ಪ್ರಧಾನಿ ಮೋದಿ ಕಾರಿಗೆ ಸೆಡ್ಡು ಹೊಡೆಯಬಲ್ಲ ಭಾರತದ ಏಕೈಕ ಕಾರನ್ನು ಖರೀದಿಸಿದ ದೇಶದ ಶ್ರೀಮಂತ!

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಖ್ಯಾತಿ ಪಡೆದಿರುವ ಮುಖೇಶ್ ಅಂಬಾನಿ ಅವರು ಏನೇ ಮಾಡಿದ್ರು ಸುದ್ದಿಯಾಗುತ್ತಾರೆ. ಇದೀಗ ಹೊಸ ಕಾರೊಂದನ್ನು ಖರೀದಿಸಿ ಅಚ್ಚರಿಗೊಳಿಸಿದ್ದಾರೆ, ಈಗಾಗಲೇ ನೂರಾರು ದುಬಾರಿ ಬೆಲೆಯ ಕಾರುಗಳನ್ನು ಹೊಂದಿರುವ ಅವರು, ಹೊಸ ರೋಲ್ಸ್ ರಾಯ್ಸ್ ಎಲೆಕ್ಟ್ರಿಕ್ ಕಾರನ್ನು ಖರೀದಿಸಿ ಮತ್ತೆ ಸುದ್ದಿಯಾಗಿದ್ದಾರೆ. ಮುಖೇಶ್ ಅಂಬಾನಿ ಬ್ರಿಟಿಷ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ರೋಲ್ಸ್ ರಾಯ್ಸ್ ಕಂಪನಿಯ ಡಜನ್‌ಗಟ್ಟಲೆ ಕಾರುಗಳನ್ನು ಹೊಂದಿದ್ದಾರೆ. ಇದೀಗ ತಮ್ಮ ಪ್ರಭಾವಶಾಲಿ ಕಾರು ಸಂಗ್ರಹಕ್ಕೆ ಹೊಸ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಅನ್ನು ಸೇರಿಸಿದ್ದಾರೆ.

ವಿಶ್ವದಲ್ಲಿ ಅನೇಕ ರೋಲ್ಸ್ ರಾಯ್ಸ್ ಕಾರುಗಳನ್ನು ಹೊಂದಿರುವ ಕೆಲವೇ ಶತಕೋಟ್ಯಾಧಿಪತಿಗಳಲ್ಲಿ ಅಂಬಾನಿ ಕೂಡ ಒಬ್ಬರಾಗಿದ್ದಾರೆ. ಅದು ಸಾಲದೆಂಬಂತೆ ಈಗ ರೋಲ್ಸ್ ರಾಯ್ಸ್ ಮೊದಲ ಎಲೆಕ್ಟ್ರಿಕ್ ಕಾರಿನ ಹೆಮ್ಮೆಯ ಮಾಲೀಕರಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಂಬಾನಿಯವರ ಹೊಸ ರೋಲ್ಸ್ ರಾಯ್ಸ್ ಎಲೆಕ್ಟ್ರಿಕ್ ಕಾರಿನ ಚಿತ್ರಗಳು ವೈರಲ್ ಆಗಿದ್ದು, ದಿ ಪೆಟ್ರೋಲ್ ಹೆಡ್ ಲೈಫ್ ಸ್ಟೈಲ್ ಎಂಬ ಫೇಸ್‌ಬುಕ್ ಪುಟದಲ್ಲಿ ಹೊಸ ಕಾರಿನ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ.

mukesh-ambani-new-rolls-royce-spectre-ev-details

ಕಾರಿನ ವಿಶೇಷತೆಗಳು: ಹೊಸ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಬರೋಬ್ಬರಿ 577 ಬಿಹೆಚ್ ಪವರ್ ಮತ್ತು 900 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಬ್ಯಾಟರಿಯನ್ನು ಚಾರ್ಜ್‌ ಮಾಡಲು 200 ಕಿಲೋವ್ಯಾಟ್ ಡಿಸಿ ಫಾಸ್ಟ್ ಚಾರ್ಜರ್ ಅನ್ನು ಬಳಸಬಹುದಾಗಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 520 ಕಿ.ಮೀ ಚಲಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಹೊಸ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಒಳಭಾಗದಲ್ಲಿ, ಉನ್ನತ ದರ್ಜೆಯ ಗುಣಮಟ್ಟ ಮತ್ತು ಇತ್ತೀಚಿನ ತಂತ್ರಜ್ಞಾನ, ಅನುಕೂಲಕರ ಸೌಲಭ್ಯಗಳೊಂದಿಗೆ ಮೆಗಾ - ಪ್ರೀಮಿಯಂ ಇಂಟೀರಿಯರ್ ಹೊಂದಿದೆ. ಕೇವಲ 4.5 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ಹೇಳಿದೆ.

mukesh-ambani-new-rolls-royce-spectre-ev-details

ಮುಂಬೈನ ಬೀದಿಗಳಲ್ಲಿ ವಿಶಿಷ್ಟವಾದ ಎಲೆಕ್ಟ್ರಿಕ್ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಓಡಾಡುವುದನ್ನು ಕಂಡು ತುಸು ವಿಚಾರಿಸಿದಾಗ ಅಂಬಾನಿಯವರ ಹೊಸ ಕಾರು ಎಂಬುದು ತಿಳಿದುಬಂದಿದೆ. ಇದಲ್ಲದೆ, ವಿಐಪಿ ನಂಬರ್ ಪ್ಲೇಟ್ ಎಂಎಚ್ 0001 ಅನ್ನು ಹೊಂದಿದೆ. ವೈರಲ್ ಆಗಿರುವ ಫೋಟೋಗಳಲ್ಲಿ ವಾಹನದ ಹಿಂಭಾಗದ ಭಾಗ ಮಾತ್ರ ಗೋಚರಿಸುತ್ತಿದೆ. ಹಸಿರು ನಂಬರ್ ಪ್ಲೇಟ್ ಇದ್ದು, ಎಲೆಕ್ಟ್ರಿಕ್ ಕಾರು ಎಂಬುದನ್ನು ದೃಢಪಡಿಸಿದೆ.

ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವುದರಿಂದ, ಅವರ ಕಾರು ಸಂಗ್ರಹವು ಎಂಥವರನ್ನು ಕೂಡ ಅಚ್ಚರಿಗೊಳಿಸುತ್ತದೆ. ಅವರು ಕಾಲಕಾಲಕ್ಕೆ ತಮ್ಮ ಗ್ಯಾರೇಜ್‌ಗೆ ಹೊಸ ಕಾರುಗಳನ್ನು ಸೇರಿಸುತ್ತಲೇ ಇರುತ್ತಾರೆ. ನಮ್ಮ ಪ್ರಕಾರ ಅವರ ಬಳಿ ಎಷ್ಟು ಕಾರುಗಳಿವೆ ಎಂಬುದು ಅಂಬಾನಿ ಕುಟುಂಬಕ್ಕೂ ತಿಳಿದಿಲ್ಲ. ಒಂದು ಅಂದಾಜಿನ ಪ್ರಕಾರ 100 ಕ್ಕೂ ಹೆಚ್ಚು ಕಾರುಗಳಿವೆ ಎಂದು ವರದಿ ಹೇಳುತ್ತಿದೆ.

mukesh-ambani-new-rolls-royce-spectre-ev-details

ಬಹುಕೋಟಿ ಕಾರುಗಳು: ರೋಲ್ಸ್ ರಾಯ್ಸ್ ಕಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್, ರೋಲ್ಸ್ ರಾಯ್ಸ್ ಫ್ಯಾಂಟಮ್ ಇಡಬ್ಲ್ಯೂಬಿ, ಲ್ಯಾಂಬೊರ್ಗಿನಿ ಉರುಸ್, ರೇಂಜ್ ರೋವರ್ ಆಟೋಬಯೋಗ್ರಫಿ, ಮರ್ಸಿಡಿಸ್-ಮೇಬ್ಯಾಕ್ ಎಸ್ 680 ಗಾರ್ಡ್, ಫೆರಾರಿ ಎಸ್ ಎಫ್ 90, ಬೆಂಟ್ಲೆ ಬೆಂಟೈಗಾ, ಮರ್ಸಿಡಿಸ್ ಬೆಂಝ್ ಜಿ 63 ಎಎಂಜಿ, ಫೆರಾರಿ ಪುರೊಸಾಂಗ್ಯೂ, ಲೆಕ್ಸಸ್ ಎಲ್ಎಂ 350 ಹೆಚ್‌ನಂತಹ ಕೋಟಿ ಬೆಲೆ ದಾಟುವ ಹಲವು ಕಾರುಗಳು ಅಂಬಾನಿ ಗ್ಯಾರೇಜ್‌ನಲ್ಲಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, December 16, 2024, 18:06 [IST]
English summary
Mukesh ambani new rolls royce spectre ev details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+