ಮಿಸ್ಟರ್ ಬೀನ್ ಕಾರು ದುರಸ್ತಿಗೆ 7.6 ಕೋಟಿ ಖರ್ಚು?
ಮಿಸ್ಟರ್ ಬೀನ್ ಹಾಸ್ಯ ಕಥಾಪಾತ್ರದ ಮೂಲಕ ಜನಪ್ರಿಯಗೊಂಡಿರುವ ರೋವನ್ ಅಟ್ಕಿನ್ಸನ್ ಕೆಲವು ತಿಂಗಳುಗಳ ಹಿಂದೆಯಷ್ಟೇ ಇನ್ನು ಮುಂದೆ ತಾವು ಇಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ತನ್ನ ಕೋಟ್ಯಂತರ ಅಭಿಮಾನಿಗಳಲ್ಲಿ ಬೇಸರಕ್ಕೆ ಕಾರಣವಾಗಿದ್ದರು.
ಆದರೂ ಮಿಸ್ಟರ್ ಬೀನ್ ಕಾಮಿಕ್ ಕಥಾಪಾತ್ರವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಹಿಂದೊಮ್ಮೆ ನಿದ್ದೆ ಮಂಪರಿನಲ್ಲಿದ್ದ ಈ ಬ್ರಿಟಿಷ್ ಹಾಸ್ಯನಟ ಮರವೊಂದಕ್ಕೆ ಕಾರೊಂದನ್ನು ಢಿಕ್ಕಿ ಹೊಡೆದಿದ್ದರು. ಇದರ ದುರಸ್ತಿ ವೆಚ್ಚ 7.6 ಕೋಟಿ ರುಪಾಯಿ ತಗಲಿರುವುದು ಈಗಿನ ಬ್ರೇಕಿಂಗ್ ನ್ಯೂಸ್!
ಢಿಕ್ಕಿಯಾದ ರಭಸಕ್ಕೆ ಮೆಕ್‌ಲ್ಯಾರೆನ್ ಎಫ್1 ಸೂಪರ್ ಕಾರು ಸಂಪೂರ್ಣವಾಗಿ ನಜ್ಜುಗುಜ್ಜುಗೊಂಡಿತ್ತು. ಇದರಂತೆ ಕಾರು ದುರಸ್ತಿಗೆ ಬ್ರಿಟನ್ ಮೂಲದ ಕಂಪನಿ ಬರೋಬ್ಬರಿ 7.6 ಕೋಟಿ ಖರ್ಚು ಮಾಡಿವೆ. ಈ ಮೂಲಕ ದುರಸ್ತಿಗಾಗಿ ವಿಶ್ವದಲ್ಲೇ ಅತಿ ಹೆಚ್ಚು ವೆಚ್ಚ ತಗುಲಿದ ಕಾರೆನಿಸಿದೆ.
ಇನ್ನು ವಿಶೇಷ ಸಂಗತಿಯೆಂದರೆ ಕಾರಿನ ನೈಜ ದರಕ್ಕಿಂತಲೂ ಹೆಚ್ಚು ದರವನ್ನು ದುರಸ್ತಿಗೆ ವಿಮಾ ಸಂಸ್ಥೆ ಪಾವತಿಸಿರುವುದು. ಅಂತೂ ಇಂತು ಮೆಕ್‌ಲ್ಯಾರೆನ್ ಎಫ್1 ಕಾರು ತನ್ನ ಹಳೆ ರೂಪ ಪಡೆದುಕೊಳ್ಳಲು ಯಶಸ್ವಿಯಾಗಿರುವುದು ಪಾತ್ರ ಸಂತಸದ ಸಂಗತಿಯಾಗಿದೆ.

ಯೂನಿಕ್ ಸೂಪರ್ ಕಾರು ಎನಿಸಿಕೊಂಡಿರುವ ಮೆಕ್‌ಲ್ಯಾರೆನ್, ಕಾಕ್‌ಪಿಟ್ ವಿನ್ಯಾಸ ಹೊಂದಿದೆ. ಇದರಲ್ಲಿ ಫಾರ್ಮುಲಾ ಒನ್ ಮಾದರಿಯಲ್ಲೇ ಡ್ರೈವರ್ ಮಧ್ಯದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಹೊಂದಿದೆ. ಇದು ಪ್ರತಿ ಗಂಟೆಗೆ ಗರಿಷ್ಠ 386.3 ಕೀ. ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

ಮೆಕ್‌ಲ್ಯಾರೆನ್ ಎಫ್1 ಕಾರು 6.1 ಲೀಟರ್ ವಿ12 ಎಂಜಿನ್ ಹೊಂದಿದೆ.

ಕಾರು ದುರಸ್ತಿಗೆ ಇಷ್ಟೊಂದು ವೆಚ್ಚ ತಗಲಿರುವುದು ಬೀನ್ ವಿಚಿತ್ರ ಕಥಾಪಾತ್ರದ ಹಾಗೆ ಹಾಸ್ಯಾಸ್ಪದವೆನಿಸಿದೆ. ಹಾಗಿದ್ದರೂ ದೊಡ್ಡ ಮೊತ್ತ ಪಾವತಿಸಲು ವಿಮಾ ಕಂಪನಿ ತಯಾರಾಗಿತ್ತು.

ಮೆಕ್‌ಲ್ಯಾರೆನ್ ಎಫ್1 ಸೂಪರ್ ಕಾರು

ಮೆಕ್‌ಲ್ಯಾರೆನ್ ಎಫ್1 ಸೂಪರ್ ಕಾರು

ಮೆಕ್‌ಲ್ಯಾರೆನ್ ಎಫ್1 ಸೂಪರ್ ಕಾರು

ಮೆಕ್‌ಲ್ಯಾರೆನ್ ಎಫ್1 ಸೂಪರ್ ಕಾರು

ಮೆಕ್‌ಲ್ಯಾರೆನ್ ಎಫ್1 ಸೂಪರ್ ಕಾರು



Click it and Unblock the Notifications








