ಕಾರಿನ ಪೈಂಟ್‌ ಬದಲಾವಣೆಗೆ 1 ಕೋಟಿ, ನಂಬರ್‌ ಪ್ಲೇಟ್‌ಗೆ 12 ಲಕ್ಷ: ಅಂಬಾನಿ ಕಾರಿನ ಕಲರ್‌ಫುಲ್‌ ಕಹಾನಿ

ಭಾರತದ ಆಗರ್ಭ ಶ್ರೀಮಂತ ಮುಖೇಶ್‌ ಅಂಬಾನಿಯವರ (Mukesh Ambani) ಕಾರು ಕಲೆಕ್ಷನ್‌ಗಳ ಕುರಿತು ನಾವು ಈಗಾಗಲೇ ಹಲವಾರು ಲೇಖನಗಳನ್ನು ಪ್ರಕಟಿಸಿದ್ದೇವೆ. ಅವರ ಬಳಿಯಿರುವ ಲಕ್ಷುರಿ ಕಾರುಗಳಿಂದ ಹಿಡಿದು ಅವರು ಬಳಸುವ ಸಿಂಪಲ್‌ ಕಾರುಗಳ ಕುರಿತಾಗಿಯೂ ನಾವೀಗಾಗಲೇ ನೋಡಿದ್ದೇವೆ. ಇದೀಗ ಅವರು ಮತ್ತೊಮ್ಮೆ ತಮ್ಮ ಕಾರಿನಿಂದ ಸುದ್ದಿಯಲ್ಲಿದ್ದಾರೆ.

ಹೌದು, ಮುಖೇಶ್‌ ಅಂಬಾನಿಯವರ ಕಾರೊಂದಕ್ಕೆ ಮರು ಪೈಂಟ್‌ ಮಾಡಬೇಕಾಗಿದ್ದು, ಕಾರು ರೀ ಪೈಂಟ್ ಮಾಡಲು ತಗಲುವ ಒಟ್ಟು ವೆಚ್ಚ ಬರೋಬ್ಬರಿ 1 ಕೋಟಿ ರೂಪಾಯಿಗಳು. ನಂಬಲು ಕಷ್ಟವಾದರೂ ನೀವು ನಂಬಲೇಬೇಕು. ಸುಮಾರು ಒಂದು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಮುಖೇಶ್ ಅಂಬಾನಿ ತಮ್ಮ ಕಾರಿನ ಬಣ್ಣವನ್ನು ಬದಲಾಯಿಸುತ್ತಿದ್ದಾರೆ.

Mukesh Ambanis Rolls Royce

ಕಳೆದ ವರ್ಷ ಮುಖೇಶ್‌ ಅಂಬಾನಿಯವರು ಸದ್ಯಕ್ಕೆ ಸುದ್ದಿಯಲ್ಲಿರುವ ರೋಲ್ಸ್‌ ರೋಯ್ಸ್‌ ಕುಲಿನನ್‌ (Rolls Royce) ಎಂಬ ದುಬಾರಿ ಕಾರನ್ನು ಡೆಲಿವರಿ ಪಡೆದುಕೊಂಡಿದ್ದರು. ಮುಖೇಶ್‌ ಅಂಬಾನಿಯವರ ಈ ಕಾರು ಕೇವಲ ಕಸ್ಟಮೈಸೇಷನ್‌ನಿಂದ ಮಾತ್ರ ಸ್ಪೆಷಲ್ ಆಗಿರಲಿಲ್ಲ. ಬದಲಾಗಿ ಇದರ ವಿಶೇಷ ನಂಬರ್‌ ಪ್ಲೇಟ್‌ನಿಂದ ಇದು ಎಲ್ಲರ ಗಮನ ಸೆಳೆದಿತ್ತು.

ಇನ್ನು ಈ ಕಾರನ್ನು ಪಿಟಿಐ ವರದಿಗಳ ಪ್ರಕಾರ ಮುಖೇಶ್‌ ಅಂಬಾನಿಯವರು ಸುಮಾರು ಈ ರೋಲ್ಸ್‌ ರೋಯ್ಸ್‌ ಕುಲಿನನ್ ಐಷಾರಾಮಿ ಕಾರಿಗೆ 13.14 ಕೋಟಿ ರೂಪಾಯಿಗಳನ್ನು ನೀಡಿ ಖರೀದಿ ಮಾಡಿದ್ದರು. ಇನ್ನು ಈ ರೋಲ್ಸ್‌ ರೋಯ್ಸ್‌ ಕುಲಿನನ್ ಸುಮಾರು 6.8 ಕೋಟಿ ರೂಗಳಿಂದ ಬೇಸ್ ವೇರಿಯಂಟ್‌ ಆರಂಭವಾಗುತ್ತದೆ.

Mukesh Ambanis Rolls Royce

ಆದರೆ ಈ ಕಾರಿಗೆ ಫ್ಯಾಕ್ಟರಿಯಿಂದಲೇ ಇತರ ಫೀಚರ್‌ಗಳು, ಕಸ್ಟಮೈಸೇಷನ್‌ಗಳನ್ನು ಸೇರಿಸಿದಾಗ ಇದರ ಒಟ್ಟು ಬೆಲೆ ಗಮನಾರ್ಹ ರೀತಿಯಲ್ಲಿ ಏರುತ್ತದೆ. ಇದೇ ಇಲ್ಲಿ ಮುಖೇಶ್‌ ಅಂಬಾನಿಯವರ ಕುಲಿನನ್‌ ಗೂ ಆಗಿದೆ. ಆದರೆ ಈ ನಿರ್ದಿಷ್ಟವಾದ ಕಸ್ಟಮೈಸೇಷನ್‌ ಡಿಸೈನ್‌ ಅನ್ನು ಅಂಬಾನಿ ಕುಟುಂಬದಲ್ಲಿ ಯಾರು ಆಯ್ಕೆ ಮಾಡಿದ್ದರು ಎಂಬುದು ಇಲ್ಲಿಯವರೆಗೆ ತಿಳಿದು ಬಂದಿಲ್ಲ.

ಮುಖೇಶ್‌ ಅಂಬಾನಿಯವರ ಈ ರೋಲ್ಸ್‌ ರೋಯ್ಸ್‌ ಕುಲಿನನ್ ಕಾರಿನ ರೀ ಪೈಂಟಿಂಗ್‌ ಬೆಲೆ ಸುಮಾರು ಒಂದು ಕೋಟಿಯಾದರೆ ಇದರ ಜೊತೆಗೆ ಕಾರಿಗೆ ಇನ್ನೂ ಕೆಲವು ಕೆಲವು ಬದಲಾವಣೆಗಳನ್ನು ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ಕಾರಿಗೆ 21 ಇಂಚ್ ನ ಅಲಾಯ್‌ ವ್ಹೀಲ್‌ಗಳನ್ನು ಸಹ ಸೇರಿಸಲಿದ್ದಾರೆ.

ಆದರೆ ಈ 21 ಇಂಚ್‌ನ ಅಲಾಯ್‌ ವ್ಹೀಲ್‌ಗಳ ಬೆಲೆ ಎಷ್ಟಾಗಲಿದೆ ಎಂದು ತಿಳಿದು ಬಂದಿಲ್ಲ. ಕಾರಣ ಈ ಅಲಾಯ್‌ ವ್ಹೀಲ್‌ಗಳ ಬೆಲೆಯ ಮಾಹಿತಿ ಆನ್‌ಲೈನ್‌ನಲ್ಲಿ ಲಭ್ಯವಾಗಿಲ್ಲ. ಮಾಹಿತಿಗಳ ಪ್ರಕಾರ ಮುಖೆಶ್‌ ಅಂಬಾನಿಯವರ ರೋಲ್ಸ್‌ ರೋಯ್ಸ್ ಕುಲಿನನ್‌ ಕಾರಿನ ನಂಬರ್‌ ಪ್ಲೇಟ್‌ ಗೆ ಸುಮಾರು 12 ಲಕ್ಷದವರೆಗೂ ಖರ್ಚು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, June 26, 2023, 11:21 [IST]
English summary
Mukesh ambanis rolls royce costs rupees 1 crore for its paint job
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+