ಮಗಳ ಜೊತೆಗೆ ಜಾಲಿ ರೈಡ್ ಮಾಡಿದ ಎಂ‌ಎಸ್ ಧೋನಿ

ಲಾಕ್‌ಡೌನ್ ಪ್ರತಿಯೊಬ್ಬರನ್ನು ಮನೆಯೊಳಗಿರುವಂತೆ ಮಾಡಿದೆ. ಇದರಿಂದಾಗಿ ಜನರು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುವಂತಾಗಿದೆ. ಲಾಕ್‌ಡೌನ್‌ನಿಂದ ಎಲ್ಲಾ ಕ್ರೀಡಾಕೂಟಗಳನ್ನು ಮುಂದೂಡಲಾಗಿರುವುದರಿಂದ, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಐಷಾರಾಮಿ ಫಾರ್ಮ್ ಹೌಸ್‌ನಲ್ಲಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.

ಮಗಳ ಜೊತೆಗೆ ಜಾಲಿ ರೈಡ್ ಮಾಡಿದ ಎಂ‌ಎಸ್ ಧೋನಿ

ಎಂ‌ಎಸ್ ಧೋನಿಯವರ ವೀಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಧೋನಿರವರು ತಮ್ಮ ಮಗಳು ಝೀವಾ ಜೊತೆಗೆ ಯಮಹಾ ಆರ್‌ಡಿ 350 ಬೈಕ್‌ನಲ್ಲಿ ಸವಾರಿ ಮಾಡುತ್ತಿದ್ದಾರೆ. ಈ ವೀಡಿಯೊವನ್ನು ಅವರ ಪತ್ನಿ ಸಾಕ್ಷಿ ಧೋನಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ಸಣ್ಣ ಮಗು ಹಾಗೂ ದೊಡ್ಡ ಮಗು ಸೇರಿ ಇಬ್ಬರು ಮಕ್ಕಳು ಆಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಮಗಳ ಜೊತೆಗೆ ಜಾಲಿ ರೈಡ್ ಮಾಡಿದ ಎಂ‌ಎಸ್ ಧೋನಿ

ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ. ಇದುವರೆಗೂ ಈ ವೀಡಿಯೊವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಧೋನಿ ಕೆಲವು ವರ್ಷಗಳ ಹಿಂದಷ್ಟೇ ತಮ್ಮ ಯಮಹಾ ಆರ್‌ಡಿ 350 ಬೈಕ್ ಅನ್ನು ಮಾಡಿಫೈಗೊಳಿಸಿದ್ದಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಮಗಳ ಜೊತೆಗೆ ಜಾಲಿ ರೈಡ್ ಮಾಡಿದ ಎಂ‌ಎಸ್ ಧೋನಿ

ಧೋನಿಯವರ ಬಳಿಯಿರುವ ಕೆಲವು ಹಳೆಯ ಬೈಕ್‌ಗಳಲ್ಲಿ ಈ ಬೈಕ್ ಕೂಡ ಒಂದು. ಇದಕ್ಕೂ ಮುಂಚೆ, ಧೋನಿರವರು ರಾಂಚಿಯ ಬಿರ್ಸಾ ಮುಂಡಾ ಕ್ರಿಕೆಟ್ ಕ್ರೀಡಾಂಗಣದ ಹೊರಗೆ ಈ ಬೈಕಿನಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ.

ಮಗಳ ಜೊತೆಗೆ ಜಾಲಿ ರೈಡ್ ಮಾಡಿದ ಎಂ‌ಎಸ್ ಧೋನಿ

ಕೆಲವು ವಾರಗಳ ಹಿಂದಷ್ಟೇ ಧೋನಿರವರು ತಮ್ಮ ಸ್ವಂತ ಊರಾದ ರಾಂಚಿಯಲ್ಲಿ ಹಾರ್ಲೆ-ಡೇವಿಡ್ಸನ್ ಫ್ಯಾಟ್ ಬಾಯ್ ಬೈಕ್ ಅನ್ನು ಸವಾರಿ ಮಾಡಿದ್ದರು. ಎಂ‌ಎಸ್ ಧೋನಿರವರು ಯಮಹಾ ಆರ್‌ಡಿ 350, ಡುಕಾಟಿ 1098, ಕವಾಸಕಿ ನಿಂಜಾ ಝಡ್ಎಕ್ಸ್ -14 ಆರ್‌ನಂತಹ ಬೈಕ್‌ಗಳನ್ನು ಹೊಂದಿದ್ದಾರೆ. ಧೋನಿ ಅವರ ಬಳಿ ಹಲವಾರು ಐಷಾರಾಮಿ ಕಾರು ಹಾಗೂ ಬೈಕುಗಳಿವೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಮಗಳ ಜೊತೆಗೆ ಜಾಲಿ ರೈಡ್ ಮಾಡಿದ ಎಂ‌ಎಸ್ ಧೋನಿ

ಕವಾಸಕಿ ನಿಂಜಾ ಹೆಚ್ 2 ಹಾಗೂ ಕಾನ್ಫೆಡರೇಟ್ ಎಕ್ಸ್ 132 ಹೆಲ್ ಕ್ಯಾಟ್ ಧೋನಿಯವರ ಬೈಕ್ ಸಂಗ್ರಹದಲ್ಲಿರುವ ಆಕರ್ಷಕ ಬೈಕುಗಳಾಗಿವೆ. ಧೋನಿರವರು ಕವಾಸಕಿ ನಿಂಜಾ ಹೆಚ್ 2 ಬೈಕ್ ಖರೀದಿಸಿದ ಮೊದಲ ಭಾರತೀಯ.

ಮಗಳ ಜೊತೆಗೆ ಜಾಲಿ ರೈಡ್ ಮಾಡಿದ ಎಂ‌ಎಸ್ ಧೋನಿ

ಈ ಬೈಕ್ ಅನ್ನು ಅವರಿಗೆ 2015ರಲ್ಲಿ ವಿತರಿಸಲಾಯಿತು. ಧೋನಿ ಯಮಹಾ ಆರ್‌ಡಿ 350 ಬೈಕ್‌ ಅನ್ನು ಹೆಚ್ಚು ಇಷ್ಟಪಡುತ್ತಾರೆ. ಈ ಬೈಕ್ ಅನ್ನು ಹುಡುಕಿಕೊಂಡು ಅವರು ಕೇರಳದ ತ್ರಿಶೂರ್‌ಗೆ ಹೋಗಿದ್ದರು. ಈ ಬೈಕ್‌ ಅನ್ನು ಕೇವಲ ರೂ.4,500 ಕೊಟ್ಟು ಖರೀದಿಸಿದ್ದಾರೆ ಎಂದು ಹೇಳಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಮಗಳ ಜೊತೆಗೆ ಜಾಲಿ ರೈಡ್ ಮಾಡಿದ ಎಂ‌ಎಸ್ ಧೋನಿ

ಯಮಹಾ ಆರ್‌ಡಿ 350 ಬೈಕಿನಲ್ಲಿ 2-ಸ್ಟ್ರೋಕ್ 350 ಸಿಸಿ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 30.5 ಬಿಹೆಚ್‌ಪಿ ಪವರ್ ಹಾಗೂ 32.3 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನಲ್ಲಿ 6-ಸ್ಪೀಡ್ ಗೇರ್ ಬಾಕ್ಸ್ ಅಳವಡಿಸಲಾಗಿದ್ದು, ಈ ಬೈಕ್ 155 ಕೆ.ಜಿ ತೂಕವನ್ನು ಹೊಂದಿದೆ.

Article Published On: Wednesday, April 22, 2020, 16:01 [IST]
English summary
MS Dhoni rides his Yamaha RD350 with daughter Ziva as pillion. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+