ಲಾಕ್‌ಡೌನ್ ವೇಳೆ ಅಗತ್ಯವಿದ್ದಲ್ಲಿ ಇ-ಪಾಸ್ ಪಡೆಯಲು ಹೀಗೆ ಮಾಡಿ..
ಲಾಕ್‌ಡೌನ್ ಅವಧಿಯನ್ನು ಮೇ 3ರವರೆಗೆ ವಿಸ್ತರಿಸಲಾಗಿದ್ದು, ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಅಗತ್ಯ ಸರಕು ವಾಹನಗಳಿಗೆ ಸಂಚಾರಿಸಲು ಅವಕಾಶ ನೀಡಲಾಗಿದೆ. ಆದರೆ ಈ ರೀತಿಯಾಗಿ ಸಂಚರಿಸಲು ಸರ್ಕಾರವು ನಿಗದಿಪಡಿಸಿರುವ ಇ-ಪಾಸ್ ಹೊಂದುವುದು ಕಡ್ಡಾಯ. ಇಲ್ಲದಿದ್ದರೆ ಕಾನೂನು ಕ್ರಮಕ್ಕೆ ಒಳಗಾಗಬೇಕಾಗುತ್ತದೆ.

ಆನ್‌ಲೈನ್‌ನಲ್ಲಿ ಇ-ಪಾಸ್‌ಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ವಿವರಗಳನ್ನು ಈ ಲೇಖನದಲ್ಲಿ ನೋಡೋಣ. ವಿವಿಧ ರಾಜ್ಯಗಳಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ಸಹ ಈ ಲೇಖನದಲ್ಲಿ ನೋಡೋಣ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಇ-ಪಾಸ್‌ಗಳಿಗೆ ಅರ್ಜಿ ಸಲ್ಲಿಸುವವರು ಅಗತ್ಯ ಸೇವೆಗಳನ್ನು ಒದಗಿಸುವ ವೈದ್ಯಕೀಯ, ಆರೋಗ್ಯ, ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿ, ಮಾಧ್ಯಮ, ಎಲೆಕ್ಟ್ರಿಕ್ ಹಾಗೂ ವಾಟರ್ ಸಪ್ಲೈ, ಪಡಿತರ ಅಂಗಡಿಗಳಿಗೆ ಸೇರಿದವರಾಗಿರಬೇಕು.

ಪಾಸ್‌ಗಳಿಗೆ ಅರ್ಜಿ ಸಲ್ಲಿಸಿದ ತಕ್ಷಣ ಪಾಸ್ ಸಿಕ್ಕಂತೆ ಆಗುವುದಿಲ್ಲ. ಸ್ಥಳೀಯ ಆಡಳಿತವು ಅಂತಿಮವಾಗಿ ಯಾವ ಅರ್ಜಿಗಳನ್ನು ಅನುಮೋದಿಸಬೇಕೆಂದು ನಿರ್ಧರಿಸುತ್ತದೆ, ಸಮಯ ಹಾಗೂ ಪರಿಸ್ಥಿತಿಗಳ ಆಧಾರದ ಮೇಲೆ ಪಾಸ್‌ಗಳನ್ನು ನೀಡಲಾಗುವುದು.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಪಾಸ್‌ಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ:
1. ರಾಜ್ಯದ, ಕೇಂದ್ರಾಡಳಿತ ಪ್ರದೇಶದ ಹಾಗೂ ನಗರದ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
2. ಇ-ಪಾಸ್‌ಗೆ ಅರ್ಜಿ ಸಲ್ಲಿಸಿ ಎಂಬ ಟ್ಯಾಬ್ ಆಯ್ಕೆ ಮಾಡಿ.
3. ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.

4. ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ಸಲ್ಲಿಸಿ.
5. ನಿಮ್ಮ ಅರ್ಜಿಯನ್ನು ಅನುಮೋದಿಸಿದರೆ, ನಿಮಗೆ ಮೆಸೇಜ್ ಬರುತ್ತದೆ.
6. ನಂತರ ಇ-ಪಾಸ್‌ನ ಪ್ರಿಂಟ್ ಔಟ್ ತೆಗೆದುಕೊಳ್ಳಿ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಯಾವ ರಾಜ್ಯದಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು?
ಕರ್ನಾಟಕ: ಕರ್ನಾಟಕದಲ್ಲಿ ಇ-ಪಾಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ದೆಹಲಿ: ದೇಶದ ರಾಜಧಾನಿಯಾದ ದೆಹಲಿಯನ್ನು ಪ್ರವೇಶಿಸಲು ಪಾಸ್‌ನ ಅಗತ್ಯವಿದೆ. ಪಾಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಹರಿಯಾಣ: ಹರಿಯಾಣದ ಪಾಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಗುಜರಾತ್: ಗುಜರಾತ್ ಪಾಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ .

ಬಿಹಾರ: ಬಿಹಾರದ ಪಾಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಮಹಾರಾಷ್ಟ್ರ: ಮಹಾರಾಷ್ಟ್ರದ ಪಾಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ರಾಜಸ್ಥಾನ: ರಾಜಾಸ್ಥಾನದ ಪಾಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಪಂಜಾಬ್: ಪಂಜಾಬ್ ಪಾಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಮಧ್ಯಪ್ರದೇಶ: ಮಧ್ಯಪ್ರದೇಶದ ಪಾಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಛತ್ತೀಸ್‌ಗಢ್: ಛತ್ತೀಸ್‌ಗಢದ ಪಾಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications







