ಭಾರತದ ದುಬಾರಿ ಬೆಂಗಾವಲು ಪಡೆಯ ಜೊತೆ ಸಾಗಿದ ಮುಖೇಶ್ ಅಂಬಾನಿ

ಶ್ರೀಮಂತರ ಮನೆಯಲ್ಲಿ ಒಬ್ಬ ವ್ಯಕ್ತಿಗೆ ಒಂದು ಕಾರು ಎಂದು ಲೆಕ್ಕಹಾಕಿದರೂ ಸುಮಾರು ಐದು ಅಥವಾ ಆರು ಕಾರುಗಳಿರುತ್ತವೆ. ಆದರೆ ಭಾರತದ ಅತಿ ದೊಡ್ಡ ಶ್ರೀಮಂತರ ಮನೆಯಲ್ಲಿ ಕಾರುಗಳ ಸಂಗ್ರಹವೇ ಇದೆ.

ಭಾರತದ ದುಬಾರಿ ಬೆಂಗಾವಲು ಪಡೆಯ ಜೊತೆ ಸಾಗಿದ ಮುಖೇಶ್ ಅಂಬಾನಿ

ಹೌದು, ಭಾರತದ ನಂಬರ್ 1 ಶ್ರೀಮಂತರಾದ ಮುಖೇಶ್ ಅಂಬಾನಿಯವರ ಬಳಿ ಹಲವಾರು ಕಾರುಗಳಿವೆ. ಮುಖೇಶ್ ಅಂಬಾನಿರವರು ಮುಂಬೈನ ಆಂಟಿಲಿಯಾ ಐಷಾರಾಮಿ ಅಪಾರ್ಟ್ಮೆಂಟ್'ನಲ್ಲಿರುವ ತಮ್ಮ ಮನೆಯಲ್ಲಿ ಕಾರುಗಳಿಗಾಗಿಯೇ ಪ್ರತ್ಯೇಕ ನೆಲೆಯನ್ನು ಸ್ಥಾಪಿಸಿದ್ದಾರೆ.

ಭಾರತದ ದುಬಾರಿ ಬೆಂಗಾವಲು ಪಡೆಯ ಜೊತೆ ಸಾಗಿದ ಮುಖೇಶ್ ಅಂಬಾನಿ

ಮುಖೇಶ್ ಅಂಬಾನಿ ಹಾಗೂ ಅವರ ಕುಟುಂಬದವರು ಮಾತ್ರವಲ್ಲದೆ ಅವರ ಭದ್ರತಾ ಸಿಬ್ಬಂದಿಯು ಸಹ ದುಬಾರಿ ಕಾರುಗಳನ್ನು ಬಳಸುತ್ತಾರೆ. ಅವರು ತಮ್ಮ ಬೆಂಗಾವಲು ಪಡೆಗಾಗಿ ದುಬಾರಿ ಬೆಲೆಯ ಕಾರುಗಳನ್ನು ಖರೀದಿಸಿದ್ದಾರೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಭಾರತದ ದುಬಾರಿ ಬೆಂಗಾವಲು ಪಡೆಯ ಜೊತೆ ಸಾಗಿದ ಮುಖೇಶ್ ಅಂಬಾನಿ

ಈ ಕಾರಣಕ್ಕೆ ಮುಖೇಶ್ ಅಂಬಾನಿಯವರ ಬೆಂಗಾವಲು ಪಡೆಯನ್ನು ಭಾರತದ ಅತ್ಯಂತ ದುಬಾರಿ ಬೆಂಗಾವಲು ಪಡೆ ಎಂದು ಪರಿಗಣಿಸಲಾಗಿದೆ. ಈ ಬೆಂಗಾವಲು ಪಡೆಯ ಹೊಸ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಭಾರತದ ದುಬಾರಿ ಬೆಂಗಾವಲು ಪಡೆಯ ಜೊತೆ ಸಾಗಿದ ಮುಖೇಶ್ ಅಂಬಾನಿ

ಈ ವೀಡಿಯೊವನ್ನು ಸಿಎಸ್ 12 ವ್ಲಾಗ್ಸ್ ಎಂಬ ಯೂಟ್ಯೂಬ್ ಚಾನೆಲ್ ಅಪ್ ಲೋಡ್ ಮಾಡಿದೆ. ರೋಲ್ಸ್ ರಾಯ್ಸ್ ಫ್ಯಾಂಟಮ್ 8 ಇಡಬ್ಲ್ಯೂಪಿ ಮುಖೇಶ್ ಅಂಬಾನಿಯವರ ಬೆಂಗಾವಲು ಪಡೆಯಲ್ಲಿ ಹೆಚ್ಚು ಗಮನ ಸೆಳೆಯುವ ಕಾರುಗಳಲ್ಲಿ ಒಂದಾಗಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಭಾರತದ ದುಬಾರಿ ಬೆಂಗಾವಲು ಪಡೆಯ ಜೊತೆ ಸಾಗಿದ ಮುಖೇಶ್ ಅಂಬಾನಿ

ಅಂಬಾನಿ ಕುಟುಂಬವು ಕಳೆದ ವರ್ಷ ಈ ಕಾರನ್ನು ಖರೀದಿಸಿತ್ತು. ಈ ಕಾರಿನ ಆನ್ ರೋಡ್ ಬೆಲೆ ರೂ.14 ಕೋಟಿಗಳಾಗಿದೆ. ಮುಖೇಶ್ ಅಂಬಾನಿ ತಮ್ಮ ದೈನಂದಿನ ಪ್ರಯಾಣ ಹಾಗೂ ಕಚೇರಿಗೆ ತೆರಳಲು ಈ ದುಬಾರಿ ಕಾರನ್ನು ಬಳಸುತ್ತಾರೆ.

ಭಾರತದ ದುಬಾರಿ ಬೆಂಗಾವಲು ಪಡೆಯ ಜೊತೆ ಸಾಗಿದ ಮುಖೇಶ್ ಅಂಬಾನಿ

ವೈಯಕ್ತಿಕ ಬಳಕೆಗಾಗಿ ಅವರು ಐಷಾರಾಮಿ ಕಾರುಗಳನ್ನು ಬಳಸುತ್ತಿದ್ದಾರೆ. ಅವರು ಮರ್ಸಿಡಿಸ್ ಬೆಂಝ್ ಕಂಪನಿಯ ಬಾಂಬ್ ನಿರೋಧಕ ಎಸ್-ಕ್ಲಾಸ್ ಕಾರ್ ಅನ್ನು ಸಹ ಬಳಸುತ್ತಾರೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಭಾರತದ ದುಬಾರಿ ಬೆಂಗಾವಲು ಪಡೆಯ ಜೊತೆ ಸಾಗಿದ ಮುಖೇಶ್ ಅಂಬಾನಿ

ಜೊತೆಗೆ ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್, ರೋಲ್ಸ್ ರಾಯ್ಸ್ ಕಾರ್ ಅನ್ನು ಸಹ ಬಳಸುತ್ತಾರೆ. ಈ ವೀಡಿಯೊದಲ್ಲಿ ಕಾಣುವ ಅಂಬಾನಿಯವರ ಕಾರಿನ ಹಿಂದೆ, ಮುಂದೆ ಸಾಗುತ್ತಿರುವ ಕಾರುಗಳು ಅವರ ಭದ್ರತಾ ಸಿಬ್ಬಂದಿಯ ಕಾರುಗಳು ಎಂಬುದು ಗಮನಾರ್ಹ.

ಈ ವೀಡಿಯೊದಲ್ಲಿ ಅಂಬಾನಿಯವರ ಕಾರಿನ ಹಿಂದೆ ಹಲವು ಕಾರುಗಳು ಸಾಗುತ್ತಿರುವುದನ್ನು ಕಾಣಬಹುದು. ಮಹೀಂದ್ರಾ ಸ್ಕಾರ್ಪಿಯೋ ಕಾರು ಅಂಬಾನಿಯವರ ಮುಂದಿನ ಕಾರ್ ಆಗಿ ಚಲಿಸುತ್ತದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಭಾರತದ ದುಬಾರಿ ಬೆಂಗಾವಲು ಪಡೆಯ ಜೊತೆ ಸಾಗಿದ ಮುಖೇಶ್ ಅಂಬಾನಿ

ಈ ಬೆಂಗಾವಲು ಪಡೆಯಲ್ಲಿ ಕಾಣಿಸಿಕೊಂಡ ಒಟ್ಟಾರೆ ಕಾರುಗಳ ಬೆಲೆ ಸುಮಾರು ರೂ.20 ಕೋಟಿಗಳಾಗಿದೆ. ಈ ಕಾರಣಕ್ಕಾಗಿಯೇ ಮುಖೇಶ್ ಅಂಬಾನಿಯವರ ಬೆಂಗಾವಲು ಪಡೆಯನ್ನು ಭಾರತದ ಅತ್ಯಂತ ದುಬಾರಿ ಬೆಂಗಾವಲು ಪಡೆ ಎಂದು ಕರೆಯಲಾಗುತ್ತದೆ.

Most Read Articles

Kannada
English summary
Mukhesh Ambani moves with most expensive convoy of India. Read in Kannada.
Story first published: Wednesday, May 19, 2021, 18:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X