೆ.

ಡಕಾರ್ ರಾಲಿಗೆ ಮತ್ತೋರ್ವ ಬಲಿ; ಮಿಂಚಿದ ಸಂತೋಷ್

ಒಟ್ಟು 13 ಹಂತಗಳಾಗಿ (ಸ್ಟೇಜ್) ಡಕಾರ್ ರಾಲಿ ಆಯೋಜನೆಯಾಗಲಿದೆ. ಇಲ್ಲಿ ಕಾರು ಬೈಕ್ ಸೇರಿದಂತೆ ಟ್ರಕ್ ಹಾಗೂ ಕ್ವಾಡ್ ರೇಸ್ ಸಹ ನಡೆಯುತ್ತಿದೆ.

ಡಕಾರ್ ರಾಲಿಗೆ ಮತ್ತೋರ್ವ ಬಲಿ; ಮಿಂಚಿದ ಸಂತೋಷ್

ಮರಭೂಮಿ, ಪರ್ವತ ಶಿಖರ , ಅಟ್ಲಾಂಟಿಕ್ ಹಾಗೂ ಫೆಸಿಫಿಕ್ ಮಹಾಸಾಗರ ಕಿನಾರೆಯಲ್ಲಿ ಸುತ್ತುವರಿಯಲಿರುವ ಡಕಾರ್ ರಾಲಿಯಲ್ಲಿ ದಿನಕ್ಕೆ 800ರಿಂದ 900 ಕೀ.ಮೀ.ಗಳನ್ನು ಕ್ರಮಿಸಬೇಕಾಗುತ್ತದೆ. ಈ ಮೂಲಕ ಒಟ್ಟು 9000 ಕೀ.ಮೀ. ಉದ್ದಕ್ಕೂ ಸ್ಪರ್ಧೆ ನಡೆಯಲಿದೆ.

More from DriveSpark

Article Published On: Wednesday, January 7, 2015, 14:53 [IST]
English summary
Motorcyclist Michal Hernik Dies In Dakar Rally 2015
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+