ಮುಂಬೈ ನಿಲ್ದಾಣದಲ್ಲಿ ಹಳಿ ತಪ್ಪಿದ ಲೋಕಲ್ ಟ್ರೈನ್ - ರೋಚಕ ವೀಡಿಯೊ ವೀಕ್ಷಿಸಿ
ಎರಡು ದಿನಗಳ ಹಿಂದೆ ಮುಂಬೈನ ರೈಲು ನಿಲ್ದಾಣವೊಂದರಲ್ಲಿ ನಡೆದ ಲೋಕಲ್ ರೈಲಿನ ಅಪಘಾತದ ರೋಚಕ ಸಿಸಿಟಿವಿ ದೃಶ್ಯಗಳು ಹೊರಬಿದ್ದಿದೆ. [ಕೆಳಗಡೆ ವೀಡಿಯೊ ವೀಕ್ಷಿಸಿ]
ಘಟನೆ ಹಿನ್ನೆಲೆ...
2015 ಜೂನ್ 28, ಬೆಳಗ್ಗೆ 11.30ರ ಹೊತ್ತಿಗೆ ಭಯಾದಂರ್-ಚರ್ಚ್ ಗೇಟ್ ನಡುವಣ ಲೋಕಲ್ ಟ್ರೈನ್ ಚರ್ಚ್ ಗೇಟ್ ನಿಲ್ಧಾಣಕ್ಕೆ ಬಂದು ತಲುಪಿದಾಗ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಫ್ಲ್ಯಾಟ್ ಫಾರ್ಮ್ ನಲ್ಲಿದ್ದ ಐವರು ಮಂದಿ ಗಾಯಗೀಡಾಗಿದ್ದರು.
ರೋಚಕ ವೀಡಿಯೊ ವೀಕ್ಷಿಸಿ
ಅಪಘಾತಕ್ಕೆ ಕಾರಣ ಏನು?
ಮೋಟಾರ್ ಮ್ಯಾನ್ (ರೈಲು ಚಾಲಕ) ಬ್ರೇಕ್ ಅದುಮಲು ಮರೆತಿರುವುದೇ ಅಪಘಾತಕ್ಕೆ ಕಾರಣವಾಗುತ್ತಿದೆ ಎನ್ನಲಾಗುತ್ತಿದೆ. ಗಂಟೆಗೆ 30 ಕೀ.ಮೀ. ವೇಗದಲ್ಲಿದ್ದ ರೈಲು ಫ್ಲ್ಯಾಟ್ ನ ಅಂಚಿಗೆ ಗುದ್ದಿದ ರಭಸಕ್ಕೆ ಬೋಗಿ ತುಂಡರಿಸಲ್ಪಟ್ಟು ನಿಲ್ದಾಣದ ಮೇಲೆ ಬಿದ್ದಿತ್ತು. ಪ್ರಸ್ತುತ ಮುಂಬೈ ಪೊಲೀಸರು ತನಿಖೆ ಕೈಗೊಂಡಿದ್ದು, ಪ್ರಾಥಮಿಕ ವಿಚಾರಣಾ ಭಾಗವಾಗಿ ಮೋಟಾರ್ ಮ್ಯಾನ್, ಗಾರ್ಡ್ ಹಾಗೂ ಲೊಕೊ ಪರಿಶೀಲನಾಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.


Click it and Unblock the Notifications









