ಕರೋನಾ ಸೋಂಕಿತರಿಗೆ ನೆರವಾಗಲು ಫೋರ್ಡ್ ಎಸ್‌ಯುವಿ ಮಾರಾಟ ಮಾಡಿದ ರಿಯಲ್ ಹೀರೋ

ಕರೋನಾ ವೈರಸ್ ಎರಡನೇ ಅಲೆ ಭಾರತದಲ್ಲಿ ವೇಗವಾಗಿ ಹರಡುತ್ತಿದೆ. ಅದರಲ್ಲೂ ಉತ್ತರ ಭಾರತದಲ್ಲಿ ಕರೋನಾ ವೈರಸ್ ಸೋಂಕಿಗೆ ಒಳಗಾಗುವವರ ಸಂಖ್ಯೆ ಹಾಗೂ ಆದ್ದರಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಕರೋನಾ ಸೋಂಕಿತರಿಗೆ ನೆರವಾಗಲು ಫೋರ್ಡ್ ಎಸ್‌ಯುವಿ ಮಾರಾಟ ಮಾಡಿದ ರಿಯಲ್ ಹೀರೋ

ಈ ಸಂಕಷ್ಟದ ಸಮಯದಲ್ಲಿ ಕೆಲವರು ರಿಯಲ್ ಹೀರೋಗಳಾಗಿ ಹೊರಹೊಮ್ಮುತ್ತಿದ್ದಾರೆ. ಕರೋನಾ ವೈರಸ್ ಸೋಂಕಿಗೆ ತುತ್ತಾಗುವವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದರಿಂದ ಮೆಡಿಕಲ್ ಆಕ್ಸಿಜನ್ ಅಗತ್ಯವಾಗಿರುತ್ತದೆ. ಆಕ್ಸಿಜನ್ ಕೊರತೆಯಿಂದಾಗಿ ಕಳೆದ ಕೆಲವು ದಿನಗಳಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ದಿಢೀರನೆ ಹೆಚ್ಚಾಗಿದೆ.

ಕರೋನಾ ಸೋಂಕಿತರಿಗೆ ನೆರವಾಗಲು ಫೋರ್ಡ್ ಎಸ್‌ಯುವಿ ಮಾರಾಟ ಮಾಡಿದ ರಿಯಲ್ ಹೀರೋ

ಆಕ್ಸಿಜನ್ ಸಿಲಿಂಡರ್'ಗಳ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಟಾಟಾ ಗ್ರೂಪ್ ಹಾಗೂ ರಿಲಾಯನ್ಸ್ ಕಂಪನಿಗಳು ಆಕ್ಸಿಜನ್ ಸಿಲಿಂಡರ್ ತಯಾರಿಸಲು ಮುಂದಾಗಿವೆ. ಇನ್ನು ಕೆಲವು ವ್ಯಕ್ತಿಗಳು ಕರೋನಾ ವೈರಸ್ ಸೋಂಕಿತರಿಗೆ ನೆರವಾಗಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಕರೋನಾ ಸೋಂಕಿತರಿಗೆ ನೆರವಾಗಲು ಫೋರ್ಡ್ ಎಸ್‌ಯುವಿ ಮಾರಾಟ ಮಾಡಿದ ರಿಯಲ್ ಹೀರೋ

ಮುಂಬೈನ ಮಲಾಡ್'ನ ನಿವಾಸಿ ಶಹನವಾಜ್ ಕೆಲವು ತಿಂಗಳ ಹಿಂದೆ ತಮ್ಮ ಫೋರ್ಡ್ ಎಸ್‌ಯುವಿಯನ್ನು ರೂ.22 ಲಕ್ಷಗಳಿಗೆ ಮಾರಾಟ ಮಾಡಿ, ಆ ಹಣವನ್ನು 160 ಆಕ್ಸಿಜನ್ ಸಿಲಿಂಡರ್‌ಗಳನ್ನು ಖರೀದಿಸಲು ಉಪಯೋಗಿಸಿದ್ದಾರೆ.

ಕರೋನಾ ಸೋಂಕಿತರಿಗೆ ನೆರವಾಗಲು ಫೋರ್ಡ್ ಎಸ್‌ಯುವಿ ಮಾರಾಟ ಮಾಡಿದ ರಿಯಲ್ ಹೀರೋ

ಆಕ್ಸಿಜನ್ ಅಗತ್ಯವಿರುವವರಿಗೆ ಈ ಆಕ್ಸಿಜನ್ ಸಿಲಿಂಡರ್‌ಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸುತ್ತಿದ್ದಾರೆ. ಶಹನವಾಜ್ ಇದಕ್ಕಾಗಿ ತಮ್ಮದೇ ತಂಡ, ಸಹಾಯವಾಣಿ ಸಂಖ್ಯೆ ಹಾಗೂ ಕಂಟ್ರೋಲ್ ರೂಂ ಸ್ಥಾಪಿಸಿದ್ದಾರೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಕರೋನಾ ಸೋಂಕಿತರಿಗೆ ನೆರವಾಗಲು ಫೋರ್ಡ್ ಎಸ್‌ಯುವಿ ಮಾರಾಟ ಮಾಡಿದ ರಿಯಲ್ ಹೀರೋ

ಶಹನವಾಜ್ ಅವರ ತಂಡವು ಕಳೆದ ವರ್ಷದಿಂದ ಇಲ್ಲಿಯವರೆಗೆ 4,000 ಕ್ಕೂ ಹೆಚ್ಚು ಜನರಿಗೆ ಆಕ್ಸಿಜನ್ ಸಿಲಿಂಡರ್‌ಗಳನ್ನು ವಿತರಿಸಿದೆ. ಇದರ ಜೊತೆಗೆ ಅವರು ಆಕ್ಸಿಜನ್ ಸಿಲಿಂಡರ್‌ಗಳನ್ನು ಹೇಗೆ ಬಳಸುವುದು ಎಂಬುದನ್ನು ಜನರಿಗೆ ವಿವರಿಸುತ್ತಿದ್ದಾರೆ.

ಕರೋನಾ ಸೋಂಕಿತರಿಗೆ ನೆರವಾಗಲು ಫೋರ್ಡ್ ಎಸ್‌ಯುವಿ ಮಾರಾಟ ಮಾಡಿದ ರಿಯಲ್ ಹೀರೋ

ಶಹನವಾಜ್ ಜನರಿಗೆ ಆಕ್ಸಿಜನ್ ಸಿಲಿಂಡರ್‌ಗಳನ್ನು ವಿತರಿಸುತ್ತಿರುವುದರ ಹಿಂದೆ ದುರಂತದ ಕಥೆಯಿದೆ. ಶಹನವಾಜ್ ಅವರ ಸ್ನೇಹಿತನ ಪತ್ನಿ ಕಳೆದ ವರ್ಷ ಅನಾರೋಗ್ಯದಿಂದ ನಿಧನರಾದರು.

MOSTREAD: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಕರೋನಾ ಸೋಂಕಿತರಿಗೆ ನೆರವಾಗಲು ಫೋರ್ಡ್ ಎಸ್‌ಯುವಿ ಮಾರಾಟ ಮಾಡಿದ ರಿಯಲ್ ಹೀರೋ

ಆಕ್ಸಿಜನ್ ಕೊರತೆಯೇ ಅವರ ಸಾವಿಗೆ ಪ್ರಮುಖ ಕಾರಣವಾಗಿತ್ತು. ಈ ಘಟನೆ ಶಹನವಾಜ್ ಅವರನ್ನು ಬಹಳ ಕಾಡಿತು. ಈ ಕಾರಣಕ್ಕೆ ಶಹನವಾಜ್ ಅಗತ್ಯವಿರುವವರಿಗೆ ಆಕ್ಸಿಜನ್ ಸಿಲಿಂಡರ್‌ಗಳನ್ನು ಒದಗಿಸಲು ಮುಂದಾದರು.

ಕರೋನಾ ಸೋಂಕಿತರಿಗೆ ನೆರವಾಗಲು ಫೋರ್ಡ್ ಎಸ್‌ಯುವಿ ಮಾರಾಟ ಮಾಡಿದ ರಿಯಲ್ ಹೀರೋ

ಕಳೆದ ವರ್ಷಕ್ಕಿಂತ ಈ ವರ್ಷ ಕರೋನಾ ವೈರಸ್ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಶಹನವಾಜ್ ಅವರನ್ನು ಆತಂಕಕ್ಕೆ ದೂಡಿದೆ. ಆಕ್ಸಿಜನ್ ಸಿಲಿಂಡರ್ ಪಡೆಯಲು ಈಗ ಪ್ರತಿದಿನ ಶಹನವಾಜ್'ರವರಿಗೆ 500ರಿಂದ 600 ಜನರು ಫೋನ್ ಕರೆಗಳನ್ನು ಮಾಡುತ್ತಿದ್ದಾರೆ.

ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Mumbai man sells his Ford SUV to help Covid 19 patients. Read in Kannada.
Story first published: Monday, April 26, 2021, 9:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X