Ambani: 4.5 ಕೋಟಿಯ ಫೆರಾರಿ ರೋಮಾ ಖರೀದಿಸಿದ ಮುಕೇಶ್ ಅಂಬಾನಿ.. ಅಂತಹದ್ದೇನು ವಿಶೇಷತೆ?
ದೇಶದ ಆಗರ್ಭ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ (Reliance) ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಸ್ಥಾನ ಪಡೆದಿದ್ದಾರೆ. ಅವರ ಗ್ಯಾರೇಜ್‌ನಲ್ಲಿ ಕೋಟಿ - ಕೋಟಿ ಬೆಲೆಯ ದುಬಾರಿ ಕಾರುಗಳ ದೊಡ್ಡ ಸಂಗ್ರಹವೇ ಇದ್ದು, ಸದ್ಯ ಮುಕೇಶ್ ಅಂಬಾನಿ ಹೊಸ 4.5 ಕೋಟಿ ರೂಪಾಯಿಯ ಸೂಪರ್‌ಕಾರ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ.
ಮುಂಬೈನ ರಸ್ತೆಯಲ್ಲಿ ನೂತನ ಫೆರಾರಿ ರೋಮಾ (Ferrari Roma) ಕಾರು ಭಾರೀ ಭದ್ರತೆಯೊಂದಿಗೆ ಹೋಗುತ್ತಿರುವುದು ಕಂಡುಬಂದಿದ್ದು, ಅಂಬಾನಿ ಕುಟುಂಬ ಸದಸ್ಯರೊಬ್ಬರು ಓಡಿಸಿದ್ದಾರೆ ಎನ್ನಲಾಗಿದೆ. ಆ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. 2021ರಲ್ಲಿ ಬಿಡುಗಡೆಗೊಂಡ ಈ ಕಾರು, ಭಾರತದಲ್ಲಿ ದೊಡ್ಡಮಟ್ಟದ ಜನಪ್ರಿಯತೆ ಹೊಂದಿದ್ದು, ಇದರ ಆಕರ್ಷಕ ನೋಟಕ್ಕೆ ಮನಸೋಲದವರೇ ಇಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಫೆರಾರಿ ರೋಮಾ ಕಾರಿನ ವಿಶೇಷತೆ ಬಗ್ಗೆ ಮಾತನಾಡುವುದಾದರೆ, ಈ ಕಾರು 3.9 - ಲೀಟರ್ ಸಾಮರ್ಥ್ಯದ ಟರ್ಬೋಚಾರ್ಜ್ಡ್ ವಿ8 ಪೆಟ್ರೋಲ್ ಎಂಜಿನ್ ಹೊಂದಿದ್ದು, 612 bhp ಗರಿಷ್ಠ ಪವರ್ ಹಾಗೂ ಮತ್ತು 760 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯದ ಪಡೆದಿದೆ. ಜೊತೆಗೆ 8 - ಸ್ವೀಡ್ ಡಿಸಿಟಿ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ.
ನೂತನ ಫೆರಾರಿ ರೋಮಾ RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದ್ದು, 8.93 kmpl ಮೈಲೇಜ್ ನೀಡುತ್ತದೆ. ಕೇವಲ 3.4 ಸೆಕೆಂಡುಗಳಲ್ಲಿ 0 -100 kmph, 9.3 ಸೆಕೆಂಡುಗಳಲ್ಲಿ 200 kmph ವೇಗವನ್ನು ಪಡೆಯಲಿದ್ದು, 320 kmph ಟಾಪ್ ಸ್ವೀಡ್ ಹೊಂದಿದೆ. 8.4 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 16 - ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮುಕೇಶ್ ಅಂಬಾನಿ ಅವರು ಹಲವು ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಅವರ ಬಳಿಯಿರುವ ರೋಲ್ಸ್ ರಾಯ್ಸ್ ಫ್ಯಾಂಟಮ್ (Rolls Royce Phantom), ರೂ.13.50 ಕೋಟಿ ಬೆಲೆಯನ್ನು ಪಡೆದಿದೆ. ಈ ಕಾರು, 6.75-ಲೀಟರ್ ಸಾಮರ್ಥ್ಯದ ವಿ12 ಪೆಟ್ರೋಲ್ ಎಂಜಿನ್ ಹೊಂದಿದೆ. 563 bhp ಗರಿಷ್ಠ ಪವರ್ ಹಾಗೂ 900 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ.
ಬಿಎಂಡಬ್ಲ್ಯೂ 760ಎಲ್ಐ ಸೆಕ್ಯುರಿಟಿ (BMW 760Li Security) ಕಾರನ್ನು ಕೂಡ ಮುಕೇಶ್ ಅಂಬಾನಿ ಹೊಂದಿದ್ದು, ಈ ಕಾರು ತನ್ನ ಪ್ರಯಾಣಿಕರಿಗೆ ಸುರಕ್ಷಿತ ಪ್ರಯಾಣವನ್ನು ಒದಗಿಸುತ್ತದೆ. ಇದರ ಬೆಲೆ ರೂ. 8.9 ಕೋಟಿಯಿದೆ. ಬಿಎಂಡಬ್ಲ್ಯೂ 760ಎಲ್ಐ, 6-ಲೀಟರ್ ವಿ12 ಎಂಜಿನ್ ಹೊಂದಿದ್ದು, 544 bhp ಪವರ್ ಮತ್ತು 880 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಮುಕೇಶ್ ಅಂಬಾನಿ ಅವರ ಬಳಿ ಫೆರಾರಿ ಎಸ್ಎಫ್ 90 ಸ್ಟ್ರಾಡೇಲ್ (Ferrari SF90 Stradale) ಸ್ಪೋರ್ಟ್ಸ್ ಹೈಬ್ರಿಡ್ ಕಾರು ಕೂಡ ಇದ್ದು, ರೂ.7.50 ಕೋಟಿ ಬೆಲೆಯನ್ನು ಹೊಂದಿದೆ. 4-ಲೀಟರ್ ವಿ8 ಎಂಜಿನ್ ಪಡೆದಿದೆ. 769 bhp ಗರಿಷ್ಠ ಪವರ್ 800 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿದೆ.
ಇದಿಷ್ಟೇ ಅಲ್ಲದೆ, ಮುಕೇಶ್ ಅಂಬಾನಿ ಅವರು ಬೆಂಟ್ಲಿ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್ ಸೇರಿದಂತೆ ಹಲವು ದುಬಾರಿ ಬೆಲೆಯ ಕಾರುಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಕುಲ್ಲಿನನ್ (Rolls Royce Cullinan) ಕಾರನ್ನು ತಮ್ಮ ಪತ್ನಿ ನೀತಾ ಅಂಬಾನಿಗೆ ಉಡುಗೊರೆಯಾಗಿ ನೀಡಿದ್ದರು. ಈ ಕಾರು ರೂ.8.2 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications