508 ಕಿ.ಮೀ ಕೇವಲ 2 ಗಂಟೆ ಪ್ರಯಾಣ: ಬೃಹತ್ ಪರ್ವತ ಸುರಂಗ ಪೂರ್ಣ: ಶೀಘ್ರದಲ್ಲೆ ಬುಲೆಟ್ ರೈಲು
ಭಾರತದಲ್ಲಿ ಮೋದಿ ಸರ್ಕಾರ ಬುಲೆಟ್ ರೈಲನ್ನು ಪರಿಚಯಿಸಲು ತುದಿಗಾಲಲ್ಲಿ ನಿಂತಿದೆ. ಇದಕ್ಕಾಗಿ ಬೃಹತ್ ಪರ್ವತದ ಸುರಂಗವನ್ನು ಪೂರ್ಣಗೊಳಿಸಿರುವುದಾಗಿ ವರದಿಯಾಗಿದೆ. ಮುಂಬೈ ಮತ್ತು ಅಹಮದಾಬಾದ್ ನಡುವಿನ ದೇಶದ ಮೊದಲ ಹೈಸ್ಪೀಡ್ ರೈಲು ಕಾರಿಡಾರ್‌ನಲ್ಲಿ 350 ಮೀಟರ್ ಉದ್ದದ ಪರ್ವತ ಸುರಂಗವು ಗುಜರಾತ್‌ನ ವಲ್ಸಾದ್ ಜಿಲ್ಲೆಯ ಜರೋಲಿ ಗ್ರಾಮದ ಬಳಿ ಪೂರ್ಣಗೊಂಡಿದೆ.
ಸುರಂಗದ ಪ್ರವೇಶದ್ವಾರದ ಹತ್ತಿರವಿರುವ ಬಂಡೆಯ ಕೊನೆಯ ಪದರಗಳನ್ನು ತೆಗೆದುಹಾಕಲು ಅಂತಿಮ ಸ್ಫೋಟವನ್ನು ನಡೆಸಲಾಗಿದೆ. ಈ ಕಾರಿಡಾರ್ ಅನ್ನು ನಿರ್ಮಿಸಲು ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL), ಲಾರ್ಸೆನ್ ಮತ್ತು ಟೂಬ್ರೊಗೆ ಗುತ್ತಿಗೆಯನ್ನು ನೀಡಿದೆ. ಸುರಂಗವನ್ನು ಮಾಡಲು ಬಳಸಲಾದ ತಂತ್ರವು ಸುಸ್ಥಾಪಿತವಾದ ಹೊಸ ಆಸ್ಟ್ರಿಯನ್ ಸುರಂಗ ವಿಧಾನವಾಗಿದೆ.

ಇದನ್ನು ಈಗಾಗಲೇ ಭಾರತದಲ್ಲಿ ಹಲವಾರು ಪರ್ವತ ಪ್ರದೇಶಗಳಲ್ಲಿ ರೈಲು ಮತ್ತು ರಸ್ತೆ ಯೋಜನೆಗಳಿಗಾಗಿ ಬಳಸಲಾಗಿದೆ. 2016 ರಲ್ಲಿ ಅಸ್ತಿತ್ವಕ್ಕೆ ಬಂದ ನಂತರ, NHSRCL ಬುಲೆಟ್ ರೈಲು ಯೋಜನೆಗೆ 2017 ರಲ್ಲಿ ಅಡಿಪಾಯ ಹಾಕಿತು. ಡಿಸೆಂಬರ್ 2023 ರ ವೇಳೆಗೆ ಅದನ್ನು ಸಿದ್ಧಪಡಿಸಲು ಪ್ರಸ್ತಾಪಿಸಲಾಯಿತು. ಆದರೆ, ಭೂಸ್ವಾಧೀನ ಸಮಸ್ಯೆಗಳು ಮಹತ್ವಾಕಾಂಕ್ಷೆಯ ಯೋಜನೆಯನ್ನು ವಿಳಂಬಗೊಳಿಸಿವೆ.
ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆಯಾದರೂ, ಯೋಜನೆಯ ಕಾರ್ಯಗತಗೊಳಿಸುವ ಹೊಸ ಗಡುವನ್ನು ಇನ್ನೂ ಘೋಷಿಸಲಾಗಿಲ್ಲ. "ಈ ಬುಲೆಟ್ ರೈಲು ಬಳಸುವ ಪ್ರಯಾಣಿಕರು 508 ಕಿ.ಮೀ ದೂರವನ್ನು ಕೇವಲ ಎರಡು ಗಂಟೆ ಏಳು ನಿಮಿಷಗಳಲ್ಲಿ ಮುಗಿಸಬಹುದು. ಪ್ರಸ್ತುತ, ರೈಲು ಪ್ರಯಾಣವು ಸುಮಾರು ಐದು ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು NHSRCL ನ ಅಧಿಕೃತ ವಕ್ತಾರರು PTI ಗೆ ತಿಳಿಸಿದ್ದಾರೆ.

ಸುರಂಗ ನಿರ್ಮಾಣಕ್ಕೆ ಕಠಿಣ ಜಾಗೃತಿ: ಈ ಬುಲೆಟ್ ರೈಲು ಗಂಟೆಗೆ 350 ಕಿ.ಮೀ ವೇಗದಲ್ಲಿ ಚಲಿಸುವುದರಿಂದ ಸಣ್ಣ ಜೋಡಣೆಯ ದೋಷವು ತೀವ್ರ ಸಮಸ್ಯೆಗಳನ್ನು ತಂದೊಡ್ಡಬಹುದು. ಹಾಗಾಗಿ ಸುರಂಗದ ಜೋಡಣೆಯನ್ನು ಸಂಪೂರ್ಣವಾಗಿ ನೇರವಾಗಿ ಇಡುವುದು ನಮಗೆ ದೊಡ್ಡ ಸವಾಲಾಗಿತ್ತು. ಆದ್ದರಿಂದ ಪ್ರತಿಯೊಂದು ನಿರ್ದಿಷ್ಟತೆಯನ್ನು ನಿಖರವಾಗಿ ಅನುಸರಿಸಿದ್ದೇವೆ. ಇದೀಗ ಮಿಲಿಮೀಟರ್‌ನಷ್ಟು ವಿಚಲನವನ್ನು ಸಹ ಯಾರೂ ಕಾಣುವುದಿಲ್ಲ ಎಂದು ವಲ್ಸಾದ್ ವಿಭಾಗದ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ ತಿಳಿಸಿದ್ದಾರೆ.
ನಾವು ಸಂಪೂರ್ಣ ಸುರಂಗದ ರಚನೆಯನ್ನು ಅಗೆದಿದ್ದೇವೆ. ಬಹುತೇಕ ಕೆಲಸ ಮುಗಿದಿದೆ. ಸುರಂಗ ಕಾಮಗಾರಿಯನ್ನು ಪೂರ್ಣಗೊಳಿಸಲು ಒಂದು ವರ್ಷಕ್ಕೂ ಹೆಚ್ಚು ಸಮಯ ಮತ್ತು ದೊಡ್ಡ ಕಾರ್ಮಿಕ ಬಲವನ್ನು ತೆಗೆದುಕೊಳ್ಳಲಾಗಿತ್ತು. ಇದು ನಮ್ಮ ನೇರ ಮೇಲ್ವಿಚಾರಣೆಯಲ್ಲಿ ನಿರ್ಮಿಸಲಾದ ಮೊದಲ ಪರ್ವತ ಸುರಂಗವಾಗಿದೆ ಎಂದು ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ ಎಸ್‌ಪಿ ಮಿತ್ತಲ್ ಬಹಳ ತೃಪ್ತಿ ವ್ಯಕ್ತಪಡಿಸಿದರು.

ಮುಂಬೈ ಮತ್ತು ಅಹಮದಾಬಾದ್ ನಡುವಿನ 508-ಕಿಮೀ ಮಾರ್ಗದಲ್ಲಿ ಒಟ್ಟು ಏಳು ಸುರಂಗಗಳನ್ನು ಮಾಡಲು ಉದ್ದೇಶಿಸಲಾಗಿದೆ. ಎರಡನೇಯ ಕೆಲಸವು ಶೀಘ್ರದಲ್ಲೇ ಪ್ರಾರಂಭವಾಗಲಿದೆ. "350 kmph ವೇಗದ ರೈಲು ಹಾದುಹೋಗುವ ಭಾರತದ ಮೊದಲ ಸುರಂಗ ಇದಾಗಿದೆ. ಇಡೀ ನಿರ್ಮಾಣ ಅವಧಿಯಲ್ಲಿ ತಮ್ಮ ತಂಡವು ಯಾವುದೇ ಅಹಿತಕರ ಘಟನೆಯನ್ನು ಎದುರಿಸಲಿಲ್ಲ ಎಂದರು.
ಅಂತಹ ಸುರಂಗಗಳಿಗೆ ಸ್ಫೋಟಗಳನ್ನು ನಡೆಸಿದಾಗ, ಕಾರ್ಮಿಕರು ಮತ್ತು ಸುತ್ತಮುತ್ತಲಿನ ಜನರ ಸುರಕ್ಷತೆಯು ಅತ್ಯಂತ ಮುಖ್ಯವಾಗಿರುತ್ತದೆ. ನಾವು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ ಆದ್ದರಿಂದ ಕಲ್ಲುಗಳು, ಬಂಡೆಗಳು ಅಥವಾ ಇತರ ಯಾವುದೇ ವಸ್ತುಗಳು ಹತ್ತಿರದ ಪ್ರದೇಶದಲ್ಲಿ ಹರಡದಂತೆ ಮತ್ತು ಗ್ರಾಮಸ್ಥರಿಗೆ ಅಥವಾ ನಮ್ಮ ಕಾರ್ಮಿಕರಿಗೆ ಹಾನಿಯಾಗದಂತೆ ನೋಡಿಕೊಂಡಿದ್ದೇವೆ ಎಂದು ಮಿತ್ತಲ್ ಹೇಳಿದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications