ಪೊಲೀಸ್ ಪಡೆಗೆ 10 ಆಲ್ ಟೆರೈನ್ ವಾಹನಗಳನ್ನು ಕೊಡುಗೆ ನೀಡಿದ ರಿಲಯನ್ಸ್ ಫೌಂಡೇಶನ್

ಚೌಪಟ್ಟಿ ಬೀಚ್ ಮುಂಬೈನಲ್ಲಿರುವ ಜನಪ್ರಿಯ ಬೀಚ್'ಗಳಲ್ಲಿ ಒಂದಾಗಿದೆ. ಮುಂಬೈನಲ್ಲಿರುವ ಬೀಚ್'ಗಳಲ್ಲಿ ಗಸ್ತು ತಿರುಗಲು ಮುಂಬೈ ಪೊಲೀಸರಿಗೆ ಸೂಕ್ತವಾದ ವಾಹನದ ಅಗತ್ಯವಿತ್ತು.

ಪೊಲೀಸ್ ಪಡೆಗೆ 10 ಆಲ್ ಟೆರೈನ್ ವಾಹನಗಳನ್ನು ಕೊಡುಗೆ ನೀಡಿದ ರಿಲಯನ್ಸ್ ಫೌಂಡೇಶನ್

ಈಗ ಮುಂಬೈ ಪೊಲೀಸ್ ಪಡೆಗೆ 10 ಪೋಲಾರಿಸ್ ಆಲ್ ಟೆರೈನ್ ವಾಹನಗಳನ್ನು ಸೇರ್ಪಡೆಗೊಳಿಸಲಾಗಿದೆ. ಈ ವಾಹನವು ಎಲ್ಲಾ ರೀತಿಯ ರಸ್ತೆಗಳಿಗೆ ಸೂಕ್ತವಾದ ವಾಹನವಾಗಿದೆ. ಈ ವಾಹನವನ್ನು ಬೀಚ್'ಗಳಲ್ಲಿಯೂ ಚಾಲನೆ ಮಾಡಬಹುದು. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆರವರು 10 ಪೋಲಾರಿಸ್ ಆಲ್ ಟೆರೈನ್ ವಾಹನಗಳಿಗೆ ಚಾಲನೆ ನೀಡಿದ್ದಾರೆ.

ಪೊಲೀಸ್ ಪಡೆಗೆ 10 ಆಲ್ ಟೆರೈನ್ ವಾಹನಗಳನ್ನು ಕೊಡುಗೆ ನೀಡಿದ ರಿಲಯನ್ಸ್ ಫೌಂಡೇಶನ್

ಈ ಸಂದರ್ಭದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಉಪಸ್ಥಿತರಿದ್ದರು. ಈ ವಾಹನಗಳನ್ನು ರಿಲಯನ್ಸ್ ಫೌಂಡೇಶನ್ ಕೊಡುಗೆಯಾಗಿ ನೀಡಿದೆ.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಪೊಲೀಸ್ ಪಡೆಗೆ 10 ಆಲ್ ಟೆರೈನ್ ವಾಹನಗಳನ್ನು ಕೊಡುಗೆ ನೀಡಿದ ರಿಲಯನ್ಸ್ ಫೌಂಡೇಶನ್

ಈ ವಾಹನಗಳನ್ನು ಮುಂಬೈನ ಕರಾವಳಿ ಪ್ರದೇಶಗಳಲ್ಲಿ ಗಸ್ತು ತಿರುಗಲು ಬಳಸಲಾಗುವುದು ಎಂದು ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಾಗ್ರೆಲ್ ತಿಳಿಸಿದ್ದಾರೆ. ಈ ವಾಹನವನ್ನು ಎಲ್ಲಾ ರೀತಿಯ ರಸ್ತೆಗಳಲ್ಲಿ ಚಾಲನೆ ಮಾಡಬಹುದಾಗಿರುವುದರಿಂದ, ಈ ವಾಹನಗಳನ್ನು ಕಡಲತೀರದಲ್ಲಿ ಗಸ್ತು ತಿರುಗಲು ಮಾತ್ರವಲ್ಲದೆ ತುರ್ತು ಸಂಚಾರಕ್ಕೂ ಬಳಸಬಹುದು.

ಪೊಲೀಸ್ ಪಡೆಗೆ 10 ಆಲ್ ಟೆರೈನ್ ವಾಹನಗಳನ್ನು ಕೊಡುಗೆ ನೀಡಿದ ರಿಲಯನ್ಸ್ ಫೌಂಡೇಶನ್

ಈ ವಾಹನಗಳನ್ನು ಅಮೆರಿಕಾದ ಆಟೋಮೊಬೈಲ್ ಕಂಪನಿಯಾದ ಪೋಲಾರಿಸ್ ಮೋಟಾರ್ ತಯಾರಿಸಿದೆ. ಈ ಅಮೆರಿಕಾ ಕಂಪನಿಯು ನಿರ್ಮಿಸಿರುವ ವಾಹನಗಳನ್ನು ಈಗ ಮುಂಬೈ ಪೊಲೀಸ್ ಪಡೆಗೆ ಸೇರ್ಪಡೆಗೊಳಿಸಲಾಗಿದೆ.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಪೊಲೀಸ್ ಪಡೆಗೆ 10 ಆಲ್ ಟೆರೈನ್ ವಾಹನಗಳನ್ನು ಕೊಡುಗೆ ನೀಡಿದ ರಿಲಯನ್ಸ್ ಫೌಂಡೇಶನ್

ಈ ಆಲ್ ಟೆರೈನ್ ವಾಹನವನ್ನು 570 ಇಎಫ್‌ಐ ರೇಂಜರ್ ಎಂದು ಕರೆಯಲಾಗುತ್ತದೆ. ಈ ವಾಹನದಲ್ಲಿ 570 ಸಿಸಿ, 4 ಸ್ಟ್ರೋಕ್, ಡಿಒಹೆಚ್‌ಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 44 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

ಪೊಲೀಸ್ ಪಡೆಗೆ 10 ಆಲ್ ಟೆರೈನ್ ವಾಹನಗಳನ್ನು ಕೊಡುಗೆ ನೀಡಿದ ರಿಲಯನ್ಸ್ ಫೌಂಡೇಶನ್

10 ಇಂಚುಗಳಷ್ಟು ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಈ ಪೋಲಾರಿಸ್ ವಾಹನದ ಮುಂಭಾಗ ಹಾಗೂ ಹಿಂಭಾಗದ ವ್ಹೀಲ್'ಗಳ ನಡುವಿನ ಅಂತರವು 2,667 ಎಂ.ಎಂಗಳಾಗಿದೆ. ಈ ವಾಹನವು ಒಂದು ಬಾರಿ ಗರಿಷ್ಠ 4 ಜನರನ್ನು ಸಾಗಿಸಬಲ್ಲದು.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಪೊಲೀಸ್ ಪಡೆಗೆ 10 ಆಲ್ ಟೆರೈನ್ ವಾಹನಗಳನ್ನು ಕೊಡುಗೆ ನೀಡಿದ ರಿಲಯನ್ಸ್ ಫೌಂಡೇಶನ್

ಈ ವಾಹನದಲ್ಲಿರುವ ಸ್ಟೀಯರಿಂಗ್ ವ್ಹೀಲ್ ತುಸು ಜಟಿಲವಾಗಿದೆ. ಆದರೆ ಪೋಲಾರಿಸ್ ಮೋಟಾರ್ ಕಂಪನಿಯು ಈ ಆಲ್ ರೋಡ್ ವಾಹನದಲ್ಲಿ ಸ್ಟೀಯರಿಂಗ್ ವ್ಹೀಲ್ ಅನ್ನು ಸ್ವಲ್ಪ ಇಳಿಜಾರಿನೊಂದಿಗೆ ಅಳವಡಿಸಿದೆ.

ಪೊಲೀಸ್ ಪಡೆಗೆ 10 ಆಲ್ ಟೆರೈನ್ ವಾಹನಗಳನ್ನು ಕೊಡುಗೆ ನೀಡಿದ ರಿಲಯನ್ಸ್ ಫೌಂಡೇಶನ್

ಈ ವಾಹನದಲ್ಲಿ ಸಿಂಗಲ್ ಅನಲಾಗ್ ಡಯಲ್, ಸ್ಪೀಡೋಮೀಟರ್, ಟ್ಯಾಕೋಮೀಟರ್, ಆಟೋಮೀಟರ್, ಗೇರ್ ಇಂಡಿಕೇಟರ್, ಫ್ಯೂಯಲ್ ಲೆವೆಲ್ ಇಂಡಿಕೇಟರ್, ಸೀಟ್ ಬೆಲ್ಟ್ ಫ್ರೀ ಫ್ಲ್ಯಾಷ್‌ಲೈಟ್'ಗಳನ್ನು ಹೊಂದಿರುವ 2 ಇಂಚಿನ ಎಲ್‌ಸಿಡಿ ನೀಡಲಾಗಿದೆ.

Most Read Articles

Kannada
English summary
Mumbai police gets 10 Polaris ATVs from Reliance foundation. Read in Kannada.
Story first published: Tuesday, June 8, 2021, 20:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X