ಬಹು ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಕಾರುಗಳ ಬಗೆಗಿನ ಸುಳ್ಳು ಸುದ್ದಿಗಳಿವು

ಅನೇಕ ಜನರಿಗೆ ರೋಲ್ಸ್ ರಾಯ್ಸ್ ಕಾರು ಖರೀದಿಸಬೇಕೆನ್ನುವ ಕನಸಿರುತ್ತದೆ. ಆದರೆ ಎಲ್ಲರಿಗೂ ಈ ಕನಸು ನನಸಾಗುವುದಿಲ್ಲ. ಕೇವಲ ಮಿಲಿಯನೇರ್‌ಗಳು ಮಾತ್ರ ಈ ಕನಸನ್ನು ನನಸಾಗಿಸಿಕೊಳ್ಳುತ್ತಾರೆ. ರೋಲ್ಸ್ ರಾಯ್ಸ್ ಕಾರುಗಳ ಬೆಲೆ ಕೋಟಿಗಳ ಲೆಕ್ಕದಲ್ಲಿರುವುದೇ ಇದಕ್ಕೆ ಕಾರಣ.

ಬಹು ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಕಾರುಗಳ ಬಗೆಗಿನ ಸುಳ್ಳು ಸುದ್ದಿಗಳಿವು

ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಕಾರುಗಳ ಬಗ್ಗೆ ಅನೇಕ ಸುಳ್ಳಿನ ಕಂತೆಗಳು ಹರಿದಾಡುತ್ತಿವೆ. ಜನರು ಸಹ ಅವುಗಳನ್ನು ನಿಜವೆಂದೇ ನಂಬುತ್ತಿದ್ದಾರೆ. ರೋಲ್ಸ್ ರಾಯ್ಸ್ ಕಾರುಗಳ ಬಗ್ಗೆ ಹರಿದಾಡುತ್ತಿರುವ ಸುಳ್ಳುಗಳು ಯಾವುವು? ಅವುಗಳು ನಿಜವೇ? ಯಾವುದು ತಪ್ಪು, ಯಾವುದು ಸರಿ ಎಂಬ ಬಗೆಗಿನ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಬಹು ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಕಾರುಗಳ ಬಗೆಗಿನ ಸುಳ್ಳು ಸುದ್ದಿಗಳಿವು

ಸುಳ್ಳು 1:

ರೋಲ್ಸ್ ರಾಯ್ಸ್ ಕಂಪನಿಯ ಕಾರುಗಳಲ್ಲಿ ಯಾವುದೇ ಶಬ್ದ ಬರುವುದಿಲ್ಲ. ಕಾರಿನಲ್ಲಿ ಕೇಳಿ ಬರುವ ಏಕೈಕ ಶಬ್ದವೆಂದರೆ ಗಡಿಯಾರದ ಶಬ್ದ ಮಾತ್ರ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಇದು ನಿಜವಲ್ಲ. ಕಾರು ನಿಧಾನವಾಗಿ ಚಲಿಸುತ್ತಿದ್ದರೆ ಶಬ್ದ ಕೇಳಿಸದೇ ಇರಬಹುದು.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಬಹು ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಕಾರುಗಳ ಬಗೆಗಿನ ಸುಳ್ಳು ಸುದ್ದಿಗಳಿವು

ಆದರೆ ಕಾರಿನ ವೇಗ ಹೆಚ್ಚಾದಂತೆ ಹೊರಗಿನಿಂದ ಶಬ್ದ ಕೇಳಬಹುದು. ರೋಲ್ಸ್ ರಾಯ್ಸ್ ಕಾರ್ಪೊರೇಟ್ ಕಾರುಗಳು ಮಾರುಕಟ್ಟೆಯಲ್ಲಿ ಮಾರಾಟವಾಗುವ ಇತರ ಐಷಾರಾಮಿ ಕಾರುಗಳಿಗಿಂತ ಕಡಿಮೆ ಶಬ್ದವನ್ನುಂಟು ಮಾಡಬಹುದು. ಆದರೆ ಗಡಿಯಾರದ ಶಬ್ದವನ್ನು ಹೊರತುಪಡಿಸಿ ಬೇರೆ ಯಾವುದೇ ಶಬ್ದ ಕೇಳಿಸುವುದಿಲ್ಲ ಎಂಬುದು ಸುಳ್ಳು.

ಬಹು ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಕಾರುಗಳ ಬಗೆಗಿನ ಸುಳ್ಳು ಸುದ್ದಿಗಳಿವು

ಸುಳ್ಳು 2:

ಸಾಮಾನ್ಯವಾಗಿ ಕಾರು ತಯಾರಕ ಕಂಪನಿಗಳು ನಿಗದಿತ ಅವಧಿಯೊಳಗೆ ತಯಾರಿಸಿದ ಕಾರುಗಳಲ್ಲಿ ಯಾವುದಾದರೂ ಸಮಸ್ಯೆ ಕಂಡು ಬಂದರೆ ಆ ಕಾರುಗಳನ್ನು ರಿಕಾಲ್ ಮಾಡಿ ಅವುಗಳನ್ನು ರಿಪೇರಿ ಮಾಡಿ ನಂತರ ಅವುಗಳನ್ನು ಮಾಲೀಕರಿಗೆ ಹಿಂತಿರುಗಿಸುತ್ತವೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಬಹು ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಕಾರುಗಳ ಬಗೆಗಿನ ಸುಳ್ಳು ಸುದ್ದಿಗಳಿವು

ಆದರೆ ರೋಲ್ಸ್ ರಾಯ್ಸ್ ಕಾರುಗಳನ್ನು ರಿಕಾಲ್ ಮಾಡುವುದೇ ಇಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಸುದ್ದಿ ನಿಜವಲ್ಲ. ರೋಲ್ಸ್ ರಾಯ್ಸ್ 2015ರಲ್ಲಿ ತನ್ನ ಘೋಸ್ಟ್ ಕಾರುಗಳನ್ನು ರಿಕಾಲ್ ಮಾಡಿತ್ತು. ಬೇರೆ ಕಾರು ತಯಾರಕ ಕಂಪನಿಗಳಿಗೆ ಹೋಲಿಸಿದರೆ ರೋಲ್ಸ್ ರಾಯ್ಸ್ ಕಾರುಗಳ ರಿಕಾಲ್ ಪ್ರಮಾಣ ಕಡಿಮೆ ಇರಬಹುದು. ಆದರೆ ರೋಲ್ಸ್ ರಾಯ್ಸ್ ಕಾರುಗಳನ್ನು ರಿಕಾಲ್ ಮಾಡುವುದೇ ಇಲ್ಲ ಎಂಬುದು ಸುಳ್ಳು.

ಬಹು ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಕಾರುಗಳ ಬಗೆಗಿನ ಸುಳ್ಳು ಸುದ್ದಿಗಳಿವು

ಸುಳ್ಳು 3:

ರೋಲ್ಸ್ ರಾಯ್ಸ್ ಕಾರುಗಳನ್ನು ಟ್ಯಾಕ್ಸಿಗಳಾಗಿ ಬಳಸಲಾಗುವುದಿಲ್ಲ ಎಂಬ ಸುದ್ದಿಗಳಿವೆ. ಆದರೆ ರೋಲ್ಸ್ ರಾಯ್ಸ್ ಕಾರುಗಳನ್ನು ಭಾರತವೂ ಸೇರಿದಂತೆ ವಿಶ್ವದ ವಿವಿಧ ದೇಶಗಳಲ್ಲಿ ಟ್ಯಾಕ್ಸಿಗಳಂತೆ ಬಳಸಲಾಗುತ್ತದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಬಹು ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಕಾರುಗಳ ಬಗೆಗಿನ ಸುಳ್ಳು ಸುದ್ದಿಗಳಿವು

ಅನೇಕ ಸ್ಟಾರ್ ಹೋಟೆಲ್‌ಗಳು ತಮ್ಮ ಗಣ್ಯ ಅತಿಥಿಗಳ ಪಿಕ್ ಅಪ್ ಹಾಗೂ ಡ್ರಾಪ್ ಗಾಗಿ ರೋಲ್ಸ್ ರಾಯ್ಸ್ ಕಾರುಗಳನ್ನು ಬಳಸುತ್ತಿವೆ. ಆದ್ದರಿಂದ ರೋಲ್ಸ್ ರಾಯ್ಸ್ ಕಂಪನಿಯ ಕಾರುಗಳನ್ನು ಎಂದಿಗೂ ಟ್ಯಾಕ್ಸಿಗಳಾಗಿ ಬಳಸಲಾಗುವುದಿಲ್ಲ ಎಂಬ ಸುದ್ದಿ ಸಹ ಸುಳ್ಳು.

ಬಹು ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಕಾರುಗಳ ಬಗೆಗಿನ ಸುಳ್ಳು ಸುದ್ದಿಗಳಿವು

ಸುಳ್ಳು 4:

ರೋಲ್ಸ್ ರಾಯ್ಸ್ ಕಾರುಗಳು ಎಂದಿಗೂ ಮಾರ್ಗ ಮಧ್ಯೆ ಕೆಟ್ಟು ನಿಲ್ಲುವುದಿಲ್ಲ ಎಂಬ ವದಂತಿಗಳಿವೆ. ಆದರೆ ಈ ಸುದ್ದಿಯೂ ಸಹ ಸುಳ್ಳು. ರೋಲ್ಸ್ ರಾಯ್ಸ್ ಕಾರುಗಳು ತುಂಬಾ ವಿಶ್ವಾಸಾರ್ಹವಾಗಿದ್ದರೂ ಕೆಲ ತಾಂತ್ರಿಕ ಸಮಸ್ಯೆಗಳ ಕಾರಣಕ್ಕೆ ಮಾರ್ಗ ಮಧ್ಯೆ ಕೆಟ್ಟು ನಿಲ್ಲುತ್ತವೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಬಹು ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಕಾರುಗಳ ಬಗೆಗಿನ ಸುಳ್ಳು ಸುದ್ದಿಗಳಿವು

ರೋಲ್ಸ್ ರಾಯ್ಸ್ ಕಾರುಗಳು ವಿಶ್ವದ ವಿವಿಧ ಭಾಗಗಳಲ್ಲಿ ಮಾರ್ಗ ಮಧ್ಯೆ ಕೆಟ್ಟು ನಿಂತ ಹಲವಾರು ಘಟನೆಗಳು ನಡೆದಿವೆ. ಕೆಲವೊಮ್ಮೆ ಜನಪ್ರಿಯ ವ್ಯಕ್ತಿಗಳ ರೋಲ್ಸ್ ರಾಯ್ಸ್ ಕಾರುಗಳೇ ಮಾರ್ಗ ಮಧ್ಯೆ ಕೆಟ್ಟು ನಿಂತ ಉದಾಹರಣೆಗಳಿವೆ.

ಬಹು ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಕಾರುಗಳ ಬಗೆಗಿನ ಸುಳ್ಳು ಸುದ್ದಿಗಳಿವು

ಸುಳ್ಳು 5:

ಯಾರು ಎಷ್ಟೇ ಹಣವನ್ನು ಹೊಂದಿದ್ದರೂ ರೋಲ್ಸ್ ರಾಯ್ಸ್ ಕಾರುಗಳನ್ನು ಖರೀದಿಸಲು ಸಾಧ್ಯವಿಲ್ಲ ಎಂಬ ವದಂತಿಗಳಿವೆ. ರೋಲ್ಸ್ ರಾಯ್ಸ್ ಕಂಪನಿಯು ಕಾರು ಖರೀದಿಸುವವರ ಹಿನ್ನೆಲೆಯನ್ನು ಪರಿಶೀಲಿಸಿ ನಂತರ ಕಾರನ್ನು ಮಾರಾಟ ಮಾಡುವ ಬಗ್ಗೆ ನಿರ್ಧರಿಸುತ್ತದೆ ಎಂದು ಹೇಳಲಾಗುತ್ತದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಬಹು ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಕಾರುಗಳ ಬಗೆಗಿನ ಸುಳ್ಳು ಸುದ್ದಿಗಳಿವು

ಆದರೆ ಇದು ನಿಜವಲ್ಲ. ರೋಲ್ಸ್ ರಾಯ್ಸ್ ಕಂಪನಿಯ ಕಾರು ಖರೀದಿಸಲು ನಿಮ್ಮ ಬಳಿ ಹಣವಿದ್ದರೆ, ಆ ಕಂಪನಿಯು ಸಂತೋಷದಿಂದ ಕಾರನ್ನು ನಿಮಗೆ ಮಾರಾಟ ಮಾಡುತ್ತದೆ. ಈ ಮೇಲೆ ತಿಳಿಸಿರುವ ಸುಳ್ಳು ಸುದ್ದಿಗಳನ್ನು ಯಾರಾದರೂ ನಿಮಗೆ ಹೇಳಿದರೆ ಅವುಗಳನ್ನು ನಂಬಬೇಡಿ.

Most Read Articles

Kannada
English summary
Myths about multi crore Rolls Royce cars. Read in Kannada.
Story first published: Wednesday, July 29, 2020, 10:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X