ದಾಖಲೆಗಳ ಪರಿಶೀಲನೆಗೆ ವಾಹನಗಳನ್ನು ತಡೆದು ನಿಲ್ಲಿಸದಂತೆ ಆದೇಶ ಹೊರಡಿಸಿದ ಪೊಲೀಸ್ ಆಯುಕ್ತರು

ಮುಂಬೈ ಪೋಲಿಸ್ ಆಯುಕ್ತರಾದ ಹೇಮಂತ್ ನಾಗರೆಲ್ ಸಂಚಾರಿ ಪೋಲಿಸರಿಗೆ ಹೊಸ ಆದೇಶ ಹೊರಡಿಸಿದ್ದಾರೆ. ಈ ಆದೇಶದನ್ವಯ ಸಂಚಾರಿ ಪೊಲೀಸರು ದಾಖಲೆಗಳನ್ನು ಪರಿಶೀಲಿಸಲು ವಾಹನಗಳನ್ನು ತಡೆದು ನಿಲ್ಲಿಸುವಂತಿಲ್ಲ. ಈ ರೀತಿ ಆದೇಶ ಹೊರಡಿಸುವುದಕ್ಕೂ ಕಾರಣವಿದೆ.

ದಾಖಲೆಗಳ ಪರಿಶೀಲನೆಗೆ ವಾಹನಗಳನ್ನು ತಡೆದು ನಿಲ್ಲಿಸದಂತೆ ಆದೇಶ ಹೊರಡಿಸಿದ ಪೊಲೀಸ್ ಆಯುಕ್ತರು

ಸಂಚಾರಿ ಪೊಲೀಸರು ವಾಹನಗಳನ್ನು ನಿಲ್ಲಿಸಿ ದಾಖಲೆಗಳನ್ನು ಪರಿಶೀಲಿಸುವಾಗ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗುತ್ತಿತ್ತು. ಇದನ್ನು ಗಮನಿಸಿದ ನಂತರ ಪೊಲೀಸ್ ಆಯುಕ್ತರಾದ ಹೇಮಂತ್ ನಾಗರೆಲ್ ಈ ಆದೇಶ ಹೊರಡಿಸಿದ್ದಾರೆ. ಸಣ್ಣಪುಟ್ಟ ಕಾರಣಗಳಿಗಾಗಿ ವಾಹನಗಳನ್ನು ನಿಲ್ಲಿಸುವುದರ ಬದಲು ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಒತ್ತು ನೀಡಬೇಕು ಎಂದು ಅವರು ಸಂಚಾರಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ದಾಖಲೆಗಳ ಪರಿಶೀಲನೆಗೆ ವಾಹನಗಳನ್ನು ತಡೆದು ನಿಲ್ಲಿಸದಂತೆ ಆದೇಶ ಹೊರಡಿಸಿದ ಪೊಲೀಸ್ ಆಯುಕ್ತರು

ಈ ಆದೇಶವನ್ನು ಉಲ್ಲಂಘಿಸಿ ದಾಖಲೆಗಳನ್ನು ಪರಿಶೀಲಿಸಲು ವಾಹನಗಳನ್ನು ನಿಲ್ಲಿಸುವ ಸಂಚಾರಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.

ದಾಖಲೆಗಳ ಪರಿಶೀಲನೆಗೆ ವಾಹನಗಳನ್ನು ತಡೆದು ನಿಲ್ಲಿಸದಂತೆ ಆದೇಶ ಹೊರಡಿಸಿದ ಪೊಲೀಸ್ ಆಯುಕ್ತರು

ಈ ಕುರಿತು ಹೇಮಂತ್ ನಾಗರೆಲ್ ಜುಲೈ 29 ರಂದು ಆದೇಶ ಹೊರಡಿಸಿದ್ದಾರೆ. ಕೆಲವು ಸಂಚಾರ ಪೊಲೀಸರು ಕೇವಲ ದಾಖಲೆಗಳನ್ನು ಪರಿಶೀಲಿಸಲು ಮಾತ್ರ ವಾಹನಗಳನ್ನು ನಿಲ್ಲಿಸುತ್ತಿರುವುದು ಕಂಡು ಬಂದಿದೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ.

ದಾಖಲೆಗಳ ಪರಿಶೀಲನೆಗೆ ವಾಹನಗಳನ್ನು ತಡೆದು ನಿಲ್ಲಿಸದಂತೆ ಆದೇಶ ಹೊರಡಿಸಿದ ಪೊಲೀಸ್ ಆಯುಕ್ತರು

ಸಂಚಾರಿ ಪೊಲೀಸರು ಕೇವಲ ದಾಖಲೆಗಳನ್ನು ಪರಿಶೀಲಿಸಲು ವಾಹನಗಳನ್ನು ನಿಲ್ಲಿಸಬಾರದು. ಬದಲಿಗೆ ಅವರು ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಹೆಚ್ಚು ಒತ್ತು ನೀಡಬೇಕು. ಸಂಚಾರಿ ಪೊಲೀಸರು ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬಹುದು.

ದಾಖಲೆಗಳ ಪರಿಶೀಲನೆಗೆ ವಾಹನಗಳನ್ನು ತಡೆದು ನಿಲ್ಲಿಸದಂತೆ ಆದೇಶ ಹೊರಡಿಸಿದ ಪೊಲೀಸ್ ಆಯುಕ್ತರು

ಅದರ ಬದಲು ದಾಖಲೆಗಳನ್ನು ಪರಿಶೀಲಿಸುವ ಉದ್ದೇಶದಿಂದ ವಾಹನಗಳನ್ನು ನಿಲ್ಲಿಸಿ ಪರೀಕ್ಷಿಸಬಾರದು. ಈ ಆದೇಶವನ್ನು ಪಾಲಿಸದಿದ್ದರೆ, ಸಂಬಂಧಿತ ವಿಭಾಗದ ಉಸ್ತುವಾರಿ ಅಧಿಕಾರಿ ಹೊಣೆಗಾರರಾಗಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ದಾಖಲೆಗಳ ಪರಿಶೀಲನೆಗೆ ವಾಹನಗಳನ್ನು ತಡೆದು ನಿಲ್ಲಿಸದಂತೆ ಆದೇಶ ಹೊರಡಿಸಿದ ಪೊಲೀಸ್ ಆಯುಕ್ತರು

ಸಂಚಾರಿ ಪೊಲೀಸರು ದಾಖಲೆಗಳನ್ನು ಪರಿಶೀಲಿಸುವ ಸಲುವಾಗಿಯೇ ವಾಹನಗಳನ್ನು ತಡೆದು ನಿಲ್ಲಿಸುವ ಹಲವು ಘಟನೆಗಳನ್ನು ಕಾಣಬಹುದು. ವಾಹನಗಳು ಹೆಚ್ಚು ಸಂಚರಿಸುವ ವೇಳೆಯಲ್ಲಿ ವಾಹನಗಳನ್ನು ತಡೆದು ನಿಲ್ಲಿಸಲಾಗುತ್ತದೆ.

ದಾಖಲೆಗಳ ಪರಿಶೀಲನೆಗೆ ವಾಹನಗಳನ್ನು ತಡೆದು ನಿಲ್ಲಿಸದಂತೆ ಆದೇಶ ಹೊರಡಿಸಿದ ಪೊಲೀಸ್ ಆಯುಕ್ತರು

ಇದರಿಂದ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗುತ್ತದೆ. ಜೊತೆಗೆ ಪ್ರಯಾಣವು ವಿಳಂಬವಾಗುತ್ತದೆ ಎಂದು ವಾಹನ ಸವಾರರು ದೂರುತ್ತಲೇ ಇರುತ್ತಾರೆ. ಈ ಬಗ್ಗೆ ಮಾತನಾಡಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಕೆಲವು ಪೊಲೀಸರು ವಾಹನ ದಾಖಲೆಗಳನ್ನು ಪರೀಕ್ಷಿಸಲು ರಸ್ತೆ ಮಧ್ಯದಲ್ಲಿಯೇ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ.

ದಾಖಲೆಗಳ ಪರಿಶೀಲನೆಗೆ ವಾಹನಗಳನ್ನು ತಡೆದು ನಿಲ್ಲಿಸದಂತೆ ಆದೇಶ ಹೊರಡಿಸಿದ ಪೊಲೀಸ್ ಆಯುಕ್ತರು

ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ ಎಂದು ನಮಗೆ ಹಲವಾರು ದೂರುಗಳು ಬಂದಿವೆ. ದಾಖಲೆಗಳನ್ನು ಪರಿಶೀಲಿಸಲು ವಾಹನಗಳನ್ನು ನಿಲ್ಲಿಸುವ ಅಗತ್ಯವಿಲ್ಲ. ಯಾವುದೇ ಅಡೆ ತಡೆಯಿಲ್ಲದೆ ಸಂಚಾರ ಸುಗಮವಾಗಿರುವಂತೆ ಪೊಲೀಸರು ನೋಡಿಕೊಳ್ಳಬೇಕು ಎಂದು ಹೇಳಿದ್ದರು.

ದಾಖಲೆಗಳ ಪರಿಶೀಲನೆಗೆ ವಾಹನಗಳನ್ನು ತಡೆದು ನಿಲ್ಲಿಸದಂತೆ ಆದೇಶ ಹೊರಡಿಸಿದ ಪೊಲೀಸ್ ಆಯುಕ್ತರು

ಭಾರತದ ಹಲವು ಪ್ರಮುಖ ನಗರಗಳಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಇವುಗಳಲ್ಲಿ ಮುಂಬೈ ಸಹ ಸೇರಿದೆ. ಇದಕ್ಕೆ ಪ್ರಮುಖ ಕಾರಣ, ರಸ್ತೆಗಳು ಅಗಲೀಕರಣಗೊಳ್ಳದಿರುವುದು ಹಾಗೂ ರಸ್ತೆಗಳು ಕಳಪೆ ಸ್ಥಿತಿಯಲ್ಲಿರುವುದು.

ದಾಖಲೆಗಳ ಪರಿಶೀಲನೆಗೆ ವಾಹನಗಳನ್ನು ತಡೆದು ನಿಲ್ಲಿಸದಂತೆ ಆದೇಶ ಹೊರಡಿಸಿದ ಪೊಲೀಸ್ ಆಯುಕ್ತರು

ಇದರ ಜೊತೆಗೆ ಪೊಲೀಸರು ದಾಖಲೆಗಳ ಪರಿಶೀಲನೆಗಾಗಿ ವಾಹನಗಳನ್ನು ನಿಲ್ಲಿಸುತ್ತಾರೆ. ಈ ಸಮಸ್ಯೆಯನ್ನು ಬಗೆ ಹರಿಸಲು ಮುಂಬೈ ಪೊಲೀಸ್ ಆಯುಕ್ತರು ಹೊಸ ಆದೇಶವನ್ನು ಹೊರಡಿಸಿದ್ದಾರೆ. ಮುಂಬೈ ವಾಹನ ಸವಾರರು ಈ ಆದೇಶವನ್ನು ಸ್ವಾಗತಿಸಿದ್ದಾರೆ.

ದಾಖಲೆಗಳ ಪರಿಶೀಲನೆಗೆ ವಾಹನಗಳನ್ನು ತಡೆದು ನಿಲ್ಲಿಸದಂತೆ ಆದೇಶ ಹೊರಡಿಸಿದ ಪೊಲೀಸ್ ಆಯುಕ್ತರು

ದೇಶದ ಇತರ ಭಾಗಗಳಲ್ಲಿಯೂ ಈ ಆದೇಶವನ್ನು ಜಾರಿಗೊಳಿಸಬೇಕೆಂದು ವಾಹನ ಸವಾರರು ಒತ್ತಾಯಿಸುತ್ತಿದ್ದಾರೆ. ಈ ರೀತಿಯ ಆದೇಶಗಳು ಅನಗತ್ಯ ಸಂಚಾರ ದಟ್ಟಣೆ ಉಂಟಾಗುವುದನ್ನು ತಪ್ಪಿಸುತ್ತವೆ ಎಂಬುದು ವಾಹನ ಸವಾರರ ಅಭಿಪ್ರಾಯ.

ದಾಖಲೆಗಳ ಪರಿಶೀಲನೆಗೆ ವಾಹನಗಳನ್ನು ತಡೆದು ನಿಲ್ಲಿಸದಂತೆ ಆದೇಶ ಹೊರಡಿಸಿದ ಪೊಲೀಸ್ ಆಯುಕ್ತರು

ಭಾರತದ ಪ್ರಮುಖ ನಗರಗಳು ಸಂಚಾರ ದಟ್ಟಣೆಯ ಸಮಸ್ಯೆಯಿಂದ ತತ್ತರಿಸಿವೆ. ಕೆಲವೊಮ್ಮೆ ಆಂಬ್ಯುಲೆನ್ಸ್‌ ಹಾಗೂ ಅಗ್ನಿಶಾಮಕ ವಾಹನಗಳಂತಹ ತುರ್ತು ಸೇವೆ ನೀಡುವ ವಾಹನಗಳು ಸಹ ಟ್ರಾಫಿಕ್‌ನಲ್ಲಿ ಸಿಲುಕಿ ಕೊಳ್ಳುತ್ತವೆ.

ದಾಖಲೆಗಳ ಪರಿಶೀಲನೆಗೆ ವಾಹನಗಳನ್ನು ತಡೆದು ನಿಲ್ಲಿಸದಂತೆ ಆದೇಶ ಹೊರಡಿಸಿದ ಪೊಲೀಸ್ ಆಯುಕ್ತರು

ಜನರು ತಮ್ಮ ಸ್ವಂತ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ ಸಾರ್ವಜನಿಕ ಸಾರಿಗೆಯನ್ನು ಬಳಸಿದರೆ, ಸಂಚಾರ ದಟ್ಟಣೆಯ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ಭಾರತದಲ್ಲಿ ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ದಾಖಲೆಗಳ ಪರಿಶೀಲನೆಗೆ ವಾಹನಗಳನ್ನು ತಡೆದು ನಿಲ್ಲಿಸದಂತೆ ಆದೇಶ ಹೊರಡಿಸಿದ ಪೊಲೀಸ್ ಆಯುಕ್ತರು

ಆದರೆ ಕರೋನಾ ವೈರಸ್ ಸಾಂಕ್ರಾಮಿಕದ ನಂತರ ಜನರು ಸಾರ್ವಜನಿಕ ಸಾರಿಗೆ ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಜನರು ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣಿಸುವುದನ್ನು ಸುರಕ್ಷಿತವೆಂದು ಪರಿಗಣಿಸುತ್ತಿದ್ದಾರೆ. ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಕರೋನಾ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚು. ಈ ಕಾರಣಕ್ಕೆ ಕರೋನಾ ವೈರಸ್ ವೇಗವಾಗಿ ಹರಡುವ ಸಮಯದಲ್ಲಿ ಸರ್ಕಾರಗಳು ಬಸ್ ಸೇವೆಗಳನ್ನು ಸಹ ರದ್ದುಗೊಳಿಸುತ್ತವೆ. ಭವಿಷ್ಯದಲ್ಲಿ ಜನರು ತಮ್ಮ ಸ್ವಂತ ವಾಹನಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ ಎಂದು ನಿರೀಕ್ಷಿಸಲಾಗಿದೆ. ರಸ್ತೆಗಳನ್ನು ಅಗಲೀಕರಣ ಗೊಳಿಸುವುದರಿಂದ ಸಂಚಾರ ದಟ್ಟಣೆ ಸಮಸ್ಯೆಗೆ ತಕ್ಕ ಮಟ್ಟಿಗೆ ಪರಿಹಾರ ನೀಡಬಹುದು.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Mumbai police commissioner orders traffic cops not to stop vehicles for documents checking details
Story first published: Friday, August 6, 2021, 17:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X