ಕುಬೇರನ ಕುಟುಂಬಕ್ಕೆ ಹೊಸ ಅತಿಥಿ: 1000 ಕೋಟಿ ಯಾವ ಲೆಕ್ಕ... ವಿಶ್ವ ಶ್ರೀಮಂತರಿಗೆ ಶಾಕ್!

ಭಾರತದಲ್ಲಿ ಇತ್ತೀಚೆಗೆ ಮಗನ ಅತ್ಯಂತ ದುಬಾರಿ ಮದುವೆ ಮಾಡಿ ವಿಶ್ವವೇ ಭಾರತವನ್ನು ತಿರುಗಿ ನೋಡುವಂತೆ ಮಾಡಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ, ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಭಾರತದ ಮೊದಲ ಬೋಯಿಂಗ್ 737 ಮ್ಯಾಕ್ಸ್ 9 ಅನ್ನು ಡೆಲಿವರಿ ಪಡೆದಿದ್ದಾರೆ. ಈ ವಿಮಾನ ಪ್ರಸ್ತುತ ಭಾರತದ ಇತರ ಯಾವುದೇ ಉದ್ಯಮಿ ಒಡೆತನದಲ್ಲಿ ಇಲ್ಲದ ಅತ್ಯಂತ ದುಬಾರಿ ಖಾಸಗಿ ಜೆಟ್ ಆಗಿದೆ. ಈ ಅಲ್ಟ್ರಾ ಲಾಂಗ್ ರೇಂಜ್ ಬಿಸಿನೆಸ್ ಜೆಟ್ ಬೆಲೆಯು ಸುಮಾರು 1000 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ವಿಮಾನ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೋಣ.

ಮುಕೇಶ್ ಅಂಬಾನಿ ಅವರ ಬೋಯಿಂಗ್ 737 ಮ್ಯಾಕ್ಸ್ 9 ವಿಮಾನದ ಒಳಾಂಗಣದ ಯಾವುದೇ ಚಿತ್ರಗಳು ಲಭ್ಯವಿಲ್ಲದಿದ್ದರೂ, ಇದು ಅತ್ಯಂತ ಐಷಾರಾಮಿ ಇಂಟೀರಿಯರ್ ಹೊಂದಿದೆ. ಹೌದು, ಸ್ವಿಟ್ಜರ್ಲೆಂಡ್‌ನ ಯುರೋಏರ್‌ಪೋರ್ಟ್ ಬಾಸೆಲ್-ಮುಲ್ಹೌಸ್-ಫ್ರೀಬರ್ಗ್‌ನಲ್ಲಿ ವ್ಯಾಪಕ ಕ್ಯಾಬಿನ್ ಮಾರ್ಪಾಡುಗಳು ಮತ್ತು ಒಳಾಂಗಣ ನವೀಕರಣಗಳನ್ನು ಮಾಡಲಾಗಿದೆ.

mukesh-ambani-bought-boeing-bbj-737-max-9-private-jet

ಅಂಬಾನಿ ಕುಟುಂಬವು ಬಹುಪಾಲು ಮಾಡಿಫಿಕೇಷನ್‌ಗೆ ಹೆಚ್ಚಿನ ಹಣವನ್ನು ಖರ್ಚು ಮಾಡಿದೆ, ಈ ಮಾಡಿಫಿಕೇಷನ್ ಖರ್ಚನ್ನು ಸೇರಿಸಿದರೆ ವಿಮಾನದ ಒಟ್ಟು ಮೌಲ್ಯ 1000 ಕೋಟಿ ರೂ. ದಾಟುತ್ತದೆ. ಇದರ ಹಿಂದಿನ ಮಾಡೆಲ್ ಆಗಿರುವ ಬೋಯಿಂಗ್ ಮ್ಯಾಕ್ಸ್ 8ಗೆ ಹೋಲಿಸಿದರೆ ಅಂಬಾನಿಯ ಇತ್ತೀಚಿನ ಮ್ಯಾಕ್ಸ್ 9 ವಿಮಾನ ಹೆಚ್ಚಿನ ಕ್ಯಾಬಿನ್ ಮತ್ತು ಸರಕು ವಿಭಾಗವನ್ನು ಹೊಂದಿದೆ.

ಹೊಸ ಬೋಯಿಂಗ್ 737 ಮ್ಯಾಕ್ಸ್ 9 ಮುಖೇಶ್ ಅಂಬಾನಿಯ ಏಕೈಕ ಖಾಸಗಿ ವಿಮಾನವೇನಲ್ಲ. ರಿಲಯನ್ಸ್ ಇಂಡಸ್ಟ್ರೀಸ್ ಈಗಾಗಲೇ 10 ಖಾಸಗಿ ಜೆಟ್‌ಗಳನ್ನು ಹೊಂದಿದೆ. ಇದರಲ್ಲಿ ಬೊಂಬಾರ್ಡಿಯರ್ ಗ್ಲೋಬಲ್ 6000, ಎರಡು ಡಸಾಲ್ಟ್ ಫಾಲ್ಕನ್ 900, ಎಂಬ್ರೇರ್ ಇಆರ್‌ಜೆ -135 ಸೇರಿದಂತೆ ಎರಡು ಹೆಲಿಕಾಪ್ಟರ್‌ಗಳನ್ನು ಹೊಂದಿದೆ.

mukesh-ambani-bought-boeing-bbj-737-max-9-private-jet

ಬೋಯಿಂಗ್ 737 ಮ್ಯಾಕ್ಸ್ 9 ವಿಶೇಷತೆಗಳು: ಈ ವಿಮಾನವನ್ನು ಜನಪ್ರಿಯ ಬೋಯಿಂಗ್‌ನ ರೆಂಟನ್ ಉತ್ಪಾದನಾ ಸೌಲಭ್ಯದಲ್ಲಿ ಜೋಡಿಸಲಾಗಿದೆ. ಪ್ರಸ್ತುತ ವಿಶ್ವದ ಅತ್ಯಂತ ದುಬಾರಿ ಜೆಟ್‌ಗಳಲ್ಲಿ ಒಂದಾಗಿರುವ ಇದು, ಎರಡು ಸಿಎಫ್ಎಂಐ ಲೀಪ್ -1 ಬಿ ಎಂಜಿನ್‌ಗಳಿಂದ ನಿಯಂತ್ರಿಸಲ್ಪಡುತ್ತದೆ. ಒಂದೇ ಪ್ರಯಾಣದಲ್ಲಿ 6,355 ನಾಟಿಕಲ್ ಮೈಲಿ (11,770 ಕಿ.ಮೀ) ಕ್ರಮಿಸಬಲ್ಲದು.

ಭಾರತಕ್ಕೆ ತರುವ ಮೊದಲು, ವಿಮಾನವನ್ನು ಏಪ್ರಿಲ್ 13, 2023 ರಿಂದ ಸ್ವಿಸ್ ಸೌಲಭ್ಯದಲ್ಲಿ ಸರಣಿ ಪರೀಕ್ಷಾ ಹಾರಾಟಗಳಿಗೆ ಒಳಪಡಿಸಲಾಗಿತ್ತು. ಬಾಸೆಲ್, ಜಿನೀವಾ ಮತ್ತು ಲಂಡನ್ ಲುಟಾನ್ ವಿಮಾನ ನಿಲ್ದಾಣಗಳ ನಡುವೆ ಆರು ಪರೀಕ್ಷಾ ಹಾರಾಟಗಳನ್ನು ನಡೆಸಲಾಗಿತ್ತು. ಆಗಸ್ಟ್ 27, 2024 ರಂದು, ಬೋಯಿಂಗ್ 737 ಮ್ಯಾಕ್ಸ್ 9 ಬಾಸೆಲ್‌ನಿಂದ ದೆಹಲಿಗೆ ತನ್ನ ಅಂತಿಮ ಹಾರಾಟವನ್ನು ಪೂರ್ಣಗೊಳಿಸಿದೆ.

mukesh-ambani-bought-boeing-bbj-737-max-9-private-jet

ಈ ಪ್ರಯಾಣವು 6,234 ಕಿ.ಮೀ ದೂರವಿದ್ದು, ಒಂಬತ್ತು ಗಂಟೆಗಳ ಕಾಲ ನಡೆಯಿತು. ಭಾರತೀಯ ಕಾಲಮಾನದ ಪ್ರಕಾರ ಸಂಜೆ 7:18ಕ್ಕೆ ಜೆಟ್ ದೆಹಲಿಯ ರನ್ವೇಯಲ್ಲಿ ಇಳಿಯಿತು. ಭಾರತಕ್ಕೆ ಆಗಮಿಸಿದ ನಂತರ, ಅಂಬಾನಿಯ ಬೋಯಿಂಗ್ 737 ಮ್ಯಾಕ್ಸ್ 9 ಅನ್ನು ಪ್ರಸ್ತುತ ದೆಹಲಿ ವಿಮಾನ ನಿಲ್ದಾಣದ ಗೂಡ್ಸ್ ಟರ್ಮಿನಲ್ ಬಳಿಯ ನಿರ್ವಹಣಾ ಏಪ್ರನ್‌ನಲ್ಲಿ ನಿಲ್ಲಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, September 18, 2024, 15:01 [IST]
English summary
Mukesh ambani bought boeing bbj 737 max 9 private jet
Read more on india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+