Bullet Train: ಈ ನಗರದಿಂದ ಮುಂಬೈಗೆ 508 ಕಿಮೀ, ಬುಲೆಟ್ ರೈಲಿನಲ್ಲಿ 2 ಗಂಟೆ ಪ್ರಯಾಣ.. ಎಲ್ಲಿಗೆ ಬಂತು ಕಾಮಗಾರಿ?

ಮುಂಬೈ - ಅಹಮದಾಬಾದ್ (Mumbai - Ahmedabad) ನಡುವೆ ಬುಲೆಟ್ ರೈಲು (Bullet Train) ಮಾರ್ಗ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಸೆಪ್ಟೆಂಬರ್ (2023) ತಿಂಗಳ ಯೋಜನಾ ಪ್ರಗತಿ ಕುರಿತು ವರದಿ ದೊರೆತಿದೆ. ಶೇಕಡ 40.08% ಕೆಲಸಗಳನ್ನು ಮುಗಿಸಲು ಗುರಿಯನ್ನು ನಿಗದಿಪಡಿಸಲಾಗಿತ್ತು. ಆದರೆ, ಶೇಕಡ 37.02% ಕಾಮಗಾರಿ ಮುಕ್ತಾಯಗೊಂಡಿದೆ.

ಇವೆರೆಡು ನಗರಗಳ ನಡುವೆ ಬುಲೆಟ್ ರೈಲು ಕಾಮಗಾರಿ ನಿರ್ವಹಣೆಯ ಜವಾಬ್ದಾರಿಯೊತ್ತಿರುವ ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL), ಮಳೆಗಾಲದ (ಮಾನ್ಸೂನ್) ಕಾರಣದಿಂದಾಗಿ ಸೆಪ್ಟೆಂಬರ್ ತಿಂಗಳು ಕೆಲಸಗಳಿಗೆ ಕೊಂಚ ಅಡಚಣೆಯಾಗಿದೆ ಎಂದು ಮಾಹಿತಿ ನೀಡಿದೆ ಎಂದು ವರದಿಯಾಗಿದೆ. ಹಣಕಾಸಿನ ವಿಚಾರವಾಗಿ, ಸೆಪ್ಟೆಂಬರ್ 30 ರವರೆಗೆ ಕಾಮಗಾರಿ ನಡೆಸಲು ರೂ.2,321.03 ಕೋಟಿ ಖರ್ಚು ಮಾಡಲಾಗಿದೆ.

Bullet Train: ಈ ನಗರದಿಂದ ಮುಂಬೈಗೆ 508 ಕಿಮೀ, ಬುಲೆಟ್ ರೈಲಿನಲ್ಲಿ 2 ಗಂಟೆ ಪ್ರಯಾಣ.. ಎಲ್ಲಿಗೆ ಬಂತು ಕಾಮಗಾರಿ?

ಮುಂದಿನ ಐದು ವರ್ಷದೊಳಗೆ ಅಂದರೆ 2027 ರೊಳಗೆ ಮುಂಬೈ - ಅಹಮದಾಬಾದ್ ನಡುವೆ ಬುಲೆಟ್ ರೈಲು ಲೋಕಾರ್ಪಣೆಯಾಗುವ ನೀರಿಕ್ಷೆಯಿದೆ. ಈ ಕಾಮಗಾರಿ ಮುಗಿಯುವವರೆಗೂ ರೂ.1.5 ಲಕ್ಷ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಈ ಕಾಮಗಾರಿ ನಿಧಾನಗೊಳ್ಳಲು ಮತ್ತೊಂದು ಕಾರಣವೆಂದರೆ, ಮಹಾರಾಷ್ಟ್ರದಲ್ಲಿ ಭೂಸ್ವಾಧೀನ ಪ್ರಕ್ರಿಯೆ ತಡವಾಗಿ, ಟೆಂಡರ್‌ಗಳು ಕೂಡ ವಿಳಂಬವಾರುವುದು.

ಬುಲೆಟ್ ರೈಲು ಯೋಜನೆಯನ್ನು 2016 ರಲ್ಲಿಯೇ ಕಾರ್ಯಗತಗೊಳಿಸಲಾಯಿತು. ಅದಕ್ಕೆ 2017 ರಲ್ಲಿ ಅಡಿಪಾಯವನ್ನು ಹಾಕಲಾಯಿತು. ಎಲ್ಲವು ಅಂದುಕೊಂಡಂತೆ ನಡೆದಿದ್ದರೆ, ಈ ವರ್ಷದ (2023) ಡಿಸೆಂಬರ್ ವೇಳೆಗೆ ಮುಂಬೈ - ಅಹಮದಾಬಾದ್ ಮಧ್ಯೆ ಬುಲೆಟ್ ರೈಲು ಸಂಚಾರಿಸಬೇಕಿತ್ತು. ಆದರೆ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸಾಕಷ್ಟು ವಿಳಂಬವಾದ ಹಿನ್ನೆಲೆ, ಕಾಮಗಾರಿಯೂ 2027ರೊಳಗೆ ಮುಕ್ತಾಯವಾಗುವ ಸಾಧ್ಯತೆಯಿದೆ.

Bullet Train: ಈ ನಗರದಿಂದ ಮುಂಬೈಗೆ 508 ಕಿಮೀ, ಬುಲೆಟ್ ರೈಲಿನಲ್ಲಿ 2 ಗಂಟೆ ಪ್ರಯಾಣ.. ಎಲ್ಲಿಗೆ ಬಂತು ಕಾಮಗಾರಿ?

ಮುಂಬೈ - ಅಹಮದಾಬಾದ್ ನಡುವೆ ಬುಲೆಟ್ ರೈಲು ಸಂಚಾರ ಆರಂಭಿಸಿದರೆ, ಇವೆರೆಡು ನಗರಗಳ ನಡುವೆಯಿರುವ 508 ಕಿಮೀ ಅಂತರವನ್ನು 2 ಗಂಟೆ 7 ನಿಮಿಷಗಳಲ್ಲಿ ಕ್ರಮಿಸಲಿದೆ. ಈ ರೈಲು ಗಂಟೆಗೆ 350 ಕಿಮೀ ವೇಗದಲ್ಲಿ ಚಲಿಸಲಿದೆ. ಪ್ರಸ್ತುತವಿರುವ ಸ್ವೀಡ್ ರೈಲುಗಳು ಇದೇ ದೂರವನ್ನು 5 ಗಂಟೆಯಲ್ಲಿ ತಲುಪಲಿವೆ. ಬುಲೆಟ್ ರೈಲುಗಳಿಂದ ಅರ್ಧಕ್ಕಿಂತ ಹೆಚ್ಚಿನ ಸಮಯವಕಾಶ ಉಳಿತಾಯವಾಗುತ್ತದೆ.

ಕಳೆದ ಜುಲೈನಲ್ಲಿ ಲೋಕಸಭಾ ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಹೈದರಾಬಾದ್ ಬೆಂಗಳೂರು ಹಾಗೂ ಮುಂಬೈ ಸೇರಿದಂತೆ ದೇಶದ ಪ್ರಮುಖ ಏಳು ಮಾರ್ಗಗಳಲ್ಲಿ ಹೈಸ್ಪೀಡ್ ರೈಲು ಓಡಾಟಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದರು.

Bullet Train: ಈ ನಗರದಿಂದ ಮುಂಬೈಗೆ 508 ಕಿಮೀ, ಬುಲೆಟ್ ರೈಲಿನಲ್ಲಿ 2 ಗಂಟೆ ಪ್ರಯಾಣ.. ಎಲ್ಲಿಗೆ ಬಂತು ಕಾಮಗಾರಿ?

ನ್ಯಾಷನಲ್ ರೈಲ್ ಪ್ಲಾನ್ (ಎನ್‌ಆರ್‌ಪಿ) ಪ್ರಕಾರ, ಬೆಂಗಳೂರು ಮತ್ತು ಹೈದರಾಬಾದ್ ಮಧ್ಯೆ 618 ಕಿಲೋಮೀಟರ್ ಉದ್ದದ ಬುಲೆಟ್ ರೈಲು ಮಾರ್ಗ 2041ರ ವೇಳೆಗೆ ಲೋಕಾರ್ಪಣೆಗೊಳ್ಳಬಹುದು. ಆ ಬಳಿಕ, ಚೆನ್ನೈ - ಬೆಂಗಳೂರು - ಮೈಸೂರು ಮಧ್ಯೆ ಬುಲೆಟ್ ರೈಲು 2051ರಲ್ಲಿ ಕಾರ್ಯಾಚರಣೆಯನ್ನು ಶುರು ಮಾಡಲಿದೆ. ಜೊತೆಯಲ್ಲಿ ದೆಹಲಿ-ವಾರಣಾಸಿ, ದೆಹಲಿ-ಅಹಮದಾಬಾದ್, ದೆಹಲಿ-ಅಮೃತಸರ ನಡುವೆಯೂ ಈ ರೈಲು ಸಂಚರಿಸಲಿದೆ ಎನ್ನಲಾಗಿದೆ.

ಇನ್ನು, ಜಗತ್ತಿನ ದೊಡ್ಡ ಆರ್ಥಿಕತೆಯತ್ತ ಮುಗ್ಗುತ್ತಿರುವ ಭಾರತಕ್ಕೆ ಬುಲೆಟ್ ರೈಲುಗಳು ದೊಡ್ಡಮಟ್ಟದಲ್ಲಿ ನೇರವಾಗಲಿದ್ದು, ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಬಲಗೊಳ್ಳಲಿದೆ. ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳು ವೇಗವಾಗಿ ಅಭಿವೃದ್ಧಿಗೊಳ್ಳಲಿವೆ. ಮುಂಬೈ - ಅಹಮದಾಬಾದ್ ಮಧ್ಯೆ ನಡೆಯಿತ್ತಿರುವ ಕಾಮಗಾರಿಗೆ ಮತ್ತಷ್ಟು ವೇಗವನ್ನು ನೀಡಿದರೆ, ನಿಗದಿತ ಸಮಯಕ್ಕಿಂತ ಮೊದಲೇ ಅದು ಮುಗಿದು ಜನರಿಗೆ ಭಾರೀ ಅನುಕೂಲವಾಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, November 3, 2023, 16:28 [IST]
English summary
Mumbai ahmedabad bullet train monthly report 508 km 2 hours journey
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+