ಅಭಿಮಾನಿಯ ಐಷಾರಾಮಿ ಬಿಎಂಡಬ್ಲ್ಯು ಕಾರಿಗೆ ಆಟೋಗ್ರಾಫ್ ಹಾಕಿದ ಎಂಎಸ್ ಧೋನಿ

ಸಿನಿಮಾ ಕ್ಷೇತ್ರದ ಸೆಲೆಬ್ರಿಟಿಗಳು ಮತ್ತು ಕ್ರಿಕೆಟ್ ಆಟಗಾರರಿಗೆ ಹೊಂದಿರುವ ಕಾರುಗಳ ವಿಷಯಕ್ಕೆ ಬಂದರೆ, ಸೆಲೆಬ್ರಿಟಿಗಳ ಬಳಿ ಹಲವು ಐಷಾರಾಮಿ ಕಾರುಗಳನ್ನು ಕಾಣಬಹುದು. ಆದರೆ ಕೆಲವು ಸೆಲೆಬ್ರಿಟಿಗಳಿಗೆ ಬೈಕ್ ಗಳ ಮೇಲೆ ಭಾರೀ ಕ್ರೇಜ್ ಇರುತ್ತದೆ. ಅದರಲ್ಲೂ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಅವರ ವಾಹನಗಳ ಕ್ರೇಜ್ ಎಷ್ಟೇದೆ ಎಂದು ಎಲ್ಲರಿಗೂ ಗೂತ್ತಿರುವ ವಿಚಾರವಾಗಿದೆ.

ಟೀಂ ಇಂಡಿಯಾದ ಮಾಜಿ ನಾಯಕ ಧೋನಿ ಕ್ರಿಕೆಟ್​ನಷ್ಟ ಕಾರು-ಬೈಕ್ ಗಳನ್ನು ಕೂಡ ಪ್ರೀತಿಸುತ್ತಾರೆ. ಅವರ ಬಳಿಯಿರುವ ಕಾರು ಮತ್ತು ಬೈಕ್ ಸಂಗ್ರಹ ಎಂತವರಿಗೂ ಅಚ್ಚರಿ ಮೂಡಿಸುತ್ತದೆ. ಮಹೇಂದ್ರ ಸಿಂಗ್ ಧೋನಿ 2020 ರಲ್ಲಿ ಎಲ್ಲಾ ರೀತಿಯ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಅವರು ಅಪರೂಪದ ಹಳೆಯ ಕಾರುಗಳನ್ನು ಸೇರಿಸುವ ಮೂಲಕ ತಮ್ಮ ಕ್ಲಾಸಿಕ್ ಕಾರುಗಳ ಗ್ಯಾರೇಜ್ ಅನ್ನು ವಿಸ್ತರಿಸಿದರು.

MS Dhoni

ಈ ನಡುವೆ, ಎಂಎಸ್ ಧೋನಿ ಅಭಿಮಾನಿಗಳೊಂದಿಗೆ ಸಂವಾದದ ವೀಡಿಯೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಎಂಎಸ್ ಧೋನಿ ಅವರು ತಮ್ಮ ಅಭಿಮಾನಿಯ BMW 740i ಸೀರಿಸ್ ಕಾರಿಗೆ ಸಹಿ ಮಾಡುವುದನ್ನು ಕಾಣಬಹುದು. ಅವರು ತಮ್ಮ ಹೆಸರಿಗೆ ಸಹಿ ಮಾಡಲು ಪರಿಪೂರ್ಣ ಸ್ಥಳ ಮತ್ತು ಪೆನ್ ಅನ್ನು ಆಯ್ಕೆ ಮಾಡಲು ಸಮಯ ತೆಗೆದುಕೊಳ್ಳುತ್ತಾರೆ.

Instagram ಬಳಕೆದಾರ ಸುಮೀತ್ ಕುಮಾರ್ ಬಜಾಜ್ ಅವರು ಅಭಿಷೇಕ್ ಕೆರ್ಕೆಟ್ಟಾ ಎಂಬ ವ್ಯಕ್ತಿಯ ಕಾರಿಗೆ ಧೋನಿ ಸಹಿ ಮಾಡುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಧೋನಿ ಕಾರಿನ ಹಿಂಬದಿಯ ಸೀಟಿನಲ್ಲಿ ಪ್ರವೇಶಿಸುವುದನ್ನು ತೋರಿಸಲು ವೀಡಿಯೊ ಪ್ರಾರಂಭವಾಗುತ್ತದೆ. ಧೋನಿಯವರಿಗೆ ಒಬ್ಬ ವ್ಯಕ್ತಿ ಹಲವಾರು ಪೆನ್ನುಗಳನ್ನು ತೋರಿಸುತ್ತಾರೆ. ಕ್ರಿಕೆಟ್ ಒಂದನ್ನು ಆಯ್ಕೆ ಮಾಡಲು ಅವರು ಮಯವನ್ನು ತೆಗೆದುಕೊಳ್ಳುತ್ತಾರೆ.

MS Dhoni

ಈ ಐಷಾರಾಮಿ ಬಿಎಂಡಬ್ಲ್ಯು ಕಾರಿನ ಹಿಂಬದಿಯ ಸೀಟಿನಲ್ಲಿ ಅವನ ಹೆಸರನ್ನು ಸಹಿ ಮಾಡುತ್ತಾರೆ. ಈ ವೀಡಿಯೊ ಭಾರೀ ವೈರಲ್ ಆಗಿದೆ. ಈ ಹೊಸ ಬಿಎಂಡಬ್ಲ್ಯು 7 ಸೀರಿಸ್ 740i ಕಾರಿನ ಬೆಲೆಯು ಭಾರತದಲ್ಲಿ ಸುಮಾರು 1.70 ಕೋಟಿ ಎಕ್ಸ್ ಶೋ ರೂಂ ವೆಚ್ಚವಾಗಲಿದೆ. ಬಿಎಂಡಬ್ಲ್ಯು 740i ಕಾರು ಸ್ಪ್ಲಿಟ್-ಎಲ್‌ಇಡಿ ಹೆಡ್‌ಲೈಟ್ ಸೆಟಪ್ ಮತ್ತು ದೊಡ್ಡ ಕಿಡ್ನಿ ಗ್ರಿಲ್‌ನ ಸುತ್ತಲೂ ಪ್ರಕಾಶಿತ ಲೈಟ್ ಆಸಕ್ತಿದಾಯಕ ದೃಶ್ಯವಾಗಿದೆ.

ಸಾಂಪ್ರದಾಯಿಕ ಹ್ಯಾಂಡಲ್‌ಗಳ ಬದಲಿಗೆ ಆಂತರಿಕ ಟಚ್‌ಪ್ಯಾಡ್ ಮತ್ತು ಎಲೆಕ್ಟ್ರಾನಿಕ್ ಯಾಂತ್ರಿಕತೆಯೊಂದಿಗೆ ಫ್ಲಶ್ ಡೋರ್ ಹ್ಯಾಂಡಲ್‌ಗಳು ಮತ್ತೊಂದು ಪ್ರಮುಖ ಅಂಶವಾಗಿದೆ. 19-ಇಂಚಿನ ಅಲಾಯ್ ವ್ಹೀಲ್ ಗಳು ಸ್ಟ್ಯಾಂಡರ್ಡ್ ಲಭ್ಯವಿದ್ದರೂ, BMW 22-ಇಂಚಿಗೆ ಅಪ್‌ಗ್ರೇಡ್ ಮಾಡುವ ಆಯ್ಕೆಯನ್ನು ಸಹ ನೀಡುತ್ತದೆ. 7 ಸೀರಿಸ್ ಕಾರಿನ ಹಿಂಭಾಗಕ್ಕೆ ಬಂದರೆ, ಕಟ್-ಔಟ್ LED ಟೈಲ್‌ಲೈಟ್‌ಗಳು ಮತ್ತು ಬೃಹತ್ ಬಂಪರ್‌ಗೆ ಸೆಳೆಯಲ್ಪಡುತ್ತವೆ.

MS Dhoni

ಒಮ್ಮೆ ಇಂಟೀರಿಯರ್ ಗೆ ಬಂದರೆ ಇಳಿಯಲು ಮನಸ್ಸಾಗದ ರೀತಿಯಲ್ಲಿ ಕಂಪನಿ ವಾಹನವನ್ನು ಸಿದ್ಧಪಡಿಸಿದೆ. ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಡ್ಯಾಶ್‌ಬೋರ್ಡ್‌ನ ಅರ್ಧದವರೆಗೆ ವಿಸ್ತರಿಸಿರುವ ಡಿಸ್ ಪ್ಲೇ ಒದಗಿಸಲಾಗಿದೆ. ದುಲ್ಕರ್ ಸಲ್ಮಾನ್ ಅವರ ಬಿಎಂಡಬ್ಲ್ಯು 740i M ಸ್ಪೋರ್ಟ್ ಸೆಡಾನ್ ಕಾರಿನಲ್ಲಿ 3.0-ಲೀಟರ್, ಇನ್‌ಲೈನ್ ಆರು ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ.

ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನ ಮತ್ತು 8-ಸ್ಫೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೋಡಿಯಾಗಿರುವ ಎಂಜಿನ್ 380 bhp ಪವರ್ ಮತ್ತು 520 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಐಷಾರಾಮಿ ಕಾರು 5.4 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಧೋನಿ ಬಳಿ 90ರ ದಶಕದಲ್ಲಿ ತಾವು ಬಳಕೆ ಮಾಡುತ್ತಿದ್ದ ಯಮಹಾ ರಾಜ್‌ದೂತ್‌ 350 ಬೈಕ್‌ನಿಂದ ಹಲ್ವು ಅತ್ಯಾಧುನಿಕ ಬೈಕುಗಳು ಮತ್ತು ಕಾರುಗಳಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.

Article Published On: Tuesday, November 14, 2023, 13:30 [IST]
English summary
Ms dhoni delights fan by giving autograph on new bmw car viral video details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+