'ಒನ್ ನೇಷನ್ ಒನ್ ಕಾರ್ಡ್'- ಹೊಸ ಯೋಜನೆಯಿಂದ ಯಾರಿಗೆ ಎಷ್ಟು ಲಾಭ?

ಒಂದೇ ಕಾರ್ಡ್ ಉಪಯೋಗಿ ವಿವಿಧ ಮಾದರಿಯ ಗ್ರಾಹಕರ ಸೇವೆಗಳನ್ನು ಪಡೆಯಬಹುದಾದ ರಾಷ್ಟ್ರೀಯ ಬಹುಪಯೋಗಿ ಕಾರ್ಡ್‌(ಎನ್‌ಸಿಎಂಸಿ) ಒನ್ ನೇಷನ್ ಒನ್ ಕಾರ್ಡ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದು, ಹೊಸ ಯೋಜನೆಯಿಂದ ಏನೆಲ್ಲಾ ಲಾಭಗಳಿವೇ? ಯಾವ ರೀತಿ ಪಡೆಯುವುದು ಮತ್ತು ಬಳಕೆ ಮಾಡಬಹುದು ಎನ್ನುವುದನ್ನು ನಾವಿಂದು ತಿಳಿಸಿಕೊಡಲಿದ್ದೇವೆ.

'ಒನ್ ನೇಷನ್ ಒನ್ ಕಾರ್ಡ್'- ಹೊಸ ಯೋಜನೆಯಿಂದ ಯಾರಿಗೆ ಎಷ್ಟು ಲಾಭ?

ಒನ್ ಕಾರ್ಡ್ ಒನ್ ನೇಷನ್ ಕಾರ್ಡ್ ಮುಖಾಂತರ ನಾನಾ ಗ್ರಾಹಕರ ಸೇವೆಗಳನ್ನು ಪಡೆಯಬಹುದಾಗಿದ್ದು, ಸಾರಿಗೆ, ಮೆಟ್ರೋ, ಶಾಪಿಂಗ್, ಟೋಲ್ ಶುಲ್ಕ ಮತ್ತು ಪಾರ್ಕಿಂಗ್ ಶುಲ್ಕ ಪಾವತಿಗಾಗಿ ಈ ಕಾರ್ಡ್ ಅತಿ ಹೆಚ್ಚು ಉಪಯೋಗವಾಗಲಿದೆ. ಜೊತೆಗೆ ಹಣ ಡ್ರಾ ಮಾಡಲು ಕೂಡಾ ಈ ಕಾರ್ಡ್ ಉಪಯೋಗವಾಗಲಿದ್ದು, ಒಟ್ಟಿನಲ್ಲಿ ಒಂದೇ ಕಾರ್ಡಿನ ಮೂಲಕ ವಿವಿಧ ಗ್ರಾಹಕ ಸೇವೆಗಳನ್ನು ಪಡೆಯಬಹುದಾದ ವ್ಯವಸ್ಥೆ ಇದಾಗಿದೆ.

'ಒನ್ ನೇಷನ್ ಒನ್ ಕಾರ್ಡ್'- ಹೊಸ ಯೋಜನೆಯಿಂದ ಯಾರಿಗೆ ಎಷ್ಟು ಲಾಭ?

ಹೊಸ ವ್ಯವಸ್ಥೆಯ ಬಗೆಗೆ ಮಾತನಾಡಿರುವ ನರೆಂದ್ರ ಮೋದಿಯವರು, ಒಂದು ದೇಶ, ಒಂದು ಕಾರ್ಡ್ ಎನ್ನುವ ಬಹುದಿನಗಳ ಕನಸು ನಸಾಗಿದ್ದು, ಇದು ಜನರ ಬದಕನ್ನು ಮತ್ತಷ್ಟು ಸುಲಭವಾಗಿಸಲಿದೆ ಎಂದಿದ್ದಾರೆ.

'ಒನ್ ನೇಷನ್ ಒನ್ ಕಾರ್ಡ್'- ಹೊಸ ಯೋಜನೆಯಿಂದ ಯಾರಿಗೆ ಎಷ್ಟು ಲಾಭ?

ಹೀಗಾಗಿ ಹೊಸ ಕಾರ್ಡ್ ಕುರಿತಾಗಿ ದೇಶದ ಜನತೆಯಲ್ಲಿ ಹಲವು ಪ್ರಶ್ನೆಗಳಿದ್ದು, ಯಾವ ರೀತಿ ಪಡೆಯಬೇಕು ಮತ್ತು ಬಳಕೆ ಮಾಡುವುದು ಹೇಗೆ ಎನ್ನುವ ಕುರಿತಾದ ಕೆಲವು ಗೊಂದಲಗಳಿವೆ. ಹೀಗಾಗಿ ಡ್ರೈವ್‌ಸ್ಪಾರ್ಕ್ ತಂಡವು ಸರಳ ರೀತಿಯಲ್ಲಿ ಓದುಗರಿಗೆ ತಿಳಿಸಿ ಕೊಡುವ ಪ್ರಯತ್ನ ಮಾಡಿದೆ.

'ಒನ್ ನೇಷನ್ ಒನ್ ಕಾರ್ಡ್'- ಹೊಸ ಯೋಜನೆಯಿಂದ ಯಾರಿಗೆ ಎಷ್ಟು ಲಾಭ?

ಚಿಲ್ಲರೆ ಸಮಸ್ಯೆಗೆ ಗುಡ್ ಬೈ..!

ದೇಶಿಯವಾಗ ಅಭಿವೃದ್ಧಿಗೊಂಡಿರುವ ಒನ್ ನೇಷನ್ ಒನ್ ಕಾರ್ಡ್ ಬಳಕೆಯ ಉದ್ದೇಶವೇ ಚಿಲ್ಲರೆ ಸಮಸ್ಯೆಗೆ ಗುಡ್ ಬೈ ಹೇಳುವುದಾಗಿದೆ. ಹೀಗಾಗಿ ನೀವು ಸಾರಿಗೆ, ಮೆಟ್ರೋ, ಶಾಪಿಂಗ್, ಟೋಲ್ ಶುಲ್ಕ ಮತ್ತು ಪಾರ್ಕಿಂಗ್ ಶುಲ್ಕವನ್ನು ಪಾವತಿಸುವಾಗ ಇನ್ಮುಂದೆ ಚಿಲ್ಲರೆ ಸಮಸ್ಯೆ ಎದುರಿಸಬೇಕಿಲ್ಲ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

'ಒನ್ ನೇಷನ್ ಒನ್ ಕಾರ್ಡ್'- ಹೊಸ ಯೋಜನೆಯಿಂದ ಯಾರಿಗೆ ಎಷ್ಟು ಲಾಭ?

'ಒಂದು ಕಾರ್ಡ್ ಉಪಯೋಗ ಹತ್ತಾರು'

* ಬ್ಯಾಂಕ್‌ಗಳಲ್ಲಿ ವಿತರಿಸಲಾಗುವ ರುಪೆ ಡೆಬಿಟ್/ಕ್ರೆಡಿಟ್ ಕಾರು ಮಾದರಿಯಲ್ಲೇ ಎನ್‌ಸಿಎಂಸಿ ಕಾರ್ಡ್ ಕಾರ್ಯನಿರ್ವಹಿಸಲಿದ್ದು, ಎಸ್‌ಬಿಐ ಸೇರಿ 25ಕ್ಕೂ ಹೆಚ್ಚು ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಈ ಕಾರ್ಡ್ ಅನ್ನು ಪಡೆಯಬಹುದಾಗಿದೆ.

* ಮೆಟ್ರೋ, ಸಾರಿಗೆ, ಶಾಪಿಂಗ್, ಟೋಲ್ ಶುಲ್ಕು ಮತ್ತು ಪಾರ್ಕಿಂಗ್ ಶುಲ್ಕ ಪಾವತಿ ವೇಳೆ ಒನ್ ನೇಷನ್ ಒನ್ ಕಾರ್ಡ್ ನೆರವಿಗೆ ಬರಲಿದ್ದು, ಚಿಲ್ಲರೆ ಸಮಸ್ಯೆಗೆ ದೊಡ್ಡ ಪರಿಹಾರ ಇದಾಗಿದೆ.

* ಹೊಸ ಕಾರ್ಡ್ ಬಳಕೆದಾರರಿಗೆ ಕ್ಯಾಶ್‌ ಬ್ಯಾಕ್ ಆಫರ್‌ಗಳು ದೊರೆಯಲಿದ್ದು, ವಿದೇಶಿ ಪ್ರಯಾಣದ ವೇಳೆ ಈ ಕಾರ್ಡ್ ಬಳಸುವ ಮೂಲಕ ಶೇ.10ರಷ್ಟು ಕ್ಯಾಶ್‌ಬ್ಯಾಕ್ ಆಫರ್ ಸಿಗುವುದಲ್ಲದೇ ಡಿಸ್ಕವರ್, ಡೈನರ್ಸ್ ಕ್ಲಬ್‌ನಂತಹ ಕೆಲವು ಅಂತರಾಷ್ಟ್ರೀಯ ವಾಣಿಜ್ಯ ಸಂಸ್ಥೆಗಳ ಎಂಟಿಎಗಳಲ್ಲೂ ಕೂಡಾ ಈ ಕಾರ್ಡನ್ನು ಬಳಸಬಹುದಾಗಿದೆ.

Most Read Articles

Kannada
English summary
PM Modi Launches National Common Mobility Card. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X