Ayodhya: ಅಯೋಧ್ಯೆಗೆ ಈ ಪ್ರಮುಖ ನಗರದಿಂದ ಇಂಡಿಗೋ ವಿಮಾನ ಸೇವೆ.. ಇಲ್ಲಿದೆ ಸಂಪೂರ್ಣ ಮಾಹಿತಿ

ಪವಿತ್ರ ತೀರ್ಥ ಕ್ಷೇತ್ರ ಅಯೋಧ್ಯೆ (Ayodhya)ಯಲ್ಲಿ ಕೆಲವೇ ದಿನಗಳಲ್ಲಿ ರಾಮ ಮಂದಿರ ಉದ್ಘಾಟನೆಯಾಗಲಿದ್ದು, ಜನವರಿ 22, 2024 ರಂದು 'ರಾಮ ಲಲ್ಲಾ' ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಸದ್ಯ, ದೇಶದ ನಾನಾ ಭಾಗಗಳಿಂದ ಅಯೋಧ್ಯೆಗೆ ವಿಮಾನ ಸೇವೆ (Flight Services) ಶುರುವಾಗುತ್ತಿದೆ.

ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿರುವ ಇಂಡಿಗೋ (IndiGo), ಜನವರಿ 15, 2024 ರಿಂದ ಮುಂಬೈ (Mumbai) ಮತ್ತು ಅಯೋಧ್ಯೆ (Ayodhya) ಮಧ್ಯೆ ದೈನಂದಿನ ವಿಮಾನ ಸೇವೆ ಪ್ರಾರಂಭಿಸುವುದಾಗಿ ಘೋಷಣೆ ಮಾಡಿದೆ. ಇತ್ತೀಚೆಗೆ, ಇಂಡಿಗೋ ಸಂಸ್ಥೆ ದೆಹಲಿ (Delhi) ಹಾಗೂ ಅಹಮದಾಬಾದ್‌ (Ahemdabad) ನಿಂದ ಅಯೋಧ್ಯೆಗೆ ವಿಮಾನ ಸಂಚಾರ ಶುರು ಮಾಡುವುದನ್ನು ಪ್ರಕಟಿಸಿತ್ತು.

Ayodhya: ಅಯೋಧ್ಯೆಗೆ ಈ ಪ್ರಮುಖ ನಗರದಿಂದ ಇಂಡಿಗೋ ವಿಮಾನ ಸೇವೆ.. ಇಲ್ಲಿದೆ ಸಂಪೂರ್ಣ ಮಾಹಿತಿ

ವಾಣಿಜ್ಯ ನಗರಿ ಮುಂಬೈನಿಂದ ಅಯೋಧ್ಯೆಗೆ ವಿಮಾನ ಸೇವೆ ಶುರು ಮಾಡುವುದರಿಂದ ಯಾತ್ರಿಕರು, ಪ್ರವಾಸಿಗರು ಹಾಗೂ ವ್ಯಾಪಾರಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಯೋಧ್ಯೆಯ ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (Maryada Purushottam Shri Ram Airport) ಎ-321/ ಬಿ-737ನಂತಹ ವಿಮಾನಗಳನ್ನು ಇಳಿಸಲು ಸರಿ ಹೊಂದುವ ರನ್‌ವೇಯನ್ನು ಹೊಂದಿದೆ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ರೂ.350 ಕೋಟಿ ವೆಚ್ಚದಲ್ಲಿ ಅಯೋಧ್ಯೆ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಿದೆ. ಡಿಸೆಂಬರ್ 14 ರಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಈ ಏರ್‌ಪೋರ್ಟ್ ಗೆ ಪರವಾನಿಗೆಯನ್ನು ನೀಡಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯ ವಿಮಾನ ಡಿಸೆಂಬರ್ 30 ರಂದು ದೆಹಲಿಯಿಂದ ಅಯೋಧ್ಯೆಗೆ ತನ್ನ ಮೊದಲ ಸಂಚಾರವನ್ನು ನಡೆಸಲಿದೆ. ಜನವರಿ 16 ರಿಂದ ದೈನಂದಿನ ಕಾರ್ಯಚರಣೆಗಳು ಪ್ರಾರಂಭವಾಗಲಿವೆ.

Ayodhya: ಅಯೋಧ್ಯೆಗೆ ಈ ಪ್ರಮುಖ ನಗರದಿಂದ ಇಂಡಿಗೋ ವಿಮಾನ ಸೇವೆ.. ಇಲ್ಲಿದೆ ಸಂಪೂರ್ಣ ಮಾಹಿತಿ

ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express)ನ ಐಎಕ್ಸ್ 2789 ವಿಮಾನವು ನವ ದೆಹಲಿಯಿಂದ ಬೆಳಗ್ಗೆ 11 ಗಂಟೆಗೆ ಪ್ರಯಾಣವನ್ನು ಪ್ರಾರಂಭಿಸಲಿದ್ದು, ಮಧ್ಯಾಹ್ನ 12.20 ಕ್ಕೆ ಅಯೋಧ್ಯೆಗೆ ಬರಲಿದೆ. ಇಲ್ಲಿಂದ 12.50ಕ್ಕೆ ಸಂಚಾರ ಆರಂಭಿಸುವ ವಿಮಾನವು ಮಧ್ಯಾಹ್ನ 2.10 ರ ಸುಮಾರಿಗೆ ನವ ದೆಹಲಿಗೆ ವಾಪಸ್ ಆಗಲಿದೆ.

ಹೊಸ ರೈಲು ನಿಲ್ದಾಣ ಮತ್ತು ಮರ್ಯಾದಾ ಪುರುಷೋತ್ತಮ ಶ್ರೀರಾಮ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಡಿ.30ಕ್ಕೆ ಅಯೋಧ್ಯೆಗೆ ಭೇಟಿ ನೀಡುವ ನಿರೀಕ್ಷೆಯಿದೆ. ಅಂದು ಅಯೋಧ್ಯೆ - ಆನಂದವಿಹಾರ್ (ದೆಹಲಿ), ಕೊಯಮತ್ತೂರು - ಬೆಂಗಳೂರು, ಮಂಗಳೂರು - ಗೋವಾದ ಮಡ್‌ಗಾಂವ್‌ ಸೇರಿದಂತೆ 6 ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲುಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೊಂಡ ಮೊದಲ 100 ದಿನಗಳಲ್ಲಿ ಅಲ್ಲಿಗೆ ದೇಶದ ವಿವಿಧ ಭಾಗಗಳಿಂದ ಯಾತ್ರಿಕರು ಬರಲು 1,000ಕ್ಕೂ ಹೆಚ್ಚು ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಯೋಜಿಸಿದೆ ಈ ರೈಲುಗಳು ಜನವರಿ 19 ರಿಂದ ಮುಂಬೈ, ಚೆನ್ನೈ, ಬೆಂಗಳೂರು, ಪುಣೆ, ಕೋಲ್ಕತ್ತಾ ಸೇರಿದಂತೆ ಪ್ರಮುಖ ನಗರಗಳಿಂದ ಓಡಾಟ ನಡೆಸಲಿವೆ ಎಂದು ಹೇಳಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, December 26, 2023, 19:33 [IST]
English summary
Mumbai ayodhya indigo daily flights starts january 15
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+