ಪಾರ್ಲಿಮೆಂಟ್ ಬಿಟ್ಟು ದುಬಾರಿ ಬೈಕ್‌ನಲ್ಲಿ ರಸ್ತೆಗಿಳಿದ ಜನಪ್ರಿಯ ಸಂಸದ: ವಿಡಿಯೋ ವೈರಲ್!
ಎಲ್ಲರಂತೆಯೇ ಸೆಲೆಬ್ರಿಟಿಗಳು ಕೂಡ ಬೈಕ್ ಸವಾರಿ ಮಾಡುವುದನ್ನು ತುಂಬಾ ಇಷ್ಟಪಡುತ್ತಾರೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಮಾಜಿ ಕ್ರಿಕೆಟ್ ಆಟಗಾರ ಎಂ.ಎಸ್ ಧೋನಿ, ಇವರು ಬೈಕ್ ಸವಾರಿ ಮಾಡುತ್ತಾ ಕಾಣಿಸಿಕೊಂಡಿರುವ ಹಲವಾರು ವಿಡಿಯೋಗಳನ್ನು ನೋಡಬಹುದು. ಇವರಂತೆಯೇ ಹಲವಾರು ಜನಪ್ರಿಯ ನಟರು ಮತ್ತು ನಟಿಯರು ಸವಾರಿ ಮಾಡಲು ಇಷ್ಟಪಡುತ್ತಾರೆ. ಆದರೆ ರಾಜಕಾರಣಿಗಳು ಬೈಕ್ ಸವಾರಿ ಮಾಡುವುದನ್ನು ಅಪರೂಪವಾಗಿ ನೋಡುತ್ತೇವೆ. ಇತ್ತೀಚೆಗೆ ಸಂಸದ ಅನುರಾಗ್ ಸಿಂಗ್ ಠಾಕೂರ್ ಹಾರ್ಲೆ ಡೇವಿಡ್‌ಸನ್ ಬೈಕ್ ಸವಾರಿ ಮಾಡುತ್ತಿರುವುದು ಕಂಡುಬಂದಿದೆ. ಈ ಕುರಿತ ವಿಡಿಯೋ ಕೂಡ ವೈರಲ್ ಆಗಿದೆ.
ವಿಡಿಯೋದಲ್ಲಿ ದೆಹಲಿಯ ವಿಶಾಲ ರಸ್ತೆಗಳಲ್ಲಿ ಬೈಕ್ ಸವಾರರ ಗುಂಪೊಂದು ರೈಡ್ ಹೊರಟಿರುವುದನ್ನು ನೋಡಬಹುದು. ಈ ರೈಡರ್‌ಗಳ ಗುಂಪಿನಲ್ಲಿ ದುಬಾರಿ ಬೆಲೆಯ ಹಾರ್ಲೆ ಡೇವಿಡ್ಸನ್ ಬೈಕ್‌ಗಳು ಇವೆ. ಮುಂಭಾಗದಲ್ಲಿ ಹಸಿರು ಬಣ್ಣದ ಹಾರ್ಲೆ ಡೇವಿಡ್ಸನ್ ರೋಡ್ ಗ್ಲೈಡ್ ಕ್ರೂಸರ್ ಬೈಕ್ ಕೇಂದ್ರಬಿಂದುವಾಗಿದೆ. ಏಕೆಂದರೆ ಗುಂಪಿನ ಎಲ್ಲಾ ಸದಸ್ಯರು ಸರಿಯಾದ ರೈಡಿಂಗ್ ಗೇರ್ ಧರಿಸಿದ್ದಾರೆ.

ಆದರೆ ರೋಡ್ ಗ್ಲೈಡ್ ಬೈಕ್ ಓಡಿಸುತ್ತಿರುವ ವ್ಯಕ್ತಿ ಮಾತ್ರ ಉದ್ದನೆಯ ಜಾಕೆಟ್, ಬೂಟುಗಳು, ಹೆಲ್ಮೆಟ್ ಮತ್ತು ಹ್ಯಾಂಡ್ ಗ್ಲೌಸ್ ಧರಿಸಿದ್ದರು. ಅದು ಬೇರೆ ಯಾರೂ ಅಲ್ಲ ಸಂಸದ ಅನುರಾಗ್ ಠಾಕೂರ್. ಸಲೀಸಾಗಿ ತಮ್ಮ ಬೈಕ್ ಸವಾರಿಯನ್ನು ಆನಂದಿಸುತ್ತಿದ್ದರು. ರೆಡ್ ಎಫ್ಎಂ ಆಯೋಜಿಸಿದ್ದ ಕಾರ್ಯಕ್ರಮದ ಭಾಗವಾಗಿ ಬೈಕ್ ಸವಾರಿ ಮಾಡುತ್ತಿರುವುದಾಗಿ ತಿಳಿದುಬಂದಿದೆ.
ಈ ಕಾರ್ಯಕ್ರಮದ ಸಿದ್ಧತೆಯಾಗಿ, ಸಂಘಟಕರು ದೇಶಾದ್ಯಂತ ಸುಮಾರು 32 ನಗರಗಳ ವಿವಿಧ ಬೈಕ್ ಸವಾರರ ಗುಂಪುಗಳೊಂದಿಗೆ ವಾರಾಂತ್ಯದ ಸವಾರಿಗಳನ್ನು ಆಯೋಜಿಸಿದ್ದರು. ದೆಹಲಿಯಲ್ಲಿ ಆಯೋಜಿಸಲಾದ ಈ ಸವಾರಿಯು ಭಾರತವನ್ನು ಮಾದಕವಸ್ತು ಮುಕ್ತವಾಗಿಸುವುದು ಎಂದು ತೋರುತ್ತದೆ. ಅನುರಾಗ್ ಠಾಕುರ್ ಇಂತಹ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ.

ಬೈಕ್ ವಿಶೇಷತೆಗಳು: ವೀಡಿಯೊದಲ್ಲಿ ಕಂಡುಬರುವ ಬೈಕ್ ಹಾರ್ಲೆ ಡೇವಿಡ್ಸನ್ ರೋಡ್ ಗ್ಲೈಡ್ ಸ್ಪೆಷಲ್ ಆಗಿದೆ. ಈ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರಾಂಡ್ ಅನ್ನು ಪ್ರಸ್ತುತ ಭಾರತದಲ್ಲಿ ಹೀರೋ ಮೋಟೊಕಾರ್ಪ್ ನಿರ್ವಹಿಸುತ್ತಿದೆ. ಏಕೆಂದರೆ ಹಾರ್ಲೆ ಡೇವಿಡ್ಸನ್, ನಮಗೆಲ್ಲರಿಗೂ ತಿಳಿದಿರುವಂತೆ ಅಧಿಕೃತವಾಗಿ ಭಾರತೀಯ ಮಾರುಕಟ್ಟೆಯನ್ನು ತೊರೆದಿದೆ.
ಭಾರತದಲ್ಲಿ ಹಾರ್ಲೆ ಡೇವಿಡ್‌ಸನ್ ಕಂಪನಿಯು ಕೆಲವು ಮಾದರಿಗಳನ್ನು ನೀಡುತ್ತಿದ್ದು, ರೋಡ್ ಗ್ಲೈಡ್ ಅವುಗಳಲ್ಲಿ ಒಂದಾಗಿದೆ. ಈ ಬೈಕ್ 1,868 ಸಿಸಿ ಟ್ವಿನ್ ಸಿಲಿಂಡರ್ ಎಂಜಿನ್ ಸಹಾಯದಿಂದ 92.5 ಬಿಹೆಚ್ ಪವರ್ ಮತ್ತು 158 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಮತ್ತು 23-ಲೀಟರ್ ಫ್ಯೂಯಲ್ ಟ್ಯಾಂಕ್ ನೊಂದಿಗೆ ಬರುತ್ತದೆ.
ವಿಡಿಯೋದಲ್ಲಿ ಕಂಡುಬರುವ ರೋಡ್ ಗ್ಲೈಡ್ ಲಿಮಿಟೆಡ್ ಹಳೆಯ ಮಾದರಿಯಾಗಿದ್ದು, ಬೈಕಿನ ಪ್ರಸ್ತುತ ಆವೃತ್ತಿಯು ಸಣ್ಣ ಕಾಸ್ಮೆಟಿಕ್ ಬದಲಾವಣೆಗಳನ್ನು ಹೊಂದಿದೆ. ಇದು ಕ್ರೂಸರ್ ಮೋಟಾರ್ ಸೈಕಲ್ ಆಗಿರುವುದರಿಂದ, ದೊಡ್ಡ ಇಂಧನ ಟ್ಯಾಂಕ್ ಸಾಮರ್ಥ್ಯವು ದೀರ್ಘ ಸವಾರಿಗಳಲ್ಲಿ ಸಹಾಯ ಮಾಡುತ್ತದೆ. ರೋಡ್ ಗ್ಲೈಡ್ ಲಿಮಿಟೆಡ್‌ನ ಈ ಆವೃತ್ತಿಯ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.37 ಲಕ್ಷಗಳಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications