ಐಎನ್‌ಎಸ್ ವಿಕ್ರಮಾದಿತ್ಯ ದೇಶಕ್ಕೆ ಅರ್ಪಿಸಿದ ಮೋದಿ
ಅತ್ಯಂತ ದೊಡ್ಡ ಯುದ್ಧ ವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ ದೇಶಕ್ಕೆ ಅರ್ಪಿಸುತ್ತಾ ಮಾತನಾಡಿರುವ ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ, ನೂತನ ಸರಕಾರವು ರಕ್ಷಣಾ ವ್ಯವಸ್ಥೆಗೆ ಎಷ್ಟೊಂದು ಮಹತ್ವ ನೀಡುತ್ತಿದೆ ಎಂಬುದು ಇದರಿಂದಲೇ ಸಾಬೀತಾಗುತ್ತದೆ ಎಂದಿದ್ದಾರೆ.
ನರೇಂದ್ರ ಮೋದಿ ಹೈ ಸೆಕ್ಯೂರಿಟಿ ವಾಹನ
ಗೋವಾ ತೀರದ ಅರಬಿಯನ್ ಸಮುದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುದ್ಧ ವಾಹಕ ನೌಕೆಯನ್ನೇರಿದ ಮೋದಿ, ಮಿಗ್ 29 ಯುದ್ಧ ವಿಮಾನದಲ್ಲಿ ಕುಳಿತು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮೋದಿ ಅವರಿಗೆ ಭಾರತೀಯ ನೌಕಾದಳದಿಂದ ಗೌರವ ರಕ್ಷೆ ಸಲ್ಲಿಸಲಾಯಿತು.

ಭಾರತೀಯ ನೌಕಾದಳವನ್ನು ಮುನ್ನಡೆಸಲಿರುವ 44,500 ಟನ್ ಭಾರದ ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧ ವಾಹಕ ಹಡಗನ್ನು ಕಳೆದ ವರ್ಷ ರಷ್ಯಾದಿಂದ 15 ಕೋಟಿಗಿಂತಲೂ ಹೆಚ್ಚು ರು. ಪಾವತಿಸಿ ಖರೀದಿಸಲಾಗಿತ್ತು.

2013 ನವೆಂಬರ್ 16ರಂದು ಭಾರತ ನೌಕಾದಳವನ್ನು ಸೇರ್ಪಡೆಯಾಗಿದ್ದ ಐಎನ್‌ಎಸ್ ವಿಕ್ರಮಾದಿತ್ಯ ನೌಕೆಯು, ತೇಲುವ ಯುದ್ಧ ವಾಹನ ಹಡಗಾಗಿದ್ದು ಮೂರು ಫುಟ್ಬಾಲ್ ಮೈದಾನಗಿಂತಲೂ ಹೆಚ್ಚು ವಿಸ್ತಾರವಾದ ಸ್ಥಳಾವಕಾಶವನ್ನು ಹೊಂದಿದೆ.

ಒಟ್ಟು 22 ಕಟ್ಟೆಗಳಿರುವ ಇದರಲ್ಲಿ 1,600ರಷ್ಟು ಸಿಬ್ಬಂದಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಸರಿ ಸುಮಾರು ಒಂದು ಲಕ್ಷ ಮೊಟ್ಟೆ, 20,000 ಲೀಟರ್ ಹಾಲು ಮತ್ತು 16 ಟನ್ ಅಕ್ಕಿಯನ್ನು ಖಜಾನೆ ಮಾಡಿರಿಸುವ ಸಾಮರ್ಥ್ಯ ಹೊಂದಿದೆ. ಅಂದರೆ 45 ದಿನಗಳ ವರೆಗೂ ಸಮುದ್ರದಲ್ಲೇ ಉಳಿದುಕೊಳ್ಳಬಹುದಾಗಿದೆ.

ಪರಿಷ್ಕೃತ ಕೀವ್ ಕ್ಲಾಸ್ ಯುದ್ಧ ವಿಮಾನ ವಾಹನ ನೌಕೆಯಾಗಿರುವ ಇದನ್ನು ಕ್ರಿಸ್ತ ಪೂರ್ವ ಒಂದನೇ ಶತಮಾನದಲ್ಲಿ ಭಾರತದ ಉಜ್ಜಯಿನಿಯ ಪೌರಣಿಕ ರಾಜನಾಗಿದ್ದ ವಿಕ್ರಮಾದಿತ್ಯ ಸ್ಮರಣೆಗಾಗಿ ಇದಕ್ಕೆ ಈ ಹೆಸರನ್ನು ಇಡಲಾಗಿದೆ. ಇಲ್ಲಿ ವಿಕ್ರಮಾದಿತ್ಯ ಎಂಬುದು 'ಸೂರ್ಯನಷ್ಟು ಧೈರ್ಯಶಾಲಿ' ಎಂಬ ಸಂಕೇತ ನೀಡುತ್ತದೆ.

ಮೂಲತ: ಬಾಕು ಎನಿಸಿಕೊಂಡಿದ್ದ ಈ ಹಡಗು 1987ರಲ್ಲಿ ಸೋವಿಯತ್ ಒಕ್ಕೂಟಕ್ಕಾಗಿ ಸೇವೆ ಸಲ್ಲಿಸಿತ್ತು. ಆದರೆ ಶೀತಲ ಸಮರದ ಬಳಿಕ ಸೋವಿಯತ್ ಒಕ್ಕೂಟದ ಇಬ್ಘಾಗದ ಬಳಿಕ ಎದುರಾದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಇದನ್ನು ನಿರ್ವಹಿಸುವುದು ಕಷ್ಟವಾಗಿದ್ದರಿಂದ 1996ನೇ ಇಸವಿಯಲ್ಲಿ ಯೋಜನೆ ಕೈಬಿಡಲಾಗಿತ್ತು.

ಭಾರತೀಯ ನೌಕಾದಳ ನಿರ್ವಹಿಸುತ್ತಿರುವ ಅತ್ಯಂತ ದೊಡ್ಡ ಹಾಗೂ ಭಾರದ ಯುದ್ಧ ವಾಹಕ ನೌಕೆ ಎಂಬ ಗೌರವಕ್ಕೆ ಐಎನ್‌ಎಸ್ ವಿಕ್ರಮಾದಿತ್ಯ ಪಾತ್ರವಾಗಿದೆ. ಇದು 284 ಮೀಟರ್ ಉದ್ದ ಹಾಗೂ 60 ಮೀಟರ್ ಎತ್ತರವನ್ನು ಹೊಂದಿದೆ. ಇದು ಐಎನ್‌ಎಸ್ ವಿರಾಟ್ ಗಾತ್ರಗಿಂತಲೂ ದುಪ್ಪಾಟಾಗಿದೆ.

ಒಟ್ಟಿನಲ್ಲಿ ಭಾರತೀಯ ರಕ್ಷಣಾ ವ್ಯವಸ್ಥೆಗೆ ಐಎನ್‌ಎಸ್ ವಿಕ್ರಮಾದಿತ್ಯ ಸೇರ್ಪಡೆಯೊಂದಿಗೆ ನಿಜಕ್ಕೂ ಗೇಮ್ ಚೇಂಜರ್ ಎನಿಸಿಕೊಂಡಿದ್ದು, ತೇಲುವ ವಾಯುಪಡೆಯ ನೆಲೆಯ ಕೊರೆತೆಯನ್ನು ನೀಗಿಸಲಿದೆ. ಈ ಮೂಲಕ ಸೂಪರ್ ಸೋನಿಕ್ ಯುದ್ಧ ವಿಮಾನಗಳು ನೀಲಿ ಸಾಗರದಲ್ಲಿ ಹಾರಾಡಲು ಸಜ್ಜಾಗಿವೆ. ಈ ಮೂಲಕ ವಿಶ್ವಕ್ಕೆ ಭಾರತದ ಶಕ್ತಿ ಪ್ರದರ್ಶನವಾಗಿದೆ.

ಕಳೆದ ವರ್ಷ ಮಾಜಿ ರಕ್ಷಣಾ ಮಂತ್ರಿ ಎ.ಕೆ. ಆಂಟನಿ ಭೇಟಿ ನೀಡಿದಾಗ


Click it and Unblock the Notifications








