ಧೋನಿಯ ಕಾರು ಕಲೆಕ್ಷನ್‌ಗೆ ಬಂದ ಹೊಸ ಅತಿಥಿ ಯಾವುದು ಗೊತ್ತಾ? ಕಾರಿನ ನಂಬರ್‌ನಲ್ಲಿದೆ ವಿಶೇಷತೆ!

ಸಿನಿಮಾ ಸೆಲೆಬ್ರಿಟಿಗಳು ಮತ್ತು ಕ್ರಿಕೆಟ್ ಆಟಗಾರರಿಗೆ ಹೊಂದಿರುವ ಕಾರುಗಳ ವಿಷಯಕ್ಕೆ ಬಂದರೆ, ಸೆಲೆಬ್ರಿಟಿಗಳ ಬಳಿ ಹಲವು ಐಷಾರಾಮಿ ಸೂಪರ್ ಕಾರುಗಳನ್ನು ಕಾಣಬಹುದು. ಆದರೆ ಕೆಲವು ಸೆಲೆಬ್ರಿಟಿಗಳಿಗೆ ಬೈಕ್ ಗಳ ಮೇಲೆ ಭಾರೀ ಕ್ರೇಜ್ ಇರುತ್ತದೆ. ಅದರಲ್ಲೂ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಅವರ ವಾಹನಗಳ ಕ್ರೇಜ್ ಎಷ್ಟೇದೆ ಎಂದು ಎಲ್ಲರಿಗೂ ಗೂತ್ತಿರುವ ವಿಷಯ.

ಟೀಂ ಇಂಡಿಯಾದ ಮಾಜಿ ನಾಯಕ ಧೋನಿ ಕ್ರಿಕೆಟ್​ನಷ್ಟ ಕಾರು-ಬೈಕ್ ಗಳನ್ನು ಕೂಡ ಪ್ರೀತಿಸುತ್ತಾರೆ. ಅವರ ಬಳಿಯಿರುವ ಕಾರು ಮತ್ತು ಬೈಕ್ ಸಂಗ್ರಹ ಎಂತವರಿಗೂ ಅಚ್ಚರಿ ಮೂಡಿಸುತ್ತದೆ. ಮಹೇಂದ್ರ ಸಿಂಗ್ ಧೋನಿ 2020 ರಲ್ಲಿ ಎಲ್ಲಾ ರೀತಿಯ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಅವರು ಅಪರೂಪದ ಹಳೆಯ ಕಾರುಗಳನ್ನು ಸೇರಿಸುವ ಮೂಲಕ ಕಾರುಗಳ ಕಾರುಕಲೆಕ್ಷನ್ ಅನ್ನು ವಿಸ್ತರಿಸಿದರು.

MS Dhoni Seen Driving Mercedes-AMG G63

ಧೋನಿ ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲದೆ ಹೊರಗೂ ಸ್ಟಾರ್. ರಾಂಚಿಯ ಕಾರುಗಳ ಮೇಲಿನ ಪ್ರೀತಿ ಫೇಮಸ್ ಎಂಬುದು ಎಲ್ಲರಿಗೂ ಗೊತ್ತು. ಧೋನಿಯ ಮರ್ಸಿಡಿಸ್ ಎಎಂಜಿ ಜಿ63 ಎಸ್‍ಯುವಿಯು ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೆಂಡಿಂಗ್ ಆಗಿದೆ. ಧೋನಿ ಜನಪ್ರಿಯ ಎಸ್‌ಯುವಿಯನ್ನು ತಮ್ಮ ಸ್ವಂತ ಗ್ಯಾರೇಜ್‌ಗೆ ಸೇರಿಸಿದ್ದಾರೆ. ಈ ಹೊಸ ಮರ್ಸಿಡಿಸ್ ಎಎಂಜಿ ಜಿ63 (Mercedes-AMG G63) ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.3.3 ಕೋಟಿಯಾಗಿದೆ.

ಈ ಐಷಾರಾಮಿ ಮರ್ಸಿಡಿಸ್ ಎಸ್‍ಯುವಿಯ ಚಿತ್ರದಲ್ಲಿ ವಿಶೇಷವೇನು ಎಂದು ಕೇಳಿದರೆ ಅದು ಮರ್ಸಿಡಿಸ್ ಕಾರಿನ ನೋಂದಣಿ ಸಂಖ್ಯೆ. ಜಾರ್ಖಂಡ್ ನೋಂದಣಿ ಕಾರು ವಿಐಪಿ ನಂಬರ್ ಪ್ಲೇಟ್ '0007' ಹೊಂದಿತ್ತು. ಧೋನಿಯ ಜೆರ್ಸಿ ನಂಬರ್ ಕೂಡ '7' ಎಂಬುದು ಗಮನಾರ್ಹ. ಟ್ರಯಲ್ ಪ್ಯಾಕೇಜ್‌ನೊಂದಿಗೆ ಅಳವಡಿಸಲಾಗಿರುವ ಬೃಹತ್ ಮರ್ಸಿಡಿಸ್ ಎಸ್‌ಯುವಿಯನ್ನು ಧೋನಿ ಓಡಿಸುವ ವೀಡಿಯೊವನ್ನು ಅವರ ಟೆನಿಸ್ ಪಾಲುದಾರ ಸುಮೀತ್ ಕುಮಾರ್ ಬಜಾಜ್ ಅವರು Instagram ನಲ್ಲಿ ಹಂಚಿಕೊಂಡಿದ್ದಾರೆ.

MS Dhoni Seen Driving Mercedes-AMG G63

ಚಿಕ್ಕ ವೀಡಿಯೊದಲ್ಲಿ ಧೋನಿ ಡ್ರೈವರ್ ಸೀಟಿನಲ್ಲಿ ಕಾಣಿಸಿಕೊಂಡಿದ್ದಾರೆ. ಸ್ವಂತ ಕಾರುಗಳನ್ನು ಓಡಿಸಲು ಇಷ್ಟಪಡುವ ಧೋನಿ ತಮ್ಮ ಕಾರಿನೊಂದಿಗೆ ರಾಂಚಿ ನಗರವನ್ನು ಸುತ್ತುವ ವಿಡಿಯೋ ಆಗಾಗ ವೈರಲ್ ಆಗುತ್ತಿದೆ. ಸ್ಯಾಟಿನ್ ಬ್ಲ್ಯಾಕ್ ಬಣ್ಣವು ಕಾರಿನ ಒಟ್ಟಾರೆ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಎಂಎಸ್ ಧೋನಿಯ ಗ್ಯಾರೇಜ್‌ನಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ ಮತ್ತು ಜೀಪ್ ಟ್ರೈಲ್‌ಹಾಕ್ ಪಕ್ಕದಲ್ಲಿ ಮರ್ಸಿಡಿಸ್ ಎಎಮ್‌ಜಿ ಜಿ63 ಆಗಿದೆ.

ಮರ್ಸಿಡಿಸ್-ಬೆಂಝ್ G-Class ವಿಶ್ವದ ಅತ್ಯಂತ ಜನಪ್ರಿಯ ಐಷಾರಾಮಿ ಎಸ್‍ಯುವಿಗಳಲ್ಲಿ ಒಂದಾಗಿದೆ. ಸೆಲೆಬ್ರಿಟಿಗಳು ಮತ್ತು ಬಿಲಿಯನೇರ್‌ಗಳ ಗ್ಯಾರೇಜ್‌ಗಳಲ್ಲಿ ಇದು ಅನಿವಾರ್ಯ ಕಾರುಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ. ಈ ಮರ್ಸಿಡಿಸ್ ಎಎಂಜಿ 63 ಐಷಾರಾಮಿ ಎಸ್‍ಯುವಿಯು ಅನೇಕ ಸೆಲಬ್ರಿಟಿಗಳ ಮೆಚ್ಚಿನ ಆಯ್ಕೆಯಾಗಿದೆ. ಮರ್ಸಿಡಿಸ್ ಬೆಂಝ್ ಭಾರತ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ಅತಿ ದೊಡ್ಡ ಐಷಾರಾಮಿ ಕಾರು ಬ್ರಾಂಡ್‌ಗಳಲ್ಲಿ ಒಂದಾಗಿದೆ. ಅವರು ಇದೀಗ ಅನೇಕ ವಾಹನಗಳನ್ನು ಮಾರಾಟ ಮಾಡುತ್ತಿದ್ದಾರೆ.

MS Dhoni Seen Driving Mercedes-AMG G63

ಮರ್ಸಿಡಿಸ್ ಬೆಂಝ್ ಕಂಪನಿಯ ಜನಪ್ರಿಯ ಎಸ್‍ಯುವಿಗಳಲ್ಲಿ ಜಿ-ವ್ಯಾಗನ್. ಕೂಡ ಒಂದಾಗಿದೆ. ಈ ಮರ್ಸಿಡಿಸ್ ಬೆಂಝ್ ಜಿ-ವ್ಯಾಗನ್ ಅನೇಕ ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಆದರೆ ಕಂಪನಿಯು ಈ ಎಸ್‍ಯುವಿಯ ವಿನ್ಯಾಸವನ್ನು ಹೆಚ್ಚು ಬದಲಾಯಿಸಲಿಲ್ಲ. ಇದು ರೆಟ್ರೋದಂತೆ ಕಾಣುತ್ತದೆ ಆದರೆ ಪ್ರೀಮಿಯಂ ಲುಕ್ ಅನ್ನು ಹೊಂದಿದೆ.

ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿಯಲ್ಲಿ 4.0 ಲೀಟರ್ ವಿ8 ಬಿಟುರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 585 ಬಿಎಚ್‌ಪಿ ಪವರ್ ಮತ್ತು 850 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಐಷಾರಾಮಿ ಎಸ್‍ಯುವಿಯು ವೃತ್ತಾಕಾರದ ಹೆಡ್‌ಲ್ಯಾಂಪ್‌ಗಳೊಂದಿಗೆ ಸಂಯೋಜಿತ ಎಲ್‌ಇಡಿ ಡಿಆರ್‌ಎಲ್‌ಗಳು, ಪನಾಮೆರಿಕಾನಾ ಗ್ರಿಲ್ ಮತ್ತು ನಾಲ್ಕು ದಶಕಗಳಿಂದ ಬದಲಾಯಿಸದ ಬಾಕ್ಸಿ ಸಿಲೂಯೆಟ್ ಅನ್ನು ಒಳಗೊಂಡಿದೆ.

ಈ ಐಕಾನಿಕ್ ಆಫ್-ರೋಡರ್ ನಲ್ಲಿ ಸುರಕ್ಷತೆಗಾಗಿ 8 ಏರ್‍‍ಬ್ಯಾಗ್‍‍ಗಳು, ಇಎಸ್‍ಸಿ, ಎ‍ಬಿಎಸ್ ಜೊತೆ ಇ‍ಬಿಡಿ,ಬ್ರೇಕ್ ಅಸಿಸ್ಟ್, ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ ಅನ್ನು ಹೊಂದಿದೆ. ಭಾರತದ ಕೆಲವು ಪ್ರಸಿದ್ದ ಸೆಲಬ್ರಿಟಿಗಳಾದ ಜಿಮ್ಮಿ ಶೆರ್ಗಿಲ್, ಸಾರಾ ಅಲಿ ಖಾನ್, ಹಾರ್ದಿಕ್ ಪಾಂಡೆ, ಅಖಿಲ್ ಅಕ್ಕಿನೇನಿ, ರಣಬೀರ್ ಕಪೂರ್, ಅನಂತ್ ಅಂಬಾನಿ, ಪವನ್ ಕಲ್ಯಾಣ್, ದುಲ್ಕರ್ ಸಲ್ಮಾನ್ ಮತ್ತು ಆಸಿಫ್ ಅಲಿ ಮರ್ಸಿಡಿಸ್ ಜಿ-ವ್ಯಾಗನ್ ಎಸ್‍ಯುವಿಯನ್ನು ಹೊಂದಿದ್ದಾರೆ.

More from DriveSpark

Article Published On: Wednesday, November 29, 2023, 13:42 [IST]
English summary
Ms dhoni new ride is mercedes amg g63 suv special number plate details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+