ಐಕಾನಿಕ್ ಮಿನಿ ಕಾರಲ್ಲಿ ಮಿಸ್ಟರ್ ಬೀನ್ 25ರ ಸಂಭ್ರಮ
ಜನಪ್ರಿಯ ಮಿಸ್ಟರ್ ಬೀನ್ ಕಥಾ ಪಾತ್ರದ ಮೂಲಕ ಬ್ರಿಟನ್ ಜೊತೆಗೆ ವಿಶ್ವದ ಸರ್ವಕಾಲಿಕ ಶ್ರೇಷ್ಠ ಕಾಮಿಡಿ ಸ್ಟಾರ್ ಸಾಲಿನಲ್ಲಿ ಗುರುತಿಸಿಕೊಂಡಿರುವ ರೋವನ್ ಅಟ್ಕಿನ್ಸನ್, ತಮ್ಮ ಯಶಸ್ಸಿನ 25ನೇ ಜೈತ್ರಯಾತ್ರೆಯನ್ನು ಲಂಡನ್‌ನ ಬೀದಿಗಳಲ್ಲಿ ಐಕಾನಿಕ್ ಮಿನಿ ಕಾರಲ್ಲಿ ಸಂಚರಿಸುವ ಮೂಲಕ ಆಚರಿಸಿಕೊಂಡಿದ್ದಾರೆ.
ಹ್ಯಾಶ್ ಟ್ಯಾಗ್ ಹುಡುಕು: #MrBean25
ನಿಮಗೆಲ್ಲರಿಗೂ ತಿಳಿದಿರುವಂತೆಯೇ ಮಿಸ್ಟರ್ ಬೀನ್ ಹಾಸ್ಯ ರಂಗಗಳಲ್ಲಿ ಮಿನಿ ಕಾರು ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಈ ಸ್ಮರಣೀಯ ನಿಮಿಷಗಳನ್ನು ಮಗದೊಮ್ಮೆ ಹಚ್ಚ ಹಸಿರಾಗಿರಿಸಿರುವ ಬೀನ್ ಮತ್ತೆ ಗಮನ ಸೆಳೆದಿದ್ದಾರೆ. [ಚಿತ್ರಪುಟದ ಕೊನೆಯಲ್ಲಿ ವಿಡಿಯೋ ಕೊಡಲಾಗಿದೆ.]

ಮಿನಿ ಕಾರಿನ ಮೇಲ್ಗಡೆ ಕಟ್ಟಿರುವ ಕುರ್ಚಿಯ ಮೇಲೆ ಕುಳಿತುಕೊಂಡಿರುವ ಮಿಸ್ಟರ್ ಬೀನ್ ಸಾರ್ವಜನಿಕ ಬೀದಿಗಳಲ್ಲಿ ತಮ್ಮ ಚೇಷ್ಠೆಗಳನ್ನು ಮಾಡುವ ಮೂಲಕ ನೆರೆದಿದ್ದವರಿಗೆ ರಸದೌತಣವನ್ನು ನೀಡಿದರು.

ಇಂದಿಗೂ ಟಿವಿ ಹಾಗೂ ಡಿವಿಡಿಗಳಲ್ಲಿ ಮಿಸ್ಟರ್ ಬೀನ್ ಹಾಸ್ಯ ರಂಗಗಳು ಮೆರೆದಾಡುತ್ತಿದೆ. ಅವರು ಹೆಸರಾಂತ ಬಕ್ಕಿಂಗ್ ಹ್ಯಾಮ್ ಪ್ಯಾಲೇಸ್ ಕಡೆಗಳಲ್ಲಿ ತಮ್ಮ ಪಯಣವನ್ನು ಹಮ್ಮಿಕೊಂಡಿದ್ದರು.

ಪ್ರಸ್ತುತ 60ರ ಹರೆಯದ ಅಟ್ಕಿನ್ಸನ್, ಐಕಾನಿಕ್ 1976 ಬ್ರಿಟಿಷ್ ಲೇಲ್ಯಾಂಡ್ ಮಿನಿ 1000 ಕಾರಿನಲ್ಲಿ ಸಂಚರಿಸಿದ್ದರು. ಅಲ್ಲದೆ 1994ರಲ್ಲಿ ಪ್ರಸಾರಗೊಂಡಿದ್ದ 'ಡು ಇಟ್ ಯುವರ್ ಸೆಲ್ಪ್' ರಂಗವನ್ನು ಮತ್ತೆ ಮೆಲುಕು ಹಾಕಿದರು.

'ಟೆಡ್ಡಿ' ಎನ್ನುವ ಗೊಂಬೆಯನ್ನು ತಮ್ಮ ಬಳಿ ಕೂರಿಸಿದ ಮಿ. ಬೀನ್, ಐಸ್ ಕ್ರೀಂ ನೀಡುವ ಪ್ರಸಂಗವನ್ನು ಬಹಳ ರಸವತ್ತಾಗಿ ಚಿತ್ರಿಕರಿಸಲಾಗಿತ್ತು.

ಇವೆಲ್ಲದರ ಜೊತೆಗೆ ಸೆಲ್ಪಿಗೆ ಮರುಳಾಗಿರುವ ಇಂದಿನ ಯುವ ಜನಾಂಗದ ಪರವಾಗಿ ಮಿಸ್ಟರ್ ಬೀನ್ ಸೆಲ್ಫಿ ತೆಗೆಯುವ ಮೂಲಕವೂ ಗಮನ ಸೆಳೆದರು.
'ಮಿಸ್ಟರ್ ಬೀನ್ 25' ವಿಡಿಯೋ ವೀಕ್ಷಿಸಿ


Click it and Unblock the Notifications








