Myg: ಉದ್ಯೋಗಿಗಳಿಗೆ 6 ಹೊಸ ಕಾರು, 16 ದ್ವಿಚಕ್ರ ವಾಹನಗಳನ್ನು ಗಿಫ್ಟ್ ಕೊಟ್ಟ ಜನಪ್ರಿಯ ಕಂಪನಿ.. ನೀವೇನಂತೀರಾ?

ನಾವು ಮಾಡಿದ ಕಾರ್ಯ ಸಾರ್ಥಕ ಎನಿಸುವುದಕ್ಕೆ ನಮಗೆ ಒಂದು ಚಿಕ್ಕ ಪ್ರಶಂಸೆ ಸಿಕ್ಕಾಗ.. ವೇತನದಲ್ಲಿ ಹೆಚ್ಚಳ ಅಥವಾ ಕೆಲಸದ ಗುರುತಿಸುವಿಕೆ.. ಯಾವುದೇ ಉದ್ಯೋಗಿಗಾದರೂ ಅತಿ ಮುಖ್ಯವಾಗುತ್ತದೆ. ಕೇರಳ ಮೂಲದ ಮೈಜಿ ಡಿಜಿಟಲ್ (MyG Digital) ಮೊಬೈಲ್ ಫೋನ್ ಹಾಗೂ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಮಾರಾಟಕ್ಕೆ ಹೆಸರುವಾಸಿಯಾಗಿದೆ. ಸದ್ಯ ಕಂಪನಿಯ ಏಳಿಗೆಗೆ ಶ್ರಮಿಸಿದ ಹಲವು ಉದ್ಯೋಗಿಗಳಿಗೆ ಹೊಚ್ಚ ಹೊಸ ಕಾರು ಮತ್ತು ದ್ವಿಚಕ್ರ ವಾಹನಗಳನ್ನು ಉಡೊಗೊರೆಯಾಗಿ ನೀಡಲಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಮೈಜಿ ಡಿಜಿಟಲ್ ನೂತನ ವಾಹನಗಳನ್ನು ಗಿಫ್ಟ್ ಕೊಟ್ಟಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ. ಕಾರು ಹಾಗೂ ಬೈಕ್‌ಗಳನ್ನು ಉಡೊಗೊರೆಯಾಗಿ ಪಡೆದ ಸಿಬ್ಬಂದಿ ಅತೀವ ಸಂತೋಷದಲ್ಲಿರುವುದನ್ನು ಕೂಡ ದೃಶ್ಯಗಳಲ್ಲಿ ಕಾಣಬಹುದು. ಹ್ಯುಂಡೈ ಕ್ರೆಟಾ, ಎಂಜಿ ಹೆಕ್ಟರ್, ಪೋಕ್ಸ್‌ವ್ಯಾಗನ್ ಟೈಗನ್ ಸೇರಿದಂತೆ 6 ಕಾರುಗಳು, 1 ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ ಮತ್ತು 15 ಹೋಂಡಾ ಆಕ್ಟಿವಾ ಸ್ಕೂಟರ್‌ಗಳು ಉದ್ಯೋಗಿಗಳಿಗೆ ಗಿಫ್ಟ್ ರೂಪದಲ್ಲಿ ಸಿಕ್ಕಿವೆ.

Myg Digital Gifts 6 Cars 16 Two Wheeler To Employees Including Creta suv And Activa Scooters

ಎಕೆ ಶಾಜಿ (A.K. Shaji) ಮಾಲೀಕತ್ವದ ಮೈಜಿ ಡಿಜಿಟಲ್ ಉತ್ತಮ ಲಾಭದಲ್ಲಿದೆ. 2006ರಲ್ಲಿ ಈ ಕಂಪನಿಯನ್ನು ಶುರು ಮಾಡಲಾಗಿತ್ತು. ಭಾನುವಾರ 18ನೇ ವರ್ಷದ ವಾರ್ಷಿಕೋತ್ಸವ ಆಚರಿಸಲಾಗಿದೆ. ಕೇರಳದ ಕೋಝಿಕ್ಕೋಡ್ ನಗರದಲ್ಲಿರುವ ಸಂಸ್ಥೆಯ ಕಾರ್ಪೊರೇಟ್ ಕಚೇರಿಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಎಕೆ ಶಾಜಿ ಅವರು ನೂತನ ವಾಹನಗಳ ಕೀಯನ್ನು ಕಂಪನಿಯ ಏಳಿಗೆಗೆ ಶ್ರಮಿಸಿರುವ ಉದ್ಯೋಗಿಗಳಿಗೆ ಹಸ್ತಾಂತರಿಸಿದ್ದಾರೆ.

ಮೈಜಿ ಡಿಜಿಟಲ್ ದಕ್ಷಿಣ ಭಾರತದ ಹಲವು ನಗರಗಳಲ್ಲಿ 100ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, 2,500ಕ್ಕೂ ಅಧಿಕ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಮೈಜಿ 2025ರ ವೇಳೆಗೆ 150 ಮಳಿಗೆಗಳನ್ನು ತೆರೆಯಲು ಉದ್ದೇಶಿಸಿದ್ದು, 5,000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುವ ಗುರಿಯನ್ನು ಹಾಕಿಕೊಂಡಿದೆ. ಕೇರಳದಾದ್ಯಂತ ಪ್ರತಿ 20 ಕಿಲೋಮೀಟರ್‌ಗಳಿಗೆ ಒಂದು ಮೈಜಿ ಡಿಜಿಟಲ್ ಶೋರೂಂ ಇದೆ.

Myg Digital Gifts 6 Cars 16 Two Wheeler To Employees Including Creta suv And Activa Scooters

ಮೊದಲಿಗೆ ಉದ್ಯೋಗಿಗಳಿಗೆ ಉಡೊಗೊರೆಯಾಗಿ ನೀಡುವ ಹ್ಯುಂಡೈ ಕ್ರೆಟಾ (Hyundai Creta) ಕಾರಿನ ಬಗ್ಗೆ ಮಾತನಾಡೋಣ. ಇದು ರೂ.11 ಲಕ್ಷದಿಂದ ರೂ.20.15 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 1.5-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್, 1.5-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನ್ನು ಪಡೆದಿದ್ದು, 17.4 ರಿಂದ 21.8 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ಎಂಜಿ ಹೆಕ್ಟರ್ (MG Hector) ಕುರಿತಂತೆ ಹೇಳುವುದಾದರೆ, ಇದೊಂದು ಎಸ್‌ಯುವಿಯಾಗಿದೆ. ರೂ.13.99 ಲಕ್ಷದಿಂದ ರೂ.22.24 ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. 1.5-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 15.58 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. 14-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಹೋಂಡಾ ಆಕ್ಟಿವಾ (Honda Activa) ಸ್ಕೂಟರ್ ಒಂದಷ್ಟು ವಿವರವನ್ನು ನೋಡುವುದಾದರೆ, ಇದು ವಿವಿಧ ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯಲ್ಲಿ ಸಿಗುತ್ತದೆ. ರೂ.78,174 ದಿಂದ ರೂ.91,807 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 50 ರಿಂದ 60 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡಲಿದ್ದು, ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, July 15, 2024, 13:29 [IST]
English summary
Myg digital gifts 6 cars 16 two wheeler to employees including creta suv activa scooters
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+