ಸುಖೋಯ್ ಯುದ್ಧ ವಿಮಾನಗಳಿಗೆ ಎಂಆರ್‌ಎಫ್ ಚಕ್ರಗಳು
ಸುಖೋಯ್ ಯುದ್ಧ ವಿಮಾನಗಳು ಇನ್ನಷ್ಟು ಶಕ್ತಿಯುತವಾಗಲಿದೆ. ದೇಶದ ಎರಡನೇ ಅತಿದೊಡ್ಡ ಟೈರ್ ತಯಾರಿಕಾ ಸಂಸ್ಥೆಯಾಗಿರುವ ಎಂಆರ್‌ಎಫ್ ಟೈರ್ಸ್, ಮುಂದಿನ ದಿನಗಳಲ್ಲಿ ಭಾರತೀಯ ವಾಯು ಸೈನ್ಯದ ಸುಖೋಯ್ ಯುದ್ಧ ವಿಮಾನಗಳಿಗೆ ಚಕ್ರಗಳನ್ನು ಒದಗಿಸಲಿದೆ.
ಇವನ್ನೂ ಓದಿ: ವಿಶ್ವದ ಅತಿದೊಡ್ಡ ಪ್ರಯಾಣಿಕ ವಿಮಾನ
ಇದೀಗಷ್ಟೇ ಲಾಂಚ್ ಮಾಡಲಾಗಿರುವ ಎಂಆರ್‌ಎಫ್ ಏರೋಮಸಲ್ ಚಕ್ರಗಳನ್ನು ಇನ್ನು ಮುಂದೆ ಸುಖೋಯ್30 ಎಂಕೆಐ ಯುದ್ಧ ವಿಮಾನಗಳಿಗೆ ಬಳಕೆ ಮಾಡಲಾಗುವುದು. ಈ ಮೂಲಕ ವಾಯು ಸೇನೆಯ ಸುಖೋಯ್ ಯುದ್ಧ ವಿಮಾನಗಳಿಗೆ ಟೈರ್‌ಗಳನ್ನು ಪೂರೈಸುತ್ತಿರುವ ದೇಶದ ಮೊದಲ ಸಂಸ್ಥೆಯೆಂಬ ಹೆಗ್ಗಳಿಕೆಗೆ ಎಂಆರ್‌ಎಫ್ ಪಾತ್ರವಾಗಿದೆ.

ಎಂಆರ್‌ಎಫ್ ವಿನ್ಯಾಸಿತ ಈ ಚಕ್ರಗಳು ಹೈದರಾಬಾದ್‌ನ ಘಟಕದಲ್ಲಿ ಉತ್ಪಾದನೆಯಾಗುತ್ತಿದೆ. ಪ್ರಸ್ತುತ ಯೋಜನೆ 2008ನೇ ಇಸವಿಯಲ್ಲಿ ಆರಂಭಿಸಲಾಗಿತ್ತು.
ಫೋಟೊ ಕೃಪೆ: ವಿಕಿಪೀಡಿಯಾ
ವರದಿಗಳ ಪ್ರಕಾರ, ಶೇಕಡಾ 40ರಷ್ಟು ಅಗ್ಗದ ದರದಲ್ಲಿ ಭಾರತೀಯ ವಾಯು ಸೇನೆಯ ಸುಖೋಯ್ ಯುದ್ಧ ವಿಮಾನಗಳಿಗೆ ಎಂಆರ್‌ಎಫ್ ಚಕ್ರಗಳನ್ನು ವಿತರಿಸಲಿದೆ.
ಫೋಟೊ ಕೃಪೆ: ವಿಕಿಪೀಡಿಯಾ
ನಿಮ್ಮ ಮಾಹಿತಿಗಾಗಿ, ಜಾಗತಿಕವಾಗಿ ಐದು ಸಂಸ್ಥೆಗಳು ಯುದ್ಧ ವಿಮಾನ ಚಕ್ರಗಳನ್ನು ಉತ್ಪಾದಿಸುತ್ತಿವೆ. ಈ ಪೈಕಿ ಭಾರತೀಯ ವಾಯು ಸೇನೆಯು, ಸುಖೋಯ್‌ಗಾಗಿ ರಷ್ಯಾ ಚಕ್ರಗಳನ್ನು ಬಳಕೆ ಮಾಡುತ್ತಿದ್ದವು.
ಫೋಟೊ ಕೃಪೆ: ವಿಕಿಪೀಡಿಯಾ
ಅಂದ ಹಾಗೆ, ವಿಮಾನಯಾನ ಯೋಜನೆಯಲ್ಲಿ ಇದು ಎಂಆರ್‌ಎಫ್‌ನ ಎರಡನೇ ಯೋಜನೆಯಾಗಿರಲಿದೆ. ಇದಕ್ಕೂ ಮೊದಲು ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ (ಎಚ್‌ಎಎಳ್) ಜತೆಗೆ ಭಾರತೀಯ ವಾಯುಸೇನೆಯ ಚೇತಕ್ ಹೆಲಿಕಾಪ್ಟರ್‌ಗಳಿಗಾಗಿ ಚಕ್ರಗಳನ್ನು ಉತ್ಪಾದಿಸುತ್ತಿದ್ದವು. ಹಾಗೆಯೇ ಮಿಗ್ ಯುದ್ಧ ವಿಮಾನ ಹಾಗೂ ಭಾರತೀಯ ನೌಕಾಪಡೆಗೂ ಚಕ್ರಗಳನ್ನು ಉತ್ಪಾದಿಸುತ್ತಿವೆ.
ಫೋಟೊ ಕೃಪೆ: ವಿಕಿಪೀಡಿಯಾ
ನಿಮ್ಮ ಮಾಹಿತಿಗಾಗಿ, ಸುಖೋಯ್ ಎಸ್‌ಯು-30 ಎಂಕೆಐ, 430 ಕೋಟಿ ರು.ಗಳಷ್ಟು ದುಬಾರಿಯಾಗಿದೆ. ಇದೀಗ ದುಬಾರಿ ಯುದ್ಧ ವಿಮಾನಗಳಿಗೆ ಎಂಆರ್‌ಎಫ್ ಚಕ್ರಗಳನ್ನು ಬಳಕೆ ಮಾಡಲು ಭಾರತೀಯ ವಾಯು ಸೇನೆ ನಿರ್ಧರಿಸಿದೆ.

ಎಲ್ಲ ಹವಾಮಾನ ಪರಿಸ್ಥಿತಿಯಲ್ಲೂ ಹಾರಾಡಲು ಸಾಮರ್ಥ್ಯ ಹೊಂದಿರುವ ಸುಖೋಯ್, ಗಂಟೆಗೆ 420 ಕೀ.ಮೀ. ವೇಗದಲ್ಲಿ ಲ್ಯಾಂಡಿಂಗ್ ಮಾಡುವ ಸಾಮರ್ಥ್ಯ ಹೊಂದಿದೆ. ಹಾಗಿರುವಾಗ ಗರಿಷ್ಠ ಗುಣಮಟ್ಟದ ಚಕ್ರಗಳನ್ನು ಬಳಕೆ ಮಾಡಲಾಗುವುದು.
ಫೋಟೊ ಕೃಪೆ: ವಿಕಿಪೀಡಿಯಾ
ಸುಖೋಯ್ ಎಸ್‌ಯು-30ಎಂಕೆಐ ಯುದ್ಧ ವಿಮಾನವನ್ನು ರಷ್ಯಾ ಸುಖೋಯ್ ಕಾರ್ಪೋರೇಷನ್ ಹಾಗೂ ಭಾರತದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಜಂಟಿಯಾಗಿ ಅಭಿವೃದ್ಧಿಪಡಿಸಿದೆ. ಅಲ್ಲದೆ ಸ್ಥಳೀಯವಾಗಿ ಜೋಡಣೆ ಮಾಡಲಾಗಿದೆ.


Click it and Unblock the Notifications








