ಅಕ್ರಮ ಪಾರ್ಕಿಂಗ್ ಮಾಫಿಯಾ ವಿರುದ್ಧ ಕಾರ್ಯಾಚರಣೆ ಆರಂಭಿಸಿದ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು

ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್‌ನ ಪ್ರಾದೇಶಿಕ ಅಧಿಕಾರಿಗಳು (ನಾರ್ತ್ ದೆಹಲಿ ಎಂಸಿಡಿ) ನಿಗಮದ ಪ್ರದೇಶಗಳಲ್ಲಿ ಅನಧಿಕೃತವಾಗಿ ಪಾರ್ಕಿಂಗ್ ವ್ಯವಹಾರ ನಡೆಸುತ್ತಿರುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಕಾರ್ಯಾಚರಣೆ ವೇಳೆ ಹಲವು ಖಾಸಗಿ ವ್ಯಕ್ತಿಗಳು ನಿಗಮದಿಂದ ಅನುಮತಿ ಪಡೆಯದೆ ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ಪಾರ್ಕಿಂಗ್ ನಡೆಸುತ್ತಿರುವುದು ಕಂಡು ಬಂದಿದೆ.

ಅಕ್ರಮ ಪಾರ್ಕಿಂಗ್ ಮಾಫಿಯಾ ವಿರುದ್ಧ ಕಾರ್ಯಾಚರಣೆ ಆರಂಭಿಸಿದ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು

ಕೆಲವರು ಅಕ್ರಮವಾಗಿ ಜನರಿಂದ ಪಾರ್ಕಿಂಗ್ ಶುಲ್ಕವನ್ನು ಸಂಗ್ರಹಿಸುತ್ತಿರುವುದನ್ನು ನಿಗಮದ ಅಧಿಕಾರಿಗಳು ಗಮನಿಸಿದ್ದಾರೆ. ಈ ಅಭಿಯಾನದ ಸಮಯದಲ್ಲಿ ನಾರ್ತ್ಮುನಿಸಿಪಲ್ ಕಾರ್ಪೊರೇಷನ್ ವಿವಿಧ ಪೊಲೀಸ್ ಠಾಣೆಗಳಲ್ಲಿ 18 ಕ್ಕೂ ಹೆಚ್ಚು ದೂರುಗಳನ್ನು ದಾಖಲಿಸಿ, ಪಾರ್ಕಿಂಗ್ ಮಾಫಿಯಾ ಕಾನೂನು ಬಾಹಿರವಾಗಿ ಪಾರ್ಕಿಂಗ್ ನಡೆಸುತ್ತಿದ್ದು, ಜನರಿಗೆ ಪಾರ್ಕಿಂಗ್ ಶುಲ್ಕವನ್ನು ವಿಧಿಸುತ್ತಿದೆ.

ಅಕ್ರಮ ಪಾರ್ಕಿಂಗ್ ಮಾಫಿಯಾ ವಿರುದ್ಧ ಕಾರ್ಯಾಚರಣೆ ಆರಂಭಿಸಿದ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು

ಈ ಕಾರಣಕ್ಕೆ ಇವರ ವಿರುದ್ಧ ಎಫ್ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದೆ. ಈ ಪ್ರದೇಶದಲ್ಲಿ ಕಾನೂನುಬಾಹಿರ ಹಾಗೂ ಅನಧಿಕೃತ ಪಾರ್ಕಿಂಗ್ ತಡೆಯಲು ಪ್ರಾದೇಶಿಕ ಪೊಲೀಸ್ ಅಧಿಕಾರಿಗಳಿಗೂ ನಿಗಾ ವಹಿಸುವಂತೆ ತಿಳಿಸಲಾಗಿದೆ ಎಂದು ನಿಗಮವು ಮಾಹಿತಿ ನೀಡಿದೆ.

ಅಕ್ರಮ ಪಾರ್ಕಿಂಗ್ ಮಾಫಿಯಾ ವಿರುದ್ಧ ಕಾರ್ಯಾಚರಣೆ ಆರಂಭಿಸಿದ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು

ಅಕ್ರಮ ಹಾಗೂ ಅನಧಿಕೃತ ಪಾರ್ಕಿಂಗ್ ವಿರುದ್ಧದ ಕಾರ್ಯಾಚರಣೆ ಸಂದರ್ಭದಲ್ಲಿ ನಾರ್ತ್ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್, ಸದರ್ ಪಹರ್ಗಂಜ್ ಪ್ರದೇಶದಲ್ಲಿಹಾಗೂ ಕರೋಲ್‌ಬಾಗ್ ಪ್ರದೇಶದಲ್ಲಿ 5 ದೂರುಗಳನ್ನು ಪೊಲೀಸ್ ಠಾಣೆಗಳಲ್ಲಿ ದಾಖಲಿಸಿದೆ. ಅಕ್ರಮ ಪಾರ್ಕಿಂಗ್ ಮಾಫಿಯಾ ಉತ್ತರ ದೆಹಲಿಯಲ್ಲಿ ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿದೆ.

ಅಕ್ರಮ ಪಾರ್ಕಿಂಗ್ ಮಾಫಿಯಾ ವಿರುದ್ಧ ಕಾರ್ಯಾಚರಣೆ ಆರಂಭಿಸಿದ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು

ಇದನ್ನು ತಡೆಯಲು ಎನ್‌ಡಿ‌ಎಂಸಿ, ಉತ್ತರ ದೆಹಲಿ ಪ್ರದೇಶದಾದ್ಯಂತ ಸಂಚಾರ ಹಾಗೂ ಪಾದಚಾರಿಗಳ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಅಕ್ರಮ ಪಾರ್ಕಿಂಗ್ ಮಾಫಿಯಾದ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ನಿರ್ಧರಿಸಿದೆ. ಅಕ್ರಮ ಪಾರ್ಕಿಂಗ್ ಅನ್ನು ಪರೀಕ್ಷಿಸುವ ಮೂಲಕ ಪಾರ್ಕಿಂಗ್ ಸ್ಥಳಗಳಿಂದ ಆದಾಯವನ್ನು ಹೆಚ್ಚಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ಅಕ್ರಮ ಪಾರ್ಕಿಂಗ್ ಮಾಫಿಯಾ ವಿರುದ್ಧ ಕಾರ್ಯಾಚರಣೆ ಆರಂಭಿಸಿದ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು

ಈ ಪ್ರದೇಶದಲ್ಲಿ ಪಾರ್ಕಿಂಗ್ ನಿರ್ವಹಣೆಯನ್ನು ಸುಧಾರಿಸಲು, ಪಾರ್ಕಿಂಗ್ ಸ್ಥಳಗಳಿಂದ ಆದಾಯವನ್ನು ಹೆಚ್ಚಿಸಲು ಹಾಗೂ ಅನಧಿಕೃತ ಪಾರ್ಕಿಂಗ್ ವಿರುದ್ಧ ನಾರ್ತ್ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ಕಳೆದ ಒಂದು ತಿಂಗಳಿನಿಂದ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಈಗ ನಾರ್ತ್ ಕಾರ್ಪೊರೇಶನ್ ವ್ಯಾಪ್ತಿಯಲ್ಲಿ 133 ಪಾರ್ಕಿಂಗ್ ಸ್ಥಳಗಳಿವೆ.

ಅಕ್ರಮ ಪಾರ್ಕಿಂಗ್ ಮಾಫಿಯಾ ವಿರುದ್ಧ ಕಾರ್ಯಾಚರಣೆ ಆರಂಭಿಸಿದ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು

ಇವುಗಳಲ್ಲಿ 66 ಪಾರ್ಕಿಂಗ್ ಸ್ಥಳಗಳನ್ನು ಅಧಿಕೃತ ಗುತ್ತಿಗೆದಾರರು ನಿರ್ವಹಿಸುತ್ತಿದ್ದಾರೆ . ಇನ್ನು 67 ಪಾರ್ಕಿಂಗ್ ಸ್ಥಳಗಳಲ್ಲಿ ಇ ಟೆಂಡರ್ ಪ್ರಕ್ರಿಯೆಯ ಮೂಲಕ ಗುತ್ತಿಗೆದಾರರನ್ನು ಆಯ್ಕೆ ಮಾಡುವವರೆಗೆ ಈ ಪಾರ್ಕಿಂಗ್ ಸ್ಥಳಗಳನ್ನು ಉಚಿತ ಪಾರ್ಕಿಂಗ್ ಸ್ಥಳವೆಂದು ಘೋಷಿಸಲಾಗಿದೆ.

ಅಕ್ರಮ ಪಾರ್ಕಿಂಗ್ ಮಾಫಿಯಾ ವಿರುದ್ಧ ಕಾರ್ಯಾಚರಣೆ ಆರಂಭಿಸಿದ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು

ಆನ್‌ಲೈನ್‌ ಮೂಲಕ ಡ್ರೈವಿಂಗ್ ಲೈಸೆನ್ಸ್

ಆಗಸ್ಟ್ 11 ರಿಂದ ದೆಹಲಿ ಸಾರಿಗೆ ಇಲಾಖೆಯು ಜನರು ಮನೆಯಲ್ಲಿ ಕುಳಿತೇ ಚಾಲನಾ ಪರವಾನಗಿ ಪಡೆಯುವ ಸೌಲಭ್ಯವನ್ನು ಒದಗಿಸುತ್ತಿದೆ. ಕಲಿಕಾ ಪರವಾನಗಿ ಅರ್ಜಿ, ಚಾಲನಾ ಪರವಾನಗಿ ನವೀಕರಣ, ಪರವಾನಗಿ ನವೀಕರಣ, ನೋಂದಣಿ ಪ್ರಮಾಣಪತ್ರ, ವಿಮಾ ಎನ್ಒಸಿ ಸೇರಿದಂತೆ 33 ಸೇವೆಗಳನ್ನು ಇಲಾಖೆಯು ಆನ್‌ಲೈನ್ ಮೂಲಕ ನೀಡಲಿದೆ.

ಅಕ್ರಮ ಪಾರ್ಕಿಂಗ್ ಮಾಫಿಯಾ ವಿರುದ್ಧ ಕಾರ್ಯಾಚರಣೆ ಆರಂಭಿಸಿದ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು

ದೆಹಲಿ ಸಾರಿಗೆ ಇಲಾಖೆಯು ಕಾಂಟಾಕ್ಟ್ ಲೆಸ್ ಸೇವೆಯನ್ನು ಆರಂಭಿಸಿರುವುದರಿಂದ ಇನ್ನು ಮುಂದೆ ವಾಹನ ಸವಾರರು ಚಾಲನಾ ಪರೀಕ್ಷೆ ಹಾಗೂ ಫಿಟ್ ನೆಸ್ ಟೆಸ್ಟ್ಸರ್ಟಿಫಿಕೇಟ್ ಪಡೆಯಲು ಮಾತ್ರ ಸಾರಿಗೆ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡಬೇಕಾಗುತ್ತದೆ.

ಅಕ್ರಮ ಪಾರ್ಕಿಂಗ್ ಮಾಫಿಯಾ ವಿರುದ್ಧ ಕಾರ್ಯಾಚರಣೆ ಆರಂಭಿಸಿದ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು

ಸಾರಿಗೆ ಇಲಾಖೆ ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರವು ಸಾರಿಗೆ ಇಲಾಖೆಗೆ ಸೇರಿದ ಹಲವು ಸೇವೆಗಳನ್ನು ಆನ್ ಲೈನ್ ಮೂಲಕ ನೀಡಲು ಕ್ರಮ ಕೈಗೊಂಡಿದೆ. ಇದರಿಂದ ಸಾರಿಗೆ ಇಲಾಖೆ ಕಚೇರಿಗಳಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು ಎಂಬುದು ದೆಹಲಿ ಸರ್ಕಾರದ ಅಭಿಪ್ರಾಯ.

ಅಕ್ರಮ ಪಾರ್ಕಿಂಗ್ ಮಾಫಿಯಾ ವಿರುದ್ಧ ಕಾರ್ಯಾಚರಣೆ ಆರಂಭಿಸಿದ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು

ಕರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಜನರು ವಿನಾ ಕಾರಣ ಕಚೇರಿಗಳಿಗೆ ಬರುವುದನ್ನು ತಡೆಯಲು ಹಾಗೂ ಸೋಂಕು ಹರಡುವುದನ್ನು ನಿಯಂತ್ರಿಸಲು ಹಲವು ಇಲಾಖೆಗಳು ಆನ್ ಲೈನ್ ಮೂಲಕ ಸೇವೆ ನೀಡುತ್ತಿವೆ. ತೀರಾ ಅನಿವಾರ್ಯವಾದ ಸಂದರ್ಭಗಳಲ್ಲಿ ಮಾತ್ರ ಕಚೇರಿಗಳಿಗೆ ಬರುವಂತೆ ಜನರಿಗೆ ಸೂಚನೆ ನೀಡಲಾಗಿದೆ.

ಅಕ್ರಮ ಪಾರ್ಕಿಂಗ್ ಮಾಫಿಯಾ ವಿರುದ್ಧ ಕಾರ್ಯಾಚರಣೆ ಆರಂಭಿಸಿದ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು

ದೆಹಲಿಯಲ್ಲಿ ವಾಯು ಮಾಲಿನ್ಯ ಮಟ್ಟವು ವಿಪರಿತವಾಗಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ವಾಯು ಮಾಲಿನ್ಯವನ್ನು ತಡೆಗಟ್ಟಲು ದೆಹಲಿ ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇವುಗಳಲ್ಲಿ ಜನರನ್ನು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವಂತೆ ಉತ್ತೇಜನ ನೀಡುವುದು ಸಹ ಸೇರಿದೆ.

ಅಕ್ರಮ ಪಾರ್ಕಿಂಗ್ ಮಾಫಿಯಾ ವಿರುದ್ಧ ಕಾರ್ಯಾಚರಣೆ ಆರಂಭಿಸಿದ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು

ಈ ಕಾರಣಕ್ಕೆ ದೆಹಲಿ ಸರ್ಕಾರವು ಕಳೆದ ವರ್ಷ ಎಲೆಕ್ಟ್ರಿಕ್ ವಾಹನ ನೀತಿಯನ್ನು ಜಾರಿಗೊಳಿಸಿತು. ದೆಹಲಿ ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ಸಬ್ಸಿಡಿಯನ್ನು ನೀಡುತ್ತಿದೆ. ಎಲೆಕ್ಟ್ರಿಕ್ ವಾಹನ ನೀತಿಯನ್ನು ಅನುಷ್ಠಾನಗೊಳಿಸುವಲ್ಲಿ ದೆಹಲಿ ಸರ್ಕಾರವು ಇತರ ರಾಜ್ಯ ಸರ್ಕಾರಗಳಿಗಿಂತ ಒಂದು ಹೆಜ್ಜೆ ಮುಂದಿದೆ ಎಂದೇ ಹೇಳಬಹುದು.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Municipal corporation takes action against illegal parking mafia in north delhi details
Story first published: Wednesday, August 18, 2021, 13:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X