ಮುಂಬೈನಲ್ಲೂ ತಲೆಯೆತ್ತಿದ ಡ್ರೈವ್ ಥ್ರೂ ಟೆಸ್ಟಿಂಗ್ ಕೇಂದ್ರ

ಕರೋನಾ ವೈರಸ್ ವಿಶ್ವದ ಎಲ್ಲಾ ದೇಶಗಳಲ್ಲಿ ಮಾರಣ ಹೋಮ ನಡೆಸಿದೆ. ಈ ಮಹಾಮಾರಿ ವೈರಸ್‌ನಿಂದ ವಿಶ್ವದ ಎಲ್ಲಾ ದೇಶಗಳು ತತ್ತರಿಸಿವೆ. ವಿಶ್ವದ ಬಲಿಷ್ಠ ರಾಷ್ಟ್ರಗಳು ಎಂದು ಹೇಳಲಾಗುವ ಅಮೆರಿಕಾ ಹಾಗೂ ಫ್ರಾನ್ಸ್‌‌ನಲ್ಲಿ ಹೆಚ್ಚು ಜನ ಈ ವೈರಸ್‌ನಿಂದ ಸಾವನ್ನಪ್ಪಿದ್ದಾರೆ.

ಮುಂಬೈನಲ್ಲೂ ತಲೆಯೆತ್ತಿದ ಡ್ರೈವ್ ಥ್ರೂ ಟೆಸ್ಟಿಂಗ್ ಕೇಂದ್ರ

ವೈರಸ್‌ ಹರಡದಂತೆ ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಭಾರತದಲ್ಲಿ ಮೊದಲು ಕೆಲವೇ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದ ಸೋಂಕಿತರ ಸಂಖ್ಯೆ ಇಂದು 12 ಸಾವಿರದ ಗಡಿ ದಾಟಿದೆ. ಇತ್ತೀಚಿಗಷ್ಟೇ 2ನೇ ಹಂತದ ಲಾಕ್‌ಡೌನ್ ಜಾರಿಗೆ ತರಲಾಗಿದೆ. ಲಾಕ್‌ಡೌನ್‌ನಿಂದಾಗಿ ದಿನಗೂಲಿ ನೌಕರರು ಹಾಗೂ ಇತರ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮುಂಬೈನಲ್ಲೂ ತಲೆಯೆತ್ತಿದ ಡ್ರೈವ್ ಥ್ರೂ ಟೆಸ್ಟಿಂಗ್ ಕೇಂದ್ರ

ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಕರೋನಾ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಲಾಗಿದೆ. ಕರೋನಾ ವೈರಸ್ ಹೆಚ್ಚಾಗಿರುವ ಮಹಾರಾಷ್ಟ್ರದಲ್ಲಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಮುಂಬೈನಲ್ಲೂ ತಲೆಯೆತ್ತಿದ ಡ್ರೈವ್ ಥ್ರೂ ಟೆಸ್ಟಿಂಗ್ ಕೇಂದ್ರ

ಅದರಂತೆ ಈಗ ಮುಂಬಯಿಯಲ್ಲಿ ಮೂರು ಹೊಸ ಡ್ರೈವ್-ಥ್ರೂ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮುಂಬೈ ಹಾಗೂ ಪುಣೆ ನಗರಗಳು ಮಹಾರಾಷ್ಟ್ರದ ಎರಡು ಹಾಟ್‌ಸ್ಪಾಟ್‌ಗಳಾಗಿವೆ.

ಮುಂಬೈನಲ್ಲೂ ತಲೆಯೆತ್ತಿದ ಡ್ರೈವ್ ಥ್ರೂ ಟೆಸ್ಟಿಂಗ್ ಕೇಂದ್ರ

ಈ ಕಾರಣಕ್ಕೆ ಈ ಎರಡು ಸ್ಥಳಗಳ ಕಡೆ ಹೆಚ್ಚು ಗಮನ ಹರಿಸಿ, ವೈರಸ್ ಹರಡದಂತೆ ತಡೆಯುವ ಉದ್ದೇಶದಿಂದ ಮೂರು ಹೊಸ ಡ್ರೈವ್-ಥ್ರೂ ಟೆಸ್ಟಿಂಗ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಮುಂಬೈನಲ್ಲೂ ತಲೆಯೆತ್ತಿದ ಡ್ರೈವ್ ಥ್ರೂ ಟೆಸ್ಟಿಂಗ್ ಕೇಂದ್ರ

ಈ ಡ್ರೈವ್-ಥ್ರೂ ಟೆಸ್ಟಿಂಗ್‌ಗಳ ವಿಶೇಷತೆಯೆಂದರೆ ಕರೋನಾ ವೈರಸ್ ಪರೀಕ್ಷೆಗೆ ಒಳಪಡುವವರು ಕಾರಿನಿಂದ ಕೆಳಗೆ ಇಳಿಯುವ ಅವಶ್ಯಕತೆಯಿಲ್ಲ. ಡ್ರೈವ್-ಥ್ರೂ ಟೆಸ್ಟಿಂಗ್ ಸಿಬ್ಬಂದಿ ಕಾರಿನ ಬಳಿ ಬಂದು ಸ್ಯಾಂಪಲ್‌ಗಳನ್ನು ಸಂಗ್ರಹಿಸುತ್ತಾರೆ. ಸಂಗ್ರಹಿಸಿದ ಸ್ಯಾಂಪಲ್‌ಗಳ ಫಲಿತಾಂಶಗಳನ್ನು ಇ-ಮೇಲ್ ಅಥವಾ ಎಸ್‌ಎಂಎಸ್ ಮೂಲಕ ಕಳುಹಿಸಲಾಗುತ್ತದೆ.

ಮುಂಬೈನಲ್ಲೂ ತಲೆಯೆತ್ತಿದ ಡ್ರೈವ್ ಥ್ರೂ ಟೆಸ್ಟಿಂಗ್ ಕೇಂದ್ರ

ಇದೇ ರೀತಿಯ ಡ್ರೈವ್-ಥ್ರೂ-ಟೆಸ್ಟ್ ಲ್ಯಾಬ್ ಅನ್ನು ಮೊದಲು ರಾಜಧಾನಿ ದೆಹಲಿಯಲ್ಲಿ ಸ್ಥಾಪಿಸಲಾಗಿತ್ತು. ಈಗ ಮುಂಬೈನಲ್ಲೂ ಸ್ಥಾಪಿಸಲಾಗಿದೆ. ಈ ಲ್ಯಾಬ್‌ಗಳನ್ನು ಲೋವರ್ ಪ್ಯಾರೆಲ್‌ನಲ್ಲಿರುವ ಇಂಡಿಯಾ ಪಲ್ಸ್ ಫೈನಾನ್ಷಿಯಲ್ ಸೆಂಟರ್, ಚೆವ್ರಿಯ ಸೆಲೆಸ್ಟಿಯಾ ಸೆಂಟರ್ ಹಾಗೂ ಕಾಂಜುರ್ಮಾರ್ಕ್‌ನ ಲೋಧಾ ಸುಪ್ರೀಮಾಸ್‌ನಲ್ಲಿ ಸ್ಥಾಪಿಸಲಾಗಿದೆ. ಇವೆಲ್ಲವೂ ಎಸ್‌ಆರ್‌ಎಲ್ ಡಯಾಗ್ನೋಸ್ಟಿಕ್‌ಗೆ ಸೇರಿವೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಮುಂಬೈನಲ್ಲೂ ತಲೆಯೆತ್ತಿದ ಡ್ರೈವ್ ಥ್ರೂ ಟೆಸ್ಟಿಂಗ್ ಕೇಂದ್ರ

ಈ ಲ್ಯಾಬ್‌ಗಳಿಗೆ ಬರುವ ಮೊದಲು ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಎಸ್‌ಆರ್‌ಎಲ್ ಡಯಾಗ್ನೋಸ್ಟಿಕ್ ವಿಶೇಷ ದೂರವಾಣಿ ಸಂಖ್ಯೆಯನ್ನು ನೀಡಿದೆ. ಈ ಸಂಖ್ಯೆಯನ್ನು ಸಂಪರ್ಕಿಸುವ ಮೂಲಕ ಬಳಕೆದಾರರು ತಾವು ಪರೀಕ್ಷೆಗೆ ಬರುವ ಸಮಯವನ್ನು ಮೊದಲೇ ನೋಂದಾಯಿಸಿಕೊಳ್ಳಬೇಕು.

ಮುಂಬೈನಲ್ಲೂ ತಲೆಯೆತ್ತಿದ ಡ್ರೈವ್ ಥ್ರೂ ಟೆಸ್ಟಿಂಗ್ ಕೇಂದ್ರ

ಕಂಪನಿಯು ಕೇವಲ 10 ನಿಮಿಷಗಳಲ್ಲಿ ಸ್ಯಾಂಪಲ್‌ಗಳನ್ನು ಸಂಗ್ರಹಿಸುತ್ತದೆ. ಕಾರಿನಿಂದ ಇಳಿಯುವುದು ಬೇಕಿಲ್ಲ. ಸುರಕ್ಷತಾ ಕ್ರಮಗಳನ್ನು ಕೈಗೊಂಡ ನಂತರವೇ ಯಾವುದೇ ವ್ಯಕ್ತಿಯಿಂದ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗುತ್ತದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಮುಂಬೈನಲ್ಲೂ ತಲೆಯೆತ್ತಿದ ಡ್ರೈವ್ ಥ್ರೂ ಟೆಸ್ಟಿಂಗ್ ಕೇಂದ್ರ

ಡ್ರೈವ್-ಥ್ರೂ ಲ್ಯಾಬ್‌ನೊಳಕ್ಕೆ ಕಂಪನಿಯ ಸಿಬ್ಬಂದಿಯಲ್ಲದೇ ಬೇರೆಯವರಿಗೆ ಅವಕಾಶ ನೀಡುವುದಿಲ್ಲ. ಒಬ್ಬ ವ್ಯಕ್ತಿ ಸ್ಯಾಂಪಲ್ ನೀಡಿ ಹೊರ ಹೋದ ನಂತರವಷ್ಟೇ ಮತ್ತೊಬ್ಬ ವ್ಯಕ್ತಿಯ ಸ್ಯಾಂಪಲ್ ಸಂಗ್ರಹಿಸಲಾಗುವುದು. ಒಂದು ಬಾರಿಗೆ ಒಬ್ಬ ವ್ಯಕ್ತಿಯ ಕಾರನ್ನು ಮಾತ್ರ ಒಳಗೆ ಬಿಡಲಾಗುತ್ತದೆ.

Most Read Articles

Kannada
English summary
Mumbai gets three drive thru testing facility for Covid 19 test. Read in Kannada.
Story first published: Friday, April 17, 2020, 11:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X