Bengaluru: ನಮ್ಮ ಯಾತ್ರಿ ಕ್ಯಾಬ್ ಸೇವೆ ಆರಂಭ.. ಎಷ್ಟಿದೆ ದರ?

ಜನಪ್ರಿಯ ಆಟೋರಿಕ್ಷಾ ಅಗ್ರಿಗೇಟರ್ ನಮ್ಮ ಯಾತ್ರಿ (Namma Yatri) ಬೆಂಗಳೂರು ನಗರದಲ್ಲಿ ಮಂಗಳವಾರದಿಂದ ಕ್ಯಾಬ್ ಸೇವೆ (Cab Services) ಯನ್ನು ಪ್ರಾರಂಭಿಸಿದೆ. ಇದರಿಂದ ಕ್ಯಾಬ್ ಚಾಲಕರು ಹಾಗೂ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಆ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ.

ನಮ್ಮ 'ಯಾತ್ರಿ ಕ್ಯಾಬ್' ಸೇವೆಯು ಶೂನ್ಯ ಕಮಿಷನ್ (zero commission) ವ್ಯವಸ್ಥೆಯನ್ನು ಹೊಂದಿದ್ದು, ರಾಜ್ಯ ಸರ್ಕಾರ ನಿಗದಿಪಡಿಸಿದ ಪ್ರಯಾಣ ದರವನ್ನು ಮಾತ್ರ ತೆಗೆದುಕೊಳ್ಳಲಿದೆ. ನಾನ್ ಎಸಿ ಮಿನಿ, ಎಸಿ ಮಿನಿ, ಸೆಡಾನ್‌ ಮತ್ತು ಎಕ್ಸ್‌ಎಲ್ ಕ್ಯಾಬ್‌ಗಳು ಸೇವೆಯಲ್ಲಿವೆ. ನಮ್ಮ ಯಾತ್ರಿ ಕ್ಯಾಬ್‌ಗಳಲ್ಲಿ ವಿಶೇಷ ಚೇತನರು ಕೂಡ ಆರಾಮದಾಯಕವಾಗಿ ಪ್ರಯಾಣಿಯಬಹುದು. ನಿಗದಿಪಡಿಸಿದ್ದಕ್ಕಿಂತ ಹೆಚ್ಚುವರಿ ಲಗೇಜ್‌ ಮತ್ತು ಸಾಕುಪ್ರಾಣಿಗಳೊಂದಿಗೂ ಸಂಚರಿಸಬಹುದು.

Namma Yatri Cab Service Start In Bangaluru What Is Fare Amount

ಈಗಾಗಲೇ, ನಮ್ಮ ಯಾತ್ರಿ ಕ್ಯಾಬ್ ಸೇವೆಯನ್ನು ಒದಗಿಸಲು ಒಟ್ಟು 25,000 ಕ್ಯಾಬ್ ಚಾಲಕರು ಉತ್ಸುಕರಾಗಿದ್ದು, ಮುಂದಿನ 6 ತಿಂಗಳಲ್ಲಿ ಕನಿಷ್ಠ 1 ಲಕ್ಷ ಚಾಲಕರನ್ನು ನೇಮಿಸಿಕೊಳ್ಳುವ ಗುರಿಯನ್ನು ಆಪ್ ನಿರ್ವಾಹಕರು ಹೊಂದಿದ್ದಾರೆ. ನಮ್ಮ ಯಾತ್ರಿ ಆಪ್ ಶೀಘ್ರದಲ್ಲಿ ಎರಡು ನಗರಗಳ ನಡುವಿನ ಪ್ರಯಾಣಿಕರ ಅನುಕೂಲಕ್ಕಾಗಿ ಇಂಟರ್‌ಸಿಟಿ ಸೇವೆಯನ್ನು ಆರಂಭಿಸುವುದಾಗಿ ಹೇಳಿದೆ.

ಎಸಿ ಮಿನಿ ಕ್ಯಾಬ್‌ನಲ್ಲಿ 4 ಕಿಲೋಮೀಟರ್ ಪ್ರಯಾಣಕ್ಕೆ ರೂ.100 ದರವನ್ನು ನಿಗದಿಪಡಿಸಲಾಗಿದೆ. ಆಮೇಲೆ ಪ್ರತಿ ಕಿ.ಮೀಗೆ ರೂ.18 ಪಾವತಿಸಬೇಕು. ಸೆಡಾನ್‌ನಲ್ಲಿ 4 ಕಿ.ಮೀ ಗೆ ರೂ.115 ಕನಿಷ್ಠ ದರವಿದ್ದು, ನಂತರ ಒಂದು ಕಿಲೋಮಿಟರ್ ಗೆ ರೂ.21 ಪ್ರಯಾಣದ ದರವಿರಲಿದೆ. ಎಕ್ಸ್‌ಎಲ್ ಕ್ಯಾಬ್‌ನಲ್ಲಿ ಪ್ರಯಾಣಿಸಿದರೆ 4 ಕಿಲೋಮೀಟರ್ ಗೆ ರೂ.130 ಇದ್ದು, ಬಳಿಕ ಪ್ರತಿ ಕಿ.ಮೀ ಗೆ ರೂ.24 ದರವನ್ನು ವಿಧಿಸಲಾಗುತ್ತದೆ.

ಜಸ್ಪೇ ಟೆಕ್ನಾಲಜೀಸ್ ಬೆನ್ನೆಲುಬಾಗಿರುವ ನಮ್ಮ ಯಾತ್ರಿ, ಸದ್ಯ ಕೊಚ್ಚಿ ಮತ್ತು ಕೋಲ್ಕತ್ತಾದಲ್ಲಿ ಕ್ಯಾಬ್ ಸೇವೆಯನ್ನು ನಡೆಸುತ್ತಿದೆ. ಕೋಲ್ಕತ್ತಾದಲ್ಲಿ ಈ ಸೇವೆಗೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 2023ರ ಜುಲೈನಲ್ಲಿ ಶುರುವಾದ ಸೇವೆಯು 23 ಲಕ್ಷಕ್ಕೂ ಹೆಚ್ಚು ಟ್ರಿಪ್‌ಗಳನ್ನು ಪೂರ್ಣಗೊಳಿಸಿದೆ. ಇದು 18 ಲಕ್ಷಕ್ಕೂ ಹೆಚ್ಚಿನ ನೋಂದಾಯಿತ ಬಳಕೆದಾರರನ್ನು ಹೊಂದಿದೆ. ಬರೋಬ್ಬರಿ 40,000ಕ್ಕೂ ಹೆಚ್ಚು ಚಾಲಕರು ರೂ.61 ಕೋಟಿ ಹಣವನ್ನು ಸಂಪಾದಿಸಿದ್ದಾರೆ.

ಕೇರಳದ ಕೊಚ್ಚಿಯಲ್ಲಿಯು ನಮ್ಮ ಯಾತ್ರಿ ಕ್ಯಾಬ್ ಹಾಗೂ ಆಟೋ ಸೇವೆಗಳು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯನ್ನು ಕಂಡಿದೆ. ನವೆಂಬರ್ 2022ರಲ್ಲಿ ಈ ಸೇವೆಯನ್ನು ಪ್ರಾರಂಭಿಸಲಾಯಿತು. ಸದ್ಯ 3.3 ಲಕ್ಷಕ್ಕೂ ಹೆಚ್ಚಿನ ಗ್ರಾಹಕರನ್ನು ಹೊಂದಿದೆ. 10,000ಕ್ಕೂ ಅಧಿಕ ಕ್ಯಾಬ್ ಮತ್ತು ಆಟೋ ಚಾಲಕರು ನೋಂದಾಯಿಸಿಕೊಂಡಿದ್ದು, ಸರಿ ಸುಮಾರು ರೂ.11 ಕೋಟಿ ಆದಾಯವನ್ನು ಗಳಿಸಿದ್ದಾರೆ.

2022ರಲ್ಲಿ, ಪ್ರಯಾಣಿಕರಿಗೆ ಅಧಿಕ ಶುಲ್ಕ ವಿಧಿಸುವ ಸಂಬಂಧ ಸಾರಿಗೆ ಇಲಾಖೆ ಮತ್ತು ಓಲಾ, ಉಬರ್ ಕಂಪನಿಗಳ ನಡುವೆ ತಿಕ್ಕಾಟ ಆರಂಭವಾಗಿತ್ತು. ಅದರ ಪರಿಣಾಮವಾಗಿ 'ನಮ್ಮ ಯಾತ್ರಿ' ಹುಟ್ಟುಕೊಂಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ನಮ್ಮ ಯಾತ್ರಿ ಆಟೋ ಸೇವೆಯನ್ನು ನಡೆಸುತ್ತಿದ್ದು, ಗ್ರಾಹಕರಿಂದ ಅಂದುಕೊಂಡ ಮಟ್ಟಕ್ಕೆ ಬೆಂಬಲ ಸಿಕ್ಕಿಲ್ಲ ಎಂದು ತಿಳಿದುಬಂದಿದೆ. ಈಗ ಕ್ಯಾಬ್ ಸೇವೆಯನ್ನು ಪ್ರಾರಂಭಿಸಿದ್ದು, ಪ್ರಯಾಣಿಕರು ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ತಂಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ ಗಳನ್ನು ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, April 19, 2024, 15:56 [IST]
English summary
Namma yatri cab service start in bangaluru what is fare amount
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+